ಬಸವನಬಾಗೇವಾಡಿ: ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಶಿಕ್ಷಕರು, ಪಾಲಕರು ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡುವಂತಾಗಬೇಕೆಂದು ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.
ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಹೆಣ್ಣುಮಕ್ಕಲ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರಶಿಕ್ಷಣಾಽಕಾರಿಗಳ ಹಾಗೂ ಕ್ಷೇತ್ರಸಮನ್ವಯಾಽಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಪ್ರತಿಭಾ ಕಾರಂಜಿ ಕಲೋತ್ಸವದಂತಹ ಕಾರ್ಯಕ್ರಮಗಳು ಬೌದ್ಧಿಕ ಮಟ್ಟ ಬೆಳವಣಿಗೆಗೆ ತುಂಬಾ ಸಹಕಾರಿಯಾಗುತ್ತದೆ. ನಿರ್ಣಾಯಕರು ತಮ್ಮ ನಿರ್ಣಯವನ್ನು ಪಾರದರ್ಶಕವಾಗಿ ನೀಡುವ ಮೂಲಕ ಸೂಕ್ತ ಪ್ರತಿಭೆಯನ್ನು ಮುಂದಿನ ಹಂತಕ್ಕೆ ಕಳುಹಿಸಿದರೆ ತಾಲೂಕಿಗೆ ಕೀರ್ತಿ ಬರುತ್ತದೆ. ತಾಲೂಕಿನ ಪ್ರಿಯಾ ಲಮಾಣಿ ಅವಳು ಇನ್‌ಸ್ಪೈಯರ್ ಅವಾರ್ಡ್‌ನಲ್ಲಿ ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾಗಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವದು ಪ್ರತಿಭಾವಂತ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ, ಪ್ರೋತ್ಸಾಹ ನೀಡಿದರೆ ಇಂತಹ ಸಾಧನೆ ಮಾಡುತ್ತಾರೆ ಎಂಬುವದಕ್ಕಿ ನಿದರ್ಶನವಾಗಿದೆ ಎಂದರು.
ನ್ಯಾಯವಾದಿ ಬಿ.ಕೆ.ಕಲ್ಲೂರ ಮಾತನಾಡಿ, ಎಲ್ಲ ಮಕ್ಕಳಲ್ಲಿ ಒಂದಿಲ್ಲೊಂದು ಪ್ರತಿಭೆ ಅಡಕವಾಗಿರುತ್ತದೆ. ಅವರಲ್ಲಿರುವ ಪ್ರತಿಭೆಗೆ ಇಂತಹ ವೇದಿಕೆಗಳು ಅವಕಾಶ ನೀಡುತ್ತವೆ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಜೊತೆಗೆ ಅವರಲ್ಲಿ ಪರಿವರ್ತನೆ ಮಾಡುವ ಶಕ್ತಿ ಪಾಲಕರಿಗೆ, ಶಿಕ್ಷಕರಿಗೆ ಇದೆ.ಮಕ್ಕಳು ಇಂತಹ ವೇದಿಕೆಯನ್ನು ಸದುಪಯೋಗ ಪಡೆದುಕೊಳ್ಳಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಬಿಇಓ ವಸಂತ ರಾಠೋಡ ಮಾತನಾಡಿದರು.
ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ,ಜೆಡಿಎಸ್ ಧುರೀಣ ಶಿವನಗೌಡ ಬಿರಾದಾರ, ವಿವಿಧ ಶಿಕ್ಷಕರ ಸಂಘಟನೆಯ ಅಧ್ಯಕ್ಷರಾದ ಎಸ್.ಎಚ್.ಉಕ್ಕಲಿ, ಎಸ್.ಎಸ್.ಅವಜಿ, ಬಸವರಾಜ ಪೂಜಾರಿ, ಶಿವಾನಂದ ಮಂಗಾನವರ, ಎಂ.ಬಿ.ತೋಟದ, ಆರ್.ಎ.ನದಾಫ್, ಬಿ.ಎನ್.ನಾಯಕರ, ಎಸ್.ಎಂ.ದಳವಾಯಿ,ಎಂ.ಎಚ್.ಜಮುನಾ, ಸಿ.ಟಿ.ಮಾದರ, ಆರ್.ಬಿ.ಗೌಡರ, ವೈ.ಎನ್.ಬೇವೂರ, ಎಸ್.ಬಿ.ಒನರೊಟ್ಟಿ, ಎಂ.ಎನ್.ಯಾಳವಾರ, ಎಂ.ಎಸ್.ಮುರಾಳ, ಪಿ.ವೈ.ರತ್ನಾಕರ ಇತರರು ಇದ್ದರು. ಪ್ರಾಸ್ತವಿಕವಾಗಿ ಬಿಆರ್‌ಪಿ ಬಿ.ಎಸ್.ಅವಟಿ ಮಾತನಾಡಿದರು. ಕ್ಷೇತ್ರಸಮನ್ವಯಾಧಿಕಾರಿ ಪಿ.ಯು.ರಾಠೋಡ ಸ್ವಾಗತಿಸಿದರು. ಪಿ.ಆರ್.ಮೆಂಚ, ಭಾರತಿ ಪಾಟೀಲ ನಿರೂಪಿಸಿದರು. ಬಿಆರ್‌ಪಿ ಎಂ.ವ್ಹಿ.ಗಬ್ಬೂರ ವಂದಿಸಿದರು.
ಅಖಂಡ ಬಸವನಬಾಗೇವಾಡಿ ತಾಲೂಕಿನ ಪ್ರಾಥಮಿಕ, ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ
Subscribe to Updates
Get the latest creative news from FooBar about art, design and business.
ಬೌದ್ಧಿಕ ಮಟ್ಟ ಬೆಳವಣಿಗೆಗೆ ಪ್ರತಿಭಾ ಕಾರಂಜಿ ಕಲೋತ್ಸವ ಸಹಕಾರಿ
Related Posts
Add A Comment

