ಮೋರಟಗಿಯಲ್ಲಿ ಧರ್ಮಸಭೆ | ಶಾಸಕ ಅಶೋಕ ಮನಗೂಳಿ ಅಭಿಮತ
ಮೋರಟಗಿ: ಶಿಕ್ಷಣ ಶಾಲೆಯಲ್ಲಿ ಸಿಕ್ಕರೆ, ಸಂಸ್ಕಾರ ಎನ್ನುವುದು ಧರ್ಮಸಭೆಯಲ್ಲಿ ಸಿಗುತ್ತದೆ, ಗುಡಿ ಗೋಪುರ ಮಠಮಾನ್ಯಗಳು ಸಂತರು ಶರಣರು ಮಾನವ ಕುಲಕ್ಕೆ ಕೊಟ್ಟಂತ ಆದರ್ಶ ನಮ್ಮೇಲ್ಲರ ಬದುಕಿಗೆ ದಾರಿದೀಪ ಎಂದು ಶಾಸಕ ಅಶೋಕ ಮನಗೂಳಿ ಅಭಿಮತ ವ್ಯಕ್ತಪಡಿಸಿದರು.
ಗ್ರಾಮದ ಆರಾದ್ಯದೇವ ಶ್ರೀ ಸಿದ್ದರಾಮೇಶ್ವರ ಜಾತ್ರಾ ಪ್ರಯುಕ್ತ ಹಮ್ಮಿಕೊಂಡ ಧರ್ಮಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಕಂಪ್ಯೂಟರ ಯುಗದಲ್ಲಿ ಯವಕರು ಮುಬೈಲ ಗಿಳಯ ಹಿಂದೆ ಬಿದ್ದು ಸುಂದರ ಜೀವನವನ್ನೇ ಹಾಳುಮಾಡಿಕೊಳ್ಳುತ್ತಿದ್ದು ನೋಡಿದರೆ ಇತ್ತೀಚಿನ ದಿನಗಳಲ್ಲಿ ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳು, ಸಂಸಾರಿಕ ಬಯಲಾಟ ನಾಟಕಗಳು ಮರೆತಂತಾಗಿದೆ ಆದರೆ ಮೋರಟಗಿ ಗ್ರಾಮದಲ್ಲಿ ಅಮವಾಸೆ ಹುಣ್ಣಿಗೆಗೊಂದು ದೇವರುಗಳ ಜಾತ್ರೆ ಮಾಡುವುದರ ಜೊತೆಗೆ ಧಾರ್ಮಿಕ ಸಭೆಗಳು ರಸಮಂಜರಿ ಕಾರ್ಯಲ್ರಮಗಳು ಜರುಗುತ್ತಿರುವುದು ಸಂತಸದ ಸಂಗತಿ ಯುವಕರು ಶಿಕ್ಷಣ ಪಡೆಯುದರ ಜೊತೆಗೆ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆದರ್ಶ ವ್ಯಕ್ತಿಗಳಾಗಿ ಬದುಕಿ ತಮ್ಮ ಪಾಲಕರು ಕಂಡ ಕನಸು ನನಸಾಗಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಷ.ಬ್ರ. ಡಾ, ರುದ್ರಮುನಿ ಶಿವಾಚಾರ್ಯರು ಮಡಿವಾಳೇಶ್ವರ ಮಠ ಕಡಕೋಳ ಸಾನಿಧ್ಯ ವಹಿಸಿದ್ದರು, ಮಾಜಿ ಜಿ.ಪಂ.ಸದಸ್ಯ ಎನ್.ಆರ್.ತಿವಾರಿ, ಕಾಂಗ್ರೇಸ್ ಮುಖಂಡರುಗಳಾದ ಅರವಿಂದ ಹಂಗರಗಿ, ರವಿಕಾಂತ ನಡುವಿನಕೇರಿ, ನಿಂಗನಗೌಡ ಪಾಟೀಲ, ಇನಾಯತ ದೊಡಮನಿ ಸಲೀಮ್ ಕಣ್ಣಿ, ಇಸೂಫ್ ಮುಲ್ಲಾ, ಬಂದೇನವಾಜ ಕಣ್ಣಿ, ಇರಣ್ಣ ಬಡಿಗೇರ, ಸೇರಿದಂತೆ ಸಮಸ್ತ ಶ್ರೀ ಸಿದ್ದರಾಮೇಶ್ವರ ಭಕ್ತಾಧಿಗಳು ಇದ್ದರು.

