ಮೋರಟಗಿ: ಸ್ವಾತಂತ್ರ‍್ಯದ ಕ್ರಾಂತಿಯ ಕಿಡಿ ಹಚ್ಚಿದ ಕರ್ನಾಟಕದ ಗಂಡೆದೆಯ ಹೋರಾಟಗಾರ, ಬ್ರಿಟಿಷರ ನಿದ್ದೆಗೆಡಿಸಿದ ಕ್ರಾಂತಿ ಪುರುಷ ರಾಯಣ್ಣರ ದೇಶಭಕ್ತಿ ಮಕ್ಕಳಿಗೆ ತಿಳಿಸಬೇಕು ಎಂದು ತಮ್ಮಣ್ಣಸಾಹು ಬೋನಾಳ ಹೇಳಿದರು.
ತಾಲೂಕಿನ ಮೋರಟಗಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣರ ವೃತ್ತದಲ್ಲಿ ಹಮ್ಮಿಕೊಂಡ ಸಂಗೋಳ್ಳಿ ರಾಯಣ್ಣರ ಪುಣ್ಯಸ್ಮರಣೆ ಹಾಗೂ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರೀತಿ ವಿಶ್ವಾಸಕ್ಕೆ ಇನ್ನೊಂದು ಹೆಸರೇ ರಾಯಣ್ಣ, ಅವರ ಧೈರ್ಯ, ಶೌರ್ಯ, ಮೆಚ್ಚುವಂತದ್ದು ಕಿತ್ತೂರರಾಣಿ ಚನ್ನಮ್ಮಳ ಬಲಗೈ ಬಂಟನಾಗಿ ಹೆತ್ತ ತಾಯಿಗಿಂತ ಹೆಚ್ಚು ಆರಾಧಿಸಿ ಅವಳ ಆಜ್ಞೆಯಂತೆ ಬ್ರಿಟಿಷರ ರುಂಡಗಳನ್ನು ಚಂಡಾಡಿದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟದ ಸೇನಾನಿ ಸಂಗೊಳ್ಳಿ ರಾಯಣ್ಣರ ಆದರ್ಶ ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.
ಈ ವೇಳೆ ಶಿವಾನಂದ ಕೆರಿಗೊಂಡ, ರಾವುತ್ರಾಯ ಪೂಜೆರಿ, ಶಿವಶರಣ ಕೆರಿಗೊಂಡ, ಭೀಮು ನಾಯಕ್, ನಿಂಗಣ್ಣ ಪೂಜಾರಿ,ಶಿವಾನಂದ ಕೆರಿಗೊಂಡ, ಹನಮಂತ ಹೂಗಾರ, ಕನಕಸೇನೆ ಅಧ್ಯಕ್ಷ ಶಿವಾನಂದ ಕೆರಿಗೊಂಡ, ರಾಯಣ್ಣ ಯುವಸೇನೆ ಅಧ್ಯಕ್ಷ ಮಂಜು ಮಯೂರ, ಸಂತೋಷ ಕೆರಿಗೊಂಡ, ಕೆಂಚು ಪೂಜಾರಿ, ಗುರು ಅಗಸರ ಸೇರಿದಂತೆ ಅನೇಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

