ಆಲಮಟ್ಟಿ: ಭಾರತೀಯ ಸಂವಿಧಾನ ಇದೊಂದು ಬೃಹತ್ ಸಂವಿಧಾನವಾಗಿದ್ದು, ಇದರ ಜಾರಿಗೆ ಮಹತ್ವದ ಕೊಡುಗೆ ನೀಡಿದವರು ಡಾ.ಬಿ.ಆರ್.ಅಂಬೇಡ್ಕರ್ ರವರು. ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ ಏಕತೆ, ಭಾತೃತ್ವ ನಮ್ಮ ಸಂವಿಧಾನದಲ್ಲಿ ಇರುವ ಐದು ಪ್ರಮುಖ ಮೌಲ್ಯಗಳಾಗಿವೆ ಎಂದು ಮುಖ್ಯೋಪಾಧ್ಯಾಯ ಎಸ್.ಆಯ್. ಗಿಡ್ಡಪ್ಪಗೋಳ ನುಡಿದರು.
ಸ್ಥಳೀಯ ಮಂಜಪ್ಪ ಹರ್ಡೇಕರ ಪ್ರೌಢಶಾಲೆಯಲ್ಲಿ ಶುಕ್ರವಾರ ೭೫ ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಣ ನೆರವೇರಿಸಿ ಅವರು ಮಾತನಾಡಿದರು.
ಪ್ರಾಚಾರ್ಯ ಪಿ.ಎ.ಹೇಮಗಿರಿಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದಕ್ಕೂ ಮುನ್ನ ವಿದ್ಯಾರ್ಥಿನಿ ರತ್ನಾ ಜಲ್ಲಿ ಸಂವಿಧಾನ ಕುರಿತು ಮಾತನಾಡಿದಳು.
ಪ್ರಾಥಮಿಕ, ಪ್ರೌಢ, ಪದವಿ-ಪೂರ್ವ,ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಧ್ವಜವಂದನೆ ಕಾರ್ಯಕ್ರಮ ಕುಮಾರ ಮುಜಾಯಿಮಿಲ್ ನದಾಫ್, ದೈಹಿಕ ಶಿಕ್ಷಣ ಶಿಕ್ಷಕ ಜಿ.ಎಂ.ಹಿರೇಮಠ ಸಂಯೋಜಿಸಿದರು.
ಎಂ.ಎಚ್.ಎಂ.ಡಿಗ್ರಿ ಕಾಲೇಜಿನ ಪ್ರಾಚಾರ್ಯ ಎಚ್.ಎನ್.ಕೆಲೂರ, ಕಾಲೇಜಿನ ಉಪನ್ಯಾಸಕ ಮಹಾಂತೇಶ ಸಜ್ಜನ, ಟಿ.ಬಿ.ಕರದಾನಿ, ಮಮತಾ ಕರೆಮುರಗಿ, ಸ್ಕೌಟ್ ಅಧಿಕಾರಿ ಎಂ.ಎಚ್.ಬಳಬಟ್ಟಿ, ಶ್ರೀಮತಿ:ಜಗದೇವಿ. ಕೆ,ಎಸ್.ಎಸ್.ಅಂಗಡಿ,ಮಹೇಶ ಗಾಳಪ್ಪಗೋಳ, ಮುಖ್ಯಶಿಕ್ಷಕಿ ಕೆ.ಎನ್.ಹರೇಮಠ, ರಿಯಾನಾ ಕಾಲೇಖಾನ, ಅಡುಗೆ ಮುಖ್ಯ ಶಿಕ್ಷಕಿ ಸುಮಿತ್ರಾ, ಲಕ್ಷಿಂಭಾಯಿ, ಮಮತಾ, ಕಮಾಲಾ ಲಮಾಣಿ, ಬಾನು, ಉಪಸ್ಥಿತರಿದ್ದರು,
ಕು. ಕಾವೇರಿ ಅಕ್ಕೋಜಿ ನಿರೂಪಿಸಿದರು, ಪಿ.ವಾಯ್,ಧನಶೆಟ್ಟಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

