ಸಿಂದಗಿ: ಅಧಿಕಾರ ಬರುತ್ತೆ, ಹೋಗುತ್ತೆ. ಆದರೆ ನಿರಂತರವಾಗಿ ಸಮಾಜದ ಕೆಲಸ ಮಾಡಬೇಕು ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.
ತಾಲೂಕಿನ ಬಂದಾಳ ಗ್ರಾಮದ ಬನ್ನಿ ಮಂಟಪ ನಿರ್ಮಾಣ ಮಾಡಲು ತಮ್ಮ ಸ್ವಂತ ಖರ್ಚಿನಲ್ಲಿ ನಾಲ್ಕು ಲಕ್ಷ ರೂಪಾಯಿ ದೇಣಿಗೆ ನೀಡುವ ಮೂಲಕ ಅವರು ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿ, ದಾನ ಧರ್ಮ ಪರೋಪಕಾರಗಳು ಜೀವನದಲ್ಲಿ ಅಳವಡಿಸಿಕೊಂಡು ಗ್ರಾಮದ ಬನ್ನಿ ಮಂಟಪ ನವ ನಿರ್ಮಾಣ ಮಾಡುತ್ತಿರುವದು ಹೆಮ್ಮಯ ವಿಷಯವಾಗಿದೆ ಗ್ರಾಮದ ಸರ್ವ ಭಕ್ತರು ಬನ್ನಿ ಮಂಟಪ ನಿರ್ಮಾಣ ಮಾಡುವ ಕಾರ್ಯದಲ್ಲಿ ಭಾಗವಹಿಸಿ ಬನ್ನಿ ಮಂಟಪದ ಆರ್ ಸಿ ಗುಣಮಟ್ಟದಿಂದ ಕೂಡಿರಬೇಕು ಎಂದರು.
ಭೂಮಿ ಪೂಜೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

