ತಿಕೋಟಾ: ಜಗತ್ತಿನಲ್ಲಿಯೇ ಅತ್ಯಂತ ದೊಡ್ಡದಾದ ಸಂವಿಧಾನವನ್ನು ಹೊಂದಿರುವ ಭಾರತದ ಪ್ರಜಾಪ್ರಭುತ್ವವು ಇಡೀ ಜಗತ್ತಿನಲ್ಲಿಯೇ ಅತೀ ಶ್ರೇಷ್ಠವಾಗಿದೆ. ಈ ಗಣರಾಜ್ಯೋತ್ಸವ ಹಬ್ಬವು ದೇಶದ ಏಕತೆ ಮತ್ತು ಹೆಮ್ಮೆಯನ್ನು ಕಾಪಾಡಿಕೊಳ್ಳಲು ನಮಗೆಲ್ಲರಿಗೂ ಅವಕಾಶವನ್ನು ನೀಡುತ್ತದೆ. ಇದೇ ಮಂತ್ರವನ್ನು ನಾವೆಲ್ಲರೂ ಸಹ ಜಪಿಸುತ್ತಾ, ದೇಶದ ಒಳತಿಗಾಗಿ ದುಡಿಯಬೇಕು ಎಂದು ತಾಲ್ಲೂಕ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪುರ ಹೇಳಿದರು.
ಪಟ್ಟಣದ ತಾಲ್ಲೂಕ ಪಂಚಾಯತಿ ಕಾರ್ಯಾಲಯದಲ್ಲಿ ಜರುಗಿದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ, ತಾಪಂ ಯೋಜನಾಧಿಕಾರಿ ಆಯೇಷಾ ಸಾಲೋಟಗಿ, ಸಹಾಯಕ ನಿರ್ದೇಶಕಿ ಶೋಭಕ್ಕ ಶಿಳೀನ, ಸಹಾಯಕ ಲೆಕ್ಕಾಧಿಕಾರಿ ವಿ.ಎಸ್.ಪುಟ್ಟಿ, ತಾಂತ್ರಿಕ ಸಂಯೋಜಕ ಇದ್ದರು.
ವಾಡೆ ಮೈದಾನ:
ತಾಲ್ಲೂಕ ಆಡಳಿತ ವತಿಯಿಂದ ಪಟ್ಟಣದ ವಾಡೆ ಮೈದಾನದಲ್ಲಿ ತಹಶಿಲ್ದಾರ ಪ್ರಶಾಂತ ಚನಗೊಂಡ ಅವರಿಂದ ಧ್ವಜಾರೋಹಣ ನೆರವೇರಿತು. ಈ ಸಂದರ್ಭದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕೆಜಿಎಸ್ ಶಾಲೆ:
ಪಟ್ಟಣದ ಸರಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷ ಆರ್.ಎನ್.ಶೇಖ್ ದ್ವಜಾರೋಹಣ ನೆರವೇರಿಸಿದರು. ಕಂಪ್ಯೂಟರ್ ಕೋಣೆ, ನಲಿಕಲಿ ಕೋಣೆಯನ್ನು ತಹಶಿಲ್ದಾರರ ಪ್ರಶಾಂತ ಚನಗೊಂಡ ಉದ್ಘಾಟಿಸಿದರು. ಶಾಲೆಗೆ ₹ 20 ಸಾವಿರ ದೇಣಿಗೆ ನೀಡಿದ ಎಸ್.ಎಂ.ಪಾಟೀಲ, ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದ ಮುಖ್ಯೋಪಾಧ್ಯಾಯಿನಿ ವಿ.ಎಂ.ಸವನಳ್ಳಿ, ವಿ.ಎಸ್.ಪೂಜೇರಿ, ಸುರೇಶ ಜಾವರ ಅವರನ್ನು ಸನ್ಮಾನಿಸಲಾಯಿತು.
ಕನಮಡಿ:
ಸರ್ಕಾರಿ ಗಂಡು ಮಕ್ಕಳ ಶಾಲೆಯಲ್ಲಿ ಗಣರಾಜ್ಯೋತ್ಸವ ನೇರವೇರಿತು. ಮುಖ್ಯೋಪಾಧ್ಯಾಯ ಎಸ್.ಎನ್.ಕಲಾವಂತ, ಎಸ್ಡಿಎಂಸಿ ಅಧ್ಯಕ್ಷ ಸುಖದೇವ ಆಕಾಶಿ, ಉಪಾಧ್ಯಕ್ಷ, ಶಿವುಬಾಯಿ ಕುಂಬಾರ, ಸಿಬ್ಬಂದಿ ಎಸ್.ವಿ.ಕದಂ, ಆರ್.ವೈ.ಗೊಳಸಂಗಿ, ಎಸ್.ಐ.ಜಾಯಡರ್, ಎ.ಎಸ್.ಕಾಂಬಳೆ, ಗ್ರಾಮ ಪಂಚಾಯತಿ ಅಧ್ಯಕ್ಷ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

