Author: editor.udayarashmi@gmail.com

ದೇವರಹಿಪ್ಪರಗಿ: ಕೊಂಡಗೂಳಿ ಎಂಪಿಎಸ್ ಶಾಲೆಯ ಹಿರಿಯ ಶಿಕ್ಷಕ ಜಿ.ಬಿ.ಹೊಕ್ಕುಂಡಿ ಅವರಿಗೆ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಕ್ಲಸ್ಟರ್ ಮಟ್ಟದಲ್ಲಿ ಸನ್ಮಾನಿಸಲಾಯಿತು.ತಾಲ್ಲೂಕಿನ ಬಿ.ಬಿ.ಇಂಗಳಗಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸೋಮವಾರ ಜರುಗಿದ ಶಿಕ್ಷಕರ ಸ್ವಾಗತ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಕೊಂಡಗೂಳಿ ಕ್ಲಸ್ಟರ್‌ಗೆ ನೂತನವಾಗಿ ಜಿಪಿಟಿ ಶಿಕ್ಷಕರಾಗಿ ನೇಮಕಾತಿ ಹೊಂದಿದ ಹಾಗೂ ಬೇರೆ ಕ್ಲಸ್ಟರ್‌ನಿಂದ ಆಗಮಿಸಿದ ಜೊತೆಗೆ ಆದರ್ಶ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಬಿ.ಬಿ.ಇಂಗಳಗಿ ಶಾಲೆಯ ಮುಖ್ಯಗುರು ಎಸ್.ಎಸ್.ಕುಂಬಾರ ಅಧ್ಯಕ್ಷತೆ ವಹಿಸಿದ್ದರು.ಸಹಶಿಕ್ಷಕರಾದ ಎಸ್.ಎಸ್.ಅಂಬಲಿ, ಕೆ.ಎಸ್.ಹಿರೇಕುರುಬರ, ಎಮ್.ಎನ್ ವಡೆಯರ್, ಶಂಕರರಾವ್ ಕುಲಕರ್ಣಿ, ಎಸ್.ಜೆ.ಜೈನಾಪೂರ, ಎಂ.ಎಚ್.ಮರಿಗೌಡರು, ಎಂ.ಎ.ಮಮದಾಪೂರ ಸೇರಿದಂತೆ ಮಕ್ಕಳು ಭಾಗವಹಿಸಿದ್ದರು.

Read More

ವಿಜಯಪುರ: ನಗರದ ಹೊರವಲಯದಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ಸೋಮವಾರ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭೇಟಿ ನೀಡಿ, ಟರ್ಮಿನಲ್ ಕಟ್ಟಡ, ನಿಲ್ದಾಣದ ರನ್ವೇ, ಟ್ಯಾಕ್ಸಿ ವೇ, ಬ್ಯಾಗೇಜ್ ಹ್ಯಾಂಡಲಿಂಗ್ ವ್ಯವಸ್ಥೆ, ಸೆಕ್ಯುರಿಟಿ ಸ್ಕ್ಯಾನರ್ ಸೇರಿದಂತೆ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿ, ಭದ್ರತಾ ಉಪಕರಣಗಳು ಸೇರಿದಂತೆ ಬಾಕಿ ಕಾಮಗಾರಿಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.ಪ್ರಗತಿ ಪರಿಶೀಲನೆ ನಡೆಸಿ, ಮಾತನಾಡಿದ ಅವರು, ವಿಜಯಪುರ ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸುವುದನ್ನು ಒಳಗೊಂಡಂತೆ ಎಲ್ಲ ಭೌತಿಕ ಕಾಮಗಾರಿಗಳು ಶೇ.90ರಷ್ಟು ಪೂರ್ಣಗೊಂಡಿದ್ದು, ಶೀಘ್ರವೇ ಎಲ್ಲ ಕಾಮಗಾರಿಗಳು ಪೂರ್ಣಗೊಂಡು ವಿಮಾನಗಳ ಹಾರಾಟ ನಡೆಯಲಿದೆ ಎಂದರು.ಜನವರಿಯಲ್ಲಿ ನಾಗರಿಕ ವಿಮಾನಯಾನ ಪ್ರಾಧಿಕಾರದಿಂದ (ಡಿಜಿಸಿಎ) ಪರಿವೀಕ್ಷಣೆಗೆ ಆಗಮಿಸಿ ಪರಿವೀಕ್ಷಣೆ ನಡೆಸಲಿದ್ದಾರೆ.ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಸೇರಿದಂತೆ ಬಾಕಿ ಇರುವ ಲೋಕೋಪಯೋಗಿ ಕಾಮಗಾರಿಗಳನ್ನು ತೀವ್ರಗತಿಯಲ್ಲಿ ಕೈಗೊಂಡು ಪೂರ್ಣಗೊಳಿಸಲು ಸೂಚಿಸಲಾಗಿದೆ. ವಿಜಯಪುರ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದ ನಂತರ ಈ ಭಾಗದ ಸರ್ವಾಂಗೀಣ ಬೆಳವಣಿಗೆಗೆ ಅನುಕೂಲವಾಗಲಿದ್ದು, ವಿಮಾನಗಳ ಹಾರಾಟದಿಂದ ಸಮಯದ ಉಳಿತಾಯದೊಂದಿಗೆ ಪ್ರಮುಖ ವಾಣಿಜ್ಯ ಬೆಳೆಯಾದ ದ್ರಾಕ್ಷಿ…

Read More

ಇಂಡಿ: ಕನ್ನಡ ಕಾವ್ಯದ ಪರಂಪರೆಯ ತಿಳಿದುಕೊಳ್ಳುವುದು ಇಂದಿನ ಯುವ ಕವಿಗಳಲ್ಲಿ ಅಗತ್ಯವಾಗಿದೆ. ಬಸವನೆಲದ ಈ ಪುರಸ್ಕಾರ ಇನ್ನಷ್ಟು ಕೆಲಸ ಮಾಡಲು ಪ್ರೇರಣೆ ನೀಡಿದೆ ಎಂದು ಮೇಘಾಲಯದ ಐಎಎಸ್ ಅಧಿಕಾರಿ ಹೇಮಾ ನಾಯಕ ಹೇಳಿದರು.ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಭಾಭವನದಲ್ಲಿ ಬೆರಗು ಪ್ರಕಾಶನ ಸಂಸ್ಥೆ ಕಡಣಿ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ’ಪ್ರೊ.ಎಚ್.ಟಿ.ಪೋತೆ-೨೦೨೩ ಬೆರಗು ಪ್ರಶಸ್ತಿ ಪ್ರದಾನ ಹಾಗೂ ’ನೋವಿಗೂ ಇದೆ ಚಲನೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರುಮಾತನಾಡಿದರು.ಬಸವ ನೆಲದಿಂದ ಈ ಪ್ರಶಸ್ತಿ ಸ್ವೀಕರಿಸುತ್ತಿರುವುದು ನನ್ನ ಸೌಭಾಗ್ಯವೇ ಸರಿ, ಕಾವ್ಯದ ನಿರಂತರ ಧ್ಯಾನದ ಪ್ರತಿಫಲನವು ಸಂಕಲನದಲ್ಲಿ ಕಾಣಬಹುದಾಗಿದೆ, ಕವಿತೆಯೆನ್ನುವುದು ಅದು ಮೋಹಕರೂಪಗಳ ಒಟ್ಟಂದ, ಕಾವ್ಯದ ಆಸಕ್ತಿಯು ವಿದ್ಯಾರ್ಥಿಗಳಲ್ಲೂ ಬರಬೇಕಿದೆ, ಕಾಲೇಜು ದಿನಗಳಲ್ಲಿ ಪಠ್ಯ ಮತ್ತು ಪಠ್ಯೇತರ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಪ್ರಶಸ್ತಿ ಪ್ರದಾನ ಮಾಡಿದ ಖ್ಯಾತ ಸಂಶೋಧಕ ಡಿ.ಎನ್.ಅಕ್ಕಿ ಮಾತನಾಡಿ, ಪ್ರತಿಭಾವಂತರನ್ನು ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ ಬೆರಗು ತನ್ನ ಪಾರದರ್ಶಕತೆಯನ್ನು ತೋರಿಸಿದೆ,…

Read More

ಹೊನ್ನಳ್ಳಿಯಲ್ಲಿ ನಡೆದ ಧಮ೯ಸಭೆಯಲ್ಲಿ ಡಾ.ವಿಶ್ವರಾಧ್ಶ ಶ್ರೀ ಅಭಿಮತ ಬ್ರಹ್ಮದೇವನಮಡು: ಧಾಮಿ೯ಕ ಕಾಯ೯ಕ್ರಮಗಳಿಂದ ನಮ್ಮ ಬದುಕಿನಲ್ಲಿ ನೆಮ್ಮದಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಶಿವಾಚಾಯ೯ ರತ್ನ ಪ್ರಶಸ್ತಿ ಪುರಸ್ಕ್ರತ ಮಾಗಣಗೇರಾ ಬೃಹನ್ಮಠದ ಡಾ.ವಿಶ್ವರಾಧ್ಶ ಶಿವಾಚಾಯ೯ರು ಹೇಳಿದರು.ಸಿಂದಗಿ ತಾಲೂಕಿನ ಸುಕ್ಷೇತ್ರ ಗುರು ವೀರಘಂಟೈ ಮಡಿವಾಳೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ ಧಮ೯ಸಭೆಯ ದಿವ್ಶ ಸಾನ್ನಿಧ್ಶ ವಹಿಸಿ ಅವರು ಆಶೀವ೯ಚನ ನೀಡಿದರು.ಪುರಾಣಗಳು ನಮ್ಮ ಬದುಕನ್ನು ಬದಲಾವಣೆ ಮಾಡುವ ನಿಟ್ಟಿನಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಶರಣರು, ಸಂತರು ಹಾಕಿಕೊಟ್ಟ ಮಾಗ೯ದಲ್ಲಿ ನಾವು ನಡೆಯಬೇಕು ಎಂದರು.ಯಂಕಂಚಿ ಕುಂಟೋಜಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾಯ೯ರು ಮಾತನಾಡಿದರು.ಶ್ರೀಮಠದ ಗುರುಲಿಂಗಯ್ಶ ಗದ್ದಗಿಮಠ ಸ್ವಾಮೀಜಿ, ಅಯ್ಶಪ್ಪಯ್ಶ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಕಾಂಗ್ರೆಸ್ ಯುವ ಮುಖಂಡ ಯಂಕನಗೌಡ ಪಾಟೀಲ ಅಧ್ಶಕ್ಷತೆ ವಹಿಸಿದ್ದರು. ಕುಳಗೇರಾ ಸಜ್ಜಾದೇ ನಶೀನ ದಗಾ೯ದ ಡಾ.ಎಂ.ಎಂ.ದಗಾ೯, ಸಾಗನೂರದ ಗುರುಸಿದ್ದಯ್ಶ ಹಿರೇಮಠ, ಎಪಿಎಂಸಿ ಮಾಜಿ ಅಧ್ಶಕ್ಷ ಹಳ್ಳೆಪ್ಪಗೌಡ ಚೌಧರಿ, ನಿಕೀಲಗೌಡ ಪಾಟೀಲ ಡಂಬಳ, ಮಾಜಿ ತಾಪಂ ಸದಸ್ಶ ಶ್ರೀಶೈಲ ಚಳ್ಳಗಿ,…

Read More

ಬಾಗಲಕೋಟೆ: ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆಯಲ್ಲಿ ಬೀಳಗಿ ತಾಲೂಕಿನ ಮುಂಡಗನೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕುಮಾರಿ ವೈಷ್ಣವಿ ವಾಲಿಕಾರ ಧಾರ್ಮಿಕ ಪಠಣ ಮತ್ತು ಲಘು ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿ ಎರಡೂ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾಳೆ.ಬಾಗಲಕೋಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಣ ಅಧಿಕಾರಿಗಳಾದ ಎಚ್ ಜಿ ಮಿರ್ಜಿ ಪ್ರಮಾಣ ಪತ್ರ ನೀಡಿ ಗೌರವಿಸಿದರು.ಈ ಸಂದರ್ಭದಲ್ಲಿ ಇಲಾಖೆ ಅಧಿಕಾರಿಗಳು ಮತ್ತು ಮುಖ್ಯ ಗುರುಮಾತೆ ಉಮಾಬಾಯಿ ಪವಾರ ಉಪಸ್ಥಿತರಿದ್ದರು.ವಿಜೇತ ವಿಧ್ಯಾರ್ಥಿನಿಗೆ ಶಾಲಾ ಶಿಕ್ಷಕರು ಮತ್ತು ಎಸ್ ಡಿ ಎಂ ಸಿ ಶುಭ ಹಾರೈಸಿದ್ದಾರೆ.

Read More

*- ಸಂಪದಾ ಹಿರೇಮಠ*ಆಲಮಟ್ಟಿ: ಅವರು ಬರೋಬ್ಬರಿ ಇಪ್ಪತ್ತೆರಡು ವರ್ಷಗಳ ಹಿಂದೆ ಸಹಪಾಠಿ, ಒಡನಾಟಿಗಳಾಗಿ ಕಲಿಕೆ, ನಲಿಕೆಯ ತುಂಟಾಟದ ದಿನಗಳನ್ನು ಆತ್ಮೀಯತೆಯ ಸಂಘದಲ್ಲಿ ಕಳೆದಿದ್ದರು. ಎಸ್ಸೆಸ್ಸೆಲ್ಸಿ ಬಳಿಕ ಎಲ್ಲೆಲ್ಲೋ ಪಿಯು ಕಲಿಕೆಗಾಗಿ ಚದುರಿದರು. ತದನಂತರ ಪದವಿ, ನೌಕರಿಗಾಗಿ ಅಲೆದಾಡಿ ಜೀವನ ಚೈತ್ರ ಅರಳಿಸಿಕೊಂಡ ನೆಮ್ಮದಿಯ ದಾರಿ ಬೇರೆಬೇರೆ ಕಡೆಗಳಲ್ಲಿ ಕಂಡುಕೊಂಡಿದ್ದಾರೆ. ಹಲವರು ಸಂಸಾರ ನೌಕೆಯಲ್ಲಿ ಸಂಸ್ಕಾರದೊಂದಿಗೆ ಪಯಣಿಸಿ ಸಂತಸದ ರಸಾನುಭ ಅನುಭವಿಸುತ್ತಿದ್ದಾರೆ. ಅವರೆಲ್ಲರಿಗೂ ಬಿಸ್ ಸಾಲ್ ಪೀಚ್ಚೇ ಗೆಳೆತನದ ನೆನಪಾಗಿದೆ. ತಡ ಮಾಡದೇ ಸ್ಮೃತಿ ಪಟಲದ ಮೇಲೆ ದೋಸ್ತಿಗಳ ಭಾವಚಿತ್ರ ಮೂಡಿಸಿಕೊಂಡಿದ್ದಾರೆ. ಎಲ್ಲಿ ಸ್ನೇಹದಿಂದ ಬರುವರೋ ಅವರೇ ನಮ್ಮೊರು, ಅದೆ ನಮ್ಮೂರು, ಅಲ್ಲಿಯೇ ಜೀವನ ಎನ್ನತ್ತಾ ನಾಲ್ಕೂ ದಿಕ್ಕಿನ ಊರುಗಳಲ್ಲಿ ಎಲ್ಲೆಲ್ಲೋ ನೆಲೆ ಕಂಡಿದ್ದಾರೆ. ಅವರನ್ನು ಸಂಪರ್ಕಿಸಿ ಎಲ್ಲರೂ ಒಂದೆಡೆ ಸೇರೋಣ ಎಂಬ ಅಪೇಕ್ಷೆ, ಅಭಿಲಾಷೆ ಚಿಗುರೊಡೆದಿದೆ. ಬಳಿಕ ಒಂದುಗೂಡುವ ಮುಹೂರ್ತದ ಡೇಟ್ ಫಿಕ್ಸಾಗಿದೆ. ಪರಿಣಾಮ ಇಪ್ಪತ್ತೆರಡು ವರ್ಷದ ನಂತರ ಒಡನಾಡಿ ಕೂಚುಕು ಸ್ನೇಹಿತರು ಪರಸ್ಪರ ಖುಷಿ, ಸಂತಸದ ಸಲ್ಲಾಪದಲ್ಲಿ ತನ್ಮರಾಗಿ…

Read More

ಗದುಗಿನ ತೋಂಟದಾರ್ಯ ಮಠದ ಆಡಳಿತಾಧಿಕಾರಿ ಪ್ರೊ,ಎಸ್.ಎಸ್. ಪಟ್ಟಣಶೆಟ್ಟರ ಅಭಿಮತ ಆಲಮಟ್ಟಿ: ಸಾಮಾಜಿಕ ಕಳಕಳಿಯ ಎಲ್ಲ ಮಜಲುಗಳನ್ನು ನಿಷ್ಟೆ ಬದ್ದತೆಯ ಕಾರ್ಯಕ್ಷಮತೆಯಿಂದ ನಿರ್ವಹಿಸಿರುವ ಕರುನಾಡು ಗಾಂಧಿ ಹರ್ಡೇಕರ ಮಂಜಪ್ಪನವರು ಕಾಯಕ ಪ್ರಕಾಶದ ಅದಮ್ಯ ಪುಷ್ಪ ಎಂದು ಗದುಗಿನ ತೋಂಟದಾರ್ಯ ಮಠದ ಆಡಳಿತಾಧಿಕಾರಿ ಪ್ರೊ,ಶಿವಾನಂದ ಪಟ್ಟಣಶೆಟ್ಟರ ಅಭಿಪ್ರಾಯಿಸಿದರು.       ಆಲಮಟ್ಟಿಯಲ್ಲಿರುವ ರಾಷ್ಟ್ರಧರ್ಮ ದೃಷ್ಟಾರ, ಕರ್ನಾಟಕ ಗಾಂಧಿ ಹರ್ಡೇಕರ ಮಂಜಪ್ಪನವರ ಸ್ಮಾರಕ ಭವನಕ್ಕೆ ಭೇಟಿ ನೀಡಿ ಮಂಜಪ್ಪನವರ ಪ್ರತಿಮೆಗೆ ಹೂಮಾಲೆ ಹಾಕಿ ಗೌರವ ಸಲ್ಲಿಸಿ ಮಾತನಾಡಿದ ಅವರು, ತರ್ಕಶುದ್ದಿ ವಿವೇಚನೆಯಿಂದ ಮಂಜಪ್ಪನವರು ಕೈಗೊಂಡ ದೇಶಭಕ್ತಿ,ರಾಷ್ಟ್ರೀಯತೆ ಸೇರಿದಂತೆ ಸಮಾಜಪರ ಮಾಡಿರುವ ಹಲವಾರು ಅಮೋಘ ಕಾಯಕಗಳು ಇಂದಿಗೂ ಜೀವಂತವಾಗಿವೆ ಎಂದರು.   ಋಷಿ ಸದೃಶ ಜೀವನ ನಡೆಸಿರುವ ಮಂಜಪ್ಪನವರು ಅನರ್ಘ್ಯ ಸಂದೇಶಗಳನ್ನು ಸಮಾಜಮುಖಿಯಾಗಿ ನೀಡಿದ್ದಾರೆ. ಮೇರು ವ್ಯಕ್ತಿತ್ವದ ಕರುನಾಡಿನ ಧ್ರುವತಾರೆಯಾಗಿ ಮಹಾಮಾನವ ಗೈದಿರುವ ಕಾಯಕ ತತ್ಪರತೆಗಳು ಮರೆಯಲು ಅಸಾಧ್ಯ. ಅವರ ಪರಿಶ್ರಮದ ಫಲವು ಸದಾಕಾಲವೂ ಅಜರಾಮರಾಗಿವೆ. ಮಹಾತ್ಮಾ ಗಾಂಧಿಯವರ ತತ್ವಪಾಲಕರಾಗಿ, ಬಸವ ಚಿಂತನೆಗಳ ಅನುಯಾಯಿಗಳಾಗಿ ಸರಳ ಜೀವನ ಪಥದಲ್ಲಿ…

Read More

ಆಲಮಟ್ಟಿ ಮಂಜಪ್ಪನ ಸನ್ನಿಧಿಯಲ್ಲಿ ಸ್ನೇಹಿತರ ಸಮ್ಮಿಲನ | ಸ್ನೇಹ ಬಾಂಧವ್ಯದ ಬೆಸುಗೆಯಲ್ಲಿ ಮಿಂದ ಹಳೆ ಮನಸ್ಸುಗಳು ಆಲಮಟ್ಟಿ: ಅಲ್ಲಿ ಬಹು ವರುಷಗಳ ಬಳಿಕ ಹಳೆಯ ಸ್ನೇಹಿತರೆಲ್ಲ ಒಂದೆಡೆ ಸೇರಿದ್ದರು.ಅವರೆಲ್ಲ ಹರುಷದ ಹೊನಲಿನಲ್ಲಿ ಗುರು ಭಕ್ತಿಭಾವದಲ್ಲಿ ತನ್ಮಯರಾಗಿದ್ದರು. ಒಟ್ಟುಗೂಡಿದ ಈ ಸ್ನೇಹ ಬಳಗದ ಸಮ್ಮಿಲನದ ಘಮಲು ವಿಶೇಷಮಯವಾಗಿತ್ತು. ಗುರುಗಳ ಮೇಲಿರಿಸಿದ ಉತ್ಕಟ, ನಿಷ್ಕಲ್ಮಶ ಪ್ರೇಮಭಾವ, ಗೌರವದ ಸೆಂಟಿಮೆಂಟ್ ಶಿಷ್ಯರ ಮನದಾಳದಲ್ಲಿ ನಳನಳಿಸುತ್ತಿತ್ತು. ಪ್ರಾಂಜಲ್ಯ ಮನಸ್ಸಿನ ಮಧುರ ಭಾವಾವರಣ ನಸುನಗೆಯ ಪ್ರಸನ್ನತೆಯಿಂದ ಸೂಸುತ್ತಿತ್ತು. ಗುರು-ಶಿಷ್ಯರ ಪರಮ ಪವಿತ್ರ ಸುಗಂಧಿತ ಭಾವಲೋಕ ಮನೋಜ್ಞವಾಗಿ ಅರಳಿ ನಿಂತಿತ್ತು. ಅದರದ ಅನ್ಯೋನ್ಯತೆ ಪ್ರೀತಿ,ಪ್ರೇಮ,ವಿಶ್ವಾಸಾರ್ಹ ಗೌರವ ಮೊರತವೇ ಎಲ್ಲರ ಉಸಿರಾಗಿ ಸುಗಮತೆಯಿಂದ ಚಲಿಸುತ್ತಿತ್ತು. ಆಧುನಿಕತೆಯ ಸೊಗಡಿನಲ್ಲೂ ಗುರುದೇವತ್ರದ ಭಾವಪುಂಜವೊಂದು ಆ ಹಳೆಯ ವಿದ್ಯಾರ್ಥಿಗಳ ಮಸ್ತಕದಲ್ಲಿ ನಯವಾಗಿ, ಸೊಗಸಾಗಿ ತುಂಬಿತ್ತು. ಗುರುಗಳ ಸಾಮೀಪ್ಯದ ಕಥಾನೋಟದ ಹಂದರಕ್ಕೆ ಓಲ್ಡ್ ಸ್ಟೂಡೆಂಟ್ ಗಳೆಲ್ಲ ಖುಷಿಯಿಂದ ಗೋಲ್ಡ್ ತೋರಣದಲ್ಲಿ ತೇಲಿ ಮಿಂದೆದ್ದರು. ಹೊಸ ಭಾಷ್ಯಕ್ಕೆ ಗುರು-ಶಿಷ್ಯರ ಪವಿತ್ರಬಂಧವುಳ್ಳ ಅಪರೂಪದ ಸನ್ನಿವೇಶ ಸೃಷ್ಟಿವಾಗಿತ್ತು. ಅದು ಭಾವಗಳ ಕಟ್ಟಿದ ಎಲ್ಲಾ…

Read More

ಮುದ್ದೇಬಿಹಾಳ: ರೈತರ ಬಗ್ಗೆ ಹಗುರವಾಗಿ ಮಾತನಾಡಿದ ತಮ್ಮ ಪಕ್ಷದ ಮಂತ್ರಿಗಳ ಮೇಲೆ ಸಿಎಂ ಸಿದ್ದರಾಮಯ್ಯನವರು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಬಸನಗೌಡ ಪಾಟೀಲ ಒತ್ತಾಯಿಸಿದರು.ಪಟ್ಟಣದ ಬಸವೇಶ್ವರ ವೃತ್ತದ ಬಳಿ ಇರುವ ನೂತನ ಕಾಂಪ್ಲೆಕ್ಸ್ನಲ್ಲಿ ಸಿದ್ದೇಶ್ವರ ಲೋಕ ಕಲ್ಯಾಣ ಟ್ರಸ್ಟ್ ವಿಜಯಪುರ ಇವರ ೨೪*೭ ಸಿದ್ದೇಶ್ವರ ಮೆಡಿಕಲ್ ಉದ್ಘಾಟನಾ ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಗಾಲ ಬರಲಿ ಅಂತಾ ರೈತರು ಬಯಸುತ್ತಾರೆ ಅಂತ ಬೇಜವಾಬ್ದಾರಿ ಹೇಳಿಕೆ ನೀಡಿದ್ದು ದುರಂತ. ಮಳೆಗಾಗಿ ರೈತರು ಮುಗಿಲು ನೋಡುತ್ತಾ ಕುಳಿತರ‍್ತಾರೆ. ಮಳೆ ಬೆಳೆಗಾಗಿ ರೈತರು ಅದೆಷ್ಟೋ ಹರಕೆ ಹೊರತಾರೆ. ಮಂತ್ರಿಯಾಗಿ ಈ ರೀತಿ ಮಾತನಾಡುವದು ಸರಿ ಅಲ್ಲ. ರೈತರ ಬಗ್ಗೆ ಹಗುರವಾಗಿ ಮಾತನಾಡುವ ಶಿವಾನಂದ ಪಾಟೀಲರಿಗೆ ನಾನು ಕೂಡಲೇ ೫ಕೋಟಿ ರೂಪಾಯಿ ಕೊಡುತ್ತೇನೆ. ಆತ್ಮಹತ್ಯೆ ಮಾಡಿಕೊಳ್ಳುತಾರಾ? ಇಂಥವರ ಮೇಲೆ ಕಾಂಗ್ರೇಸ್ ಹೈಕಮಾಂಡ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಇದೇ ವೇಳೆ ಕರ್ನಾಟಕದ ಬಿಜೆಪಿಯನ್ನ ಯಡಿಯೂರಪ್ಪನವರಿಗೆ ಕೊಟ್ಟು ಬಿಟ್ಟಿದ್ದಾರೆ. ಬೆಂಗಳೂರಿನ ಸಬ್ ರಸಿಸ್ಟರ್ ಆಫೀಸ್ ನಲ್ಲಿ ಬಿಜೆಪಿಯನ್ನ…

Read More

ವಿಜಯಪುರ: ಜಿಲ್ಲೆಯ ಝಳಕಿ, ಜಿಗಜಿವಣಗಿ, ಇಂಚಗೇರಿ ಮತ್ತು ಕೆರೂರ ೧೧೦/೧೧ ಕೆವ್ಹಿ ವಿದ್ಯುತ್ ಉಪಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಕೈಗೊಂಡಿರುವುದರಿಂದ ಸದರಿ ವಿದ್ಯುತ್ ಕೇಂದ್ರಗಳಿಗೆ ಹಾಗೂ ಸದರಿ ಉಪ ಕೇಂದ್ರದಿಂದ ಸರಬರಾಜಾಗುವ ಎಲ್ಲ ೧೧ ಕೆವ್ಹಿ ಹಾಗೂ ೩೩ ಕೆವ್ಹಿ ನಿವರ್ಗಿ, ಹೊರ್ತಿ ಹಾಗೂ ಹಲಸಂಗಿ ಕೇಂದ್ರಗಳಿಂದ ಹೊರಹೋಗುವ ೧೧ ಕೆವ್ಹಿ ವಿದ್ಯುತ್ ಮಾರ್ಗಗಳಲ್ಲಿ ಡಿ.೨೮ರಂದು ಬೆಳಿಗ್ಗೆ ೯ ಗಂಟೆಯಿಂದ ೪-೩೦ ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಇಂಡಿ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.

Read More