Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಜೆಜೆಎಂ ಕಾಮಗಾರಿಗೆ ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಭೂಮಿಪೂಜೆ ಕಲಕೇರಿ: ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ಕುಡಿಯುವ ನೀರಿನ ಸಮಸ್ಯೆಯೂ ಹೆಚ್ಚಾಗುತ್ತಿದೆ. ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಸರಕಾರ ಪ್ರತಿ ಹಳ್ಳಿಗಳ ಪ್ರತಿಯೊಂದು ಮನೆಮನೆಗೂ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸುವ ಸದುದ್ದೇಶದಿಂದ ಜಲಜೀವನ ಮಿಷನ್ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆಯಡಿ ಕಲಕೇರಿ ಗ್ರಾಮಕ್ಕೆ ಅಂದಾಜು ೩ ಕೋಟಿ ೫೨ ಲಕ್ಷ ರೂ.ಗಳ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದು, ಗ್ರಾಮಸ್ಥರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಕುದರಿಸಾಲೊಡಗಿ ಹೇಳಿದರು.ರವಿವಾರ ಸಂಜೆ ನಡೆದ ಭಾರತ ಸರಕಾರ, ಕರ್ನಾಟಕ ಸರಕಾರ, ಜಿಪಂ ವಿಜಯಪುರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಸಿಂದಗಿ ಇವರ ೨೦೨೨-೨೩ನೇ ಸಾಲಿನ ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಮನೆಮನೆಗೆ ನಳ ಸಂಪರ್ಕ ಯೋಜನೆ ಕಾಮಗಾರಿಗೆ ಗ್ರಾಮದ ಶ್ರೀಗುರು ವೀರಘಂಟೈ ಮಡಿವಾಳೇಶ್ವರ ದೇವಸ್ಥಾನದ ಹತ್ತಿರ ಭೂಮಿಪೂಜೆ ನೆರವೇರಿಸಿ ನಂತರ ಮುಖ್ಯಬಜಾರದಲ್ಲಿ ನಡೆದ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಇದೇ…
ಕೊಲ್ಹಾರ: ಸಿಂದಗಿ ಬಸ್ ಘಟಕದಿಂದ ದೇವರಹಿಪ್ಪರಗಿ ಮೂಲಕ ಕೊಲ್ಹಾರ ಪಟ್ಟಣಕ್ಕೆ ಸಾರ್ವಜನಿಕರ ಅನುಕೂಲಕ್ಕಾಗಿ ಬಸ್ ಸೌಕರ್ಯವನ್ನು ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೊಲ್ಹಾರದ ನಾಗರಿಕರು ಶಾಸಕ ಭೀಮನಗೌಡ (ರಾಜುಗೌಡ) ಪಾಟೀಲ ಅವರಿಗೆ ಮನವಿ ಅರ್ಪಿಸಿದರು.ಕೊಲ್ಹಾರದ ರಾಜುಗೌಡರ ಸ್ನೇಹಿತರ ಬಳಗದವರು ಶಾಸಕರ ಸ್ವಗ್ರಾಮವಾದ ಕುದರಿಸಾಲೋಡಗಿಗೆ ತೆರಳಿ ಫಲಪುಷ್ಪ ನೀಡಿ ಗೌರವಿಸಿ ಮನವಿ ಅರ್ಪಿಸಿದ ತಕ್ಷಣ ರಾಜುಗೌಡರು ವಿಜಯಪೂರದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಡಿ.ಟಿ.ಓ ಅವರ ಜೊತೆ ದೂರವಾಣಿ ಮೂಲಕ ಮಾತನಾಡಿ, ಎರಡು ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ಪ್ರಯಾಣಿಕರ ಸಾರಿಗೆ ವಾಹನವಾದ ಬಸ್ ಸೇವೆಯನ್ನು ತಕ್ಷಣವೇ ಒದಗಿಸಿಕೊಡಬೇಕೆಂದು ಸೂಚನೆ ಕೊಟ್ಟರು.ನನ್ನ ಸ್ವಕ್ಷೇತ್ರದ ಕೇಂದ್ರಸ್ಥಳವಾದ ದೇವರಹಿಪ್ಪರಗಿ ಪಟ್ಟಣದಿಂದ ಮಾರ್ಕಬ್ಬನಹಳ್ಳಿ-ಡೋಣೂರ-ಮಸಬಿನಾಳ-ಉಕ್ಕಲಿ-ಮನಗೂಳಿ-ಕಲಗುರ್ಕಿ-ಮುಳವಾಡ-ಮಲಘಾನ-ಹಿರೇಆಸಂಗಿ-ರೋಣಿಹಾಳ-ಹಿರೇ ಗರಸಂಗಿ ಮೂಲಕ ನೂತನ ತಾಲೂಕು ಕೇಂದ್ರ ಕೊಲ್ಹಾರ ಪಟ್ಟಣಕ್ಕೆ ಒಳಮಾರ್ಗದ ರಸ್ತೆ ಸಂಪರ್ಕವಾದ ನನ್ನ ಮತಕ್ಷೇತ್ರದ ಜನರಿಗೆ ಹಾಗೂ ಬಸವನ ಬಾಗೇವಾಡಿ ಮತಕ್ಷೇತ್ರದ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲಕರವಾಗುವ ಬಸ್ ಸೇವೆ ಇದಾಗಿದ್ದು ಇದರಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲಕರವಾಗುವದು ಆದ್ದರಿಂದ…
ಮೋರಟಗಿ: ಹಿಂದೂಗಳ ಆರಾಧ್ಯದೇವ ಶ್ರೀರಾಮಚಂದ್ರನ ಮೂರ್ತಿ ಪ್ರತಿಷ್ಠಾಪನೆ ದಿನವನ್ನು ದೀಪಾವಳಿಯಂತೆ ಆಚರಿಸೋಣ. ಪ್ರತಿ ಹಿಂದೂ ಮನೆಯಲ್ಲಿ ದೀಪ ಬೆಳಗಿಸಿ ಶ್ರೀರಾಮನನ್ನು ಆರಾಧಿಸೋಣ ಎಂದು ಸಿದ್ದನಗೌಡ ಪಾಟೀಲ್ ಹೇಳಿದರು.ಜ.೬ ರಂದು ಅಯೋಧ್ಯ ನಗರದಲ್ಲಿ ನೂತನವಾಗಿ ನಿರ‍್ಮಾಣಗೊಂಡ ರಾಮಮೂರ್ತಿ ಪ್ರತಿಷ್ಠಾಪನೆಯ ಅಂಗವಾಗಿ ಕುಳೇಕುಮಟಗಿ ಗ್ರಾಮದಲ್ಲಿ ಎಲ್ಲ ಹಿಂದೂ ಕಾರ‍್ಯಕರ‍್ತರನ್ನೊಳಗೊಂಡು ಮನೆ ಮನೆಗೆ ಪತ್ರಗಳು ವಿತರಿಸಿ ಅವರು ಮಾತನಾಡಿದರು.ನೂರಾರು ವರ್ಷಗಳ ಬಳಿಕ ರಾಮ ಮೂರ‍್ತಿ ಪ್ರತಿಷ್ಠಾಪನೆ ಆಗುವ ಕಾಲ ಕೂಡಿಬಂದಿದೆ. ಈ ಭಕ್ತಿಯ ಸಂಭ್ರಮ ದೇಶಾದ್ಯಂತ ಕಾಣಲಿದ್ದು ಇದಕ್ಕೆ ಸಾಕ್ಷಿ ಎಂಬಂತೆ ಎಲ್ಲ ಹಿಂದೂ ಸಮುದಾಯದ ಹಿರಿಯರು ತಾಯಂದ್ರು ಮನೆಗಳಲ್ಲಿ ಬಡಾವಣೆಯ ದೇವಸ್ಥಾನಗಳ ಆವರಣವನ್ನು ಸ್ವಚ್ಛತೆಗೊಳಿಸಿ ಜ.೧೪ರಿಂದ ಪ್ರಾರ್ಥನೆ ವಿವಿಧ ರೀತಿಯ ಪೂಜಾ ಕಾರ‍್ಯಕ್ರಮ ಏರ‍್ಪಡಿಸುವಂತಾಗಬೇಕು ಎಂದು ಮನವಿ ಮಾಡಿ, ಮನೆ ಮನೆಗೆ ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಾ ಮಂತ್ರಾಕ್ಷತೆ ವಿತರಿಸಿದರು.ಈ ಸಂದರ್ಭದಲ್ಲಿ ಚೆನ್ನಪ್ಪ ಹೂಗಾರ್, ಬಸವರಾಜ್ ಮುರಟಗಿ, ಸಿದ್ದು ಬಡಿಗೇರ್, ಮಂಜುನಾಥ್ ದೇವಣ್ಗಾವ್, ಮಹಾಂತೇಶ್ ಮಾಗಣಗೇರಿ, ಅಗಸರ್ ಸೇರಿದಂತೆ ಅನೇಕ ಹಿಂದೂ ಕಾರ‍್ಯಕರ‍್ತರು…
ಅಪಘಾತ ಸಂಭವಿಸಿ ವಾರ ಕಳೆದರೂ ಸ್ವಚ್ಛತೆಗೆ ಮುಂದಾಗದ ಹೆದ್ದಾರಿ ಅಧಿಕಾರಿಗಳು ಮೋರಟಗಿ: ಸಮೀಪದ ಹಂಚಿನಾಳ ಮತ್ತು ಗಬಸಾವಳಗಿ ಗ್ರಾಮದ ಮದ್ಯ ರಾಷ್ಟ್ರೀಯ ಹೆದ್ದಾರಿ ೫೦ ರಲ್ಲಿ ಕಳೆದ ೧೦ನೇ ತಾರೀಕು ಸರ್ಕಾರಿ ಬಸ್ಸಿಗೆ ಬೈಕ್ ಸವಾರನೊಬ್ಬ ಡಿಕ್ಕಿ ಹೊಡೆದ ಪರಿಣಾಮ ಸ್ಪರ್ಶ್ ತೀವ್ರಗೊಂಡು ಬಸ್ಸು ಸುಟ್ಟು ಭಸ್ಮವಾಗಿತ್ತು. ಘಟನೆ ಸಂಭವಿಸಿ ಒಂದು ವಾರ ಕಳೆದರೂ ಅಪಘಾತ ಸಂಭವಿಸಿದ ಸ್ಥಳದಲ್ಲಿ ರಾಷ್ಟ್ರಿಯ ಹೆದ್ದಾರಿ ಅಧಿಕಾರಿಗಳು ಸ್ವಚ್ಛತೆಗೆ ಮುಂದಾಗುತ್ತಿಲ್ಲ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳಿಗೆ ಹಿಡಿಶಾಪ ಹಾಕುತಿದ್ದಾರೆ.ಘಟನಾ ಸ್ಥಳದಲ್ಲಿ ಹೆದ್ದಾರಿ ಮೇಲೆ ಸಣ್ಣ ಪುಟ್ಟ ಕಬ್ಬಿಣದ ಸಾಮಾನು ಬಿದ್ದಿರುವುದರಿಂದ ದ್ವಿಚಕ್ರ ವಾಹನ ಸವಾರರಿಗೆ ಅಪಘಾತಕ್ಕೆ ಆಹ್ವಾನ ನೀಡುತ್ತಿವೆ, ಇದು ಗೊತ್ತಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ವಚ್ಛತೆಗೆ ಏಕೆ ಮುಂದಾಗುತ್ತಿಲ್ಲ? ಹೆದ್ದಾರಿ ಸ್ವಚ್ಛತೆಗೆ ಸಿಬ್ಬಂದಿಗಳೇ ಇಲ್ವಾ? ಅಥವಾ ಬಸ್ಸು ಸುಟ್ಟಿರುವ ವಿಷಯ ಹೆದ್ದಾರಿ ಅಧಿಕಾರಿಗಳಿಗೆ ಗೊತ್ತೇ ಇಲ್ವಾ? ಎಂದು ವಾಹನ ಸವಾರರು ಪ್ರಶ್ನೆ ಮಾಡುತಿದ್ದಾರೆ.ಬಸ್ಸು ಸುಟ್ಟಿರುವ ಪರಿಣಾಮ ಕಬ್ಬಿಣದ ಕೆಲವೊಂದು ಸಣ್ಣ…
ವಿಜಯಪುರ: ಸಮ ಸಮಾಜದ ಕನಸು ಹೊತ್ತು,ಆ ಮೂಲಕ ಸತ್ಯಪಥದಲ್ಲಿ ನಡೆದು, ತಮ್ಮ ವಚನಗಳ ಮೂಲಕ ಸಾಮಾನ್ಯರಿಗೂ ತಿಳಿಯುವಂತೆ ಬರೆದಂತೆ, ನುಡಿದಂತೆ ನಡೆದು ಜನಸಾಮಾನ್ಯರಿಗೆ ಅರಿವಿನ ಗುರುವಾಗಿದ್ದವರು ೧೨ನೇ ಶತಮಾನದ ಶರಣರು ಎಂದು ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ ಹೇಳಿದರು.ಅವರು ಜಿಲ್ಲಾಡತ ಹಾಗೂ ವಿವಿಧ ಇಲಾಖೆಗಳ ಸಹಯೋಗದ ಮೂಲಕ ಸೋಮವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶಿವಯೋಗಿ ಸಿದ್ಧರಾಮೇಶ್ವರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ ಗೌರವ ಸಲ್ಲಿಸಿ ಮಾತನಾಡಿದ ಅವರು, ಶಿವಯೋಗಿ ಸಿದ್ಧರಾಮೇಶ್ವರ ಕರ್ಮಯೋಗಿಯಾಗಿದ್ದ ಅವರು ಮುಂದೆ ಅಲ್ಲಮಪ್ರಭುಗಳ ಆಶಯದಂತೆ ಕಲ್ಯಾಣಕ್ಕೆ ತೆರಳಿ, ಶಿವಯೋಗಿ-ಜ್ಞಾನಯೋಗಿಯಾದರು. ಅವರು ಸೊನ್ನಲಾಪೂರದಲ್ಲಿ ಕೆರೆ ಕಟ್ಟೆಗಳನ್ನು ಕಟ್ಟಿಸುವ ಮೂಲಕ ಬಹು ದೊಡ್ಡ ಕಾಯಕ ಯೋಗಿಯಾದವರು. ಇವರ ವಚನಗಳು ಜ್ಞಾನದೊಂದಿಗೆ ಸಮಾಜದಲ್ಲಿನ ಅನಿಷ್ಟ ಪದ್ಧತಿಗಳ ತೊಡೆದು ಹಾಕಲು ವಚನದ ಸಾರ ಧ್ವನಿಸುತ್ತವೆ. ಇವರು ಸಮಾಜಕ್ಕೆ ಬಹು ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.ಈ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ನಿವೃತ್ತ…
ಕೊಲ್ಹಾರ: ೧೯೯೦ ರಲ್ಲಿ ದೇಶದ ಮಹಾನ್ ಮುತ್ಸದ್ದಿ ಎಲ್.ಕೆ.ಅಡ್ವಾನಿ ಅವರ ನೇತೃತ್ವದಲ್ಲಿ ಅಯೋದ್ಯೆಯಲ್ಲಿ ರಾಮಮಂದಿರ ಸ್ಥಾಪಿಸಿಯೇ ತೀರಬೇಕೆಂಬ ಕನಸನ್ನು ಹೊತ್ತು ಹೊರಟ ರಥ ಯಾತ್ರೆಯ ಸಂಚಾರ ದೇಶಾದ್ಯಂತ ಸಂಚರಿಸಿದ ಪ್ರತಿಫಲವಾಗಿ ಪ್ರಧಾನಿ ನರೇಂದ್ರ ಮೋದಿಯವರ ಹಾಗೂ ದೇಶದ ಅಸಂಖ್ಯಾತ ಹಿಂದೂಗಳ ತಪಸ್ಸಿನ ಸಂಕಲ್ಪ ಸಿದ್ದಿಯಾಗಿ ಜ.೨೨ರಂದು ರಾಮಮಂದಿರ ಉದ್ಘಾಟನೆಯಾಗುತ್ತಿದೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.ಪಟ್ಟಣದಲ್ಲಿ ರಾಮಮಂದಿರ ಉದ್ಘಾಟನೆ ಸಮಾರಂಭದ ನಿಮಿತ್ಯವಾಗಿ ರಾಮಜನ್ಮಭೂಮಿ ಟ್ರಸ್ಟನವರು ಕಳುಹಿಸಿದ ಅಕ್ಷತೆಕಾಳು ಮತ್ತು ಕರಪತ್ರವನ್ನು ಮನೆ ಮನೆಗೆ ಮತ್ತು ಅಂಗಡಿಗಳಿಗೆ ತೆರಳಿ ವಿತರಣೆ ಮಾಡುವ ಸಂದರ್ಭದಲ್ಲಿ ಮಾತನಾಡಿದ ಅವರು, ಬರುವ ದಿನಗಳಲ್ಲಿ ಭಾರತಮಾತೆಯು ಅಖಂಡ ಭಾರತವಾಗಿ ರೂಪತಾಳುವ ಸಮಯ ಬರುವದು ಬಹಳ ದೂರವಿಲ್ಲ ಎಂದರು.ಪ್ರಧಾನಿ ನರೇಂದ್ರ ಮೋದಿಯವರು ಕರೆಕೊಟ್ಟ ಪ್ರಕಾರ ಉದ್ಘಾಟನಾ ಸಮಾರಂಭದ ದಿನದಂದು ಪ್ರತಿಯೊಬ್ಬರು ರಾಮಭಜನೆ ಮಾಡುತ್ತಾ ಊರಿನ ಮನೆ ಮನೆಗಳ ಮುಂದೆ ದೀಪಗಳನ್ನು ಹಚ್ಚಿ ಆಕಾಶಬುಟ್ಟಿಯನ್ನು ಹಾರಿಸಿ ಜೈ ಶ್ರೀರಾಮ ಎನ್ನುವ ಘೋಷಣೆ ಕೂಗುತ್ತಾ ಪ್ರತಿಯೊಬ್ಬ ಹಿಂದೂವಿನ ಕನಸು ನನಸಾದ ಸಂಭ್ರಮಾಚರಣೆಯನ್ನು ವಿಶ್ವವೇ…
ಕೊಲ್ಹಾರ: ತಾಲೂಕಿನ ಕುಬಕಡ್ಡಿ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ನಮ್ಮ ಶಾಲೆ ನಮ್ಮ ಕೊಡುಗೆ ಎನ್ನುವ ಪರಿಕಲ್ಪನೆ ಯೋಜನೆಯ ಅಂಗವಾಗಿ ಶಾಲೆಯ ಹಳೆಯ ವಿಧ್ಯಾರ್ಥಿಗಳಿಂದ ಆರ್ಥಿಕ ಧನಸಹಾಯ ದೊರಕಿತು.ಬಳ್ಳಾರಿಯ ಎನ್.ಟಿ.ಪಿ.ಸಿ ಕೇಂದ್ರದಲ್ಲಿ ಸರಕಾರಿ ಅಭಿಯಂತರರಾಗಿ ಸೇವೆ ಸಲ್ಲಿಸುತ್ತಿರುವ ಶಿವನಗೌಡ ಬಿರಾದಾರ ೩೦೦೦೦, ಗ್ರಾಮ ಪಂಚಾಯತ ಮಾಜಿ ಸದಸ್ಯರಾದ ಭಿಮಪ್ಪ ಕಂಬಪ್ಪ ಚಲವಾದಿ ೧೧೦೦೦, ಕೃಷಿಕ ಮಿತ್ರರಾದ ಲಕ್ಷ್ಮಣ ಡಾಳೆ ೩೦೦೦ ರೂ. ಗಳನ್ನು ಶಾಲೆಯ ಅಭಿವೃದ್ದಿಗಾಗಿ ಧನ ಸಹಾಯವನ್ನು ದೇಣಿಗೆ ರೂಪದಲ್ಲಿ ಕೊಡಮಾಡಿದರು.ಈ ಸಂದರ್ಭ ಎಸ್.ಆರ್.ಬಿರಾದಾರ ಮಾತನಾಡಿ, ನಾವು ಕಲಿತಂತಹ ಶಾಲೆಯ ನಮ್ಮೂರ ಮಕ್ಕಳು ಇಂದಿನ ದಿನಮಾನಗಳಲ್ಲಿ ಅವಶ್ಯಕವಾಗಿರುವ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಮಕ್ಕಳಿಗೆ ಸಾಧ್ಯವಾಗಲು ಶಾಲೆಗೆ ಅಗತ್ಯವಿರುವ ಸೌಲಭ್ಯವನ್ನು ದೊರಕಿಸಿಕೊಳ್ಳಲು ಆರ್ಥಿಕವಾಗಿ ಸ್ಥಿತಿವಂತರಾದ ಪ್ರತಿಯೊಬ್ಬರು ಸಹಾಯ ಸಹಕಾರ ಮಾಡುವದರಲ್ಲಿ ಮುಂದೆ ಬಂದಾಗ ಶಾಲೆಯ ಪ್ರಗತಿಯ ಜೊತೆಗೆ ಆಧುನಿಕ ಶೈಲಿಯ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಶಿಕ್ಷಣವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ಹಳೆಯ ವಿದ್ಯಾರ್ಥಿಗಳು ಮತ್ತು ಪ್ರಮುಖರು ಕಾರ್ಯೋನ್ಮುಖರಾಗಬೇಕೆಂದು ಹೇಳಿದರು.ಈ…
ಇಂಡಿ: ಹನ್ನೆರಡನೆಯ ಶತಮಾನದ ಪ್ರಥಮ ಶ್ರೇಣಿಯ ವಚನಕಾರರಲ್ಲಿ ಒಬ್ಬ. ಬಾಲ್ಯದಲ್ಲಿ ಕುರಿಕಾಯುವ ಕಾಯಕ. ಶ್ರೀಶೈಲಕ್ಕೆ ಹೋಗಿ ಮಲ್ಲಿಕಾರ್ಜುನನ ದರ್ಶನ ಪಡೆದ ಸಿದ್ದರಾಮ ಸೋಲಾಪುರಕ್ಕೆ ಬಂದು ದೇವಸ್ಥಾನ ನಿರ್ಮಿಸಿ ಕೆರೆ ಕಟ್ಟೆ ಕರ‍್ಯದಲ್ಲಿ ತೊಡಗಿದ ಕಾಯಕಯೋಗಿ ಎಂದು ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.ಸೋಮವಾರ ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲೂಕಾ ಆಡಳಿತ ವತಿಯಿಂದ ನಡೆದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು.ಪ್ರಭುದೇವ ಅವರನ್ನು ಕಲ್ಯಾಣಕ್ಕೆ ಕರೆದೊಯ್ದು ಚೆನ್ನ ಬಸವಣ್ಣ ನವರಿಂದ ಇಷ್ಟಲಿಂಗ ದೀಕ್ಷೆ ಕೊಡಿಸಿ ಅನುಭವ ಮಂಟಪ ಗೋಷ್ಠಿಯಲ್ಲಿ ಪಾಲ್ಗೊಂಡು ಮಹಾಶಿವಯೋಗಿಯಾದರು ಎಂದರು.ತಹಸೀಲ್ದಾರ ಬಿ.ಎಸ್. ಕಡಕಬಾವಿ, ಸಮಾಜ ಕಲ್ಯಾಣ ಅಧಿಕಾರಿ ಬಿ.ಜೆ. ಇಂಡಿ, ಕಜಾಪ ಅಧ್ಯಕ್ಷ ಆರ್.ವಿ. ಪಾಟೀಲ, ಪಿ.ಎಂ. ಮಠಪತಿ, ಎಂ.ಪಿ. ಕೊಡತೆ, ಎಸ್ ಆರ್. ಮುಜಗೊಂದ, ಶಿರಸ್ತೆದಾರ ಬಸವರಾಜ ರಾಹೂರ, ಬಸವರಾಜ ಗೊರನಾಳ ಮತ್ತಿತರಿದ್ದರು.
ಇಂಡಿ: ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಉದ್ಘಾಟನೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿಂದ ತಂದಿದ್ದ ರಾಮ ರಕ್ಷಾಪಠಣ ದೀಪ ಪಟ್ಟಣದಲ್ಲಿ ಭಾನುವಾರ ವಿವೇಕ ಬಳಗದ ವತಿಯಿಂದ ರಾಮಭಕ್ತರು ಪ್ರತಿ ಮನೆಗೆ ತೆರಳಿ ಶ್ರದ್ದೆ ಭಕ್ತಿಯಿಂದ ವಿತರಿಸಿ ಭಕ್ತಿ ಭಾವ ಮೆರೆದರು.ಪಟ್ಟಣದ ಓಂ ಶಾಂತಿ ಆಶ್ರಮದಲ್ಲಿ ವಿವೇಕ ಬಳಗದ ವತಿಯಿಂದ ಪೂಜೆ ಸಲ್ಲಿಸಿ, ಜೈ ಶ್ರೀ ರಾಮ್ ಘೋಷಣೆ ಮೊಳಗಿಸಿ, ರಾಮನ ಭಾವಚಿತ್ರ ಹಾಗೂ ರಾಮ ರಕ್ಷಾ ಪಠಣ ದೀಪ ಹಂಚಿಕೆ ಮಾಡಿದರು.ಇದೇ ಸಂದರ್ಭದಲ್ಲಿ ವಿದ್ಯಾಶ್ರಿ ಪಾಟೀಲ ಮಾತನಾಡಿ, ಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಉದ್ಘಾಟನೆಯಾಗುತ್ತಿರುವುದು ಇಡೀ ದೇಶ ಸಂತೋಷಪಡುವ ವಿಷಯವಾಗಿದೆ. ರಾಮ ರಕ್ಷಾಪಠಣ ದೀಪ ಪ್ರತಿಯೊಂದು ಮನೆಯಲ್ಲಿ ಬೆಳಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಬಿ.ಕೆ. ಯಮುನಾ ಅಕ್ಕ, ದ್ರಾಕ್ಷಾಯಣಿ, ಉಮಾ ಪಟ್ಟದಕಲ್ಲ, ಸಂಗಾ ಸಿಸ್ಟರ್ ಸೇರಿದಂತೆ ವಿವೇಕ ಬಳಗದ ಮಾತೆಯರು ಉಪಸ್ಥಿತರಿದ್ದರು.
ಇಂಡಿ: ಎಲ್ಲೆಡೆ ಸರ್ಕಾರಿ ಸೇವೆಯಲ್ಲಿರುವವರು ತಮ್ಮ ಸೇವಾ ನಿವೃತ್ತಿಯ ಬಳಿಕ ನಿಶ್ಚಿಂತೆಯಿಂದ ವಿಶ್ರಾಂತಿಯ ಜೀವನ ನಡೆಸುವುದು ಸಾಮಾನ್ಯ ಸಂಗತಿ. ಇಲ್ಲೊಬ್ಬ ಸರ್ಕಾರಿ ನೌಕರ ಸೇವಾ ನಿವೃತ್ತಿಯ ಗಳಿಗೆಯಲ್ಲಿ ಕಾನೂನು ಪದವಿ ತೇರ್ಗಡೆಯಾಗುವ ಮೂಲಕ ಹಲವರು ಹುಬ್ಬೇರಿಸುವಂತೆ ಮಾಡಿದ್ದಲ್ಲದೆ, ನಿವೃತ್ತಿಯ ಬಳಿಕ ವಕೀಲ ವೃತ್ತಿ ಆರಂಭಿಸಲು ಸಜ್ಜಾಗಿದ್ದಾರೆ.ಪಟ್ಟಣದ ತಹಶೀಲ್ದಾರ ಕಚೇರಿಯ ಎಫ್.ಡಿ.ಎ. ಹುದ್ದೆ ನೌಕರ ಪುಂಡಲೀಕ ರಜಪೂತ ಎಂಬುವರೇ ಇಂತಹ ಅದಮ್ಯ ಉತ್ಸಾಹ ತೋರಿದ ಉತ್ಸಾಹಿ.ಆರಂಭದಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಸೇವೆ ಪ್ರಾರಂಭಿಸಿದ ಇವರು ಕಾಲ ಕಳೆದಂತೆ ಎಫ್.ಡಿ.ಎ. ನೌಕರರಾಗಿ ಬಡ್ತಿ ಹೊಂದಿದ್ದಾರೆ. ಅತ್ತ ಉತ್ತಮ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಾ ಬಂದ ಇವರು, ಯುವಕರೂ ನಾಚುವ ರೀತಿಯಲ್ಲಿ ಸೇವೆಯ ಜೊತೆಗೆ ಬಿಡುವಿನ ವೇಳೆಯಲ್ಲಿ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಕಾನೂನು ಪದವಿ ತೇರ್ಗಡೆಯಾಗಿ ಅಚ್ಚರಿ ಮೂಡಿಸಿದ್ದಾರೆ.ಭವಿಷ್ಯದ ಕೆಲವೇ ದಿನಗಳಲ್ಲಿ ಸರ್ಕಾರಿ ಸೇವಾ ನಿವೃತ್ತಿಯ ಬಳಿಕ ವಕೀಲ ವೃತ್ತಿಯ ಸೇವೆ ಆರಂಭಿಸುವ ಕನಸು ಕಂಡ ಇವರ ಅಪರೂಪದ, ಯುವಕರಿಗೆ ಮಾದರಿಯಾದ ಗಮನಾರ್ಹ ಸಾಧನೆಗೆ ಇಂಡಿ ತಹಶೀಲ್ದಾರ ಬಿ.ಎಸ್.…
