Author: editor.udayarashmi@gmail.com

ವಿಜಯಪುರ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ವಿಜಯಪುರ ಜಿಲ್ಲೆಯ ಜಿಲ್ಲಾ ಕೇಂದ್ರ ಹಾಗೂ ತಾಲೂಕಾ ಕೇಂದ್ರಗಳ ಎಲ್ಲ ನ್ಯಾಯಾಲಯಗಳಲ್ಲಿ ಡಿಸೆಂಬರ್ ೯ರಂದು ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಲಾಗಿದೆ.ಲೋಕ್ ಅದಾಲತ್‌ನಲ್ಲಿ ರಾಜಿಯಾಗಬಹುದಾದ ಎಲ್ಲ ಕ್ರಿಮಿನಲ್ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ ಕೋರಿ ಸಲ್ಲಿಸಿರುವ ಪ್ರಕರಣಗಳು,ಕೌಟುಂಬಿಕ ವ್ಯಾಜ್ಯಗಳು, ಆಸ್ತಿಯಲ್ಲಿ ಪಾಲು ಕೋರಿ ಸಲ್ಲಿಸಿರುವ ದಾವೆಗಳು, ದೂರವಾಣಿ, ನೀರಿನ ಬಿಲ್ಲು ಬಾಕಿ ಪಾವತಿ ಪ್ರಕರಣಗಳು, ಜೀವನಾಂಶ ಕೋರಿ ಸಲ್ಲಿಸಿರುವ ಪ್ರಕರಣಗಳು, ಕಾರ್ಮಿಕ ವ್ಯಾಜ್ಯಗಳು, ಭೂಸ್ವಾಧೀನ ಪ್ರಕರಣಗಳು, ಕಂದಾಯ ಪ್ರಕರಣಗಳು, ಸಾಲ ವಸೂಲಾತಿ, ಬ್ಯಾಂಕ್ ವ್ಯಾಜ್ಯಗಳು ಹಾಗೂ ಇತರೆ ಸಿವ್ಹಿಲ್ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುವುದು.ಸಾರ್ವಜನಿಕರು ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವ ಮೂಲಕ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹಿರಿಯ ಸಿವ್ಹಿಲ್ ನ್ಯಾಯಾಧೀಶ ಸಂತೋಷ ಎಸ್.ಕುಂದರ್ ಅವರು ಕೋರಿದ್ದಾರೆ.

Read More

ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧಿಕಾರಿಗಳಿಗೆ ಸಿಇಓ ರಾಹುಲ್ ಶಿಂಧೆ ಎಚ್ಚರಿಕೆ ವಿಜಯಪುರ: ಜಿಲ್ಲೆಯಾದ್ಯಂತ ಬರ ಪರಿಸ್ಥಿತಿ ಇರುವುದರಿಂದ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು. ಕೆಲಸ ಬಯಸಿ ಬರುವ ಕೂಲಿಕಾರರಿಗೆ ಕೆಲಸ ನೀಡಬೇಕು. ಕೆಲಸ ನೀಡಲು ವಿಫಲರಾದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ & ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಸೂಚನೆ ಮೇರೆಗೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿಷಯಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿದ ಅವರು,ಬರ ಪರಿಸ್ಥಿತಿ ಇರುವುದರಿಂದ ಕೂಲಿ ಬಯಸಿ ಅರ್ಜಿ ಸಲ್ಲಿಸಿದ ೧೫ ದಿನಗಳೊಳಗಾಗಿ ಕೆಲಸ ನೀಡಬೇಕು. ಒಂದು ವೇಳೆ ಅರ್ಜಿ ಸಲ್ಲಿಸಿದ ೧೫ ದಿನಗಳೊಳಗಾಗಿ ಕೆಲಸ ನೀಡದಿದ್ದಲ್ಲಿ ಅಂತಹ ಫಲಾನುಭವಿಗಳಿಗೆ ಕಡ್ಡಾಯವಾಗಿ ನಿರುಧ್ಯೋಗ ಭತ್ಯೆ ನೀಡಲು ಕ್ರಮ…

Read More

ಸಿಂದಗಿ: ಅಧಿಕಾರ ಬರುತ್ತೆ, ಹೋಗುತ್ತೆ. ಆದರೆ ನಿರಂತರವಾಗಿ ಸಮಾಜದ ಕೆಲಸ ಮಾಡಬೇಕು ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.ತಾಲೂಕಿನ ಬಂದಾಳ ಗ್ರಾಮದ ಬನ್ನಿ ಮಂಟಪ ನಿರ್ಮಾಣ ಮಾಡಲು ತಮ್ಮ ಸ್ವಂತ ಖರ್ಚಿನಲ್ಲಿ ನಾಲ್ಕು ಲಕ್ಷ ರೂಪಾಯಿ ದೇಣಿಗೆ ನೀಡುವ ಮೂಲಕ ಅವರು ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿ, ದಾನ ಧರ್ಮ ಪರೋಪಕಾರಗಳು ಜೀವನದಲ್ಲಿ ಅಳವಡಿಸಿಕೊಂಡು ಗ್ರಾಮದ ಬನ್ನಿ ಮಂಟಪ ನವ ನಿರ್ಮಾಣ ಮಾಡುತ್ತಿರುವದು ಹೆಮ್ಮಯ ವಿಷಯವಾಗಿದೆ ಗ್ರಾಮದ ಸರ್ವ ಭಕ್ತರು ಬನ್ನಿ ಮಂಟಪ ನಿರ್ಮಾಣ ಮಾಡುವ ಕಾರ್ಯದಲ್ಲಿ ಭಾಗವಹಿಸಿ ಬನ್ನಿ ಮಂಟಪದ ಆರ್ ಸಿ ಗುಣಮಟ್ಟದಿಂದ ಕೂಡಿರಬೇಕು ಎಂದರು.ಭೂಮಿ ಪೂಜೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು.

Read More

ಮುದ್ದೇಬಿಹಾಳ: ತಾಲೂಕಿನ ನೂತನ ದೈಹಿಕ ಶಿಕ್ಷಕರ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಗೌರವ ಅಧ್ಯಕ್ಷರಾಗಿ ಸಿ .ಎಸ್ .ಮನಗೂಳಿ, ಅಧ್ಯಕ್ಷರಾಗಿ ಎಸ್. ಎಸ್. ಲಮಾಣಿ, ಕಾರ್ಯದರ್ಶಿಯಾಗಿ ಎಂ.ಎಸ್.ನಾಟೆಕಾರ್, ಖಜಾಂಚಿಯಾಗಿ ಜಿ.ಎಂ.ಸಾಲಿಮಠ , ಹಿರಿಯ ಉಪಾಧ್ಯಕ್ಷರಾಗಿ ವಿ.ಜಿ.ನಾಗರಾಳ, ಉಪಾಧ್ಯಕ್ಷರಾಗಿ ಸುಭಾಷ್ ಒ. ಮತ್ತು ಬಿ.ಎ .ವಂದಾಲ್, ಜಂಟಿ ಕಾರ್ಯದರ್ಶಿಯಾಗಿ ಶ್ರೀಮತಿ ರುದ್ರಮ್ಮ ಟಕ್ಕಳಕಿ, ಮತ್ತು ಸಂಜೀವ್ ರಾಥೋಡ್, ಸಂಘಟನಾ ಕಾರ್ಯದರ್ಶಿಯಾಗಿ ಎಸ್.ಎಸ್ .ಅಂಗಡಿ, ಎಸ್.ಎಂ.ಇದ್ದಲಗಿ, ಮತ್ತು ಬಿ.ಎಸ್ .ರಾಮೋಡಗಿ, ಕ್ರೀಡಾ ಕಾರ್ಯದರ್ಶಿಯಾಗಿ ಬಿ.ಟಿ. ಬಜಂತ್ರಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಿ.ವಿ. ಗದಗ, ಪತ್ರಿಕ ಕಾರ್ಯದರ್ಶಿಯಾಗಿ ಜೆ .ಎಸ್. ನಾಡಗೌಡರು, ಆಂತರಿಕ ಲೆಕ್ಕ ಪರಿಶೋಧಕರಾಗಿ ಬಿ.ಎಸ್. ಪಣದಕಟ್ಟಿ ಅವರನ್ನು ಆಯ್ಕೆ ಮಾಡಲಾಯಿತು.ಈ ವೇಳೆ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರಾದ ಎಚ್. ಎಲ್. ಕರಡ್ಡಿ, ಬಿ ಕೆ .ನಾಯಕ, ಎ.ಸಿ. ಕೆರೂರ, ಎಸ್. ಟಿ ಸಜ್ಜನ್ ಎಸ್.ಆರ್. ಸುಲ್ಪಿ , ವಿ .ಎಸ್.ತೆಗ್ಗಿ ಸೇರಿದಂತೆ ಮತ್ತೀತರರು ಇದ್ದರು.

Read More

ದೇವರಹಿಪ್ಪರಗಿ: ಇಲ್ಲಿನ ಪಟ್ಟಣ ಪಂಚಾಯತಿಗೆ ಸ್ವಚ್ಛತೆಯಲ್ಲಿ ರಾಜ್ಯದಲ್ಲಿ ಉತ್ತಮ ಸಾಧನೆ ಮಾಡಿರುವುದಕ್ಕಾಗಿ ಮುನಸಿಪಾಲಿಕಾ-೨೦೨೩ರ ಮಹಾ ಸಮ್ಮೇಳನದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ಬೆಂಗಳೂರಿನಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ೧೭ನೇ ಅಂತರಾಷ್ಟ್ರೀಯ ಮಹಾಸಮ್ಮೇಳನ ಹಾಗೂ ಪ್ರದರ್ಶನದಲ್ಲಿ ಪಟ್ಟಣಪಂಚಾಯತಿ ಮುಖ್ಯಾಧಿಕಾರಿ ಎಲ್ ಡಿ ಮುಲ್ಲಾ ಹಾಗೂ ಕಿರಿಯ ಆರೋಗ್ಯ ಅಧಿಕಾರಿ ಫಿರೋಝ ಮುಲ್ಲಾ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ರಾಜ್ಯದಲ್ಲಿ ಸ್ವಚ್ಛತೆಯಲ್ಲಿ ಸಾಧನೆ ಮಾಡಿರುವ ೦೯ ಪಟ್ಟಣ ಪಂಚಾಯತಿಗಳಿಗೆ ಸ್ವಚ್ಛತೆ ಕುರಿತು ಸಾಕ್ಷ್ಯ ಚಿತ್ರ ಪ್ರದರ್ಶನ ಮಾಡಲು ಅವಕಾಶವೂ ಸಿಕ್ಕಿತ್ತು. ನಗರಗಳ ಭವಿಷ್ಯ, ಸುರಕ್ಷತೆ, ಚತುರತೆ ಮತ್ತು ಸಮರ್ಥನೀಯ ಕುರಿತು ನಡೆದ ಮಹಾ ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿತ್ತು.ಪ್ರಶಸ್ತಿ ಸಿಕ್ಕ ಸಂತಸದಲ್ಲಿ ಮಾತನಾಡಿದ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಎಲ್ ಡಿ ಮುಲ್ಲಾ, ಕಳೆದ ಹಲವಾರು ವರ್ಷಗಳಿಂದ ಪಟ್ಟಣದ ಸ್ವಚ್ಛತೆಗಾಗಿ ಅತ್ಯಾಧುನಿಕ ತಂತ್ರಜ್ಞಾನ ಮೂಲಕ ಕಾರ್ಯ ಮಾಡಲಾಗುತ್ತಿದೆ. ಈ ಕುರಿತು ಹಲವಾರು ಬಾರಿ ರಾಜ್ಯ ಮಟ್ಟದ ಅಧಿಕಾರಿಗಳ ಮುಂದೆ ಪ್ರಸ್ತುತ ಪಡಿಸಲಾಗಿತ್ತು. ಸ್ವಚ್ಛತೆ ಕುರಿತು…

Read More

ಕಲಕೇರಿ: ನವಜಾತ ಶಿಶುಗಳು,ಮಕ್ಕಳು ಹದಿಹರೆಯದವರು,ಗರ್ಭಿಣಿಯರು,ತಾಯಂದಿರಲ್ಲಿ ರಕ್ತಹೀನತೆ ಮತ್ತು ಅಪೌಷ್ಠಿಕತೆ ನಿವಾರಿಸಲು ‘ಅನೀಮಿಯಾ ಮುಕ್ತ ಪೌಷ್ಠಿಕ ಕರ್ನಾಟಕ’ ಯೋಜನೆಗೆ ಸರ್ಕಾರ ಮತ್ತು ಆರೋಗ್ಯ ಇಲಾಕೆ ಮುಂದಾಗಿದ್ದು ಇದಕ್ಕೆ ಇದರ ಯಶಸ್ಸಿಗೆ ಪ್ರತಿಯೋಬ್ಬರು ಮುಂದಾಗಬೇಕು. ಅನೀಮಿಯಾ ಮುಕ್ತ ಕರ್ನಾಟಕ ಮಾಡಲು ಸಂಕಲ್ಪಮಾಡಬೇಕಿದೆ ಎಂದು ಸಿಂದಗಿಯ ಡಾ.ಶ್ವೇತಾ ಸ್ಥಾವರಮಠ ಹೇಳಿದರು.ಶುಕ್ರವಾರ ಕಲಕೇರಿ ಗ್ರಾಮದ ಮಲ್ಲಿಕಾರ್ಜುನ ವಿಧ್ಯಾವರ್ಧಕ ಸಂಘದ ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿಧ್ಯಾರ್ಥಿಗಳಿಗೆ ಹಮ್ಮಿಕೊಂಡ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.ಮಕ್ಕಳು,ವಿಧ್ಯಾರ್ಥಿ,ವಿಧ್ಯಾರ್ಥಿನಿಯರು,ಗರ್ಭಿಣಿಯರು,ಬಾಣಂತಿಯರು ಸಮಾಜದಲ್ಲಿ ಉತ್ತಮ ಆರೋಗ್ಯವಂತಯರಾಗಿ ಬದುಕಬೇಕು ಎನ್ನುವ ಸದುದ್ದೇಶದಿಂದ ಸರ್ಕಾರ ಮತ್ತು ಆರೋಗ್ಯ ಇಲಾಖೆ ನುರಿತ ವೈದ್ಯರಿಂದ ತಪಾಸಣೆ ನಡೆಸಿ ಅನೀಮಿಯಾದಿಂದ ಬಳಲುತ್ತಿರುವವರಿಗೆ ಸೂಕ್ತ ಚಿಕಿತ್ಸೆ ನಿಡಿ ಅವರಿಗೆ ಔಷದಿ ಮತ್ತು ಮಾತ್ರೆಗಳನ್ನು ನಿಡಲಾಗುತ್ತದೆ ಎಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಲಹೆ ಮಾಡಿದರು, ಈ ಸಂದರ್ಭದಲ್ಲಿ ಸುಮಾರು ೨೦೦ ಕ್ಕೂ ಹೆಚ್ಚು ಮಕ್ಕಳಿಗೆ ಹೆಮೋಗ್ಲೊಬಿನ್ ತಪಾಸಣೆ ಮಾಡಿ ರಕ್ತ ಹೀನತೆಯಿಂದ ಬಳಲುತ್ತಿರುವ ಮಕ್ಕಳಿಗೆ ಮಾತ್ರೆಗಳನ್ನು ವಿತರಿಸಲಾಯಿತು,ಪ್ರಭಾರಿ ಪ್ರಾಚಾರ್ಯರಾದ ಬಿ ಜಿ ಚನಗೊಂಡ ಮಾತನಾಡಿದರು.ಡಾ.ಪ್ರೀಯಾಂಕಾ…

Read More

ಸಿಂದಗಿ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ೧೯೮೬ರಲ್ಲಿ ಸ್ಥಾಪನೆಗೊಂಡು, ಶರಣರ ವೈಚಾರಿಕತೆ, ಸಮಸಮಾಜಗಳ ನಿರ್ಮಾಣಕ್ಕಾಗಿ ನಡೆಸಿದ ಹೋರಾಟ ಮತ್ತು ಅವರ ವಚನಗಳಲ್ಲಿನ ಚಿಂತನೆಗಳಿಗೆ ಬೆಳಕು ಚೆಲ್ಲುವ ಮಹತ್ತರ ಕಾರ್ಯವನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮಾಡುತ್ತಿದೆ ಎಂದು ಆರ್.ಡಿ.ಪಾಟೀಲ ಪದವಿಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಪಿ.ವ್ಹಿ.ಮಹಲಿನಮಠ ಹೇಳಿದರು.ಪಟ್ಟಣದ ಶ್ರೀ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಇಂದು ಲಿಂ.ಚೆನ್ನಮ್ಮ ಚನ್ನಪ್ಪ ವಮ್ಮಾ ಇವರ ಸ್ಮರಣಾರ್ಥ ಡಾ.ಅಮಿತ್ ಆರ್.ವಾರದ ಹಾಗೂ ಲಿಂ.ಲಕ್ಕಮ್ಮ ಚಂದ್ರಾಮಪ್ಪ ಸಿಂದಗಿ ಅವರ ಸ್ಮರಣಾರ್ಥ ಗುತ್ತಿಗೆದಾರ ಮಹಾದೇವಪ್ಪ ಚಂದ್ರಾಮಪ್ಪ ಸಿಂದಗಿ ಅವರು ನೀಡಿದ ದತ್ತಿ ದಾನದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆ, ಮಕ್ಕಳು, ಯುವಕರಲ್ಲಿ ಶರಣ ಸಾಹಿತ್ಯದ ಜ್ಞಾನವನ್ನು ಮನೆಯಲ್ಲಿ ಮಹಾಮನೆ ಎಂಬ ವಚನ ದೀವಿಗೆಯನ್ನು ಮನೆ-ಮನೆ ಜಗುಲಿಗೆ ಕೊಂಡೊಯ್ದು ಶರಣರ ಸಂದೇಶಗಳನ್ನು ಬಿತ್ತರಿಸುತ್ತಿದೆ. ಇದರ ವ್ಯಾಪ್ತಿ ಅನ್ಯ ರಾಜ್ಯಗಳು ಸೇರಿದಂತೆ ವಿಶ್ವದೆಲ್ಲೆಡೆ ಪ್ರಚಲಿತದಲ್ಲಿರುವುದು ದೇಶವೇ ಹೆಮ್ಮೆ ಪಡುವ ಸಂಗತಿಯಾಗಿದ್ದು, ಶರಣರ ಜೀವನ ಮತ್ತು ಅವರು ನೀಡಿರುವ ವಚನಗಳು…

Read More

ಇಂಡಿ‌: ಪೌರಾಣಿಕ ನಾಟಕಗಳು ಮನುಷ್ಯನಿಗೆ ಸಂಸ್ಕಾರ ನೀಡುವ, ಸಮಾಜದ ಓರೆ ಕೊರೆ ತಿದ್ದುವ ಪ್ರಮುಖ‌ ಮಾದ್ಯಮ ವಾಗಿದೆ ಎಂದು ಜೆಡಿಎಸ್ ಮುಖಂಡ ಬಿ.ಡಿ ಪಾಟೀಲ್ ಹೇಳಿದರು.ತಾಲೂಕಿನ ನಿಂಬಾಳ ಬಿ ಕೆ ಗ್ರಾಮದಲ್ಲಿ ದಾಸ ಶ್ರೇಷ್ಠ ಭಕ್ತ ಕನಕದಾಸರ 536ನೆಯ ಜಯಂತಿಯ ಅಂಗವಾಗಿ ಶ್ರೀ ಬೀರಲಿಂಗೇಶ್ವರ ಮಹಾತ್ಮೆ ಯಂಬ ಸುಂದರ ಪೌರಾಣಿಕ ನಾಟಕವನ್ನು ಉದ್ಘಾಟಿಸಿ ಮಾತಾನಾಡಿದರು.ಇಂದಿನ ಆದುನಿಕ ಯುಗದಲ್ಲಿ ಜಾನಪದ, ಹಾಗೂ ಪೌರಾಣಿಕ ನಾಟಕಗಳು ನಶಿಸುತ್ತಿರುವ ಸಂದರ್ಭದಲ್ಲಿ, ನಿಂಬಾಳ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ಮಹಾತ್ಮೆ ಯಂಬ ಪೌರಾಣಿಕ ನಾಟಕದ ಪ್ರದರ್ಶನ ನಡೆಯುತ್ತಿದ್ದು, ಸಂತಸದ ಮತ್ತು ಹೆಮ್ಮೆಯ ಪಡುವ ವಿಚಾರ. ನಾಟಕಗಳು ಪ್ರತಿಯೊಬ್ಬರಿಗೂ ಉತ್ತಮ ಸಂಸ್ಕಾರವನ್ನು ಕಲಿಸುವ ಮಾಧ್ಯಮವಾಗಿ ಸಮಾಜದಲ್ಲಿ ಸದ್ದು ಗದ್ದಲು ವಿಲ್ಲದೆ ಕಾರ್ಯಮಾಡುತ್ತಿರುವುದು ಶ್ಲಾಘನೀಯ‌‌. ಶಿಷ್ಯ ಮಹಿಮಾಂತಕ ಶ್ರೀ ಮಾಳಿಂಗರಾಯ ಹಾಗೂ ಗುರು ಶ್ರೀ ಬೀರಲಿಂಗೇಶ್ವರ ನಡುವೆ ನಡೆಯುವ ಸಂಭಾಷಣೆ ಒಬ್ಬ ಆದರ್ಶ ಗುರು ಶಿಷ್ಯರ ಸಂಬಂಧಗಳ ಬಗ್ಗೆ ಪ್ರತಿಯೊಬ್ಬರು ಅಳವಡಿಸಿಕೊಳ್ಳುವ ಮೂಲಕ, ಇಂತಹ ಭಕ್ತಿ ಪ್ರಧಾನ ನಾಟಕಗಳ ಸದುಪಯೋಗ ಪಡೆದುಕೊಳ್ಳಬೇಕು…

Read More

ಬಸವನಬಾಗೇವಾಡಿ: ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಶಿಕ್ಷಕರು, ಪಾಲಕರು ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡುವಂತಾಗಬೇಕೆಂದು ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಹೆಣ್ಣುಮಕ್ಕಲ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರಶಿಕ್ಷಣಾಽಕಾರಿಗಳ ಹಾಗೂ ಕ್ಷೇತ್ರಸಮನ್ವಯಾಽಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಪ್ರತಿಭಾ ಕಾರಂಜಿ ಕಲೋತ್ಸವದಂತಹ ಕಾರ್ಯಕ್ರಮಗಳು ಬೌದ್ಧಿಕ ಮಟ್ಟ ಬೆಳವಣಿಗೆಗೆ ತುಂಬಾ ಸಹಕಾರಿಯಾಗುತ್ತದೆ. ನಿರ್ಣಾಯಕರು ತಮ್ಮ ನಿರ್ಣಯವನ್ನು ಪಾರದರ್ಶಕವಾಗಿ ನೀಡುವ ಮೂಲಕ ಸೂಕ್ತ ಪ್ರತಿಭೆಯನ್ನು ಮುಂದಿನ ಹಂತಕ್ಕೆ ಕಳುಹಿಸಿದರೆ ತಾಲೂಕಿಗೆ ಕೀರ್ತಿ ಬರುತ್ತದೆ. ತಾಲೂಕಿನ ಪ್ರಿಯಾ ಲಮಾಣಿ ಅವಳು ಇನ್‌ಸ್ಪೈಯರ್ ಅವಾರ್ಡ್‌ನಲ್ಲಿ ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾಗಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವದು ಪ್ರತಿಭಾವಂತ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ, ಪ್ರೋತ್ಸಾಹ ನೀಡಿದರೆ…

Read More

ಹೊನವಾಡ: ಅನಾದಿ ಕಾಲದಿಂದಲೂ ಸಮಾಜದಲ್ಲಿ ಅಂಟುಜಾಡ್ಯದಂತೆ ಹರಡಿಕೊಂಡಿರುವ ಮೇಲು ಕೀಳೆಂಬ ವ್ಯಾಧಿಯನ್ನು ಹೋಗಲಾಡಿಸುವಲ್ಲಿ ಹಲವು ಸಾಧು-ಸಂತರು ತಮ್ಮದೇ ಆದ ಕೊಡುಗೆಯನ್ನು ನೀಡುತ್ತಲೇ ಬಂದಿದ್ದಾರೆ. ಇಂತಹವರ ಪೈಕಿ ತಮ್ಮ ಕೀರ್ತನೆಗಳ ಮೂಲಕ ಸಮಾನತೆ ಸಾರಿದಲ್ಲದೆ, ಭಕ್ತಿಯ ಮೂಲಕವೇ ದೇವರನ್ನು ಕಂಡವರು ಕನಕದಾಸರು ಎಂದು ಪ್ರಾಚಾರ್ಯರಾದ ಎಂ ಎ ಹಿರೇಮಠ್ ಮಾತನಾಡಿದರು.ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ವಿ ವಿ ಎಸ್ ಪದವಿ ಪೂರ್ವ ಕಾಲೇಜು (ಹೈಸ್ಕೂಲ್) ನಲ್ಲಿ ನಡೆದ ದಾಸ ಪರಂಪರೆಯ ಸಂತ, ಭಕ್ತ ಕನಕದಾಸರ 536ನೇ ಜಯಂತಿಯನ್ನು ಆಚರಿಸಲಾಯಿತು.ನಮಗೆ ಇವತ್ತಿಗೂ ಭಕ್ತಿ ವಿಚಾರಕ್ಕೆ ಬಂದಾಗ ಕನಕದಾಸರ ಕಥೆಗಳು ನೆನಪಾಗುತ್ತವೆ. ಅವರು ಕೃಷ್ಣನನ್ನೇ ಜಪಿಸುತ್ತಾ ಊರೂರು ತಿರುಗಿ ಕೀರ್ತನೆಗಳ ಮೂಲಕ ಮೇಲು- ಕೀಳು ತೊಡೆದು ಮನುಷ್ಯರಾಗಿ ಬಾಳಿ ಎಂಬ ಸಂದೇಶ ಸಾರಿ ಈ ಭೂಮಿ ಮೇಲೆ ಚಿರಸ್ಥಾಯಿಯಾದವರು ಎಂದು ಸಹ ಶಿಕ್ಷಕರಾದ ಐ ಕೆ ನದಾಫ್ ಮಾತನಾಡಿದರು.ಕೃಷ್ಣನನ್ನೇ ಒಲಿಸಿಕೊಂಡ ಅವರ ಭಕ್ತಿಗೆ ಇವತ್ತಿಗೂ ನಾವು ಕೈಮುಗಿಯಲೇಬೇಕು. ಉಡುಪಿಯ ಕೃಷ್ಣನ ಜತೆಗೆ ಕನಕನೂ ಭಕ್ತರ ಮನದಲ್ಲಿ…

Read More