ಹೊನವಾಡ: ಅನಾದಿ ಕಾಲದಿಂದಲೂ ಸಮಾಜದಲ್ಲಿ ಅಂಟುಜಾಡ್ಯದಂತೆ ಹರಡಿಕೊಂಡಿರುವ ಮೇಲು ಕೀಳೆಂಬ ವ್ಯಾಧಿಯನ್ನು ಹೋಗಲಾಡಿಸುವಲ್ಲಿ ಹಲವು ಸಾಧು-ಸಂತರು ತಮ್ಮದೇ ಆದ ಕೊಡುಗೆಯನ್ನು ನೀಡುತ್ತಲೇ ಬಂದಿದ್ದಾರೆ. ಇಂತಹವರ ಪೈಕಿ ತಮ್ಮ ಕೀರ್ತನೆಗಳ ಮೂಲಕ ಸಮಾನತೆ ಸಾರಿದಲ್ಲದೆ, ಭಕ್ತಿಯ ಮೂಲಕವೇ ದೇವರನ್ನು ಕಂಡವರು ಕನಕದಾಸರು ಎಂದು ಪ್ರಾಚಾರ್ಯರಾದ ಎಂ ಎ ಹಿರೇಮಠ್ ಮಾತನಾಡಿದರು.
ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ವಿ ವಿ ಎಸ್ ಪದವಿ ಪೂರ್ವ ಕಾಲೇಜು (ಹೈಸ್ಕೂಲ್) ನಲ್ಲಿ ನಡೆದ ದಾಸ ಪರಂಪರೆಯ ಸಂತ, ಭಕ್ತ ಕನಕದಾಸರ 536ನೇ ಜಯಂತಿಯನ್ನು ಆಚರಿಸಲಾಯಿತು.
ನಮಗೆ ಇವತ್ತಿಗೂ ಭಕ್ತಿ ವಿಚಾರಕ್ಕೆ ಬಂದಾಗ ಕನಕದಾಸರ ಕಥೆಗಳು ನೆನಪಾಗುತ್ತವೆ. ಅವರು ಕೃಷ್ಣನನ್ನೇ ಜಪಿಸುತ್ತಾ ಊರೂರು ತಿರುಗಿ ಕೀರ್ತನೆಗಳ ಮೂಲಕ ಮೇಲು- ಕೀಳು ತೊಡೆದು ಮನುಷ್ಯರಾಗಿ ಬಾಳಿ ಎಂಬ ಸಂದೇಶ ಸಾರಿ ಈ ಭೂಮಿ ಮೇಲೆ ಚಿರಸ್ಥಾಯಿಯಾದವರು ಎಂದು ಸಹ ಶಿಕ್ಷಕರಾದ ಐ ಕೆ ನದಾಫ್ ಮಾತನಾಡಿದರು.
ಕೃಷ್ಣನನ್ನೇ ಒಲಿಸಿಕೊಂಡ ಅವರ ಭಕ್ತಿಗೆ ಇವತ್ತಿಗೂ ನಾವು ಕೈಮುಗಿಯಲೇಬೇಕು. ಉಡುಪಿಯ ಕೃಷ್ಣನ ಜತೆಗೆ ಕನಕನೂ ಭಕ್ತರ ಮನದಲ್ಲಿ ನೆಲೆನಿಂತು ಸಮಾಜದ ಉದ್ಧಾರಕ್ಕಾಗಿ ಶ್ರಮಿಸಿದ ಮಹಾನ್ ಸಂತ. ತನ್ನ ಭಕ್ತಿಯಿಂದಲೇ ಕೃಷ್ಣನ ದರ್ಶನ ಮಾಡಿದ ಕನಕದಾಸರು ಹಲವುh ದೈವಪವಾಡವನ್ನು ಸೃಷ್ಟಿಸಿ ಭಕ್ತರಿಂದ ನಿತ್ಯ ಸೇವೆಯನ್ನು ಮಾಡಿಸಿಕೊಳ್ಳುತ್ತಿದ್ದಾರೆ. ನಮ್ಮ ನಡುವೆ ಭಕ್ತಿಗೆ ಇನ್ನೊಂದು ಹೆಸರಾಗಿದ್ದಾರೆ
ಕನಕದಾಸರು ಸಮಾಜದ ಅಂಕು- ಡೊಂಕುಗಳನ್ನು ತಿದ್ದುವ ಸಲುವಾಗಿ ಲೋಕ ಸಂಚಾರ ಹೊರಟ ಅವರು, ದರ್ಶನ ನೀಡದ ಊರುಗಳಿಲ್ಲ ಎಂದು ಧರೆಪ್ಪ ಸಿದ್ನಾಥ ಮಾತನಾಡಿದರು.
ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಸಂಸ್ಥೆಯ ಅಧ್ಯಕ್ಷರಾದ ನಳಿನಿಕಾಂತ ಸಾವಂತ ಎಸ್ ಜಿ ಲಕ್ಕುಂಡಿಮಠ ಸಹ ಶಿಕ್ಷಕರಾದ ಎಂ ಜಿ ಕುಲಕರ್ಣಿ ದೈಹಿಕ ಶಿಕ್ಷಕರಾದ ಮಮತಾ ಹಿರೇಮಠ್ ನವೀನ್ ಹಿರೇಮಠ್ ಮಂಜುನಾಥ್ ಪಾತ್ರೋಟ ನಿವೇದಿತಾ ಹಿರೇಮಠ್ ಸಂಸ್ಥೆಯ ಆಡಳಿತ ಮಂಡಳಿ ಸಿಬ್ಬಂದಿ ವರ್ಗ ಮತ್ತಿತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

