ಕಲಕೇರಿ: ನವಜಾತ ಶಿಶುಗಳು,ಮಕ್ಕಳು ಹದಿಹರೆಯದವರು,ಗರ್ಭಿಣಿಯರು,ತಾಯಂದಿರಲ್ಲಿ ರಕ್ತಹೀನತೆ ಮತ್ತು ಅಪೌಷ್ಠಿಕತೆ ನಿವಾರಿಸಲು ‘ಅನೀಮಿಯಾ ಮುಕ್ತ ಪೌಷ್ಠಿಕ ಕರ್ನಾಟಕ’ ಯೋಜನೆಗೆ ಸರ್ಕಾರ ಮತ್ತು ಆರೋಗ್ಯ ಇಲಾಕೆ ಮುಂದಾಗಿದ್ದು ಇದಕ್ಕೆ ಇದರ ಯಶಸ್ಸಿಗೆ ಪ್ರತಿಯೋಬ್ಬರು ಮುಂದಾಗಬೇಕು. ಅನೀಮಿಯಾ ಮುಕ್ತ ಕರ್ನಾಟಕ ಮಾಡಲು ಸಂಕಲ್ಪಮಾಡಬೇಕಿದೆ ಎಂದು ಸಿಂದಗಿಯ ಡಾ.ಶ್ವೇತಾ ಸ್ಥಾವರಮಠ ಹೇಳಿದರು.
ಶುಕ್ರವಾರ ಕಲಕೇರಿ ಗ್ರಾಮದ ಮಲ್ಲಿಕಾರ್ಜುನ ವಿಧ್ಯಾವರ್ಧಕ ಸಂಘದ ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿಧ್ಯಾರ್ಥಿಗಳಿಗೆ ಹಮ್ಮಿಕೊಂಡ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.
ಮಕ್ಕಳು,ವಿಧ್ಯಾರ್ಥಿ,ವಿಧ್ಯಾರ್ಥಿನಿಯರು,ಗರ್ಭಿಣಿಯರು,ಬಾಣಂತಿಯರು ಸಮಾಜದಲ್ಲಿ ಉತ್ತಮ ಆರೋಗ್ಯವಂತಯರಾಗಿ ಬದುಕಬೇಕು ಎನ್ನುವ ಸದುದ್ದೇಶದಿಂದ ಸರ್ಕಾರ ಮತ್ತು ಆರೋಗ್ಯ ಇಲಾಖೆ ನುರಿತ ವೈದ್ಯರಿಂದ ತಪಾಸಣೆ ನಡೆಸಿ ಅನೀಮಿಯಾದಿಂದ ಬಳಲುತ್ತಿರುವವರಿಗೆ ಸೂಕ್ತ ಚಿಕಿತ್ಸೆ ನಿಡಿ ಅವರಿಗೆ ಔಷದಿ ಮತ್ತು ಮಾತ್ರೆಗಳನ್ನು ನಿಡಲಾಗುತ್ತದೆ ಎಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಲಹೆ ಮಾಡಿದರು, ಈ ಸಂದರ್ಭದಲ್ಲಿ ಸುಮಾರು ೨೦೦ ಕ್ಕೂ ಹೆಚ್ಚು ಮಕ್ಕಳಿಗೆ ಹೆಮೋಗ್ಲೊಬಿನ್ ತಪಾಸಣೆ ಮಾಡಿ ರಕ್ತ ಹೀನತೆಯಿಂದ ಬಳಲುತ್ತಿರುವ ಮಕ್ಕಳಿಗೆ ಮಾತ್ರೆಗಳನ್ನು ವಿತರಿಸಲಾಯಿತು,
ಪ್ರಭಾರಿ ಪ್ರಾಚಾರ್ಯರಾದ ಬಿ ಜಿ ಚನಗೊಂಡ ಮಾತನಾಡಿದರು.
ಡಾ.ಪ್ರೀಯಾಂಕಾ ಕುಂಬಾರ, ಆಪ್ತ ಸಮಾಲೋಚಕ ಅಪ್ಪಾಸಾಬ ಮಾಂಗ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಅನಿತಾ ದೊಡ್ಡಮನಿ, ಸುಶ್ಮೀತಾ ಮುಳ್ಳಾಮಠ, ಆರತಿ ಮಲ್ಯಾಳ, ರುಪಾ ಕುಂಬಾರ, ಎಸ್ ಎಸ್ ಲಮಾಣಿ, ಚಂದ್ರು ಕಾಳೆ, ಎಸ್ ಎಸ್ ಕಲಶೇಟ್ಟಿ, ಶಾಂತು ಧುರ್ಗಿ, ರವಿಕುಮಾರ ಗುಮಶೇಟ್ಟಿ, ಬಸು ಕುಂಬಾರ, ವಿರೇಶ ಝಳಕಿ ಸೇರಿದಂತೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.
Subscribe to Updates
Get the latest creative news from FooBar about art, design and business.
ಅನೀಮಿಯಾ ಮುಕ್ತ ಪೌಷ್ಠಿಕ ಕರ್ನಾಟಕ ಕಾರ್ಯಕ್ಕೆ ಕೈಜೋಡಿಸಿ :ಡಾ.ಶ್ವೇತಾ
Related Posts
Add A Comment

