Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಜನಸೇವೆಯೇ ನನ್ನ ಸಂಕಲ್ಪ, ರಾಷ್ಟ್ರಸೇವೆಯೇ ಪರಮ ಗುರಿ :ಪಾಂಡೆ

ಲಿಫ್ಟ್‌ ಇರಿಗೇಷನ್‌ ಪಂಪ್‌ಗಳನ್ನು ಐಸಿಸಿ ವ್ಯಾಪ್ತಿಯಿಂದ ಹೊರಗಿಡಿ

ಕಬ್ಬಿನ ಬೆಲೆ ಸಮಸ್ಯೆ ಪರಿಹಾರಕ್ಕೆ ಸಮಿತಿ ರಚನೆ ಸ್ವಾಗತಾರ್ಹ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಮೌಡ್ಯತೆ ಹೋಗಲಾಡಿಸಲು ಶ್ರಮಿಸಿದ ಕನಕದಾಸರು :ಪ್ರೊ.ಸಾವಳಸಂಗ
(ರಾಜ್ಯ ) ಜಿಲ್ಲೆ

ಮೌಡ್ಯತೆ ಹೋಗಲಾಡಿಸಲು ಶ್ರಮಿಸಿದ ಕನಕದಾಸರು :ಪ್ರೊ.ಸಾವಳಸಂಗ

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರ: ವಿಜಯನಗರ ಅರಸರ ಪರವಾಗಿ ಯುದ್ಧದಲ್ಲಿ ಭಾಗವಹಿಸಿ, ಸೋಲನ್ನು ಅನುಭವಿಸಿ, ಅನೇಕ ಸಾವು- ನೋವುಗಳನ್ನು ನೋಡಿದ ದಾಸ ಶ್ರೇಷ್ಠ ಕನಕದಾಸರು ವೈರಾಗ್ಯ ಹೊಂದಿ, ಸಂಸಾರವನ್ನು ತ್ಯಾಗ ಮಾಡಿದರು. ದೇಶ ಸಂಚಾರ ಮಾಡುತ್ತ, ತಮ್ಮ ಕೀರ್ತನೆಗಳ ಮೂಲಕ ಜಾತಿ, ಮತ, ಪಂಥ, ಅಸಮಾನತೆ, ಅನ್ಯಾಯ, ಮೌಡ್ಯತೆಗಳನ್ನು ಹೋಗಲಾಡಿಸಲು ನಿರಂತರ ಶ್ರಮಿಸಿದರು. ತಿಮ್ಮಪ್ಪ ನಾಯಕನೆಂದು ಕರೆಸಿಕೊಳ್ಳುತ್ತಿದ್ದ ಇವರು ಗುರುಗಳಾದ ವ್ಯಾಸರಾಯರಿಂದ ಕನಕದಾಸರೆಂದು ಮರುನಾಮಕರಣ ಹೊಂದಿದರು. ತಮ್ಮ ಆರಾಧ್ಯ ದೈವ ‘ಕಾಗಿನೆಲೆ ಆದಿ ಕೇಶವರಾಯ’ ಎಂಬ ಹೆಸರಿನಿಂದ ಹಲವಾರು ಕೀರ್ತನೆಗಳನ್ನು ರಚಿಸಿ, ಸಮಾಜವನ್ನು ಸುಧಾರಣೆ ಮಾಡಲು ಅವಿರತ ಪ್ರಯತ್ನ ಮಾಡಿದರು ಎಂದು ಕನ್ನಡ ಹಿರಿಯ ಉಪನ್ಯಾಸಕರಾದ ಪ್ರೊ. ಸಿದ್ದು ಸಾವಳಸಂಗ ತಮ್ಮ ಉಪನ್ಯಾಸ ನೀಡುತ್ತಾ ಹೇಳಿದರು.
ಗುರುವಾರ ಕನಕದಾಸರ ಜಯಂತಿ ಪ್ರಯುಕ್ತ ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜು, ವಿಜಯಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು ಹಾವೇರಿ ಜಿಲ್ಲೆಯ ಬಾಡ ಎನ್ನುವಂತ ಚಿಕ್ಕ ಗ್ರಾಮದಲ್ಲಿ ಕ್ರಿ.ಶ.೧೫೦೮ ರಲ್ಲಿ ಬೀರಪ್ಪ ನಾಯಕ ಹಾಗೂ ಬಚ್ಚಮ್ಮ ದಂಪತಿಗಳ ಮಗನಾಗಿ ಕನಕದಾಸರು ಜನಿಸಿದರು. ಅವರ ಪೂರ್ವನಾಮ ತಿಮ್ಮಪ್ಪನಾಯಕ. ಮುಂದೆ ವಿಜಯನಗರ ಅರಸರಿಂದ ೭೮ ಗ್ರಾಮಗಳನ್ನು ಪಡೆದು ಅವರು ನಾಯಕರಾಗಿದ್ದರು.
ಆನಂತರ ಯುದ್ಧದ ಸಾವು ನೋವುಗಳನ್ನು ಅರಿತು ಸಂಸಾರ ತ್ಯಾಗ ಮಾಡಿ ಸಂತರಾದರು.
ಕುಲ ಕುಲವೆಂದು ಹೊಡೆದಾಡದಿರಿ
ನಿಮ್ಮ ಕುಲದ ನೆಲೆಯನ್ನೇನಾದರೂ ಬಲ್ಲಿರಾ ಬಲ್ಲಿರಾ
ಎಂದು ಜಾತಿ-ಮತಗಳ ವಿರುದ್ಧ ದನಿಯೆತ್ತಿದರು. ಹಾಗೆಯೇ ‘ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎಂದು ಇನ್ನೊಂದು ಕೀರ್ತನೆಯಲ್ಲಿ ಹೇಳುತ್ತಾರೆ. ಪುರಂದರದಾಸರು ಹಾಗೂ ಕನಕದಾಸರು ದಾಸ ಸಾಹಿತ್ಯದ ಎರಡು ಕಣ್ಣುಗಳು ಎಂದು ಪ್ರೊ. ಸಿದ್ದು ಸಾವಳಸಂಗ ಹೇಳಿದರು.
ಇನ್ನೋರ್ವ ಹಿರಿಯ ಉಪನ್ಯಾಸಕರಾದ ಪ್ರೊ. ಎಸ್. ಆರ್. ಬಿರಾದಾರ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸಿ.ಬಿ . ನಾಟೀಕಾರ ಮಾತನಾಡಿದರು.
ಇದಕ್ಕೂ ಮೊದಲು ದಾಸ ಶ್ರೇಷ್ಠ ಸಂತನಾದ ಕನಕದಾಸರ ಭಾವಚಿತ್ರಕ್ಕೆ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಕಾಲೇಜಿನ ವಿದ್ಯಾರ್ಥಿನಿಯರು ಕನಕದಾಸರ ಕುರಿತು ಮಾತನಾಡಿದರು. ಕಾಲೇಜಿನ ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಜನಸೇವೆಯೇ ನನ್ನ ಸಂಕಲ್ಪ, ರಾಷ್ಟ್ರಸೇವೆಯೇ ಪರಮ ಗುರಿ :ಪಾಂಡೆ

ಲಿಫ್ಟ್‌ ಇರಿಗೇಷನ್‌ ಪಂಪ್‌ಗಳನ್ನು ಐಸಿಸಿ ವ್ಯಾಪ್ತಿಯಿಂದ ಹೊರಗಿಡಿ

ಕಬ್ಬಿನ ಬೆಲೆ ಸಮಸ್ಯೆ ಪರಿಹಾರಕ್ಕೆ ಸಮಿತಿ ರಚನೆ ಸ್ವಾಗತಾರ್ಹ

ಭರತ ನಾಟ್ಯ ಭಾರತೀಯ ಪರಂಪರೆ-ಸಂಸ್ಕೃತಿಯ ಪ್ರತಿಬಿಂಬ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಜನಸೇವೆಯೇ ನನ್ನ ಸಂಕಲ್ಪ, ರಾಷ್ಟ್ರಸೇವೆಯೇ ಪರಮ ಗುರಿ :ಪಾಂಡೆ
    In (ರಾಜ್ಯ ) ಜಿಲ್ಲೆ
  • ಲಿಫ್ಟ್‌ ಇರಿಗೇಷನ್‌ ಪಂಪ್‌ಗಳನ್ನು ಐಸಿಸಿ ವ್ಯಾಪ್ತಿಯಿಂದ ಹೊರಗಿಡಿ
    In (ರಾಜ್ಯ ) ಜಿಲ್ಲೆ
  • ಕಬ್ಬಿನ ಬೆಲೆ ಸಮಸ್ಯೆ ಪರಿಹಾರಕ್ಕೆ ಸಮಿತಿ ರಚನೆ ಸ್ವಾಗತಾರ್ಹ
    In (ರಾಜ್ಯ ) ಜಿಲ್ಲೆ
  • ಭರತ ನಾಟ್ಯ ಭಾರತೀಯ ಪರಂಪರೆ-ಸಂಸ್ಕೃತಿಯ ಪ್ರತಿಬಿಂಬ
    In (ರಾಜ್ಯ ) ಜಿಲ್ಲೆ
  • ಪ್ರಸಕ್ತ ಸಾಲಿಗೆ 7 ಲಕ್ಷ ಮೆ.ಟನ್ ಕಬ್ಬು ನುರಿಸುವ ಗುರಿ
    In (ರಾಜ್ಯ ) ಜಿಲ್ಲೆ
  • ಬಿ.ಎಂ.ಪಾಟೀಲ್ ಪಬ್ಲಿಕ್ ಶಾಲೆಯಲ್ಲಿ ರಕ್ತದಾನ ಶಿಬಿರ
    In (ರಾಜ್ಯ ) ಜಿಲ್ಲೆ
  • ಅಂತರಂಗದ ರಾಕ್ಷಸ ನಾಶವೇ ವಿಜಯದಶಮಿ
    In (ರಾಜ್ಯ ) ಜಿಲ್ಲೆ
  • ಅಥಣಿ ಸರ್ಕಾರಿ ಕಾಲೇಜಿನಲ್ಲಿ ಆಕರ್ಷಕ ಅಣುಕು ಸಂಸತ್ ಕಲಾಪ
    In (ರಾಜ್ಯ ) ಜಿಲ್ಲೆ
  • ಕವಿಗಳ ಲೇಖನಿ ಸಮಾಜಕ್ಕೆ ಕೈಗನ್ನಡಿಯಾಗಲಿ :ಕುಚಬಾಳ
    In (ರಾಜ್ಯ ) ಜಿಲ್ಲೆ
  • ೩೭೧(ಜೆ) ಹೋರಾಟಕ್ಕೆ ತಳವಾರ ಸಮಾಜ & ದಸಂಸ ಬೆಂಬಲ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.