ಡಿ.೧೭ರ ಪ್ರತಿಭಟನೆಗೆ ಬೆಂಬಲಿಸಲು ಡಾ.ವಿಷ್ಣುವರ್ಧನ್ ಅಭಿಮಾನಿಗಳ ಬೆಂಗಳೂರು ಪಯಣ
ಮುದ್ದೇಬಿಹಾಳ: ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಅಭಿಮಾನಿಗಳ ಒಕ್ಕೂಟ ಡಿ.೧೭ ರಂದು ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ತಾಲೂಕಿನ ವಿಷ್ಣು ಅಭಿಮಾನಿಗಳು ಬೆಂಬಲ ಸೂಚಿಸಲು ಶನಿವಾರ ರಾತ್ರಿ ಇಲ್ಲಿನ ವಿಬಿಸಿ ಹೈಸ್ಕೂಲ್ ಮೈದಾನದಿಂದ ಬಸ್ ಮೂಲಕ ತೆರಳಿದರು.
ಈ ವೇಳೆ ಮಾತನಾಡಿದ ಅಭಿಮಾನಿಗಳ ಮುಖಂಡ ಶಿವು ಕಣಕಾಲ, ವಿಷ್ಣು ನಮ್ಮನ್ನು ಅಗಲಿ ೧೪ ವರ್ಷಗಳು ಗತಿಸಿವೆ. ಇಷ್ಟು ವರ್ಷಗಳ ಕಾಲ ಅವರ ಪುಣ್ಯಭೂಮಿಯನ್ನು ನಿರ್ಲಕ್ಷಿಸಿರುವದು ನಮ್ಮ ಆಕ್ರೋಷಕ್ಕೆ ಕಾರಣವಾಗಿದೆ. ಪುಣ್ಯಭೂಮಿಗಾಗಿ ಡಿ.೧೭ ರಂದು ರಾಜ್ಯದಾದ್ಯಂತ ಅಪಾರ ವಿಷ್ಣು ಅಭಿಮಾನಿಗಳು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದು ನಾವೂ ಕೂಡ ಭಾಗಿಯಾಗುತ್ತಿದ್ದೇವೆ. ಯಾವುದೇ ಕಾರಣಕ್ಕೂ ವಿಷ್ಣು ಪುಣ್ಯಭೂಮಿಯನ್ನು ಬಿಡಲು ಸಿದ್ಧರಿಲ್ಲ ಎಂದರು.
ಜಿ.ಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿದರು.
ಅಂದಾಜು ೩೫ ಅಭಿಮಾನಿಗಳನ್ನೊಳಗೊಂಡ ಬಸ್ ಗೆ ಧಾರವಾಡದ ಉಪ್ಪಿನ ಬೆಟಗೇರಿಯ ಪೂಜ್ಯ ವಿರೂಪಾಕ್ಷ ಮಹಾಸ್ವಾಮಿಗಳು ಚಾಲನೆ ನೀಡಿದರು. ಈ ವೇಳೆ ತಂಗಡಗಿಯ ಹಡಪದ ಅಪ್ಪಣ್ಣ ಶ್ರೀಗಳು, ಮುಖಂಡ ವಾಯ್.ಎಚ್.ವಿಜಯಕರ, ಪುರಸಭೆ ಮಾಜಿ ಸದಸ್ಯ ಕಾಮರಾಜ ಬಿರಾದಾರ, ನಿವೃತ್ತ ಯೋಧರ ಸಂಘದ ಅಧ್ಯಕ್ಷ ಐ.ಆರ್.ಹಿರೇಮಠ, ಹರೀಶ ಬೆವೂರ, ಮೌನೇಶ ಬಡಿಗೇರ, ಸಂಜು ಕಡೂರ, ರಾಜು ಮಡಿವಾಳರ, ಸೋಮಶೇಖರ ಹಿರೇಮಠ, ಶಿವು ತಾರನಾಳ, ಸಂಗಮೇಶ ಕತ್ತಿ, ಮಲ್ಲಿಕಾರ್ಜುನ ತಾರನಾಳ, ಮಂಜುನಾಥ ಹುನಕುಂಟಿ, ಭೀಮಣ್ಣ ಹಗಟಗಿ, ನಾಗಭೂಷಣ ಭೋವಿ, ಬಸವರಾಜ ಹೊಸಮನಿ, ದಿಲೀಪ ಧನಗೊಂಡ, ಮಹೇಶ ಮುರಾಳ, ಪರಸು ದಳವಾಯಿ, ಧರೆಪ್ಪ ಕುಂಬಾರ, ಸೇರಿದಂತೆ ಮತ್ತೀತರರು ಇದ್ದರು.

