Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಅಗ್ನಿ ಅವಘಡದಿಂದ ಎರಡು ಅಂಗಡಿಗಳು ಭಸ್ಮ

ಇಂಡಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಹೆಚ್ಚಿದ ಭ್ರಷ್ಟಾಚಾರ :ಆರೋಪ

ಮೂರು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಗೆಲುವು :ಸಂಭ್ರಮಾಚರಣೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ನಿಷ್ಕಲ್ಮಶ ಪ್ರೇಮಭಾವದ ಗುರು-ಶಿಷ್ಯರ ಕಲರವ!
(ರಾಜ್ಯ ) ಜಿಲ್ಲೆ

ನಿಷ್ಕಲ್ಮಶ ಪ್ರೇಮಭಾವದ ಗುರು-ಶಿಷ್ಯರ ಕಲರವ!

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಆಲಮಟ್ಟಿ ಮಂಜಪ್ಪನ ಸನ್ನಿಧಿಯಲ್ಲಿ ಸ್ನೇಹಿತರ ಸಮ್ಮಿಲನ | ಸ್ನೇಹ ಬಾಂಧವ್ಯದ ಬೆಸುಗೆಯಲ್ಲಿ ಮಿಂದ ಹಳೆ ಮನಸ್ಸುಗಳು

ಆಲಮಟ್ಟಿ: ಅಲ್ಲಿ ಬಹು ವರುಷಗಳ ಬಳಿಕ ಹಳೆಯ ಸ್ನೇಹಿತರೆಲ್ಲ ಒಂದೆಡೆ ಸೇರಿದ್ದರು.ಅವರೆಲ್ಲ ಹರುಷದ ಹೊನಲಿನಲ್ಲಿ ಗುರು ಭಕ್ತಿಭಾವದಲ್ಲಿ ತನ್ಮಯರಾಗಿದ್ದರು. ಒಟ್ಟುಗೂಡಿದ ಈ ಸ್ನೇಹ ಬಳಗದ ಸಮ್ಮಿಲನದ ಘಮಲು ವಿಶೇಷಮಯವಾಗಿತ್ತು. ಗುರುಗಳ ಮೇಲಿರಿಸಿದ ಉತ್ಕಟ, ನಿಷ್ಕಲ್ಮಶ ಪ್ರೇಮಭಾವ, ಗೌರವದ ಸೆಂಟಿಮೆಂಟ್ ಶಿಷ್ಯರ ಮನದಾಳದಲ್ಲಿ ನಳನಳಿಸುತ್ತಿತ್ತು. ಪ್ರಾಂಜಲ್ಯ ಮನಸ್ಸಿನ ಮಧುರ ಭಾವಾವರಣ ನಸುನಗೆಯ ಪ್ರಸನ್ನತೆಯಿಂದ ಸೂಸುತ್ತಿತ್ತು. ಗುರು-ಶಿಷ್ಯರ ಪರಮ ಪವಿತ್ರ ಸುಗಂಧಿತ ಭಾವಲೋಕ ಮನೋಜ್ಞವಾಗಿ ಅರಳಿ ನಿಂತಿತ್ತು. ಅದರದ ಅನ್ಯೋನ್ಯತೆ ಪ್ರೀತಿ,ಪ್ರೇಮ,ವಿಶ್ವಾಸಾರ್ಹ ಗೌರವ ಮೊರತವೇ ಎಲ್ಲರ ಉಸಿರಾಗಿ ಸುಗಮತೆಯಿಂದ ಚಲಿಸುತ್ತಿತ್ತು. ಆಧುನಿಕತೆಯ ಸೊಗಡಿನಲ್ಲೂ ಗುರುದೇವತ್ರದ ಭಾವಪುಂಜವೊಂದು ಆ ಹಳೆಯ ವಿದ್ಯಾರ್ಥಿಗಳ ಮಸ್ತಕದಲ್ಲಿ ನಯವಾಗಿ, ಸೊಗಸಾಗಿ ತುಂಬಿತ್ತು. ಗುರುಗಳ ಸಾಮೀಪ್ಯದ ಕಥಾನೋಟದ ಹಂದರಕ್ಕೆ ಓಲ್ಡ್ ಸ್ಟೂಡೆಂಟ್ ಗಳೆಲ್ಲ ಖುಷಿಯಿಂದ ಗೋಲ್ಡ್ ತೋರಣದಲ್ಲಿ ತೇಲಿ ಮಿಂದೆದ್ದರು. ಹೊಸ ಭಾಷ್ಯಕ್ಕೆ ಗುರು-ಶಿಷ್ಯರ ಪವಿತ್ರಬಂಧವುಳ್ಳ ಅಪರೂಪದ ಸನ್ನಿವೇಶ ಸೃಷ್ಟಿವಾಗಿತ್ತು. ಅದು ಭಾವಗಳ ಕಟ್ಟಿದ ಎಲ್ಲಾ ಸರಹದ್ದು ಮೀರಿದ ದೃಷ್ಟಿ ವೈಭವದ ಕಾವ್ಯಾತ್ಮಕ ದೃಶ್ಯಕ್ಕೆ ಸಾಕ್ಷಿಯಾಗಿತ್ತು…!
      ಆಲಮಟ್ಟಿಯಲ್ಲಿನ ಕರುನಾಡಿನ ಗಾಂಧಿ  ಮಂಜಪ್ಪ ಹರ್ಡೇಕರ ಸ್ಮಾರಕ ಭವನದ ಅಂಗಳದಲ್ಲಿ ಶನಿವಾರ ಕಂಡು ಬಂದ ಗುರು-ಶಿಷ್ಯರ ಭಾವನೋಟದ ವೈವಿಧ್ಯಮಯ ತುಣುಕುಗಳಿವು ! 
  ಚಳಿಗಾಲದ ತಂಗಾಳಿನಲ್ಲಿ ಗುರು-ಶಿಷ್ಯರ ಬಾಂಧವ್ಯದ ಕಂಪು ಶರಣ ಮಂಜಪ್ಪನ ಸನ್ನಿಧಿಯಲ್ಲಿ ಸೊಗಸಾಗಿ, ಇಂಪಾಗಿ ಹರಡಿತ್ತು. 
   ೧೯೯೮-೯೯ ನೇ ಸಾಲಿನಲ್ಲಿ ಇಲ್ಲಿನ ಎಂ.ಪಿ.ಎಸ್ ಶಾಲೆಯಲ್ಲಿ ಏಳನೇ ತರಗತಿ ಕಲಿತ ಹಾಗೂ ೨೦೦೧-೦೨ ರಲ್ಲಿ ಎಂ.ಎಚ್.ಎಂ ಮತ್ತು ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳ ಬಳಗ ಸೇರಿಕೊಂಡು ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮದ ಬಳಿಕ ಮಂಜಪ್ಪ ಹರ್ಡೇಕರ ಸ್ಮಾರಕ ಭವನಕ್ಕೆ ತೆರಳಿ ಮಂಜಪ್ಪನವರ ಕಂಚಿನ ಪ್ರತಿಮೆ ದರ್ಶನ ಪಡೆದರು.ಈ ವೇಳೆ ತಾವು ಕಲಿತ ಆಲಮಟ್ಟಿ ಎಸ್.ವ್ಹಿ. ವ್ಹಿ. ಶಾಲಾ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳು ಅದ ಗದುಗಿನ ತೋಂಟದಾರ್ಯ ವಿದ್ಯಾಪೀಠ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ,ಶಿವಾನಂದ ಪಟ್ಟಣಶೆಟ್ಟರ  ಹಾಗೂ ಈಗಿನ ನೂತನ ಸಿಇಓ, ವಿಶ್ರಾಂತ ಡಿಡಿಪಿಐ ಆಯ್. ಬಿ.ಬೆನಕೊಪ್ಪ ಅವರನ್ನು ಮಂಜಪ್ಪನವರ ಸ್ಮಾರಕ ಭವನದಲ್ಲಿ ಅಭಿಮಾನದಿಂದ ಶಾಲು ಹೊದಿಸಿ ಹೃದಯಸ್ಪರ್ಶಿಯಾಗಿ ಸನ್ಮಾನಿಸಿದರು. ನಮ್ಯತೆಯಿಂದ ಧನ್ಯತೆ ಭಾವ ಹಳೆ ವಿದ್ಯಾರ್ಥಿಗಳು ಮೆರೆದರು. ಸ್ಮಾರಕದ ಅಂಗಳದಲ್ಲಿ ಮಹನೀಯರೊಂದಿಗೆ ಪೋಟೋ ಕ್ಲಿಕಿಸಿಕೊಂಡು ಸಂತಸಗೊಂಡರು. ಗಾಂಧಿ ತತ್ವಗಳ ಪ್ರತಿರೂಪಿ ಮಂಜಪ್ಪ ಹರ್ಡೇಕರ ಹಾಗೂ ವಚನ ಪಿತಾಮಹ ರಾವಬಹದ್ದೂರ ಫ.ಗು.ಹಳಕಟ್ಟಿ ಈ ಮಹಾನ ಶರಣರ ನಾಮಧೇಯಡಿ ಕಲಿತ ಶಾಲೆಗಳ ಬಗ್ಗೆ ನಮಗೆಲ್ಲ ಅತೀವ ಹೆಮ್ಮೆಇದ್ದು ನಮಗೆ ಬದುಕಿನ ದಾರಿ ತೋರಿವೆ. ಆಲಮಟ್ಟಿಯಲ್ಲಿನ ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಜ್ಞಾನ ಪಡೆದಿದ್ದೆ ಸೌಭಾಗ್ಯ. ಮಂಜಪ್ಪ, ಹಳಕಟ್ಟಿಯವರ ಕರ್ಮಭೂಮಿಯ ಈ ನೆಲೆಯಲ್ಲಿ ವ್ಯಾಸಂಗ ಮಾಡಿರುವುದೇ ಪುಣ್ಯ ಎಂದು ಹಳೆಯ ಹಲವಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಂತೋಷದಿಂದ ಪ್ರೊ, ಶಿವಾನಂದ ಪಟ್ಟಣಶೆಟ್ಟರ ಅವರೆದುರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.ಕಲಿತ ಶಾಲೆ, ಕಲಿಸಿದ ಗುರುಗಳನ್ನು ಎಂದಿಗೂ ಮರೆಯದಿರಿ. ನಿಮ್ಮ ಅಭಿಮಾನ, ಸಂಸ್ಕಾರ,ಸಂಸ್ಕೃತಿಗೆ ಹೃದಯ ತುಂಬಿದೆ ಎಂದು ಪಟ್ಟಣಶೆಟ್ಟರ ನುಡಿದರು. 
 ಸನ್ಮಾನ ಸ್ವೀಕರಿಸಿದ ನಿವೃತ ಡಿಡಿಪಿಐ ಆಯ್. ಬಿ.ಬೆನಕೊಪ್ಪ, ಹಳೆ ವಿದ್ಯಾರ್ಥಿ ಸಮೂಹದ ಗುರುವಂದನಾ ಹಾಗೂ ಸ್ನೇಹಿತರ ಸಮ್ಮಿಲನದ ವಿಶೇಷ ಸೇವಾ ಕಾರ್ಯ ಶ್ಲಾಘಿಸಿದರು.
       ಈ ಸಂದರ್ಭದಲ್ಲಿ ಪ್ರಾಚಾರ್ಯ ಪಿ.ಎ.ಹೇಮಗಿರಿಮಠ, ಎಚ್.ಎನ್.ಕೆಲೂರ, ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ, ಎಸ್.ಆಯ್. ಗಿಡ್ಡಪ್ಪಗೋಳ, ಎನ್.ಎಸ್.ಬಿರಾದಾರ, ಜಿ.ಆರ್.ಜಾಧವ, ಎಂ.ಎಚ್.ಬಳಬಟ್ಟಿ, ಯು.ಎ.ಹಿರೇಮಠ, ಗಂಗಾಧರ ಹಿರೇಮಠ, ಶಾಂತೂ ತಡಸಿ, ಬಸಯ್ಯ ಶಿವಯೋಗಿಮಠ, ಗದುಗಿನ ಜೆಟಿವಿಪಿ ಸಂಸ್ಥೆಯ ಸಿಬ್ಬಂದಿಗಳಾದ ಕೋಟ್ರೇಶ ಮೆಣಸಿನಕಾಯಿ, ಎಸ್.ಎಸ್.ನೀಲಗುಂದ, ಅಶೋಕ ಇಲಕಲ್, ಈರಣ್ಣ ಗುರುಪುತ್ರಪ್ಪನವರ ಸೇರಿದಂತೆ ಹಳೆಯ ವಿದ್ಯಾರ್ಥಿಗಳಾದ ಪ್ರವೀಣ ಉಳ್ಳಾಗಡ್ಡಿ, ವಿಜಯಲಕ್ಷ್ಮೀ ಕೌಲಗಿ, ಮಮತಾ ಎಸ್.ಬಿ,ರಾಜಕುಮಾರ ಮುದ್ನಾಳ, ಸಾವಿತ್ರಿ ದೇಸಾಯಿ, ತನುಜಾ ಪೂಜಾರಿ, ಮಂಜುನಾಥ ಪರಂಧರೆ, ಜುಮೈಲಾ ಮಕಾನದಾರ, ವಿಠ್ಠಲ ಪಾಟೀಲ, ವಿಜಯಾ ನೀರಲಕೇರಿ, ವೆಂಕಟೇಶ ರಾಠೋಡ, ಮಂಜುಳಾ ನುಗ್ಗಲಿ, ಮಹಾಂತೇಶ ಬೆಳಗಲ್, ಚನ್ನಬಸು ಅಂಗಡಿ, ಅಲೀಮ್ ನಕೀಬ್, ಮಹಾಂತೇಶ ಬಿಜಾಪುರ, ವಿಜಯಕುಮಾರ ಅಂಗಡಿ, ಹಾಸೀಮ್ ಫೀರ್ ಯಂಡಿಗೇರಿ, ರಫೀಕ್ ಚಪ್ಪರಬಂದ, ರವಿ ಬಾಬು ಲಮಾಣಿ ಇತರರು ಇದ್ದರು. 

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಅಗ್ನಿ ಅವಘಡದಿಂದ ಎರಡು ಅಂಗಡಿಗಳು ಭಸ್ಮ

ಇಂಡಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಹೆಚ್ಚಿದ ಭ್ರಷ್ಟಾಚಾರ :ಆರೋಪ

ಮೂರು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಗೆಲುವು :ಸಂಭ್ರಮಾಚರಣೆ

ಉಪಚುನಾವಣೆ : ಎರಡೂ ಕ್ಷೇತ್ರಗಳಲ್ಲಿ ಗೆದ್ದು ಬೀಗಿದ ಕಾಂಗ್ರೆಸ್

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಅಗ್ನಿ ಅವಘಡದಿಂದ ಎರಡು ಅಂಗಡಿಗಳು ಭಸ್ಮ
    In (ರಾಜ್ಯ ) ಜಿಲ್ಲೆ
  • ಇಂಡಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಹೆಚ್ಚಿದ ಭ್ರಷ್ಟಾಚಾರ :ಆರೋಪ
    In (ರಾಜ್ಯ ) ಜಿಲ್ಲೆ
  • ಮೂರು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಗೆಲುವು :ಸಂಭ್ರಮಾಚರಣೆ
    In (ರಾಜ್ಯ ) ಜಿಲ್ಲೆ
  • ಉಪಚುನಾವಣೆ : ಎರಡೂ ಕ್ಷೇತ್ರಗಳಲ್ಲಿ ಗೆದ್ದು ಬೀಗಿದ ಕಾಂಗ್ರೆಸ್
    In (ರಾಜ್ಯ ) ಜಿಲ್ಲೆ
  • ಬಬಲೇಶ್ವರ ಕ್ಷೇತ್ರದ ಸರಕಾರಿ ಶಾಲೆಗಳಿಗೆ ಕ್ರೀಡಾ ಸಲಕರಣೆ ಸೌಲಭ್ಯ
    In (ರಾಜ್ಯ ) ಜಿಲ್ಲೆ
  • ಕೊಲ್ಹಾರ: ರೈತ ಜಾಗೃತಿ ಸಮಾವೇಶಕ್ಕೆ ಸಾವಿರಾರು ರೈತರು ಭಾಗಿ
    In (ರಾಜ್ಯ ) ಜಿಲ್ಲೆ
  • ಕಬ್ಬಿನಲ್ಲಿ ಎಕರೆಗೆ 100 ಟನ್ ಇಳುವರಿ ಕುರಿತು ತಾಂತ್ರಿಕ ಕಾರ್ಯಗಾರ
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮೇ 03, 2026
    In ದಿನಪತ್ರಿಕೆ
  • ರೈತರಿಗೆ ಗುಣಮಟ್ಟದ ವಿದ್ಯುತ್ ವ್ಯವಸ್ಥೆ ನೀಡುವ ಮಹದಾಸೆ
    In (ರಾಜ್ಯ ) ಜಿಲ್ಲೆ
  • ಮಾಹಿತಿ ಹಕ್ಕು ಕಾಯ್ದೆಯನ್ನು ಸಂಪೂರ್ಣ ಅಧ್ಯಯನ ಮಾಡಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.