ಕೊಲ್ಹಾರ: ತಾಲೂಕಿನ ಕುಬಕಡ್ಡಿ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ನಮ್ಮ ಶಾಲೆ ನಮ್ಮ ಕೊಡುಗೆ ಎನ್ನುವ ಪರಿಕಲ್ಪನೆ ಯೋಜನೆಯ ಅಂಗವಾಗಿ ಶಾಲೆಯ ಹಳೆಯ ವಿಧ್ಯಾರ್ಥಿಗಳಿಂದ ಆರ್ಥಿಕ ಧನಸಹಾಯ ದೊರಕಿತು.
ಬಳ್ಳಾರಿಯ ಎನ್.ಟಿ.ಪಿ.ಸಿ ಕೇಂದ್ರದಲ್ಲಿ ಸರಕಾರಿ ಅಭಿಯಂತರರಾಗಿ ಸೇವೆ ಸಲ್ಲಿಸುತ್ತಿರುವ ಶಿವನಗೌಡ ಬಿರಾದಾರ ೩೦೦೦೦, ಗ್ರಾಮ ಪಂಚಾಯತ ಮಾಜಿ ಸದಸ್ಯರಾದ ಭಿಮಪ್ಪ ಕಂಬಪ್ಪ ಚಲವಾದಿ ೧೧೦೦೦, ಕೃಷಿಕ ಮಿತ್ರರಾದ ಲಕ್ಷ್ಮಣ ಡಾಳೆ ೩೦೦೦ ರೂ. ಗಳನ್ನು ಶಾಲೆಯ ಅಭಿವೃದ್ದಿಗಾಗಿ ಧನ ಸಹಾಯವನ್ನು ದೇಣಿಗೆ ರೂಪದಲ್ಲಿ ಕೊಡಮಾಡಿದರು.
ಈ ಸಂದರ್ಭ ಎಸ್.ಆರ್.ಬಿರಾದಾರ ಮಾತನಾಡಿ, ನಾವು ಕಲಿತಂತಹ ಶಾಲೆಯ ನಮ್ಮೂರ ಮಕ್ಕಳು ಇಂದಿನ ದಿನಮಾನಗಳಲ್ಲಿ ಅವಶ್ಯಕವಾಗಿರುವ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಮಕ್ಕಳಿಗೆ ಸಾಧ್ಯವಾಗಲು ಶಾಲೆಗೆ ಅಗತ್ಯವಿರುವ ಸೌಲಭ್ಯವನ್ನು ದೊರಕಿಸಿಕೊಳ್ಳಲು ಆರ್ಥಿಕವಾಗಿ ಸ್ಥಿತಿವಂತರಾದ ಪ್ರತಿಯೊಬ್ಬರು ಸಹಾಯ ಸಹಕಾರ ಮಾಡುವದರಲ್ಲಿ ಮುಂದೆ ಬಂದಾಗ ಶಾಲೆಯ ಪ್ರಗತಿಯ ಜೊತೆಗೆ ಆಧುನಿಕ ಶೈಲಿಯ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಶಿಕ್ಷಣವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ಹಳೆಯ ವಿದ್ಯಾರ್ಥಿಗಳು ಮತ್ತು ಪ್ರಮುಖರು ಕಾರ್ಯೋನ್ಮುಖರಾಗಬೇಕೆಂದು ಹೇಳಿದರು.
ಈ ಸಂದರ್ಭಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಮುರುಗೇಶ ಹಳ್ಳಿ, ಮುಖ್ಯ ಗುರು ಸಿದ್ದು ಕೋಟ್ಯಾಳ, ಶಿಕ್ಷಕರಾದ ಹಣಮಂತ ಬಿರಾದಾರ, ಬಾಬು ಪವಾರ, ಹೇಮಾವತಿ, ಕವಿತಾ ಹಿರೇಮಠ, ಶಾಂಪ್ಪ ನಾಗರಹಳ್ಳಿ, ಆನಂದ ಹೊಲ್ದೂರ, ಲಕ್ಷ್ಮೀ ವನೇಸಿ, ಅನೇಕರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment
