ಇಂಡಿ: ಹನ್ನೆರಡನೆಯ ಶತಮಾನದ ಪ್ರಥಮ ಶ್ರೇಣಿಯ ವಚನಕಾರರಲ್ಲಿ ಒಬ್ಬ. ಬಾಲ್ಯದಲ್ಲಿ ಕುರಿಕಾಯುವ ಕಾಯಕ. ಶ್ರೀಶೈಲಕ್ಕೆ ಹೋಗಿ ಮಲ್ಲಿಕಾರ್ಜುನನ ದರ್ಶನ ಪಡೆದ ಸಿದ್ದರಾಮ ಸೋಲಾಪುರಕ್ಕೆ ಬಂದು ದೇವಸ್ಥಾನ ನಿರ್ಮಿಸಿ ಕೆರೆ ಕಟ್ಟೆ ಕರ‍್ಯದಲ್ಲಿ ತೊಡಗಿದ ಕಾಯಕಯೋಗಿ ಎಂದು ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಸೋಮವಾರ ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲೂಕಾ ಆಡಳಿತ ವತಿಯಿಂದ ನಡೆದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಭುದೇವ ಅವರನ್ನು ಕಲ್ಯಾಣಕ್ಕೆ ಕರೆದೊಯ್ದು ಚೆನ್ನ ಬಸವಣ್ಣ ನವರಿಂದ ಇಷ್ಟಲಿಂಗ ದೀಕ್ಷೆ ಕೊಡಿಸಿ ಅನುಭವ ಮಂಟಪ ಗೋಷ್ಠಿಯಲ್ಲಿ ಪಾಲ್ಗೊಂಡು ಮಹಾಶಿವಯೋಗಿಯಾದರು ಎಂದರು.
ತಹಸೀಲ್ದಾರ ಬಿ.ಎಸ್. ಕಡಕಬಾವಿ, ಸಮಾಜ ಕಲ್ಯಾಣ ಅಧಿಕಾರಿ ಬಿ.ಜೆ. ಇಂಡಿ, ಕಜಾಪ ಅಧ್ಯಕ್ಷ ಆರ್.ವಿ. ಪಾಟೀಲ, ಪಿ.ಎಂ. ಮಠಪತಿ, ಎಂ.ಪಿ. ಕೊಡತೆ, ಎಸ್ ಆರ್. ಮುಜಗೊಂದ, ಶಿರಸ್ತೆದಾರ ಬಸವರಾಜ ರಾಹೂರ, ಬಸವರಾಜ ಗೊರನಾಳ ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

