ಕೊಲ್ಹಾರ: ೧೯೯೦ ರಲ್ಲಿ ದೇಶದ ಮಹಾನ್ ಮುತ್ಸದ್ದಿ ಎಲ್.ಕೆ.ಅಡ್ವಾನಿ ಅವರ ನೇತೃತ್ವದಲ್ಲಿ ಅಯೋದ್ಯೆಯಲ್ಲಿ ರಾಮಮಂದಿರ ಸ್ಥಾಪಿಸಿಯೇ ತೀರಬೇಕೆಂಬ ಕನಸನ್ನು ಹೊತ್ತು ಹೊರಟ ರಥ ಯಾತ್ರೆಯ ಸಂಚಾರ ದೇಶಾದ್ಯಂತ ಸಂಚರಿಸಿದ ಪ್ರತಿಫಲವಾಗಿ ಪ್ರಧಾನಿ ನರೇಂದ್ರ ಮೋದಿಯವರ ಹಾಗೂ ದೇಶದ ಅಸಂಖ್ಯಾತ ಹಿಂದೂಗಳ ತಪಸ್ಸಿನ ಸಂಕಲ್ಪ ಸಿದ್ದಿಯಾಗಿ ಜ.೨೨ರಂದು ರಾಮಮಂದಿರ ಉದ್ಘಾಟನೆಯಾಗುತ್ತಿದೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.
ಪಟ್ಟಣದಲ್ಲಿ ರಾಮಮಂದಿರ ಉದ್ಘಾಟನೆ ಸಮಾರಂಭದ ನಿಮಿತ್ಯವಾಗಿ ರಾಮಜನ್ಮಭೂಮಿ ಟ್ರಸ್ಟನವರು ಕಳುಹಿಸಿದ ಅಕ್ಷತೆಕಾಳು ಮತ್ತು ಕರಪತ್ರವನ್ನು ಮನೆ ಮನೆಗೆ ಮತ್ತು ಅಂಗಡಿಗಳಿಗೆ ತೆರಳಿ ವಿತರಣೆ ಮಾಡುವ ಸಂದರ್ಭದಲ್ಲಿ ಮಾತನಾಡಿದ ಅವರು, ಬರುವ ದಿನಗಳಲ್ಲಿ ಭಾರತಮಾತೆಯು ಅಖಂಡ ಭಾರತವಾಗಿ ರೂಪತಾಳುವ ಸಮಯ ಬರುವದು ಬಹಳ ದೂರವಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಕರೆಕೊಟ್ಟ ಪ್ರಕಾರ ಉದ್ಘಾಟನಾ ಸಮಾರಂಭದ ದಿನದಂದು ಪ್ರತಿಯೊಬ್ಬರು ರಾಮಭಜನೆ ಮಾಡುತ್ತಾ ಊರಿನ ಮನೆ ಮನೆಗಳ ಮುಂದೆ ದೀಪಗಳನ್ನು ಹಚ್ಚಿ ಆಕಾಶಬುಟ್ಟಿಯನ್ನು ಹಾರಿಸಿ ಜೈ ಶ್ರೀರಾಮ ಎನ್ನುವ ಘೋಷಣೆ ಕೂಗುತ್ತಾ ಪ್ರತಿಯೊಬ್ಬ ಹಿಂದೂವಿನ ಕನಸು ನನಸಾದ ಸಂಭ್ರಮಾಚರಣೆಯನ್ನು ವಿಶ್ವವೇ ಬೆರಗಾಗುವಂತೆ ಆಚರಿಸುವ ದಿಸೆಯತ್ತ ನಾವೆಲ್ಲರೂ ಮುನ್ನುಗ್ಗುವಂತ ಸಮಯ ಇದಾಗಿದ್ದು ಸರ್ವರೂ ಪಾಲ್ಗೊಂಡು ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಬೇಕು ಎಂದರು.
ಸೂರ್ಯನು ದಕ್ಷಿಣಾಯನದಿಂದ ಉತ್ತರಾಯಣದ ಕಡೆಗೆ ಕರ್ಕ ರಾಶಿಯಿಂದ ಮಕರ ರಾಶಿಗೆ ಸಂಚರಿಸುವ ಪರ್ವ ಕಾಲವೇ ಮಕರ ಸಂಕ್ರಮಣವಾಗಿದ್ದು ಇದು ರೈತರ ಪಾಲಿಗೆ ವರ್ಷದ ಮೊದಲ ಹಬ್ಬ ಅದರಂತೆ ಸರ್ವ ಜನರ ಪಾಲಿನ ಸಿಹಿ ತರುವ ಶುಭ ಸಂದರ್ಭ ನಾಡಿನ ಜನರಿಗೆ ಆಶಾದಾಯಕವಾಗಲಿ ಎಂದು ಶುಭಾಶಯವನ್ನು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.
ಈ ಸಂದರ್ಭದಲ್ಲಿ ಬಸಪ್ಪ ಕೊಠಾರಿ, ಕಲ್ಲಪ್ಪ ಗಿಡ್ಡಪ್ಪಗೋಳ, ದುಂಡಪ್ಪ ಮಂಟೂರ, ಸಿ.ಎಂ.ಗಣಕುಮಾರ, ಪುಂಡಲೀಕ ಕಂಬಾರ, ಶ್ರೀಶೈಲ ಗಿಡ್ಡಪ್ಪಗೋಳ, ವಿಜಯ ಬಾಟಿ, ಬಸಪ್ಪ ಗೂಗ್ಯಾಳ, ರಾಮಣ್ಣ ಉಪ್ಪಲದಿನ್ನಿ, ಈರಯ್ಯ ಕೂಡಗಿ, ನಾಗೇಂದ್ರ ಗಣಾಚಾರಿ, ವೀರಭದ್ರ ಬಾಗಿ, ಸೋಮಯ್ಯ ಮಠ, ನಾಮದೇವ ಪವಾರ, ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

