ಅಪಘಾತ ಸಂಭವಿಸಿ ವಾರ ಕಳೆದರೂ ಸ್ವಚ್ಛತೆಗೆ ಮುಂದಾಗದ ಹೆದ್ದಾರಿ ಅಧಿಕಾರಿಗಳು
ಮೋರಟಗಿ: ಸಮೀಪದ ಹಂಚಿನಾಳ ಮತ್ತು ಗಬಸಾವಳಗಿ ಗ್ರಾಮದ ಮದ್ಯ ರಾಷ್ಟ್ರೀಯ ಹೆದ್ದಾರಿ ೫೦ ರಲ್ಲಿ ಕಳೆದ ೧೦ನೇ ತಾರೀಕು ಸರ್ಕಾರಿ ಬಸ್ಸಿಗೆ ಬೈಕ್ ಸವಾರನೊಬ್ಬ ಡಿಕ್ಕಿ ಹೊಡೆದ ಪರಿಣಾಮ ಸ್ಪರ್ಶ್ ತೀವ್ರಗೊಂಡು ಬಸ್ಸು ಸುಟ್ಟು ಭಸ್ಮವಾಗಿತ್ತು. ಘಟನೆ ಸಂಭವಿಸಿ ಒಂದು ವಾರ ಕಳೆದರೂ ಅಪಘಾತ ಸಂಭವಿಸಿದ ಸ್ಥಳದಲ್ಲಿ ರಾಷ್ಟ್ರಿಯ ಹೆದ್ದಾರಿ ಅಧಿಕಾರಿಗಳು ಸ್ವಚ್ಛತೆಗೆ ಮುಂದಾಗುತ್ತಿಲ್ಲ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳಿಗೆ ಹಿಡಿಶಾಪ ಹಾಕುತಿದ್ದಾರೆ.
ಘಟನಾ ಸ್ಥಳದಲ್ಲಿ ಹೆದ್ದಾರಿ ಮೇಲೆ ಸಣ್ಣ ಪುಟ್ಟ ಕಬ್ಬಿಣದ ಸಾಮಾನು ಬಿದ್ದಿರುವುದರಿಂದ ದ್ವಿಚಕ್ರ ವಾಹನ ಸವಾರರಿಗೆ ಅಪಘಾತಕ್ಕೆ ಆಹ್ವಾನ ನೀಡುತ್ತಿವೆ, ಇದು ಗೊತ್ತಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ವಚ್ಛತೆಗೆ ಏಕೆ ಮುಂದಾಗುತ್ತಿಲ್ಲ? ಹೆದ್ದಾರಿ ಸ್ವಚ್ಛತೆಗೆ ಸಿಬ್ಬಂದಿಗಳೇ ಇಲ್ವಾ? ಅಥವಾ ಬಸ್ಸು ಸುಟ್ಟಿರುವ ವಿಷಯ ಹೆದ್ದಾರಿ ಅಧಿಕಾರಿಗಳಿಗೆ ಗೊತ್ತೇ ಇಲ್ವಾ? ಎಂದು ವಾಹನ ಸವಾರರು ಪ್ರಶ್ನೆ ಮಾಡುತಿದ್ದಾರೆ.
ಬಸ್ಸು ಸುಟ್ಟಿರುವ ಪರಿಣಾಮ ಕಬ್ಬಿಣದ ಕೆಲವೊಂದು ಸಣ್ಣ ಸಣ್ಣ ಸಾಮಾನುಗಳು ಬಿದ್ದಿರುವುದರಿಂದ ರಾತ್ರಿವೇಳೆ ದ್ವಿಚಕ್ರ ವಾಹನಗಳು ಅಪಘಾತವಾಗುವ ಎಲ್ಲ ಸಾಧ್ಯತೆಗಳಿವೆ. ಅಮಾಯಕರ ಜೀವ ಹೋಗುವ ಮುನ್ನ ಅಧಿಕಾರಿಗಳು ಕೂಡಲೇ ಎಚ್ಛತ್ತಿಕೊಳ್ಳಬೇಕಿದೆ.
ರಾಷ್ಟ್ರೀಯ ಹೆದ್ದಾರಿ ಮೇಲೆ ಕೆಲವು ಕಡೆ ಇದೇ ತರಹ ಕಲ್ಲುಗಳು ಬಿದ್ದಿರುವುದು ಇರುತ್ತದೆ. ಕಲಬುರ್ಗಿ – ವಿಜಯಪುರ ಮಾರ್ಗವಾಗಿ ಎರಡು ಟೋಲ್ ಗಳಿವೆ. ಟೋಲ್ ಮುಖಾಂತರ ಸರಕಾರಕ್ಕೆ ಸಾಕಷ್ಟು ಹಣ ಕೂಡಾ ಹೋಗುತ್ತದೆ. ಪ್ರತಿ ದಿನ ಹೆದ್ದಾರಿ ಸಮೀಕ್ಷೆಗಾಗಿ ವಾಹನ ಕೊಟ್ಟು ಅಧಿಕಾರಿಗಳನ್ನು ನೇಮಕ ಮಾಡಿದರೂ ಪ್ರಯೋಜನೆ ಆಗುತ್ತಿಲ್ಲ. ಸ್ವಚ್ಛತೆಗೆ ಸಿಬ್ಬಂದಿ ಇದ್ದರೂ ಇಲ್ಲದಂತಾಗಿದೆ. ವಾಹನ ಸವಾರರಿಗೆ ಹೆದ್ದಾರಿ ಮೇಲೆ ಆಗುವ ಸಮಸ್ಯೆಗಳ ಕುರಿತು ಮನವಿ ಮಾಡಬೇಕೆಂದರೆ ಅವರ ಫೋನ್ ನಂಬರ್ ಸರಿಯಾಗಿ ಸಿಗುತ್ತಿಲ್ಲ. ಆ ಸ್ಥಳದಲ್ಲಿ ದುರ್ಘಟನೆ ನಡೆಯುವ ಮುನ್ನ ಎಚ್ಛೆತ್ತಿಕೊಂಡು ಸಂಬಂಧ ಪಟ್ಟ ಮೇಲಾಧಿಕಾರಿಗಳು ಸ್ವಚ್ಛತ್ವಗೆ ಮುಂದಾಗಬೇಕು ಎಂಬುದು ವಾಹನ ಸವಾರರ ಆಗ್ರಹವಾಗಿದೆ.

