ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಪ್ರಮುಖ ಕೊಳವೆ ಮಾರ್ಗದಲ್ಲಿ ಏಕಾಏಕಿ ಸೋರಿಕೆ ಉಂಟಾಗಿರುವ ಹಿನ್ನೆಲೆಯಲ್ಲಿ, ನಗರದ ಹಲವು ಪ್ರದೇಶಗಳಲ್ಲಿ ಆಗಸ್ಟ್ ೩) ಮತ್ತು ೪ ರಂದು ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಕೋಲಾರ ಮೂಲ ಸ್ಥಾವರದಿಂದ ಜಲನಗರ ಪಂಪ್‌ಹೌಸ್‌ಗೆ ನೀರು ತಲುಪಿಸುವ ೯೬೫/೯೦೦ ಎಂ.ಎA. ವ್ಯಾಸದ ಮುಖ್ಯ ಏರು ಕೊಳವೆ ಮಾರ್ಗದ ಶುದ್ಧ ನೀರೆತ್ತುವ ಪಂಪ್‌ಹೌಸ್ ಹತ್ತಿರ ಹಾಗೂ ವಿವಿಧ ಸ್ಥಳಗಳಲ್ಲಿ ಆಗಸ್ಟ್ ೦೩ ರಂದು ಕೊಳವೆ ಮಾರ್ಗ ಹಾನಿ ಆಗಿದೆ.
ಈ ನೀರು ಸೋರಿಕೆ ತಡೆಯಲು ಜಲಮಂಡಳಿ ವತಿಯಿಂದ ತಕ್ಷಣವೇ ತುರ್ತು ದುರಸ್ತಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೋಲಾರ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ಪಡೆಯುವ ನಗರದ ಪ್ರದೇಶಗಳಿಗೆ ಆಗಸ್ಟ್ ೩ ಮತ್ತು ೪ ರಂದು ನೀರು ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಜಲಮಂಡಳಿಯೊಂದಿಗೆ ಸಹಕರಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
