Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಮೇ 01, 2026

ಮೂಢನಂಬಿಕೆಯಿಂದ ವೈಚಾರಿಕತೆಯತ್ತ ಕರೆದೊಯ್ದ ಬಸವಣ್ಣನವರು

ಶ್ರಮಯೇವ ಜಯತೆ..

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ನೀರಾವರಿ ಯೋಜನೆ ಜಾರಿಗೆ ಭೂಸ್ವಾಧೀನವೇ ಸವಾಲು
(ರಾಜ್ಯ ) ಜಿಲ್ಲೆ

ನೀರಾವರಿ ಯೋಜನೆ ಜಾರಿಗೆ ಭೂಸ್ವಾಧೀನವೇ ಸವಾಲು

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಆಲಮಟ್ಟಿ: ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಮೂರನೇ ಹಂತದ ಜಾರಿಯಿಂದ ೫.೨೦ ಲಕ್ಷ ಹೆಕ್ಟೇರ್ ಜಮೀನು ನೀರಾವರಿಗೊಳಪಡಲಿದೆ, ಆದರೆ ಅದನ್ನು ಜಾರಿಗೊಳಿಸಲು ಭೂಸ್ವಾಧೀನವೇ ಸವಾಲಾಗಿದೆ ಎಂದು ಕೆಬಿಜೆಎನ್ ಎಲ್ ನೂತನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಹಿರಿಯ ಐಎಎಸ್ ಅಧಿಕಾರಿ ಕೆ.ಪಿ. ಮೋಹನರಾಜ್ ಹೇಳಿದರು.
ಆಲಮಟ್ಟಿಗೆ ಪ್ರಥಮ ಬಾರಿಗೆ ಆಗಮಿಸಿದ ಅವರು ವಿವಿಧ ಉದ್ಯಾನಗಳಲ್ಲಿನ ಕಾಮಗಾರಿ ಪರಿಶೀಲಿಸಿ, ರಾಕ್ ಉದ್ಯಾನದಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಭೂಸ್ವಾಧೀನ ಪ್ರಕ್ರಿಯೆಯನ್ನು ಸುಲಭಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ, ಅವಾರ್ಡ್ ಹಂತದಲ್ಲಿರುವ ಜಮೀನಿಗೆ ಪರಿಹಾರ ಕೊಡಲು ಇರುವ ತಾಂತ್ರಿಕ ತೊಂದರೆ ಬಗೆಹರಿಸಲಾಗುವುದು ಎಂದರು. ಕಳೆದ ಮೂರು ದಿನಗಳಿಂದ ಆಲಮಟ್ಟಿಯಲ್ಲಿದ್ದು, ವಲಯವಾರು ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ್ದೇನೆ, ಯೋಜನೆ ಜಾರಿಗೆ ಉಂಟಾಗಿರುವ ತೊಡಕುಗಳನ್ನು ನಿವಾರಿಸಿ ಯಾವ ರೀತಿ ಜಾರಿಗೊಳಿಸಬೇಕು ಎಂದು ಒಂದು ಯೋಜನೆ ಹಾಗೂ ಕಾಲಮಿತಿ ಹಾಕಿಕೊಂಡು ಕಾರ್ಯೋನ್ಮುಖಗೊಳ್ಳಲಾಗುವುದು ಎಂದರು. 
ನಾರಾಯಣಪುರ ಭಾಗದ ಕಾಲುವೆಗಳಿಗೆ ಅಳವಡಿಸಿರುವ ಸ್ಕಡಾ ತಂತ್ರಜ್ಞಾನವನ್ನು ಆಲಮಟ್ಟಿ ಭಾಗದ ಕೆಲ ಕಾಲುವೆಯ ಯೋಜನೆಗಳಿಗೆ ಅಳವಡಿಸಲು ಉದ್ದೇಶಿಸಲಾಗಿದೆ, ಇದರಿಂದ ಕಾಲುವೆಯ ನೀರು ಹಿತಮಿತ ಬಳಕೆಗೆ ಅವಕಾಶ ಒದಗಲಿದೆ ಎಂದರು. 
ಕಾಲುವೆಗಳ ನಿರ್ವಹಣೆ:
ಈ ಬಾರಿ ಕಾಲುವೆಗೆ ನಿರ್ವಹಣೆಗಾಗಿ ಸಾಕಷ್ಟು ಕಾಲವಧಿಯಿದ್ದು, ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಸೂಚಿಸಲಾಗಿದೆ ಎಂದರು. ಯುಕೆಪಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಶೇ ೨೦ ರಷ್ಟು ಭೂಮಿ ಸವುಳು-ಜವುಳಿಗೆ ತುತ್ತಾಗಿದೆ, ಅದನ್ನು ನಿಯಂತ್ರಿಸಲು ಹಾಗೂ ಆ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಮಥಾಳ ಹನಿನೀರಾವರಿ ಯೋಜನೆಯ ಹಾಗೆ ಕೊಪ್ಪಳ ಭಾಗದಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ನೀರಾವರಿ ಯೋಜನೆಗೂ ಹನಿ ನೀರಾವರಿ ಪದ್ಧತಿ ಬಳಸಲು ಯೋಚಿಸಲಾಗಿದೆ. ಹನಿ ನೀರಾವರಿಯಿಂದ ನೀರಾವರಿ ಪ್ರದೇಶ ಹೆಚ್ಚಾಗಲಿದೆ ಎಂದರು.  
ಉದ್ಯಾನಗಳ ಅಭಿವೃದ್ಧಿ:
ಆಲಮಟ್ಟಿಯಲ್ಲಿರುವ ವಿವಿಧ ಉದ್ಯಾನಗಳನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಒದಗಿಸುವುದು ಪ್ರಥಮ ಆದ್ಯತೆ ಎಂದರು. ಶೌಚಾಲಯಗಳ ನಿರ್ಮಾಣಕ್ಕೆ, ಶುದ್ಧ ಕುಡಿಯುವ ನೀರು ಒದಗಿಸಲು ಆದ್ಯತೆ ನೀಡಲಾಗುವುದು, ಪಾರ್ಕಿಂಗ್ ಸಮಸ್ಯೆ ಬಗೆಹರಿಸಲಾಗುವುದು ಎಂದರು.
ಆಲಮಟ್ಟಿ-ಸೀತಿಮನಿ ಮಧ್ಯೆ ರೋಪ್ ವೇ ನಿರ್ಮಿಸುವ ಪ್ರಸ್ತಾಪ ಇದ್ದು, ಈ ಬಗ್ಗೆಯೂ ಪರಿಶೀಸಲಾಗುವುದು ಎಂದರು. 
ಈ ಸಂದರ್ಭದಲ್ಲಿ ಮುಖ್ಯ ಎಂಜಿನಿಯರ್ ಎಚ್.ಎನ್. ಶ್ರೀನಿವಾಸ, ಡಿ.ಬಸವರಾಜ, ಗೋವಿಂದ ರಾಠೋಡ, ಡಿಎಫ್ ಓ ರಾಜಣ್ಣ ನಾಗಶೆಟ್ಟಿ, ಆರ್.ಎಫ್.ಓ. ಮಹೇಶ ಪಾಟೀಲ ಮತ್ತೀತರರು ಇದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮೂಢನಂಬಿಕೆಯಿಂದ ವೈಚಾರಿಕತೆಯತ್ತ ಕರೆದೊಯ್ದ ಬಸವಣ್ಣನವರು

ಶ್ರಮಯೇವ ಜಯತೆ..

ಕೆಎಸ್ಒಯು ಜೊತೆ ಶೈಕ್ಷಣಿಕ ಒಪ್ಪಂದ :ಡಾ.ಅರುಣ್ ಕುಮಾರ್

ಕೃಷಿ ಮತ್ತು ಉದ್ಯಮಿ ವಲಯಕ್ಕೆ ಹೆಚ್ಚಿನ ಒತ್ತು :ಸಿಇಓ ರಿಷಿ ಆನಂದ್

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮೇ 01, 2026
    In ದಿನಪತ್ರಿಕೆ
  • ಮೂಢನಂಬಿಕೆಯಿಂದ ವೈಚಾರಿಕತೆಯತ್ತ ಕರೆದೊಯ್ದ ಬಸವಣ್ಣನವರು
    In (ರಾಜ್ಯ ) ಜಿಲ್ಲೆ
  • ಶ್ರಮಯೇವ ಜಯತೆ..
    In ವಿಶೇಷ ಲೇಖನ
  • ಕೆಎಸ್ಒಯು ಜೊತೆ ಶೈಕ್ಷಣಿಕ ಒಪ್ಪಂದ :ಡಾ.ಅರುಣ್ ಕುಮಾರ್
    In (ರಾಜ್ಯ ) ಜಿಲ್ಲೆ
  • ಕೃಷಿ ಮತ್ತು ಉದ್ಯಮಿ ವಲಯಕ್ಕೆ ಹೆಚ್ಚಿನ ಒತ್ತು :ಸಿಇಓ ರಿಷಿ ಆನಂದ್
    In (ರಾಜ್ಯ ) ಜಿಲ್ಲೆ
  • ವಿಜಯಪುರ ಜಿಲ್ಲಾ ಬಾಲಭವನದ ಬೇಸಿಗೆ ಶಿಬಿರದ ಸಮಾರೋಪ
    In (ರಾಜ್ಯ ) ಜಿಲ್ಲೆ
  • ಮಲೇರಿಯಾ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ
    In (ರಾಜ್ಯ ) ಜಿಲ್ಲೆ
  • ಮಲೇರಿಯಾ ಕೆಲವೊಮ್ಮೆ ಮಾರಕವಾಗಬಹುದು :ಕೋಳೆಕರ
    In (ರಾಜ್ಯ ) ಜಿಲ್ಲೆ
  • ಶಿಕ್ಷಕರ ಸಂಘಕ್ಕೆ ಮೇ ೧೦ಕ್ಕೆ ಚುನಾವಣೆ :ಅಂದೇ ಫಲಿತಾಂಶ
    In (ರಾಜ್ಯ ) ಜಿಲ್ಲೆ
  • ಪ್ರಸ್ತುತ ಸಮಾಜಕ್ಕೆ ಬಸವಣ್ಣನವರ ಆದರ್ಶಗಳು
    In ವಿಶೇಷ ಲೇಖನ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.