ದೇವರಹಿಪ್ಪರಗಿ: ಕೊಂಡಗೂಳಿ ಎಂಪಿಎಸ್ ಶಾಲೆಯ ಹಿರಿಯ ಶಿಕ್ಷಕ ಜಿ.ಬಿ.ಹೊಕ್ಕುಂಡಿ ಅವರಿಗೆ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಕ್ಲಸ್ಟರ್ ಮಟ್ಟದಲ್ಲಿ ಸನ್ಮಾನಿಸಲಾಯಿತು.
ತಾಲ್ಲೂಕಿನ ಬಿ.ಬಿ.ಇಂಗಳಗಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸೋಮವಾರ ಜರುಗಿದ ಶಿಕ್ಷಕರ ಸ್ವಾಗತ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಕೊಂಡಗೂಳಿ ಕ್ಲಸ್ಟರ್‌ಗೆ ನೂತನವಾಗಿ ಜಿಪಿಟಿ ಶಿಕ್ಷಕರಾಗಿ ನೇಮಕಾತಿ ಹೊಂದಿದ ಹಾಗೂ ಬೇರೆ ಕ್ಲಸ್ಟರ್‌ನಿಂದ ಆಗಮಿಸಿದ ಜೊತೆಗೆ ಆದರ್ಶ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಬಿ.ಬಿ.ಇಂಗಳಗಿ ಶಾಲೆಯ ಮುಖ್ಯಗುರು ಎಸ್.ಎಸ್.ಕುಂಬಾರ ಅಧ್ಯಕ್ಷತೆ ವಹಿಸಿದ್ದರು.
ಸಹಶಿಕ್ಷಕರಾದ ಎಸ್.ಎಸ್.ಅಂಬಲಿ, ಕೆ.ಎಸ್.ಹಿರೇಕುರುಬರ, ಎಮ್.ಎನ್ ವಡೆಯರ್, ಶಂಕರರಾವ್ ಕುಲಕರ್ಣಿ, ಎಸ್.ಜೆ.ಜೈನಾಪೂರ, ಎಂ.ಎಚ್.ಮರಿಗೌಡರು, ಎಂ.ಎ.ಮಮದಾಪೂರ ಸೇರಿದಂತೆ ಮಕ್ಕಳು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

