Subscribe to Updates
Get the latest creative news from FooBar about art, design and business.
Author: editor.udayarashmi@gmail.com
ನವದೆಹಲಿ: ಲೋಕಸಭೆ ಭದ್ರತಾ ಉಲ್ಲಂಘನೆ ಪ್ರಕರಣದ ಆರನೇ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಪ್ರಕರಣದ ‘ಮಾಸ್ಟರ್ ಮೈಂಡ್’ ಲಲಿತ್ ಝಾ ದೆಹಲಿಯಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪದ ಮೇಲೆ ಮಹೇಶ್ ಕುಮಾವತ್ ಅವರನ್ನು ಇಂದು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.ಘಟನೆ ನಡೆದ ಮರುದಿನ ಶರಣಾಗಲು ಗುರುವಾರ ರಾತ್ರಿ ಪೊಲೀಸ್ ಠಾಣೆಗೆ ಬಂದಿದ್ದ ಲಲಿತ್ ಝಾ ಅವರೊಂದಿಗೆ ಮಹೇಶ್ ಕುಮಾವತ್ ಕೂಡ ಆಗಮಿಸಿದ್ದರು. ಇಬ್ಬರನ್ನೂ ತನಿಖಾಧಿಕಾರಿಗಳ ವಶಕ್ಕೆ ನೀಡಲಾಗಿದ್ದು, ಅಂದಿನಿಂದಲೆ ಮಹೇಶ್ ಅವರನ್ನೂ ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ.ಪ್ರಕರಣದ ಆರೋಪಿಗಳು ಈ ಹಿಂದೆ ನಿರ್ವಹಣೆ ಮಾಡುತ್ತಿದ್ದ ಭಗತ್ ಸಿಂಗ್ ಫ್ಯಾನ್ ಕ್ಲಬ್ ಪೇಜ್ ನ ಸದಸ್ಯನಾಗಿದ್ದು, ಸಾಕ್ಷ್ಯ ನಾಶ, ಕ್ರಿಮಿನಲ್ ಪಿತೂರಿ ಆರೋಪದ ಮೇಲೆ ಕುಮಾವತ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಅವರನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದ್ದು, ಆರೋಪಿಗಳ ಮೊಬೈಲ್ ಫೋನ್ ನಲ್ಲಿದ್ದ ಸಾಕ್ಷ್ಯ ನಾಶಪಡಿಸುವ ಕೆಲಸದಲ್ಲಿ ಕುಮಾವತ್ ಭಾಗಿಯಾಗಿದ್ದಾರೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಆರೋಪಿಸಿದ ನಂತರ ವಿಶೇಷ ನ್ಯಾಯಾಧೀಶ ಹರ್ದೀಪ್…
ಬೆಂಗಳೂರು: ವೈದ್ಯಕೀಯ ಗರ್ಭಪಾತ (ಎಂಟಿಪಿ) ಕಾನೂನಿನ ಅಡಿಯಲ್ಲಿನ ಹಕ್ಕುಗಳ ಕುರಿತು ಮಹಿಳೆಯರಿಗೆ ಸಮಾಲೋಚನೆ ನೀಡುವ ಮೂಲಕ, ಸಂತ್ರಸ್ತರಿಗೆ ಮಾನಸಿಕ ಆಘಾತ ಕಡಿಮೆ ಮಾಡಲು ಹಾಗೂ ಅವರಿಗೆ ಸಹಾಯ ಮಾಡಲು ಕರ್ನಾಟಕ ಹೈಕೋರ್ಟ್ ಹಲವು ಮಾರ್ಗಸೂಚಿಗಳನ್ನು ಹೊರಡಿಸಿದೆ.ಅತ್ಯಾಚಾರದಿಂದ ಗರ್ಭಿಣಿಯಾಗಿದ್ದ 17 ವರ್ಷದ ಬಾಲಕಿಗೆ ಎಂಟಿಪಿಗೆ ಒಳಗಾಗಲು ಅನುಮತಿ ನೀಡುವಾಗ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು ಈ ನಿರ್ದೇಶನಗಳನ್ನು ನೀಡಿದ್ದಾರೆ. ಅಪ್ರಾಪ್ತ ವಯಸ್ಸಿನ ಗರ್ಭಾವಸ್ಥೆಯ ಹಲವಾರು ಪ್ರಕರಣಗಳು ಲೈಂಗಿಕ ಅಪರಾಧಗಳಿಂದ ಸಂಭವಿಸಿದ್ದು, ಅದರ ಅನ್ವಯ ಎಫ್ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.ಸಂತ್ರಸ್ತೆಯರು ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ಬಯಸುವ ಹೆಚ್ಚಿನ ಪ್ರಕರಣಗಳಲ್ಲಿ ಗರ್ಭಾವಸ್ಥೆಯ ಅವಧಿಯು 24 ವಾರಗಳನ್ನು ದಾಟಿರುತ್ತದೆ ಎಂಬುದನ್ನು ನ್ಯಾಯಾಲಯವು ಗಮನಿಸಿದೆ. ಇದು ವೈದ್ಯಕೀಯ ಗರ್ಭಪಾತ (ತಿದ್ದುಪಡಿ)-1971ರ ಅಡಿಯಲ್ಲಿ ಅನುಮತಿ ನೀಡುವ ಅವಧಿಯಾಗಿದೆ. ನಂತರದ ಯಾವುದೇ ವಿಳಂಬಕ್ಕೆ ಹೈಕೋರ್ಟ್‌ನಿಂದ ಅನುಮತಿ ಪಡೆಯುವುದು ಅಗತ್ಯವಿದೆ.ಐಪಿಸಿ ಸೆಕ್ಷನ್ 376 ಅಥವಾ ಪೋಕ್ಸೊ ಕಾಯ್ದೆಯಡಿ ಲೈಂಗಿಕ ಅಪರಾಧವನ್ನು ದಾಖಲಿಸಿದ ತಕ್ಷಣ, ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಿ ಗರ್ಭಿಣಿಯಾಗಿದ್ದಲ್ಲಿ ಖಚಿತಪಡಿಸಿಕೊಳ್ಳಬೇಕೆಂದು ನ್ಯಾಯಾಲಯ…
ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯಾ ಗಂಭೀರ ಆರೋಪ ನವದೆಹಲಿ: ಸಂಸತ್ ಭದ್ರತಾ ಲೋಪ ಪ್ರಕರಣದ ಮೂಲಕ ಲೋಕಸಭೆ ಚುನಾವಣೆಯಲ್ಲಿ ತಮ್ಮ ಮಗನನ್ನು ಗೆಲ್ಲಿಸಲು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಸದ ಪ್ರತಾಪ್ ಸಿಂಹ ವಿರುದ್ಧ ಸಂಚು ರೂಪಿಸಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯಾ ಶನಿವಾರ ಗಂಭೀರ ಆರೋಪಿಸಿದ್ದಾರೆ.ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಂಗ್, ‘ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಮೈಸೂರು-ಕೊಡಗು ಸಂಸದ ಸ್ಥಾನದಿಂದ ಸ್ಪರ್ಧಿಸಲಿದ್ದಾರೆ. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಈ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದು, ಅವರ (ಸಿಎಂ ಸಿದ್ದರಾಮಯ್ಯ) ಪುತ್ರನ ಗೆಲುವನ್ನು ಖಚಿತಪಡಿಸಿಕೊಳ್ಳಲು ಯೋಜಿತ ರೀತಿಯಲ್ಲಿ ಷಡ್ಯಂತ್ರ ರೂಪಿಸಲಾಗಿದೆ’ ಎಂದು ಅವರು ಹೇಳಿದರು.ಭಾರತ್ ಜೋಡೋ ಯಾತ್ರೆಯಲ್ಲಿ ‘ನಗರ ನಕ್ಸಲರು’ ಭಾಗವಹಿಸಿದ್ದರು. ಸಿಎಂ ಸಿದ್ದರಾಮಯ್ಯ ನಗರ ನಕ್ಸಲರ ಬೆಳವಣಿಗೆಯನ್ನು ಖಾತ್ರಿಪಡಿಸುತ್ತಿದ್ದಾರೆ. ಸಂಸತ್ತಿನಲ್ಲಿ ನಡೆದ ಹೊಗೆ ದಾಳಿ ಕೇವಲ 15 ನಿಮಿಷಗಳ ನಂತರ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದರು. ಇದು ಪ್ರತಾಪ್ ಸಿಂಹ ವಿರುದ್ಧದ ಷಡ್ಯಂತ್ರವನ್ನು ಸ್ಪಷ್ಟವಾಗಿ ತೋರಿಸುತ್ತದೆ’ ಎಂದು…
– ಮ.ನಾ.ಉಡುಪ ಮಂಡ್ಯ ಅಡವಿಯೊಂದರಲ್ಲಿ ಏಕಾಕಿ ಕುದುರೆಯೊಂದು ಮೇಯುತಿತ್ತು. ಅಲ್ಲಿಗೆ ಕತ್ತೆಗಳ ಒಂದು ಗುಂಪು ಬಂತು. ಕುದುರೆಗೂ ಅವನ್ನು ಕಂಡು ತೀರ ಕೋಪ, ತಿರಸ್ಕಾರ.“ಹೊಲಸು ಪ್ರಾಣಿಗಳು, ಮೂರ್ಖರು. ನನ್ನಂಥ ಕುಲೀನನಾದ ಕುದುರೆ ನಿಮ್ಮ ಜತೆಯಲ್ಲಿ ಬರುವುದೆಂದರೆ ನನಗೇ ಅವಮಾನಕರ. ಒಂದೋ, ನೀವು ಇಲ್ಲಿಂದ ದೂರ ಸರಿಯಿರಿ. ಇಲ್ಲ. ನಾನೇ ಹೊರಟುಹೋಗುತ್ತೇನೆ” ಎಂದಿತು.ಕತೆಗಳುಮೌನವಾಗಿ ಮೇಯುವುದನ್ನು ಮುಂದುವರಿಸಿದುವು. ಅಷ್ಟರಲ್ಲಿ ಕುದುರೆಗಳನ್ನು ಹಿಡಿಯಲೆಂದು ಬೇಟೆಗಾರರ ಒಂದು ಗುಂಪು ಅಲ್ಲಿಗೆ ಬಂತು. ಅದನ್ನು ನೋಡಿ ಕುದುರೆ ಕತ್ತೆಗಳ ಗುಂಪಿನಲ್ಲಿ ಮರೆಯಾಯಿತು. ಬೇಟೆಗಾರರು ಕತ್ತೆಗಳ ಗುಂಪನ್ನು ಗಮನಿಸಿ ಮುಂದುವರಿದರು. ಕುದುರೆ “ಬದುಕಿದೆಯಾ ಬಡಜೀವವೇ !’ ಎಂದು ಸಮಾಧಾನದ ಉಸಿರುಬಿಟ್ಟಿತು.ಇತ್ತ ಮನುಷ್ಯರನ್ನು ಕಂಡು ಕತ್ತೆಗಳಿಗೂ ಭಯವಾಗಿತ್ತು. ಅಂತಲೇ ಅವು ಕುದುರೆಗೆ “ಆದಷ್ಟು ಬೇಗ ಈಅಪಾಯಕಾರಿ ಸ್ಥಳವನ್ನು ಬಿಡೋಣ. ನೀನು ದಯಮಾಡಿ ನಮ್ಮ ಜೊತೆಗೆ ಬರಲಾರೆಯಾ? ನಮಗೆ ಬೇಟೆಗಾರರನ್ನು ಕಂಡರೆ ಭಯವಾಗುತ್ತದೆ,” ಎಂದುವು.ಆದರೆ ಅಪಾಯ ದೂರವಾದಮೇಲೆ ಕುದುರೆಯ ಪ್ರತಿಷ್ಠೆಯ ಪ್ರಜ್ಞೆ ಮತ್ತೆ ಜಾಗೃತವಾಯಿತು.“ಛೇ…. ನೀವೆಲ್ಲ ಹೇಸಿ ಪ್ರಾಣಿಗಳು. ನಿಮ್ಮೊಟ್ಟಿಗೆ ನಡೆದರೆ ನನ್ನ…
ತಿಕೋಟಾ: ತಾಲ್ಲೂಕಿನ ಹೊನವಾಡ ಗ್ರಾಮದ ಉರ್ದು ಹಿರಿಯ ಪ್ರಾಥಮಿಕ ಶಾಲೆ ಹಾಗೂ ವಿ ವಿ ಎಸ್ ಪ್ರೌಢಶಾಲೆ ಹೊನವಾಡಕ್ಕೆ ವಿಜಯಪುರ ಗ್ರಾಮೀಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಮೋದಿನಿ ಬಳೋಲಮಟ್ಟಿಯವರು ಭೇಟಿ ನೀಡಿ ಪರಿಶೀಲಿಸಿದರು.ಸಿ ಆರ್ ಪಿ ಸಂಯೋಜಕರಾದ ಶ್ರೀಮತಿ ಸುಜಾತಾ ಬಾಗಲಕೋಟ ಪಾಲ್ಗೊಂಡಿದ್ದರು.ಸಂಸ್ಥೆಯ ಅಧ್ಯಕ್ಷ ನಳಿನಿಕಾಂತ ಸಾವಂತ, ಪ್ರಾಚಾರ್ಯ ಎಂ ಎ ಹಿರೇಮಠ ಹಾಗೂ ಸಹ ಶಿಕ್ಷಕರು ಇದ್ದರು.
ಇಂಡಿ: ತಾಲೂಕಿನ ಅಂಜುಟಗಿ ಗ್ರಾಮದ ನಿವಾಸಿ ತಂದೆ ಕಾಮಣ್ಣ ಹರಳಯ್ಯ ಮತ್ತು ತಾಯಿ ವಿಮಲಾಬಾಯಿ ಇವರ ಪುತ್ರ ಡಾ. ಸಂಜೀವ ಹರಳಯ್ಯ ಇವರಿಗೆ ನವದೆಹಲಿಯಲ್ಲಿ ನಡೆದ ೩೯ ನೇ ರಾಷ್ಟ್ರೀಯ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ ಡಾ. ಬಿ.ಆರ್.ಅಂಬೇಡ್ಕರ ನ್ಯಾಶನಲ್ ಫೆಲೋಶಿಫ್ ಪ್ರಶಸ್ತಿ ನೀಡಿ ಗೌರವಿಸಿದೆ.ಡಾ. ಸಂಜೀವ ಅವರ ಶಿಕ್ಷಣ ಮತ್ತು ಸಾಧನೆ ಪರಿಗಣಿಸಿ ಈ ಗೌರವ ನೀಡಿದೆ.ಬಡತನ ಕುಟುಂಬದಲ್ಲಿ ಜನಿಸಿದ ಡಾ. ಸಂಜೀವ ಗದಗ ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆಯಲ್ಲಿ ಶುಶ್ರೂಷಾಧಿಕಾರಿ ಮತ್ತು ಸರಕಾರಿ ಶುಶ್ರೂಷಾ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದು ಅವರು ಬರೆದ ಮಕ್ಕಳು ಕಲಿಕೆ ಆಲಿಕೆಗಳು ಪ್ರಬಂದಕ್ಕೆ ಅರುಣಾಚಲ ಪ್ರದೇಶದ ಹಿಮಾಲಯ ವಿವಿ ಡಾಕ್ಟರೇಟ ಪದವಿ ನೀಡಿ ಗೌರವಿಸಿದೆ.ಮತ್ತು ಇಂಟರ್ ನ್ಯಾಶನಲ್ ಜನರಲ್ ಆಫ್ ಅಡ್ವಾನ್ಸ ಸೆಕ್ರೆಟರಿ ನರ್ಸಿಂಗ್ ಸಹ ಎಡಿಟರ್ ಆಗಿ ಆಯ್ಕೆ ಆಗಿದ್ದಾರೆ.
ಪ್ರತಿಭಾ ಕಾರಂಜಿ & ಕಲೋತ್ಸವ ಉದ್ಘಾಟಿಸಿದ ಶಾಸಕ ಬಸನಗೌಡ ಪಾಟೀಲ ಸ್ಪಷ್ಠನೆ ವಿಜಯಪುರ: ಕಳೆದ 11 ಅಧಿವೇಶನದಲ್ಲಿ ಕೊನೆಗೆ ಒಂದು ದಿನ ಕಾಟಾಚಾರಕ್ಕೆ ಎಂಬಂತೆ ಉತ್ತರ ಕರ್ನಾಟಕ ಬಗ್ಗೆ ಚರ್ಚಿಸಲಾಗುತ್ತಿತ್ತು. ಈ ಬಾರಿ ಮೊದಲ ದಿನವೇ ನಾನು ಗಟ್ಟಿ ಧ್ವನಿ ಎತ್ತಿದ್ದರಿಂದ ಮೊದಲ ವಾರದಲ್ಲೇ ಸಮಗ್ರವಾಗಿ ಚರ್ಚಿಸಲು ಅವಕಾಶ ದೊರಕಿತು ಎಂದು ನಗರ ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ಅವರು ಹೇಳಿದರು.ನಗರದ ಸಿದ್ಧೇಶ್ವರ ಸಂಸ್ಥೆಯ ಅಟಲ್ ಬಿಹಾರಿ ವಾಜಪೇಯಿ ಶಾಲೆಯಲ್ಲಿ ಶನಿವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ನಗರ ವಲಯ ಹಾಗೂ ಅಟಲ್ ಬಿಹಾರಿ ವಾಜಪೇಯಿ ಶಾಲೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.ಅಧಿವೇಶನದಲ್ಲಿ ಮೂರು ದಿನಗಳ ಕಾಲ ಕೈಗಾರಿಕೆ, ವಿಮಾನ ನಿಲ್ದಾಣ, ಕೋಲ್ಡ್ ಸ್ಟೋರೇಜ್, ನೀರಾವರಿ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಹಾಗೂ ರಾಜಕೀಯವಾಗಿ ಉತ್ತರ ಕರ್ನಾಟಕ ಭಾಗಕ್ಕೆ ಆಗಿರುವ ಅನ್ಯಾಯದ ಕುರಿತಂತೆ ಗಮನಸೆಳೆದು, ಅಭಿವೃದ್ಧಿ ಒತ್ತು ನೀಡಲು…
ದತ್ತಿ ಉಪನ್ಯಾಸ | ಶಂಕರಶ್ರೀ ದತ್ತಿನಿಧಿ ಪ್ರಶಸ್ತಿ ಪ್ರಧಾನ | ಇಂದುಮತಿ ಲಮಾಣಿ ಅವರ ’ಮಠ’ ಕಾದಂಬರಿ ಲೋಕಾರ್ಪಣೆ ಬಸವನಬಾಗೇವಾಡಿ: ೧೨ ನೇ ಶತಮಾನದ ಬಸವಾದಿ ಶರಣರು ನಿಸ್ವಾರ್ಥ ಕಾಯಕ, ದಾಸೋಹಕ್ಕೆ ಹೆಚ್ಚು ಮಹತ್ವ ನೀಡುವ ಈ ಸಿದ್ಧಾಂತವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದು ಬಸವನಬಾಗೇವಾಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಎನ್.ಬಿ.ಹೊಸಮನಿ ಹೇಳಿದರು.ಪಟ್ಟಣದ ಹುಡ್ಕೋ ಕಾಲನಿ ಹತ್ತಿರವಿರುವ ಇಂದುಮತಿ ಲಮಾಣಿ ಅವರ ತೋಟದ ಮನೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು, ವಿಜಯಪುರದ ಮಹಿಳಾ ಸ್ನೇಹ ಸಾಹಿತ್ಯ ಸಂಗಮದ ಸಹಯೋಗದಲ್ಲಿ ಗುರುವಾರ ದಿ.ಶಂಕರ ಡಾಕಪ್ಪ ಲಮಾಣಿ ಸ್ಮರಣಾರ್ಥ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಹಾಗೂ ಶಂಕರಶ್ರೀ ದತ್ತಿನಿಧಿ ಪ್ರಶಸ್ತಿ ಪ್ರಧಾನ ಹಾಗೂ ಇಂದುಮತಿ ಲಮಾಣಿ ಅವರ ಬರೆದ ಮಠ ಕಾದಂಬರಿ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶರಣರು ಸಮಾಜದಲ್ಲಿರುವ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಶ್ರಮಿಸಿದರು. ನಾಡಿನಲ್ಲಿ ಶರಣ ಸಾಹಿತ್ಯ ಪರಿಷತ್ತು ನಿರಂತರವಾಗಿ ಬಸವಾದಿ ಶರಣರ ವಿಚಾರಗಳನ್ನು ಸಮಾಜಕ್ಕೆ…
ಡಿ.೧೭ರ ಪ್ರತಿಭಟನೆಗೆ ಬೆಂಬಲಿಸಲು ಡಾ.ವಿಷ್ಣುವರ್ಧನ್ ಅಭಿಮಾನಿಗಳ ಬೆಂಗಳೂರು ಪಯಣ ಮುದ್ದೇಬಿಹಾಳ: ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಅಭಿಮಾನಿಗಳ ಒಕ್ಕೂಟ ಡಿ.೧೭ ರಂದು ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ತಾಲೂಕಿನ ವಿಷ್ಣು ಅಭಿಮಾನಿಗಳು ಬೆಂಬಲ ಸೂಚಿಸಲು ಶನಿವಾರ ರಾತ್ರಿ ಇಲ್ಲಿನ ವಿಬಿಸಿ ಹೈಸ್ಕೂಲ್ ಮೈದಾನದಿಂದ ಬಸ್ ಮೂಲಕ ತೆರಳಿದರು.ಈ ವೇಳೆ ಮಾತನಾಡಿದ ಅಭಿಮಾನಿಗಳ ಮುಖಂಡ ಶಿವು ಕಣಕಾಲ, ವಿಷ್ಣು ನಮ್ಮನ್ನು ಅಗಲಿ ೧೪ ವರ್ಷಗಳು ಗತಿಸಿವೆ. ಇಷ್ಟು ವರ್ಷಗಳ ಕಾಲ ಅವರ ಪುಣ್ಯಭೂಮಿಯನ್ನು ನಿರ್ಲಕ್ಷಿಸಿರುವದು ನಮ್ಮ ಆಕ್ರೋಷಕ್ಕೆ ಕಾರಣವಾಗಿದೆ. ಪುಣ್ಯಭೂಮಿಗಾಗಿ ಡಿ.೧೭ ರಂದು ರಾಜ್ಯದಾದ್ಯಂತ ಅಪಾರ ವಿಷ್ಣು ಅಭಿಮಾನಿಗಳು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದು ನಾವೂ ಕೂಡ ಭಾಗಿಯಾಗುತ್ತಿದ್ದೇವೆ. ಯಾವುದೇ ಕಾರಣಕ್ಕೂ ವಿಷ್ಣು ಪುಣ್ಯಭೂಮಿಯನ್ನು ಬಿಡಲು ಸಿದ್ಧರಿಲ್ಲ ಎಂದರು.ಜಿ.ಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿದರು.ಅಂದಾಜು ೩೫ ಅಭಿಮಾನಿಗಳನ್ನೊಳಗೊಂಡ ಬಸ್ ಗೆ ಧಾರವಾಡದ ಉಪ್ಪಿನ ಬೆಟಗೇರಿಯ ಪೂಜ್ಯ ವಿರೂಪಾಕ್ಷ ಮಹಾಸ್ವಾಮಿಗಳು ಚಾಲನೆ ನೀಡಿದರು. ಈ ವೇಳೆ ತಂಗಡಗಿಯ ಹಡಪದ ಅಪ್ಪಣ್ಣ ಶ್ರೀಗಳು, ಮುಖಂಡ ವಾಯ್.ಎಚ್.ವಿಜಯಕರ,…
ವಂಟಮೂರಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿ ದೌರ್ಜನ್ಯ ನಡೆಸಿದ ಘಟನೆಗೆ ಖಂಡನೆ ವಿಜಯಪುರ: ಬೆಳಗಾವಿ ತಾಲ್ಲೂಕು ವಂಟಮೂರಿ ಗ್ರಾಮದ ಪರಿಶಿಷ್ಟ ಪಂಗಡದ ಅಮಾಯಕ ಮಹಿಳೆಯನ್ನು ವಿವಸ್ತ್ರಗೊಳಿಸಿ ನಡೆದಿರುವ ದೌರ್ಜನ್ಯ ಖಂಡಿಸಿ ವಿಜಯಪುರ ನಗರದ ಸಿದ್ಧೇಶ್ವರ ದೇವಸ್ಥಾನದ ಎದುರಿಗೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡು ಕಾಂಗ್ರೇಸ್ ವಿರುದ್ಧ ಘೋಷಣೆ ಹಾಕುವುದರ ಮೂಲಕ ಪ್ರತಿಭಟಿಸಲಾಯಿತು.ಇದೇ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ (ಕುಚಬಾಳ) ಮಾತನಾಡಿ, ವಂಟಮೂರಿ ಗ್ರಾಮದಲ್ಲಿ ನಡೆದ ಘಟನೆ ನಾಗರೀಕ ಸಮಾಜಕ್ಕೆ ಅಂಟಿದ ಕಪ್ಪುಚುಕ್ಕೆಯಾಗಿದ್ದು, ಅಮಾಯಕ ಮಹಿಳೆಯನ್ನು ಬೆತ್ತಲೆ ಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದು ಅತ್ಯಂತ ಹೇಯ ಕೃತ್ಯ, ಸದರಿ ಘಟನೆಯು ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕವು ತಲೆ ತಗ್ಗಿಸುವಂತೆ ಮಾಡಿದೆ. ಇಷ್ಟಾದರೂ ಮುಖ್ಯಮಂತ್ರಿಗಳು ಸೌಜನ್ಯಕ್ಕಾದರೂ ಸಂತ್ರಸ್ತೆಯನ್ನು ಭೇಟಿಯಾಗುವ ಮಾನವೀಯ ಕಾಳಜಿ ಇದುವರೆಗೂ ತೋರಿಲ್ಲ, ಕಾಟಾಚಾರಕ್ಕೆ ಗೃಹ ಸಚಿವರು ಭೇಟಿಯಾಗಿ ಸಾಂತ್ವನ ಹೇಳಿರುವುದನ್ನು ಬಿಟ್ಟರೆ ಇನ್ನಾರು ಈ ಕಡೆ ತಲೆಹಾಕಿದಂತಿಲ್ಲ ನಿನ್ನೆ ದಿನ ಹೈಕೋರ್ಟ್, ಈ ದುರ್ಘಟನೆ ನಡೆಯಲು ಸರ್ಕಾರ ಹೇಗೆ ಬಿಟ್ಟಿದೆ? ಪೊಲೀಸರ ಗಸ್ತು ಏಕೆ ಇರಲಿಲ್ಲ?…
