ಮುದ್ದೇಬಿಹಾಳ: ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಫೆ.೨ ರಂದು ವಿವಿಧ ಕಾಮಗಾರಿಗಳ ಉದ್ಘಾಟನೆ, ನಾಗರಿಕರಿಂದ ಅಭಿನಂದನಾ ಸಮಾರಂಭ ಹಾಗೂ ಕವಡಿಮಟ್ಟಿಯ ಸಂಗೊಳ್ಳಿ ರಾಯಣ್ಣ ಮೂರ್ತಿ ಅನಾವರಣಗೊಳಿಸಲು ತಾಲೂಕಿಗೆ ಆಗಮಿಸುತ್ತಿರುವ ಹಿನ್ನೆಲೆ ಹೆಚ್ಚುವರಿ ಎಸ್.ಪಿ ಶಂಕರ ಮಾರಿಹಾಳ ಪಟ್ಟಣದ ಎಂಜಿವ್ಹಿಸಿ ಕಾಲೇಜಿನ ಹೆಲಿಪ್ಯಾಡ, ಸಮಾರಂಭದ ಆವರಣವಾದ ತಹಶೀಲ್ದಾರ ಕಚೇರಿ, ತಾಲೂಕಿನ ಕವಡಿಮಟ್ಟಿ ಗ್ರಾಮದಲ್ಲಿ ಜರುಗುವ ಕಾರ್ಯಕ್ರಮಗಳ ಸ್ಥಳ ಪರಿಶೀಲಿಸಿದರು.
ಹೆಲಿಪ್ಯಾಡ್ ನಲ್ಲಿ ಧೂಳು ಹರಡದಂತೆ ಮುಂಜಾಗೃತಾ ಕ್ರಮಗಳನ್ನು ಪಾಲಿಸುವಂತೆ, ಹೆಲಿಪ್ಯಾಡ ನ ಡಾಂಬರೀಕರಣವನ್ನು ಮತ್ತು ಬಿಳಿ ಬಣ್ಣದ ಎಚ್ ಅಕ್ಷರಕ್ಕೆ ಬಣ್ಣ ಬಳೆಯುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು. ತಹಶೀಲ್ದಾರ ಕಚೇರಿಯ ಆವರಣದಲ್ಲಿ ನಡೆಯುವ ನಾಗರೀಕರಿಂದ ಅಭಿನಂದನಾ ಸಮಾರಂಭದ ವೇಳೆ ಪೊಲೀಸ್ ಬಂದೋಬಸ್ತ್ ಕುರಿತು ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ ಅವರೊಡನೆ ಚರ್ಚಿಸಿದರು. ಪೆಂಡಾಲ್ ನ ಮಾಲೀಕಗೆ ಸ್ಟೇಜ್ ಗಟ್ಟಿಯಾಗಿರುವಂತೆ, ಅಲ್ಲಲ್ಲಿ ಬ್ಯಾರಿಖೇಡ್ ಅಳವಡಿಸುವಂತೆ ಸೂಚಿಸಿದರು. ಪಿಎಸ್‌ಐ ಸಂಜೀವ ತಿಪರೆಡ್ಡಿ ಅವರಿಗೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳುವಂತೆ ಸೂಚಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

