Subscribe to Updates
Get the latest creative news from FooBar about art, design and business.
Author: editor.udayarashmi@gmail.com
ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ | ಜಮೀನು ಕಳೆದುಕೊಂಡ ರೈತರಿಗಿಲ್ಲ ಪರಿಹಾರ ವಿಜಯಪುರ: ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ನಡೆದ ತುಬಚಿ- ಬಬಲೇಶ್ವರ ಏತ ನೀರಾವರಿಯು ೨೦೧೯-೨೦೨೦ ನೇ ಸಾಲಿನಲ್ಲಿ ಕಾಮಗಾರಿ ಮುಗಿದು ಸುಮಾರು ೩-೪ ವರ್ಷಗಳೇ ಕಳೆದರು ಇಲ್ಲಿಯವರೆಗೆ ರೈತರಿಗೆ ಬರಬೇಕಾದ ಪರಿಹಾರ ಇನ್ನು ಬಂದಿಲ್ಲವೆಂದು ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.ಹೊನವಾಡ ಒಂದೇ ಗ್ರಾಮದಲ್ಲಿ ಸುಮಾರು ೧೦೦೦ ಕ್ಕೂ ಅಧಿಕ ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ಬಂದಿರುವುದಿಲ್ಲ, ಅಧಿಕಾರಿಗಳಿಗೆ ಕೇಳಿದರೆ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಅಲ್ಲಿ ಹೋಗಿ, ಇಲ್ಲಿ ಹೋಗಿ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ, ಗುತ್ತಿಗೆ ಹಿಡಿದವರು ತಮ್ಮ ಕೆಲಸ ಮುಗಿಸುವ ವೇಳೆ ರೈತರೊಂದಿಗೆ ಚೆನ್ನಾಗಿ ಮಾತನಾಡಿ ಈಗ ಕೆಲಸ ಮುಗಿಸಿಕೊಂಡು ಹೋಗಿದ್ದಾರೆ, ಅವರಿಗೆ ಕೇಳಿದರೆ ಅಧಿಕಾರಿಗಳಿಗೆ ಕೇಳಿ ಎಂದು ತಪ್ಪಿಸಿಕೊಳ್ಳುತ್ತಿದ್ದಾರೆ.ಆದ್ದರಿಂದ ಕೂಡಲೇ ಸಂಬಂಧಿಸಿದ ಅಧಿಕಾರಿಗಳನ್ನು ಕರೆದು ಇಲ್ಲಿಯವರೆಗೆ ಕೇವಲ ಭೂ…
ದೇವರ ಹಿಪ್ಪರಗಿ: ಸಿದ್ದೇಶ್ವರ ಶ್ರೀಗಳ ಆಸೆಯಂತೆ ರೈತರಿಗಾಗಿ ನನ್ನ ಐದು ವರ್ಷದ ಅಧಿಕಾರ ಅವಧಿಯಲ್ಲಿ ಕ್ಷೇತ್ರದ ಸಾವಿರಾರು ಎಕರೆ ನೀರಾವರಿ ಮಾಡುವುದಕ್ಕಾಗಿ ನೂರಾರು ಕೋಟಿ ಅನುದಾನ ತಂದು ನೀರಾವರಿ ಕಾಮಗಾರಿಗಳು ಮಾಡಿರುವುದು ನನಗೆ ತೃಪ್ತಿಯಿದೆ ಎಂದು ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹೇಳಿದರು. ಮತಕ್ಷೇತ್ರದ ಚಿಕ್ಕರೋಗಿ ಗ್ರಾಮದಲ್ಲಿ ಮಂಗಳವಾರದಂದು ಗಂಗಾ ಪೂಜೆ ಹಾಗೂ ಬ್ರಿಜ್, ಕಮ್ ಬಾಂದಾರು ಲೋಕಾರ್ಪಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರಾಜಕಾರಣಿಗಳಿಗೆ ಅಧಿಕಾರ ಶಾಶ್ವತ ಅಲ್ಲ, ಅಧಿಕಾರ ಅವಧಿಯಲ್ಲಿ ಮಾಡಿರುವ ಕಾಮಗಾರಿಗಳು ಕ್ಷೇತ್ರದ ಜನಸಾಮಾನ್ಯರಿಗೆ ಸಮರ್ಪಕವಾಗಿ ತಲುಪುವಂತಾಗಬೇಕು. ಇನ್ನು ಕೆಲವು ನೀರಾವರಿ ಕಾಮಗಾರಿಗಳು ಪೂರ್ಣಗೊಳ್ಳಬೇಕಾದರೆ ಈಗಿನ ಶಾಸಕರು ಸರ್ಕಾರದ ಮೇಲೆ ಒತ್ತಡ ತಂದು ಇನ್ನಷ್ಟು ಅನುದಾನ ಬಿಡುಗಡೆಗೊಳಿಸಿ ಇನ್ನುಳಿದ ಕಾಮಗಾರಿಗಳು ಪೂರ್ಣಗೊಳಿಸಿ ಕ್ಷೇತ್ರದ ರೈತರಿಗೆ ಅನುಕೂಲ ಮಾಡಿಕೊಡಬೇಕು. ಅದಕ್ಕಾಗಿ ನನ್ನ ಸಲಹೆ, ಸಹಕಾರ ಈಗಿನ ಶಾಸಕರಿಗೆ ಕೊಡುತ್ತೇನೆ. ನನ್ನ ಅಧಿಕಾರ ಅವಧಿಯಲ್ಲಿ ಆದ ಕಾಮಗಾರಿ ಈಗ ನನ್ನಿಂದಲೇ ಲೋಕಾರ್ಪಣೆ ಮಾಡಿಸಿ ನನಗೆ ಚಿಕ್ಕರೂಗಿ ಗ್ರಾಮದ ರೈತರಿಗೆ ನಾನು ಚಿರಋಣಿಯಾಗಿರುತ್ತೇನೆ. ಕ್ಷೇತ್ರದ ಜನರ…
ಮಿನಿ ವಿಧಾನಸೌಧ, ಬಸ್ ಡಿಪೋ, ವಿದ್ಯುತ್ ಬಿಲ್ ಕೌಂಟರ್, ರೈತ ಸಂಪರ್ಕ ಕೇಂದ್ರ ಮತ್ತು ಕೆರೆ ನಿರ್ಮಿಸಲು ಗ್ರಾಮಸ್ಥರ ಆಗ್ರಹ ಕಲಕೇರಿ: ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮವನ್ನು ಹೋಬಳಿಯನ್ನಾಗಿಸುವ ಸಲುವಾಗಿ ೨೦೦೩ ರಿಂದಲೂ ಹೋರಾಟ ಮಾಡುತ್ತಾ ಬಂದಿದ್ದು ಯಾರೂ ಈ ಕಡೆ ಗಮನ ಹರಿಸುತ್ತಿಲ್ಲ. ಈಗಲಾದರೂ ಕಲಕೇರಿಯನ್ನು ಹೋಬಳಿ ಎಂದು ಘೋಷಿಸಿ ಮೂಲ ಸೌಲಭ್ಯಗಳನ್ನು ಒದಗಿಸಿ ರೈತರು, ಕೂಲಿಕಾರ್ಮಿಕರು, ಬಡವರು ಮತ್ತು ಸಾರ್ವಜನಿಕರ ಸಮಸ್ಯೆಯನ್ನು ನಿವಾರಿಸಲು ಮುಂದಾಗಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಗ್ರಾಮದ ಮುಖಂಡರಾದ ಡಾ.ಈರಣ್ಣ ಗುಮಶೆಟ್ಟಿ, ಯಮನೂರಿ ಕುಲಕರ್ಣಿ ಸೇರಿದಂತೆ ಅನೇಕ ಮುಖಂಡರು ಆಗ್ರಹಿಸಿದರು.ಗ್ರಾಮದ ಮುಖಂಡರು ಮತ್ತು ಪ್ರಗತಿಪರ ಚಿಂತಕರು ಕಲಕೇರಿಯನ್ನು ಹೋಬಳಿ ಮಾಡುವಂತೆ ಆಗ್ರಹಿಸಿ ಪ್ರವಾಸಿ ಮಂದಿರದಲ್ಲಿ ಕರೆಯಲಾದ ಪತ್ರಿಕಾ ಸಭೆಯಲ್ಲಿ ಅವರು ಮಾತನಾಡಿದರು.ಮುಖಂಡರಾದ ಯಮನೂರಿ ಕುಲಕರ್ಣಿಯವರು ಮಾತನಾಡಿ, ಅದಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಯನ್ನು ಚರ್ಚಿಸಲು ಎರಡು ದಿನಗಳನ್ನು ಮೀಸಲಿಟ್ಟಿದ್ದು, ಈ ನಿಟ್ಟಿನಲ್ಲಿ ನಾವು ಆಗ್ರಹಪಡಿಸುವುದೇನೆಂದರೆ ದಯವಿಟ್ಟು ಕಲಕೇರಿ ಗ್ರಾಮವನ್ನು ಹೋಬಳಿ ಮಾಡಿ…
೩ ಕೃಷಿ ಕಾಯ್ದೆ, ಎ.ಪಿ.ಎಂ.ಸಿ ಕಾಯ್ದೆ & ಜಾನುವಾರು ಹತ್ಯೆ ನಿಷೇಧ ಕಾಯ್ದೆ ಹಿಂಪಡೆಗೆ ರೈತಸಂಘ ಆಗ್ರಹ ವಿಜಯಪುರ: ರಾಜ್ಯ ಹಾಗೂ ಜಿಲ್ಲೆಯ ರೈತರ ಜ್ವಲಂತ ಸಮಸ್ಯೆಗಳನ್ನು ಹಿಂಪಡೆಯುವ ಹಾಗೂ ಬಗೆಹರಿಸುವಂತೆ ಆಗ್ರಹಿಸಿ ಡಿಸೆಂಬರ್ ೭ರಂದು ಸುವರ್ಣ ಸೌಧ ಮುತ್ತಿಗೆ ಹಾಕಿ ವಿವಿಧ ಬೇಡಿಕೆಗಳನ್ನು ಈಡೇರಿಸುವವರೆಗೆ ಧರಣಿ ಮಾಡಲಾಗುವುದು, ಜಿಲ್ಲೆಯಿಂದ ೩೦೦೦ಕ್ಕಿಂತಲೂ ಹೆಚ್ಚು ರೈತರು ರಾಜ್ಯಾಧ್ಯಕ್ಷರಾದ ಚುನಪ್ಪಾ ಪೂಜೇರಿ ಅವರ ನೇತೃತ್ವದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು ೨೦೦೦೦ ಕ್ಕೂ ಹೆಚ್ಚು ರೈತರು ಹೋರಾಟದಲ್ಲಿ ಪಾಲ್ಗೊಳಲಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರಾಹುಲ ಕುಬಕಡ್ಡಿ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದರು.ರೈತರಿಗೆ ಬರಗಾಲ ಪರಿಹಾರ ಸೇರಿದಂತೆ ವಿವಿಧ ಜ್ವಲಂತ ಸಮಸ್ಯೆಗಳನ್ನು ಬಗೆರಿಸಬೇಕು, ಈ ನಿಟ್ಟಿನಲ್ಲಿ ಬೆಳಗಾವಿ ಚಲೋ ಕರೆ ಕೊಡಲಾಗಿದೆ, ಕೂಡಲೇ ಸರಕಾರ ನೆಪ ಮಾತ್ರಕ್ಕೆ ಉತ್ತರ ಕರ್ನಾಟಕದಲ್ಲಿ ೧೦ ದಿನಗಳ ಕಾಲ ಪ್ರವಾಸಕ್ಕೆ ಬಂದ ಹಾಗೆ ಬಂದು ಹೋಗುವ ನೆಪ ಮಾತ್ರದ ಅಧಿವೇಶನ…
ಕ್ಲಾಸಿಕ್ ಸ್ಟಡಿ ಸರ್ಕಲ್ ನಿರ್ದೇಶಕ ವಿನೋದ ಬಿರಾದಾರ ಅಭಿಮತ ಇಂಡಿ: ಅವಕಾಶಗಳು ಎಲ್ಲರಿಗೂ ಸಮನಾಗಿದ್ದು, ಅದನ್ನು ಸರಿಯಾದ ಹಂತದಲ್ಲಿ ಉಪಯೋಗಿಸಿಕೊಳ್ಳುವವನು ಯಶಸ್ವಿಯಾಗುತ್ತಾನೆ ಎಂದು ಕ್ಲಾಸಿಕ್ ಸ್ಟಡಿ ಸರ್ಕಲ್ ನಿರ್ದೇಶಕ ವಿನೋದ ಬಿರಾದಾರ ಹೇಳಿದರು. ಹಾಗೂ ಕೆಎಎಸ್, ಪಿಎಸ್‌ಐ ಗೆ ಯಾವ ರೀತಿ ತಯಾರಿ ಮತ್ತು ಅದಕ್ಕೆ ಸಂಬಂಧ ಪಟ್ಟಿರುವ ಪಠ್ಯಕ್ರಮದ ಬಗ್ಗೆ ಚರ್ಚಿಸಿದರಲ್ಲದೇ, ಸ್ಪರ್ಧಾತ್ಮಕ ಪರೀಕ್ಷೆಯ ಮಾಹಿತಿಯನ್ನು ತಿಳಿಸಿಕೊಟ್ಟರು.ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ಲೇಸ್‌ಮೆಂಟ್ ಸೆಲ್, ಐಕ್ಯೂಎಸಿ ಘಟಕ ಮತ್ತು ಕ್ಲಾಸಿಕ್ ಸ್ಟಡಿ ಸರ್ಕಲ್ ಸಹಯೋದಲ್ಲಿ ಹಮ್ಮಿಕೊಂಡ ಒಂದು ದಿನದ ಉಚಿತ ಸ್ಪರ್ದಾತ್ಮಕ ಪರೀಕ್ಷೆಗಳ ಕಾರ್ಯಗಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ಉದ್ಯೋಗ ಪಡೆಯಬಹುದಾದ ಸಂಗತಿಗಳನ್ನು ಹೇಳಿದ ಅವರು ಇಂದಿನ ವಿದ್ಯಾರ್ಥಿಗಳಲ್ಲಿ ನಿರಂತರ ಓದಿನ ಮಹತ್ವದ ಕುರಿತಾಗಿ ಮಾತನಾಡಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಪ್ರೊ. ಆರ್.ಎಚ್.ರಮೇಶ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಾವುದೇ ಪರೀಕ್ಷೆಗಳನ್ನು ಜಯಿಸಲು ಸಹಾಯಕಾರಿಯಾಗಿವೆ. ಸ್ಪರ್ಧಾತ್ಮ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾಲೇಜಿನ ಹೆಚ್ಚು ಹೆಚ್ಚು…
ವಿಜಯಪುರ: ನಗರದ ಶಿವಾಜಿ ವೃತ್ತದಲ್ಲಿ ಶ್ರೀ ಗಜಾನನ ಉತ್ಸವ ಮಹಾ ಮಂಡಳ ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ನಡೆಯಿತು.ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಸ್ವಾಮೀಜಿ ಪೂಜೆ ಮಾಡುವ ಮೂಲಕ ದಾಸೋಹಕ್ಕೆ ಚಾಲನೆ ನೀಡಿದರು.ಗಣೇಶ ಭಕ್ತರಿಗಾಗಿ 3 ಕ್ವಿಂಟಾಲ್ ಅನ್ನ, ಒಂದು ಕ್ವಿಂಟ್ವಾಲ್ ಸಜ್ಜಕ ಮಾಡಿಸಲಾಗಿತ್ತು. 3000 ಕ್ಕೂ ಅಧಿಕ ಭಕ್ತಾಧಿಗಳು ಪ್ರಸಾದ ಸೇವನೆ ಮಾಡಿದರು.ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಬಸವಲಿಂಗ ಸ್ವಾಮೀಜಿ, ಅನ್ನ ದಾಸೋಹ ಕಾರ್ಯಕ್ರಮ ಅಚ್ಚುಕಟ್ಟಾಗಿ ಮಾಡಲಾಗಿದೆ. ವಿಜಯಪುರದ ಶಿವಾಜಿ ವ್ರತ್ತದಲ್ಲಿಯೂ ಇನ್ನು ಮುಂದೆ ಪ್ರತಿ ಸೋಮವಾರ ಅನ್ನದಾಸೋಹ ಹಮ್ಮಿಕೊಂಡದಕ್ಕೆ ಅಭಿನಂದನೆ ಸಲ್ಲಿಸಿದರು. ನಿರಂತರವಾಗಿ ಜ್ಞಾನಯೋಗಾಶ್ರಮದಲ್ಲಿ ಅನ್ನಪ್ರಸಾದ ಇರುತ್ತದೆ. ಇದೀಗ ಶಿವಾಜಿ ವೃತ್ತದಲ್ಲೂ ದಾಸೋಹ ಕಾರ್ಯಕ್ರಮ ಮಾಡುತ್ತಿರುವುದು ಸಂತಸ ತಂದಿದೆ ಎಂದರು. ವಿಜಯಪುರ ಜಿಲ್ಲೆ ದಾಸೋಹಕ್ಕೆ ಹೆಸರುವಾಸಿಯಾಗಿದೆ. ಇಂತಹ ಜಿಲ್ಲೆಯಲ್ಲಿ ಗಜಾನನ ಉತ್ಸವ ಮಹಾಮಂಡಳ ಸಂಸ್ಥಾಪಕ ಅಧ್ಯಕ್ಷರಾದ ಮಾಜಿ ಸಚಿವರಾದ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಮಹಾ ಮಂಡಳಿಯವರು ಪ್ರತಿ ಸೋಮವಾರ ದಾಸೋಹ ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು. ಭಕ್ತಾದಿಗಳು ಅನ್ನ ಪ್ರಸಾದ…
ಆಲಮಟ್ಟಿ: ಎಸ್.ವ್ಹಿ.ವ್ಹಿ. ಶಿಕ್ಷಣ ಸಂಸ್ಥೆಯ ಅಂಗಳದ ವಿವಿಧ ಶಾಲಾ ಕಾಲೇಜು ತತ್ವ ವರ್ಗಕೋಣೆಯಲ್ಲಿ ಶುಭ ಮಂಗಳವಾರದಂದು ಅಭೂತಪೂರ್ವವಾಗಿ ಕಂಡು ಬಂತು.ಗದುಗಿನ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಹಾಗೂ ಆಲಮಟ್ಟಿ ಶ್ರೀಮದ್ ವೀರಶೈವ ವಿದ್ಖಾಲಯ ಅಸೋಸಿಯೇಷನ್ ಶಿಕ್ಷಣ ಸಂಸ್ಥೆಗಳ ಸಿಇಓ, ನಿವೃತ್ತ ಡಿಡಿಪಿಐ ಆಯ್.ಬಿ.ಬೆನಕೋಪ್ಪ ಅವರು ಇಂದು ಇಲ್ಲಿನ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಪರಿಶೀಲಿಸಿ ಮುಂಬರಲಿರುವ ಎಸ್.ಎಸ್.ಎಲ್.ಸಿ.ಹಾಗೂ ಪಿಯುಸಿ ಪರೀಕ್ಷಾ ಹಿನ್ನೆಲೆಯಲ್ಲಿ ವಿಶೇಷ ಟಿಪ್ಸ್ ಗಳನ್ನು ಮಕ್ಕಳೊಂದಿಗೆ ಹಂಚಿಕೊಂಡು ಆತ್ಮಸಾಕ್ಷಿಯ ಮನೋಬಲವನ್ನು ಹೆಚ್ಚಿಸುವಲ್ಲಿ ಮಹತ್ವರದ ಹೆಜ್ಜೆಗಳನ್ನು ಇರಿಸಿದ್ದು ಅವಿಸ್ಮರಣೀಯವಾಗಿತ್ತು.ಮಹನೀಯರೊಂದಿಗೆ ಸಂಸ್ಥೆಯ ಮುಖ್ಯಸ್ಥರು, ಎಲ್ಲ ಸಿಬ್ಬಂದಿಗಳು, ಶಿಕ್ಷಕರು, ಉಪನ್ಯಾಸ ಬಳಗದವರಿದ್ದರು .
Udayarashmi kannada daily newspaper
ವಿಜಯಪುರ: ಕೆಐಡಿಬಿ ರಾಜಗುರು ಗೋಧಾಮಿನಲ್ಲಿ ಕಾರ್ಮಿಕರು ಸಿಲುಕಿದ ಘಟನೆಗೆ ಸಂಬಂಧಿಸಿದಂತೆ ಕೈಗಾರಿಕೆ ಹಾಗೂ ಮೂಲಸೌಕರ್ಯ ಸಚಿವ ಮತ್ತು ವಿಜಯಪುರ ಜಿಲ್ಲೆ ಉಸ್ತುವಾರಿ ಸಚಿವ ಎಂ. ಬಿ.ಪಾಟೀಲ್ ಬೆಳಗಾವಿಯಿಂದ ವಿಜಯಪುರದತ್ತ ಆಗಮಿಸುತ್ತಿದ್ದಾರೆ.ಘಟನೆ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡಿ ಮಾಹಿತಿ ಪಡೆದಿದ್ದು, ಮಾನ್ಯ ಮುಖ್ಯಮಂತ್ರಿಗಳು ಕೂಡ ಈ ಘಟನೆಯ ಮಾಹಿತಿ ನೀಡಿದ್ದಾರೆ.ಈಗಾಗಲೇ ರಕ್ಷಣಾ ಕಾರ್ಯ ನಡೆದಿದ್ದು ಸ್ವತಹ ಜಿಲ್ಲಾ ಉಸ್ತುವಾರಿ ಸಚಿವರು ಘಟನೆ ಸ್ಥಳಕ್ಕೆ ಮಧ್ಯರಾತ್ರಿ 11:30 ಗಂಟೆಗೆ ಸಚಿವ ಎಂ.ಬಿ. ಪಾಟೀಲರು ಈ ಗೋಧಾಮಿಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ.
ವಿಜಯಪುರ: ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ವಿಜಯಪುರ ಜಿಲ್ಲೆ “ಕಪ್ಸ್ ಸಂಕಲ್ಪ ಸ್ಕೂಲ್” ವಿದ್ಯಾರ್ಥಿಗಳುವಿಶೇಷ ಹಾಗೂ ವಿಶಿಷ್ಟವಾಗಿ ಕ್ರೀಡೆಯನ್ನು ಹಮ್ಮಿಕೊಂಡಿದ್ದರು.”ಕಪ್ಸ್ ಸಂಕಲ್ಪ” ಶಾಲೆಯ ಕ್ರೀಡಾ ಚಾಲನೆಯನ್ನು ವಿಕಲಚೇತನ ಕರ್ನಾಟಕದ ಕ್ರಿಕೆಟ್ ತಂಡದ ನಾಯಕರಾದ “ಮಹೇಶ್ ತೋಟದ” ಹಾಗೂ “ಸಂಕಲ್ಪ ಶಾಲಾ ಮುಖ್ಯ ಕಾರ್ಯನಿರ್ವಾಹಕರಾದ ದೀಪಕ್ ಅಗರ್ವಾಲ್, ಯೋಗಿತಾ ಅಗರ್ವಾಲ್, ಆಡಳಿತ ಮಂಡಳಿಯವರು ಹಾಗು ಶಿಕ್ಷಕ ವೃಂದ ಚಾಲನೆಯಲ್ಲಿ ಪಾಲ್ಗೊಂಡಿದ್ದರು.”ಶಾಲಾ ವಿದ್ಯಾರ್ಥಿಗಳು “ಕಪ್ಸ್ ಸಂಕಲ್ಪ” ವಿವಿಧ ಶಾಖೆಗಳನ್ನು ಒಳಗೊಂಡ ಸುಮಾರು 600 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಈ ಕ್ರೀಡೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.ವಿಜಯಶಾಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.”ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ವಿದ್ಯಾರ್ಥಿಗಳನ್ನು ಈಗಲೇ ಕ್ರೀಡೆಯ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸುವಲ್ಲಿ ಶಿಕ್ಷಕರು ಸಪಲರಾದರು.”ಕಪ್ಸ್ ಸಂಕಲ್ಪ” ಶಾಲೆಯ ಅಧ್ಯಕ್ಷರಾದ ಅಶೋಕ ಗರ್ವಾಲ್, ಸುನಿಲ್ ಅಗರ್ವಾಲ್, ಆಡಳಿತ ಮಂಡಳಿ ಈ ಕ್ರೀಡಾಕೂಟಕ್ಕೆ ಮಚ್ಚುಗೆ ವ್ಯಕ್ತಪಡಿಸಿದರು.
