ಮುದ್ದೇಬಿಹಾಳ: ರೈತರ ಬಗ್ಗೆ ಹಗುರವಾಗಿ ಮಾತನಾಡಿದ ತಮ್ಮ ಪಕ್ಷದ ಮಂತ್ರಿಗಳ ಮೇಲೆ ಸಿಎಂ ಸಿದ್ದರಾಮಯ್ಯನವರು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಬಸನಗೌಡ ಪಾಟೀಲ ಒತ್ತಾಯಿಸಿದರು.
ಪಟ್ಟಣದ ಬಸವೇಶ್ವರ ವೃತ್ತದ ಬಳಿ ಇರುವ ನೂತನ ಕಾಂಪ್ಲೆಕ್ಸ್ನಲ್ಲಿ ಸಿದ್ದೇಶ್ವರ ಲೋಕ ಕಲ್ಯಾಣ ಟ್ರಸ್ಟ್ ವಿಜಯಪುರ ಇವರ ೨೪*೭ ಸಿದ್ದೇಶ್ವರ ಮೆಡಿಕಲ್ ಉದ್ಘಾಟನಾ ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಗಾಲ ಬರಲಿ ಅಂತಾ ರೈತರು ಬಯಸುತ್ತಾರೆ ಅಂತ ಬೇಜವಾಬ್ದಾರಿ ಹೇಳಿಕೆ ನೀಡಿದ್ದು ದುರಂತ. ಮಳೆಗಾಗಿ ರೈತರು ಮುಗಿಲು ನೋಡುತ್ತಾ ಕುಳಿತರ‍್ತಾರೆ. ಮಳೆ ಬೆಳೆಗಾಗಿ ರೈತರು ಅದೆಷ್ಟೋ ಹರಕೆ ಹೊರತಾರೆ. ಮಂತ್ರಿಯಾಗಿ ಈ ರೀತಿ ಮಾತನಾಡುವದು ಸರಿ ಅಲ್ಲ. ರೈತರ ಬಗ್ಗೆ ಹಗುರವಾಗಿ ಮಾತನಾಡುವ ಶಿವಾನಂದ ಪಾಟೀಲರಿಗೆ ನಾನು ಕೂಡಲೇ ೫ಕೋಟಿ ರೂಪಾಯಿ ಕೊಡುತ್ತೇನೆ. ಆತ್ಮಹತ್ಯೆ ಮಾಡಿಕೊಳ್ಳುತಾರಾ? ಇಂಥವರ ಮೇಲೆ ಕಾಂಗ್ರೇಸ್ ಹೈಕಮಾಂಡ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಕರ್ನಾಟಕದ ಬಿಜೆಪಿಯನ್ನ ಯಡಿಯೂರಪ್ಪನವರಿಗೆ ಕೊಟ್ಟು ಬಿಟ್ಟಿದ್ದಾರೆ. ಬೆಂಗಳೂರಿನ ಸಬ್ ರಸಿಸ್ಟರ್ ಆಫೀಸ್ ನಲ್ಲಿ ಬಿಜೆಪಿಯನ್ನ ಯಡಿಯೂರಪ್ಪ ಮತ್ತು ಕುಟುಂಬಕ್ಕೆ ನೊಂದಣಿ ಮಾಡಿದ್ದಾರೆ ಎಂದು ಲೇವಡಿ ಮಾಡಿದರು. ಎಂ.ಬಿ.ಪಾಟೀಲರು ತಮಗೆ ಮೂರನೇ ಟಿಪ್ಪು ಸುಲ್ತಾನ ಅಂತ ಕರೆದರು ಎನ್ನುವ ಮಾಧ್ಯಮದವರ ಮಾತಿಗೆ ಎಂ.ಬಿ.ಪಾಟೀಲರೇ ಜೌರಂಗಜೇಬನಂತಿದ್ದಾರೆ ಎಂದು ನಗುನಗುತ್ತ ಉತ್ತರಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

