ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಾಡಿನ ಭಾಷಾ ಸಂವರ್ಧನೆ, ಕಲೆ, ಸಾಹಿತ್ಯ, ಸಂಗೀತ, ಜಾನಪದ ಮತ್ತು ನೃತ್ಯ ಕಲಾಪ್ರಕಾರಗಳನ್ನು ಉಳಿಸಿ ಬೆಳೆಸಲು ಶ್ರಮಿಸುತ್ತಿರುವ ನೋಂದಾಯಿತ ಸಂಘ-ಸಂಸ್ಥೆಗಳಿಗೆ ಹಾಗೂ ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಿವಿಧ ಯೋಜನೆಗಳಡಿ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
೨೦೨೬-೨೭ನೇ ಸಾಲಿನ ಸಾಮಾನ್ಯ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆಯಡಿ ಈ ಕೆಳಗಿನ ಸೌಲಭ್ಯಗಳಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ನೋಂದಾಯಿತ ಸಾಂಸ್ಕೃತಿಕ ಸಂಘ-ಸಂಸ್ಥೆಗಳಿಗೆ. ವಾದ್ಯ ಪರಿಕರ ನೀಡಲಾಗುವುದು. ಅರ್ಹ ಕಲಾವಿದರಿಗೆ ಧನಸಹಾಯ., ಚಿತ್ರಕಲೆ ಮತ್ತು ಶಿಲ್ಪ ಕಲಾಕೃತಿಗಳ ಪ್ರದರ್ಶನ ಆಯೋಜಿಸಲು ಸಹಾಯಧನ ನೀಡಲಾವುವುದು.
ಅರ್ಜಿ ಸಲ್ಲಿಕೆಗೆ ಆ.೨೦ ಕೊನೆಯ ದಿನವಾಗಿದೆ.ಆನ್‌ಲೈನ್ ಮೂಲಕ Sevಚಿsiಟಿಜhu.ಏಚಿಡಿಟಿಚಿಣಚಿಞಚಿ.
gov.iಟಿ ಪೋರ್ಟಲ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಸೇವಾಸಿಂಧು ಪೋರ್ಟಲ್ ಹಾಗೂ ಇಲಾಖೆಯ ಅಧಿಕೃತ ವೆಬ್‌ಸೈಟ್ ತಿತಿತಿ.ಏಚಿಟಿಟಿಚಿಜಚಿsiಡಿi.ಏಚಿಡಿಟಿಚಿಣಚಿಞಚಿ.gov.iಟಿ ನಲ್ಲಿ ನೀಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಬೆಳಿಗ್ಗೆ ೧೦:೦೦ ರಿಂದ ಸಂಜೆ ೬:೦೦ ರವರೆಗೆ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು: ಕೇಂದ್ರ ಕಚೇರಿ (ಬೆಂಗಳೂರು): ೦೮೦-೨೪೪೧೦೫೭೪ / ೦೮೦-೨೨೨೧೩೫೩೦ /೯೯೮೬೮೩೭೦೩೭ / ೦೮೦-೨೨೨೪೧೩೨೫ ವಿಜಯಪುರ ಜಿಲ್ಲಾ ಕಚೇರಿ (ಸಹಾಯಕ ನಿರ್ದೇಶಕರು): ೦೮೩೫೨-೨೫೧೨೬೧ ಅಥವಾ ವಿಜಯಪುರ ಜಿಲ್ಲೆಯ ಸೇವಾಸಿಂಧು ವ್ಯವಸ್ಥಾಪಕರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
