ಯಡ್ರಾಮಿ: ಪ್ರಭು ಶ್ರೀರಾಮನನ್ನು ಬಿಟ್ಟು ಭಾರತವಿಲ್ಲ , ಭಾರತಬಿಟ್ಟು ರಾಮನಿಲ್ಲ. ಶ್ರೀರಾಮನಿಲ್ಲದ ಭಾರತವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಮತ್ತು ಸ್ವದೇಶಿ ಚಿಂತಕ ಮಹಾದೇವಯ್ಯ ಕರದಳ್ಳಿ ಕಲಬುರಗಿ ಅವರು ಹೇಳಿದರು.
ಯಡ್ರಾಮಿ ಸಗರಾದ್ರಿ ಸಾಂಸ್ಕೃತಿಕ ಸಂಗಮ ಟ್ರಸ್ಟ್ ಹಾಗೂ ಶ್ರೀ ಮುರುಘೇಂದ್ರ ಫೌಂಡೇಶನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಆನ್ಲೈನ್ ಹುಣ್ಣಿಮೆ ಕಾರ್ಯಕ್ರಮದ ಸಂಗಮ -56ರಲ್ಲಿ ರಾಷ್ಟ್ರಪುರುಷ ಶ್ರೀರಾಮ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಅಯೋಧ್ಯೆಯ ಪ್ರಭು ಶ್ರೀರಾಮ ತನ್ನ ಬದುಕಿನುದ್ದಕ್ಕೂ ಉದಾತ್ತ ಮೌಲ್ಯಗಳನ್ನು ಅನುಸರಿಸಿ ಆದರ್ಶ ಮೆರೆದಿದ್ದಾನೆ. ಆತನಲ್ಲಿನ ಸತ್ಯ, ನಿಷ್ಠೆ ಪ್ರಜಾಪರಿಪಾಲನೆ ಹಾಗೂ ಧರ್ಮ , ಇತ್ಯಾದಿ ಶ್ರೇಷ್ಠ ಗುಣಗಳೇ ರಾಮನನ್ನು ಮಹಾದೇವರನ್ನಾಗಿಸಿದವು. ಸಾವಿರಾರು ವರ್ಷಗಳ ಹಿಂದೆ ಬದುಕಿ ಹೋದ ಶ್ರೀರಾಮ ಇವತ್ತಿಗೂ ಕೋಟ್ಯಂತರ ಭಾರತೀಯರ ಮನದಲ್ಲಿ ನೆಲೆಸಿರುವುದು ಹುಡುಗಾಟದ ವಿಷಯವಲ್ಲ. ರಾಮನ ಆದರ್ಶ ಗುಣಗಳು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆದರೆ ಗಾಂಧೀಜಿಯವರ ರಾಮರಾಜ್ಯದ ಕನಸು ನನಸಾಗುವಲ್ಲಿ ಯಾವ ಅನುಮಾನಗಳಿಲ್ಲ ಎಂದರು.
ಪ್ರಭು ಶ್ರೀರಾಮಚಂದ್ರನನ್ನು ಧಾರ್ಮಿಕ ನಾಯಕ ಎಂದು ನೋಡದೇ ಆದರ್ಶ ರಾಷ್ಟ್ರಪುರುಷ ಎಂದು ತಿಳಿದರೆ ರಾಮ ಎಲ್ಲರಿಗೂ ನಿಲುಕುವ ವ್ಯಕ್ತಿಯಾಗಿಯೇ ಕಾಣುತ್ತಾನೆಂದು ಎಂದು ತಿಳಿಸಿದರು.
ಆನ್ಲೈನ್ ಕಾರ್ಯಕ್ರಮವನ್ನು ನುಡಿಯ ಮೂಲಕ ಮಾದನಹಿಪ್ಪರಗಿ ವಿರಕ್ತಮಠದ ಪೂಜ್ಯ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳು ಉದ್ಘಾಟಿಸಿದರು. ಯಡ್ರಾಮಿ ವಿರಕ್ತಮಠದ ಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಸಂಶೋಧಕ ಸಾಹಿತಿಗಳಾದ ಡಿ.ಎನ್.ಅಕ್ಕಿ, ನಿಂಗನಗೌಡ ಪೊಲೀಸ್ ಪಾಟೀಲ, ಪ್ರಕಾಶ ಸಾಹು ಬೆಲ್ಲದ, ಬಿ.ಬಿ.ವಾರದ, ಡಾ. ಭಾಗ್ವವತಿ ಕೆಂಭಾವಿ, ಡಾ. ಮಾಳಪ್ಪ ಪಾಟೀಲ, ಪ್ರಿಯಾಂಕಾ, ಆರ್.ಜಿ.ಪುರಾಣಿಕ, ಗೊಲ್ಲಾಳಪ್ಪಗೌಡ ಬಿರಾದಾರ, ರುದ್ರಗೌಡ ಪಾಟೀಲ, ವಿಜಯೇಂದ್ರ ಕುಲಕರ್ಣಿ, ಸಿದ್ರಾಮಪ್ಪ ನವಲಗುಂದ, ಸುಧೀಂದ್ರ ಕುಲಕರ್ಣಿ ಬೆಂಗಳೂರು, ಬಸವರಾಜ ಅರಕೇರಿ, ಈರಣ್ಣಗೌಡ ಬಿರಾದಾರ, ಪ್ರಶಾಂತ ಕುನ್ನೂರ, ಸಂಗಮದ ಸದಸ್ಯರಿದ್ದರು.
ಬಸವರಾಜ ಬೋರಗಿ ಪ್ರಾರ್ಥಿಸಿದರು, ಮಲ್ಲಿಕಾರ್ಜುನ ಯಾದಗಿರಿ ಸ್ವಾಗತಿಸಿದರು, ಡಾ. ಸಂತೋಷ ನವಲಗುಂದ ನಿರೂಪಿಸಿ, ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

