ಮೋರಟಗಿ: ಹಿಂದೂಗಳ ಆರಾಧ್ಯದೇವ ಶ್ರೀರಾಮಚಂದ್ರನ ಮೂರ್ತಿ ಪ್ರತಿಷ್ಠಾಪನೆ ದಿನವನ್ನು ದೀಪಾವಳಿಯಂತೆ ಆಚರಿಸೋಣ. ಪ್ರತಿ ಹಿಂದೂ ಮನೆಯಲ್ಲಿ ದೀಪ ಬೆಳಗಿಸಿ ಶ್ರೀರಾಮನನ್ನು ಆರಾಧಿಸೋಣ ಎಂದು ಸಿದ್ದನಗೌಡ ಪಾಟೀಲ್ ಹೇಳಿದರು.
ಜ.೬ ರಂದು ಅಯೋಧ್ಯ ನಗರದಲ್ಲಿ ನೂತನವಾಗಿ ನಿರ‍್ಮಾಣಗೊಂಡ ರಾಮಮೂರ್ತಿ ಪ್ರತಿಷ್ಠಾಪನೆಯ ಅಂಗವಾಗಿ ಕುಳೇಕುಮಟಗಿ ಗ್ರಾಮದಲ್ಲಿ ಎಲ್ಲ ಹಿಂದೂ ಕಾರ‍್ಯಕರ‍್ತರನ್ನೊಳಗೊಂಡು ಮನೆ ಮನೆಗೆ ಪತ್ರಗಳು ವಿತರಿಸಿ ಅವರು ಮಾತನಾಡಿದರು.
ನೂರಾರು ವರ್ಷಗಳ ಬಳಿಕ ರಾಮ ಮೂರ‍್ತಿ ಪ್ರತಿಷ್ಠಾಪನೆ ಆಗುವ ಕಾಲ ಕೂಡಿಬಂದಿದೆ. ಈ ಭಕ್ತಿಯ ಸಂಭ್ರಮ ದೇಶಾದ್ಯಂತ ಕಾಣಲಿದ್ದು ಇದಕ್ಕೆ ಸಾಕ್ಷಿ ಎಂಬಂತೆ ಎಲ್ಲ ಹಿಂದೂ ಸಮುದಾಯದ ಹಿರಿಯರು ತಾಯಂದ್ರು ಮನೆಗಳಲ್ಲಿ ಬಡಾವಣೆಯ ದೇವಸ್ಥಾನಗಳ ಆವರಣವನ್ನು ಸ್ವಚ್ಛತೆಗೊಳಿಸಿ ಜ.೧೪ರಿಂದ ಪ್ರಾರ್ಥನೆ ವಿವಿಧ ರೀತಿಯ ಪೂಜಾ ಕಾರ‍್ಯಕ್ರಮ ಏರ‍್ಪಡಿಸುವಂತಾಗಬೇಕು ಎಂದು ಮನವಿ ಮಾಡಿ, ಮನೆ ಮನೆಗೆ ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಾ ಮಂತ್ರಾಕ್ಷತೆ ವಿತರಿಸಿದರು.
ಈ ಸಂದರ್ಭದಲ್ಲಿ ಚೆನ್ನಪ್ಪ ಹೂಗಾರ್, ಬಸವರಾಜ್ ಮುರಟಗಿ, ಸಿದ್ದು ಬಡಿಗೇರ್, ಮಂಜುನಾಥ್ ದೇವಣ್ಗಾವ್, ಮಹಾಂತೇಶ್ ಮಾಗಣಗೇರಿ, ಅಗಸರ್ ಸೇರಿದಂತೆ ಅನೇಕ ಹಿಂದೂ ಕಾರ‍್ಯಕರ‍್ತರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

