Author: editor.udayarashmi@gmail.com

ವಿಜಯಪುರ: ಮಗುವಿನ ಶಿಕ್ಷಣದ ಜೊತೆಗೆ ಸಮಾಜದ ಮೌಲ್ಯ ಹಾಗು ಸಂಸ್ಕಾರ ನೀಡುವ ಅತ್ಯವಶ್ಯಕತೆ ಉಂಟಾಗಿದೆ ಎಂದು ಮನಗೂಳಿ ಹಿರೇಮಠ ಸಂಸ್ಥಾನದ ಅಭಿನವ ಸಂಗನಬಸವ ಸ್ವಾಮಿಜಿಯವರು ಅಭಿಪ್ರಾಯ ವ್ಯಕ್ತಪಡಿಸಿದರುಶುಕ್ರವಾರ ಕೀರ್ತಿ ನಗರದಲ್ಲಿರುವ ಸರಸ್ವತಿ ತರಬೇತಿ ಸಂಸ್ಥೆಯ ಆಶ್ರಯದಲ್ಲಿ ” ಮಗುವಿನ ಪರಿಪೂರ್ಣ ವ್ಯಕ್ತಿತ್ವ ರೂಪಿಸುವವಲ್ಲಿ ಶಿಕ್ಷಕರ ಪಾತ್ರ” ಕುರಿತು ಚಿಂತನ ಗೋಷ್ಠಿಯ ಸಾನಿಧ್ಯ ವಹಿಸಿ ಮಾತನಾಡುತ್ತಾ, ಮಗುವಿನ ಸರ್ವಾಂಗೀಣ ಬೆಳವಣಿಗೆ ಮಹತ್ವ ನೀಡಬೇಕೇಂದರು.ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಗ೯ದ ಕೋಣೆಯಲ್ಲಿ ಮಗುವಿನ ಪರಿಪೂರ್ಣ ವ್ಯಕ್ತಿತ್ವ ವಿಕಸನಗೊಳಿಸುವುದೇ ಶಿಕ್ಷಣವೆಂದುಹೇಳಿದ ಅವರು, ಮಗುವಿನ ಮೇಲೆ ಪಾಲಕರು ಹಾಗು ಶಿಕ್ಷಕರು ತುಂಬ ಒತ್ತಡ ಹೇರುವದು ಮನೋವೈಜ್ಞಾನಿಕವಾಗಿ ಸರಿಯಲ್ಲ. ಮಗು ಆಡುತ್ತಾ ಕಲಿಯಬೇಕೇಂದರು.ಎ ಎ ಪಾಸಿ೯ ವಿಶ್ರಾಂತ ಜಂಟಿ ನಿರ್ದೇಶಕ ಸಾವ೯ಜನಿಕ ಶಿಕ್ಷಣ ಇಲಾಖೆ ವಿಜಯಪುರ ಮಾತನಾಡಿ, ತರಬೇತಿ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ಒದಗಿಸಬೇಕು. ಶಿಕ್ಷಕರು ಮಕ್ಕಳಲ್ಲಿರುವ ಸೂಕ್ತವಾದ ಪ್ರತಿಭೆ ಗುರುತಿಸುವ ಕಾರ್ಯ ಮಾಡುವುದೇ ಪ್ರಾಧ್ಯಾಪಕರ ಕತ೯ವ್ಯವೆಂದರು.ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ…

Read More

ಆಲಮಟ್ಟಿ: ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಮೂರನೇ ಹಂತದ ಜಾರಿಯಿಂದ ೫.೨೦ ಲಕ್ಷ ಹೆಕ್ಟೇರ್ ಜಮೀನು ನೀರಾವರಿಗೊಳಪಡಲಿದೆ, ಆದರೆ ಅದನ್ನು ಜಾರಿಗೊಳಿಸಲು ಭೂಸ್ವಾಧೀನವೇ ಸವಾಲಾಗಿದೆ ಎಂದು ಕೆಬಿಜೆಎನ್ ಎಲ್ ನೂತನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಹಿರಿಯ ಐಎಎಸ್ ಅಧಿಕಾರಿ ಕೆ.ಪಿ. ಮೋಹನರಾಜ್ ಹೇಳಿದರು.ಆಲಮಟ್ಟಿಗೆ ಪ್ರಥಮ ಬಾರಿಗೆ ಆಗಮಿಸಿದ ಅವರು ವಿವಿಧ ಉದ್ಯಾನಗಳಲ್ಲಿನ ಕಾಮಗಾರಿ ಪರಿಶೀಲಿಸಿ, ರಾಕ್ ಉದ್ಯಾನದಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಭೂಸ್ವಾಧೀನ ಪ್ರಕ್ರಿಯೆಯನ್ನು ಸುಲಭಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ, ಅವಾರ್ಡ್ ಹಂತದಲ್ಲಿರುವ ಜಮೀನಿಗೆ ಪರಿಹಾರ ಕೊಡಲು ಇರುವ ತಾಂತ್ರಿಕ ತೊಂದರೆ ಬಗೆಹರಿಸಲಾಗುವುದು ಎಂದರು. ಕಳೆದ ಮೂರು ದಿನಗಳಿಂದ ಆಲಮಟ್ಟಿಯಲ್ಲಿದ್ದು, ವಲಯವಾರು ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ್ದೇನೆ, ಯೋಜನೆ ಜಾರಿಗೆ ಉಂಟಾಗಿರುವ ತೊಡಕುಗಳನ್ನು ನಿವಾರಿಸಿ ಯಾವ ರೀತಿ ಜಾರಿಗೊಳಿಸಬೇಕು ಎಂದು ಒಂದು ಯೋಜನೆ ಹಾಗೂ ಕಾಲಮಿತಿ ಹಾಕಿಕೊಂಡು ಕಾರ್ಯೋನ್ಮುಖಗೊಳ್ಳಲಾಗುವುದು ಎಂದರು. ನಾರಾಯಣಪುರ ಭಾಗದ ಕಾಲುವೆಗಳಿಗೆ ಅಳವಡಿಸಿರುವ ಸ್ಕಡಾ ತಂತ್ರಜ್ಞಾನವನ್ನು ಆಲಮಟ್ಟಿ ಭಾಗದ ಕೆಲ ಕಾಲುವೆಯ ಯೋಜನೆಗಳಿಗೆ ಅಳವಡಿಸಲು…

Read More

ಕೆಬಿಜೆಎನ್ ಎಲ್ ನೂತನ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ಮೋಹನರಾಜ್ ಅಭಿಮತ ಆಲಮಟ್ಟಿ: ಈ ಭಾಗದ ಏಳು ಜಿಲ್ಲೆಗಳ ಸುಮಾರು ೬.೨೦ ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುತ್ತಿರುವ ಆಲಮಟ್ಟಿ ಜಲಾಶಯ ನೀರಾವರಿಯ ದೇಗುಲ ಎಂದು ಕೆಬಿಜೆಎನ್ ಎಲ್ ನೂತನ ವ್ಯವಸ್ಥಾಪಕ ನಿರ್ದೇಶಕ, ಹಿರಿಯ ಐಎಎಸ್ ಅಧಿಕಾರಿ ಕೆ.ಪಿ.ಮೋಹನರಾಜ್ ಅಭಿಪ್ರಾಯಪಟ್ಟರು. ಕೆಬಿಜೆಎನ್ ಎಲ್ ವತಿಯಿಂದ ಇಲ್ಲಿಯ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ, ವಿವಿಧ ಶಾಲೆಯ ಮಕ್ಕಳಿಂದ ಪಥಸಂಚಲನದ ಗೌರವವಂದನೆ ಸ್ವೀಕರಿಸಿ ಅವರು ಮಾತನಾಡಿದರು. ಈ ಜಲಾಶಯ ಬರಪ್ರದೇಶದ ಸುಮಾರು ಏಳು ಜಿಲ್ಲೆಗಳ ಲಕ್ಷಾಂತರ ರೈತರ ಜೀವನಶೈಲಿಯನ್ನೇ ಬದಲಾಯಿಸಿದೆ ಎಂದರು. ಮುಳವಾಡ ಏತ ನೀರಾವರಿ ಯೋಜನೆಯ ಮೂಲಕ ಸುಮಾರು ೫೫ ಟಿಎಂಸಿ ಅಡಿಯಷ್ಟು ನೀರನ್ನು ಕಾಲುವೆಗೆ ಪಂಪಸೆಟ್ ಮೂಲಕ ಹರಿಸಲಾಗುತ್ತದೆ. ಇದರಿಂದ ಇಡೀ ಒಂದು ನದಿಯನ್ನೇ ಪಂಪಸೆಟ್ ಮೂಲಕ ಎತ್ತಿ ಹರಿಸಿದಂತಾಗುತ್ತದೆ, ಇದರಿಂದ ೨.೨೭ ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿಯಾಗಲಿದೆ ಎಂದರು. ಹನಿ ನೀರಾವರಿ ಯೋಜನೆಗಳನ್ನು ಹೆಚ್ಚೆಚ್ಚು ಜಾರಿಗೆ ಬಂದರೆ ನೀರಿನ ಹಿತಮಿತ ಉಳಿತಾಯದ ಜತೆಗೆ ಸವುಳು-ಜವುಳಿನ…

Read More

ಬ್ರಹ್ಮದೇವನಮಡು: ಸಿಂದಗಿ ತಾಲೂಕು ಬ್ರಹ್ಮದೇವನಮಡು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ದ್ವಜಾರೋಹಣವನ್ನು ಎಸ್ಡಿಎಂಸಿ ಅಧ್ಶಕ್ಷ ಅಂಬ್ರುತ್ ದೊಡ್ಡಮನಿ ನೆರವೇರಿಸಿದರು.ಚನ್ನಮಲ್ಲಯ್ಶ ಹಿರೇಮಠ, ಮಲ್ಲಿಕಾಜು೯ನ ಮನಗೂಳಿ, ಬಾಲಚಂದ್ರ ಕರಿಕಲ್ಲ್, ನಿವೃತ್ತ ಶಿಕ್ಷಕ ಎಸ್.ವೈ.ಅಮರಗೋಳ, ಯಮನಪ್ಪ ಅಮರಗೋಳ, ಮುಖ್ಶಗುರು ರಘನಂದ ಉದ್ದಾರ,ನಮಂಜುನಾಥ ಸಿ.ಎಚ್.ಬಂದೇನಮಾಜ್ ಸೀತನೂರ, ಡಿ.ಕೆ.ಸೀತನೂರ, ಪತ್ರಕತ೯ ಮಲ್ಲು ಕೆಂಭಾವಿ,ಮಅಲೀಮ್ ರಾಜಾಕೋಳ, ಬುಡ್ಡಾ ಏವುರ, ಅಲ್ಲಾಪಟೇಲ ಸೀತನೂರ, ಮನೋಹರ ಗುಡಿಮನಿ, ಪರಸುರಾಮ ತೊನಶ್ಶಾಳ, ಮಡಿವಾಳಪ್ಪ ಅಮರಗೋಳ, ಮುಖ್ಶ ಅಡುಗೆಯ ಶ್ರೀದೇವಿ ಕೆಂಭಾವಿ, ಸೇರಿದಂತೆ ಮತ್ತಿತ್ತರಿದ್ದರು.ಅತಿಥಿ ಶಿಕ್ಷಕ ಅಹ್ಮದ ಸೀತನೂರ ಸ್ವಾಗತಿಸಿದರು. ಶಿಕ್ಷಕ ಮಹೇಶಕುಮಾರ ಟಿ.ಎಚ್.ವಂದಿಸಿದರು.ಈ ವೇಳೆ ಸಮಾಜ ಸೇವಕ,ಪ್ರಥಮ ದಜೆ೯ ಗುತ್ತಿಗೆದಾರ ಚಂದ್ರು ಕೆಂಭಾವಿ ಕೊಡ ಮಾಡಿದ ನೋಟ್ ಬುಕ್ ವಿದ್ಶಾಥಿ೯ಗಳಿಗೆ ವಿತರಿಸಲಾಯಿತು. ವಿದ್ಶಾಥಿ೯ಗಳಿಂದ ಸಾಂಸ್ಕ್ರತಿಕ ಕಾಯ೯ಕ್ರಮಗಳು ಜರುಗಿದವು.

Read More

ಮುದ್ದೇಬಿಹಾಳ: ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಫೆ.೨ ರಂದು ವಿವಿಧ ಕಾಮಗಾರಿಗಳ ಉದ್ಘಾಟನೆ, ನಾಗರಿಕರಿಂದ ಅಭಿನಂದನಾ ಸಮಾರಂಭ ಹಾಗೂ ಕವಡಿಮಟ್ಟಿಯ ಸಂಗೊಳ್ಳಿ ರಾಯಣ್ಣ ಮೂರ್ತಿ ಅನಾವರಣಗೊಳಿಸಲು ತಾಲೂಕಿಗೆ ಆಗಮಿಸುತ್ತಿರುವ ಹಿನ್ನೆಲೆ ಹೆಚ್ಚುವರಿ ಎಸ್.ಪಿ ಶಂಕರ ಮಾರಿಹಾಳ ಪಟ್ಟಣದ ಎಂಜಿವ್ಹಿಸಿ ಕಾಲೇಜಿನ ಹೆಲಿಪ್ಯಾಡ, ಸಮಾರಂಭದ ಆವರಣವಾದ ತಹಶೀಲ್ದಾರ ಕಚೇರಿ, ತಾಲೂಕಿನ ಕವಡಿಮಟ್ಟಿ ಗ್ರಾಮದಲ್ಲಿ ಜರುಗುವ ಕಾರ್ಯಕ್ರಮಗಳ ಸ್ಥಳ ಪರಿಶೀಲಿಸಿದರು.ಹೆಲಿಪ್ಯಾಡ್ ನಲ್ಲಿ ಧೂಳು ಹರಡದಂತೆ ಮುಂಜಾಗೃತಾ ಕ್ರಮಗಳನ್ನು ಪಾಲಿಸುವಂತೆ, ಹೆಲಿಪ್ಯಾಡ ನ ಡಾಂಬರೀಕರಣವನ್ನು ಮತ್ತು ಬಿಳಿ ಬಣ್ಣದ ಎಚ್ ಅಕ್ಷರಕ್ಕೆ ಬಣ್ಣ ಬಳೆಯುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು. ತಹಶೀಲ್ದಾರ ಕಚೇರಿಯ ಆವರಣದಲ್ಲಿ ನಡೆಯುವ ನಾಗರೀಕರಿಂದ ಅಭಿನಂದನಾ ಸಮಾರಂಭದ ವೇಳೆ ಪೊಲೀಸ್ ಬಂದೋಬಸ್ತ್ ಕುರಿತು ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ ಅವರೊಡನೆ ಚರ್ಚಿಸಿದರು. ಪೆಂಡಾಲ್ ನ ಮಾಲೀಕಗೆ ಸ್ಟೇಜ್ ಗಟ್ಟಿಯಾಗಿರುವಂತೆ, ಅಲ್ಲಲ್ಲಿ ಬ್ಯಾರಿಖೇಡ್ ಅಳವಡಿಸುವಂತೆ ಸೂಚಿಸಿದರು. ಪಿಎಸ್‌ಐ ಸಂಜೀವ ತಿಪರೆಡ್ಡಿ ಅವರಿಗೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳುವಂತೆ ಸೂಚಿಸಿದರು.

Read More

ತಿಕೋಟಾ: ಜಗತ್ತಿನಲ್ಲಿಯೇ ಅತ್ಯಂತ ದೊಡ್ಡದಾದ ಸಂವಿಧಾನವನ್ನು ಹೊಂದಿರುವ ಭಾರತದ ಪ್ರಜಾಪ್ರಭುತ್ವವು ಇಡೀ ಜಗತ್ತಿನಲ್ಲಿಯೇ ಅತೀ ಶ್ರೇಷ್ಠವಾಗಿದೆ. ಈ ಗಣರಾಜ್ಯೋತ್ಸವ ಹಬ್ಬವು ದೇಶದ ಏಕತೆ ಮತ್ತು ಹೆಮ್ಮೆಯನ್ನು ಕಾಪಾಡಿಕೊಳ್ಳಲು ನಮಗೆಲ್ಲರಿಗೂ ಅವಕಾಶವನ್ನು ನೀಡುತ್ತದೆ. ಇದೇ ಮಂತ್ರವನ್ನು ನಾವೆಲ್ಲರೂ ಸಹ ಜಪಿಸುತ್ತಾ, ದೇಶದ ಒಳತಿಗಾಗಿ ದುಡಿಯಬೇಕು ಎಂದು ತಾಲ್ಲೂಕ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪುರ ಹೇಳಿದರು.ಪಟ್ಟಣದ ತಾಲ್ಲೂಕ ಪಂಚಾಯತಿ ಕಾರ್ಯಾಲಯದಲ್ಲಿ ಜರುಗಿದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಈ ಸಂದರ್ಭದಲ್ಲಿ ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ, ತಾಪಂ ಯೋಜನಾಧಿಕಾರಿ ಆಯೇಷಾ ಸಾಲೋಟಗಿ, ಸಹಾಯಕ ನಿರ್ದೇಶಕಿ ಶೋಭಕ್ಕ ಶಿಳೀನ, ಸಹಾಯಕ ಲೆಕ್ಕಾಧಿಕಾರಿ ವಿ.ಎಸ್.ಪುಟ್ಟಿ, ತಾಂತ್ರಿಕ ಸಂಯೋಜಕ ಇದ್ದರು.ವಾಡೆ ಮೈದಾನ:ತಾಲ್ಲೂಕ ಆಡಳಿತ ವತಿಯಿಂದ ಪಟ್ಟಣದ ವಾಡೆ ಮೈದಾನದಲ್ಲಿ ತಹಶಿಲ್ದಾರ ಪ್ರಶಾಂತ ಚನಗೊಂಡ ಅವರಿಂದ ಧ್ವಜಾರೋಹಣ ನೆರವೇರಿತು. ಈ ಸಂದರ್ಭದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಕೆಜಿಎಸ್ ಶಾಲೆ:ಪಟ್ಟಣದ ಸರಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷ ಆರ್.ಎನ್.ಶೇಖ್ ದ್ವಜಾರೋಹಣ ನೆರವೇರಿಸಿದರು. ಕಂಪ್ಯೂಟರ್ ಕೋಣೆ, ನಲಿಕಲಿ…

Read More

ಮೋರಟಗಿ: ಸ್ವಾತಂತ್ರ‍್ಯದ ಕ್ರಾಂತಿಯ ಕಿಡಿ ಹಚ್ಚಿದ ಕರ್ನಾಟಕದ ಗಂಡೆದೆಯ ಹೋರಾಟಗಾರ, ಬ್ರಿಟಿಷರ ನಿದ್ದೆಗೆಡಿಸಿದ ಕ್ರಾಂತಿ ಪುರುಷ ರಾಯಣ್ಣರ ದೇಶಭಕ್ತಿ ಮಕ್ಕಳಿಗೆ ತಿಳಿಸಬೇಕು ಎಂದು ತಮ್ಮಣ್ಣಸಾಹು ಬೋನಾಳ ಹೇಳಿದರು.ತಾಲೂಕಿನ ಮೋರಟಗಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣರ ವೃತ್ತದಲ್ಲಿ ಹಮ್ಮಿಕೊಂಡ ಸಂಗೋಳ್ಳಿ ರಾಯಣ್ಣರ ಪುಣ್ಯಸ್ಮರಣೆ ಹಾಗೂ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರೀತಿ ವಿಶ್ವಾಸಕ್ಕೆ ಇನ್ನೊಂದು ಹೆಸರೇ ರಾಯಣ್ಣ, ಅವರ ಧೈರ್ಯ, ಶೌರ್ಯ, ಮೆಚ್ಚುವಂತದ್ದು ಕಿತ್ತೂರರಾಣಿ ಚನ್ನಮ್ಮಳ ಬಲಗೈ ಬಂಟನಾಗಿ ಹೆತ್ತ ತಾಯಿಗಿಂತ ಹೆಚ್ಚು ಆರಾಧಿಸಿ ಅವಳ ಆಜ್ಞೆಯಂತೆ ಬ್ರಿಟಿಷರ ರುಂಡಗಳನ್ನು ಚಂಡಾಡಿದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟದ ಸೇನಾನಿ ಸಂಗೊಳ್ಳಿ ರಾಯಣ್ಣರ ಆದರ್ಶ ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.ಈ ವೇಳೆ ಶಿವಾನಂದ ಕೆರಿಗೊಂಡ, ರಾವುತ್ರಾಯ ಪೂಜೆರಿ, ಶಿವಶರಣ ಕೆರಿಗೊಂಡ, ಭೀಮು ನಾಯಕ್, ನಿಂಗಣ್ಣ ಪೂಜಾರಿ,ಶಿವಾನಂದ ಕೆರಿಗೊಂಡ, ಹನಮಂತ ಹೂಗಾರ, ಕನಕಸೇನೆ ಅಧ್ಯಕ್ಷ ಶಿವಾನಂದ ಕೆರಿಗೊಂಡ, ರಾಯಣ್ಣ ಯುವಸೇನೆ ಅಧ್ಯಕ್ಷ ಮಂಜು ಮಯೂರ, ಸಂತೋಷ ಕೆರಿಗೊಂಡ, ಕೆಂಚು ಪೂಜಾರಿ, ಗುರು ಅಗಸರ ಸೇರಿದಂತೆ ಅನೇಕರು ಇದ್ದರು.

Read More

ಸಿಂದಗಿ: ರಾಜ್ಯದ ವಿವಿಧ ತಾಲೂಕುಗಳಲ್ಲಿ ಈ ಬಾರಿ ಮಳೆಯ ಕೊರತೆ ಉಂಟಾಗಿ ಬರಗಾಲ ಛಾಯೆ ಮೂಡಿದೆ. ಅದರಲ್ಲಿ ಸಿಂದಗಿ ತಾಲೂಕು ಸಹ ಒಂದು ಎಂದು ತಾಲೂಕು ದಂಡಾಧಿಕಾರಿ ಪ್ರದೀಪಕುಮಾರ ಹಿರೇಮಠ ಹೇಳಿದರು.ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಗಣರಾಜ್ಯೋತ್ಸವ ಸಮಿತಿ ಹಮ್ಮಿಕೊಂಡ ತಾಲೂಕು ೭೫ನೇ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಂವಿಧಾನದ ಮೂರು ಅಂಗಗಳಾದ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಸಮರ್ಪಕವಾಗಿ ಕಾಯ್ ನಿರ್ವಹಿಸಿದಾಗ ಕ್ಷೇತ್ರವು ಬೆಳವಣಿಗೆಯಾಗುತ್ತೆ. ಅಟಲಜೀ ಜನಸ್ನೇಹಿ ಕೇಂದ್ರದ ೪೪ ಸೇವೆಗಳನ್ನು ಜನರಿಗೆ ತಲುಪಿಸುವಲ್ಲಿ ವಿಜಯಪುರ ಜಿಲ್ಲೆಯ ೧೩ ತಾಲೂಕುಗಳಲ್ಲಿ ಸಿಂದಗಿ ಪ್ರಥಮ ಸ್ಥಾನದಲ್ಲಿದೆ. ಹೋಬಳಿ ಮಟ್ಟದಲ್ಲಿ ೩ನೆಯ ಸ್ಥಾನದಲ್ಲಿದೆ. ತಾಲೂಕು ಕಂದಾಯ ನ್ಯಾಯಾಲಯದಲ್ಲಿ ೨ ಮತ್ತು ೫ವರ್ಷದ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಇನ್ನೂ ೬ ತಿಂಗಳಿಗಿಂತ ಹಿಂದಿನ ಯಾವ ಪ್ರಕರಣಗಳಿಲ್ಲ. ಒಂದು ಪೈಕಿ ಪಾಣಿ ಪ್ರಕರಣ ತಾಂತ್ರಿಕ ದೋಷದಿಂದ ಮಾತ್ರ ಬಾಕಿಯಿದೆ ಎಂದರು.ಇದೇ ಸಂದರ್ಭದಲ್ಲಿ ಸಿಪಿಐ ಡಿ.ಹುಲುಗಪ್ಪ, ನೌಕರರ ಸಂಘದ ತಾಲೂಕಾಧ್ಯಕ್ಷ ಅಶೋಕ ತೆಲ್ಲೂರ, ಮಾಜಿ ಸೈನಿಕರ ಸಂಘದ…

Read More

ಯಡ್ರಾಮಿ: ಪ್ರಭು ಶ್ರೀರಾಮನನ್ನು ಬಿಟ್ಟು ಭಾರತವಿಲ್ಲ , ಭಾರತಬಿಟ್ಟು ರಾಮನಿಲ್ಲ. ಶ್ರೀರಾಮನಿಲ್ಲದ ಭಾರತವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಮತ್ತು ಸ್ವದೇಶಿ ಚಿಂತಕ ಮಹಾದೇವಯ್ಯ ಕರದಳ್ಳಿ ಕಲಬುರಗಿ ಅವರು ಹೇಳಿದರು.ಯಡ್ರಾಮಿ ಸಗರಾದ್ರಿ ಸಾಂಸ್ಕೃತಿಕ ಸಂಗಮ ಟ್ರಸ್ಟ್ ಹಾಗೂ ಶ್ರೀ ಮುರುಘೇಂದ್ರ ಫೌಂಡೇಶನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಆನ್ಲೈನ್ ಹುಣ್ಣಿಮೆ ಕಾರ್ಯಕ್ರಮದ ಸಂಗಮ -56ರಲ್ಲಿ ರಾಷ್ಟ್ರಪುರುಷ ಶ್ರೀರಾಮ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.ಅಯೋಧ್ಯೆಯ ಪ್ರಭು ಶ್ರೀರಾಮ ತನ್ನ ಬದುಕಿನುದ್ದಕ್ಕೂ ಉದಾತ್ತ ಮೌಲ್ಯಗಳನ್ನು ಅನುಸರಿಸಿ ಆದರ್ಶ ಮೆರೆದಿದ್ದಾನೆ. ಆತನಲ್ಲಿನ ಸತ್ಯ, ನಿಷ್ಠೆ ಪ್ರಜಾಪರಿಪಾಲನೆ ಹಾಗೂ ಧರ್ಮ , ಇತ್ಯಾದಿ ಶ್ರೇಷ್ಠ ಗುಣಗಳೇ ರಾಮನನ್ನು ಮಹಾದೇವರನ್ನಾಗಿಸಿದವು. ಸಾವಿರಾರು ವರ್ಷಗಳ ಹಿಂದೆ ಬದುಕಿ ಹೋದ ಶ್ರೀರಾಮ ಇವತ್ತಿಗೂ ಕೋಟ್ಯಂತರ ಭಾರತೀಯರ ಮನದಲ್ಲಿ ನೆಲೆಸಿರುವುದು ಹುಡುಗಾಟದ ವಿಷಯವಲ್ಲ. ರಾಮನ ಆದರ್ಶ ಗುಣಗಳು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆದರೆ ಗಾಂಧೀಜಿಯವರ ರಾಮರಾಜ್ಯದ ಕನಸು ನನಸಾಗುವಲ್ಲಿ ಯಾವ ಅನುಮಾನಗಳಿಲ್ಲ ಎಂದರು.ಪ್ರಭು ಶ್ರೀರಾಮಚಂದ್ರನನ್ನು ಧಾರ್ಮಿಕ ನಾಯಕ ಎಂದು ನೋಡದೇ ಆದರ್ಶ ರಾಷ್ಟ್ರಪುರುಷ…

Read More

ಆಲಮಟ್ಟಿ: ಭಾರತೀಯ ಸಂವಿಧಾನ ಇದೊಂದು ಬೃಹತ್ ಸಂವಿಧಾನವಾಗಿದ್ದು, ಇದರ ಜಾರಿಗೆ ಮಹತ್ವದ ಕೊಡುಗೆ ನೀಡಿದವರು ಡಾ.ಬಿ.ಆರ್.ಅಂಬೇಡ್ಕರ್ ರವರು. ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ ಏಕತೆ, ಭಾತೃತ್ವ ನಮ್ಮ ಸಂವಿಧಾನದಲ್ಲಿ ಇರುವ ಐದು ಪ್ರಮುಖ ಮೌಲ್ಯಗಳಾಗಿವೆ ಎಂದು ಮುಖ್ಯೋಪಾಧ್ಯಾಯ ಎಸ್.ಆಯ್. ಗಿಡ್ಡಪ್ಪಗೋಳ ನುಡಿದರು.ಸ್ಥಳೀಯ ಮಂಜಪ್ಪ ಹರ್ಡೇಕರ ಪ್ರೌಢಶಾಲೆಯಲ್ಲಿ ಶುಕ್ರವಾರ ೭೫ ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಣ ನೆರವೇರಿಸಿ ಅವರು ಮಾತನಾಡಿದರು.ಪ್ರಾಚಾರ್ಯ ಪಿ.ಎ.ಹೇಮಗಿರಿಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಇದಕ್ಕೂ ಮುನ್ನ ವಿದ್ಯಾರ್ಥಿನಿ ರತ್ನಾ ಜಲ್ಲಿ ಸಂವಿಧಾನ ಕುರಿತು ಮಾತನಾಡಿದಳು.ಪ್ರಾಥಮಿಕ, ಪ್ರೌಢ, ಪದವಿ-ಪೂರ್ವ,ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.ಧ್ವಜವಂದನೆ ಕಾರ್ಯಕ್ರಮ ಕುಮಾರ ಮುಜಾಯಿಮಿಲ್ ನದಾಫ್, ದೈಹಿಕ ಶಿಕ್ಷಣ ಶಿಕ್ಷಕ ಜಿ.ಎಂ.ಹಿರೇಮಠ ಸಂಯೋಜಿಸಿದರು.ಎಂ.ಎಚ್.ಎಂ.ಡಿಗ್ರಿ ಕಾಲೇಜಿನ ಪ್ರಾಚಾರ್ಯ ಎಚ್.ಎನ್.ಕೆಲೂರ, ಕಾಲೇಜಿನ ಉಪನ್ಯಾಸಕ ಮಹಾಂತೇಶ ಸಜ್ಜನ, ಟಿ.ಬಿ.ಕರದಾನಿ, ಮಮತಾ ಕರೆಮುರಗಿ, ಸ್ಕೌಟ್ ಅಧಿಕಾರಿ ಎಂ.ಎಚ್.ಬಳಬಟ್ಟಿ, ಶ್ರೀಮತಿ:ಜಗದೇವಿ. ಕೆ,ಎಸ್.ಎಸ್.ಅಂಗಡಿ,ಮಹೇಶ ಗಾಳಪ್ಪಗೋಳ, ಮುಖ್ಯಶಿಕ್ಷಕಿ ಕೆ.ಎನ್.ಹರೇಮಠ, ರಿಯಾನಾ ಕಾಲೇಖಾನ, ಅಡುಗೆ ಮುಖ್ಯ ಶಿಕ್ಷಕಿ ಸುಮಿತ್ರಾ, ಲಕ್ಷಿಂಭಾಯಿ, ಮಮತಾ, ಕಮಾಲಾ ಲಮಾಣಿ, ಬಾನು, ಉಪಸ್ಥಿತರಿದ್ದರು,ಕು. ಕಾವೇರಿ ಅಕ್ಕೋಜಿ…

Read More