Author: editor.udayarashmi@gmail.com

ದೇವರಹಿಪ್ಪರಗಿ: ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯದ ವೀರಗಾಥೆಗಳು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿವೆ ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಸೋಮವಾರ ಜಯಂತಿ ಅಂಗವಾಗಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.ಶಿವಾಜಿ ಮಹಾರಾಜರು ಮರಾಠಾ ಸಾಮ್ರಾಜ್ಯದ ಸ್ಥಾಪಕರಾಗಿ ಜಾತ್ಯಾತೀತ ಆಡಳಿತ ನಡೆಸುವುದರ ಜೊತೆಗೆ ತಮ್ಮ ಅಪ್ರತಿಮ ಶೌರ್ಯ, ನೈಪುಣ್ಯತೆ, ಯುದ್ಧತಂತ್ರಗಳ ಮೂಲಕ ಭಾರತೀಯ ಇತಿಹಾಸದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದಾರೆ ಎಂದರು.ಗ್ರೇಡ್ ೨ ತಹಶೀಲ್ದಾರ ಶ್ಯಾಮ ರಾಠೋಡ, ಉಪತಹಶೀಲ್ದಾರ್ ಆರ್.ಪಿ.ಜೋಷಿ, ಶಿರಸ್ತೇದಾರ ಸುರೇಶ ಮ್ಯಾಗೇರಿ, ಸಾಯಿಕುಮಾರ ಬಿಸನಾಳ(ಕಡ್ಲೇವಾಡ ಪಿಸಿಎಚ್), ಸಂತೋಷ ತಳವಾರ, ನಾಗೇಂದ್ರ ಸಾವಜಿ, ಮಲ್ಲಪ್ಪ ಭತಗುಣಕಿ(ಅಗಸರ), ಈಶ್ವರ ಮಾಳದಕರ, ಅಂಕುಶ ಕುಳಗೇರಿ ಸೇರಿದಂತೆ ಸಿಬ್ಬಂದಿ ಇದ್ದರು.

Read More

ಹಲವೆಡೆ ಅರ್ಧಕ್ಕೆ ನಿಂತ ಜೆಜೆಎಂ ಕಾಮಗಾರಿ | ಅಗೆದ ಸಿಸಿ ರಸ್ತೆ | ಸಂಚಾರಕ್ಕೆ ಸಂಚಕಾರ *-ಜಿ ಎನ್ ಬೀರಗೊಂಡ (ಮುತ್ತು)* ಢವಳಗಿ: ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಹಿನ್ನೆಲಿಯಲ್ಲಿ ಕೇಂದ್ರ ಸರಕಾರವು ಜಲ ಜೀವನ ಮಷಿನ್ ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದಿದ್ದು, ಡವಳಾರ ಗ್ರಾಮ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಳ್ಳದೆ ಗ್ರಾಮಸ್ಥರ ಸುಗಮ ಸಂಚಾರಕ್ಕೆ ತೊಂದರೆಯಾಗಿ ಪರಿಣಮಿಸಿದೆ. ಈ ಯೋಜನೆಗಾಗಿ ಸರಕಾರ ಕೋಟಿ ಕೋಟಿ ಹಣ ವೆಚ್ಚಮಾಡಿದೆ. ಆದರೂ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಹೆಚ್ಚತ್ತಲೇ ಇದೆ. ಇದಕ್ಕೆ ಕಾರಣ ಎರಡು ವರ್ಷ ಕಳೆದರೂ ಜೆಜೆಎಂ ಕಾಮಗಾರಿಯು ಇಲ್ಲಿಯವರೆಗೂ ಗ್ರಾಮದಲ್ಲಿ ಸಂಪೂರ್ಣವಾಗಿಲ್ಲ. ಮತ್ತು ಆದ ಅಪೂರ್ಣ ಕಾಮಗಾರಿಯೂ ಸಂಪೂರ್ಣ ಕಳಪೆಮಟ್ಟದ್ದಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.ತಾಲೂಕಿನ ಬಹುತೇಕ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಪೂರ್ಣಗೊಂಡಿಲ್ಲ. ಮಾಡಿದ ಕಾಮಗಾರಿಗೆ ಬಳಸಿದ ಸಲಕರಣೆಗಳು ಗುಣಮಟ್ಟವನ್ನು ಕಳೆದುಕೊಂಡಿದೆ. ಅಧಿಕಾರಿಗಳ ಸಹಕಾರದಿಂದ ಗುತ್ತಿಗೆದಾರರು ಅತ್ಯಂತ ಕಳಪೆ ಮಟ್ಟದಲ್ಲಿ ಕಾಮಗಾರಿ ಮಾಡಿದ್ದಾರೆ, ಇದರಿಂದಾಗಿ…

Read More

ನಾದ ಬಿಕೆ: ಲಕ್ಷ್ಮೀದೇವಿ ದೇಗುಲ ಮಹಾದ್ವಾರ ಉದ್ಘಾಟಿಸಿದ ಶಾಸಕ ಯಶವಂತ್ರಾಯಗೌಡ ಅಭಿಮತ ಇಂಡಿ: ಯುವಕರು ಸಂಸ್ಕಾರ,ಸಂಸ್ಕೃತಿ ಅಳವಡಿಸಿಕೊಂಡರೆ ಜೀವನ ಸ್ವಾರ್ಥಕವಾಗುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.ತಾಲೂಕಿನ ನಾದ ಬಿಕೆ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ದೇವಿ ದೇವಸ್ಥಾನದ ಮಹಾದ್ವಾರ ಉದ್ಘಾಟಿಸಿ ಮಾತನಾಡುತ್ತಿದ್ದರು.ಯುವಕನಿಗೆ ತನ್ನತನದಿಂದ ಬಿಡುಗಡೆ ಮಾಡುವುದು ಅವನಲ್ಲಿರುವ ಕಲೆ. ಜೀವನವನ್ನು ಯಜ್ಞದಂತೆ ನಡೆಸಬೇಕು. ನಾವು ಎಲ್ಲಿ ಎಲ್ಲಿರುತ್ತೇವೆ ಎನ್ನುವದು ಮುಖ್ಯವಲ್ಲ. ಯುವಕರು ನಮ್ಮ ಸಂಸ್ಕೃತಿಯನ್ನು ಹೇಗೆ ಆಚರಿಸುತ್ತೇವೆ ಎನ್ನುವದು ಮುಖ್ಯ.ಯುವಕರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಗ್ಗಟ್ಟಾಗಿ ಪಾಲ್ಗೊಳ್ಳಲು ಕೇಳಿಕೊಂಡರು. ಮತ್ತು ಗ್ರಾಮದಲ್ಲಿ ಇರುವ ಪಿಕೆಪಿಎಸ್ ಉತ್ತಮವಾಗಿ ನಡೆಸಿಕೊಂಡು ಹೋಗಲು ಸಲಹೆ ನೀಡಿದರು.ಗೋಳಸಾರದ ಅಭಿನವ ಪುಂಡಲಿಂಗ ಶ್ರೀಗಳು ಮಹಾಧ್ವಾರ ಉದ್ಘಾಟಿಸಿದರು.ಸಾಲೋಟಗಿಯ ಶಿವಯೋಗಪ್ಪ ಜೋತಗೊಂಡ, ಮಲ್ಲನಗೌಡ ಬಿರಾದಾರ, ಆಲಮೇಲದ ಉಪನ್ಯಾಸಕ ಶಿವಾನಂದ ಉಪ್ಪಾರ, ಬಸವರಾಜ ಅವಧಿ, ಮಾತನಾಡಿದರು.ವೇದಮೂರ್ತಿ ಚನ್ನಬಸವ ಶ್ರೀಗಳು, ಲಕ್ಷ್ಮೀ ದೇವಸ್ಥಾನ ಸಮಿತಿ ಅಧ್ಯಕ್ಷ ಶ್ರೀಶೈಲ ಅಳ್ಳಗಿ, ಉಪಾದ್ಯಕ್ಷ ಗಂಗಪ್ಪ ದ್ಯಾಮಗೊಂಡ, ಶಿವಗೊಂಡಪ್ಪ ಪಾಟೀಲ, ಶರಣಪ್ಪ ಮೂಲಿ, ಭೀಮರಾಯ ಪೂಜಾರಿ, ವಿಜಯಕುಮಾರ ಮಠಪತಿ, ಬಾಪುರಾಯ…

Read More

ಚಿಮ್ಮಡ: ವಿದ್ಯುತ್ ತಂತಿಯಿಂದ ಹೊತ್ತಿದ ಕಿಡಿಗೆ ರೈತರೊಬ್ಬರ ಜಮೀನಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಲಕ್ಷಾಂತರ ರೂ.ಗಳ ಸ್ವತ್ತು ಹಾನಿಯಾದ ಘಟಣೆ ಚಿಮ್ಮಡ ಗ್ರಾಮದಲ್ಲಿ ಶನಿವಾರ ಸಂಭವಿಸಿದೆ.ಗ್ರಾಮದ ಬನಹಟ್ಟಿ ಕೆರೆಗೆ ಹೊಂದಿಕೊಂಡಿರುವ ಪಿಕೆಪಿಎಸ್ ಮಾಜಿ ಅಧ್ಯಕ್ಷ ಬೀರಪ್ಪ ಗಡದಿಯವರ ಹೊಲದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಸುಮಾರು ಎರಡು ಎಕರೆಯಷ್ಟು ಕಬ್ಬಿನಗದ್ದೆ ಸುಟ್ಟು ಕರಕಲಾಗಿದೆ. ಅಲ್ಲದೇ ಸುಮಾರು ಒಂದು ಲಕ್ಷ ಮೌಲ್ಯದ ಹನಿ ನೀರಾವರಿಗೆ ಬಳಸಲಾಗುವ ಸಾಮಗ್ರಿಗಳು ಸುಟ್ಟು ಹಾಳಾಗಿದ್ದು ಒಟ್ಟು ಸುಮಾರು ಎರಡುವರೆ ಲಕ್ಷ ಮೌಲ್ಯದ ಬೆಳೆ ಹಾಗೂ ಸಾಮಗ್ರಿಗಳು ಹಾಳಾಗಿವೆ ಎಂದು ಅಂದಾಜಿಸಲಾಗಿದೆ.ಹೆಸ್ಕಾಂ, ಹಾಗೂ ಕಂದಾಯ ಇಲಾಖೆಗೆ ಈ ಕುರಿತು ಮಾಹಿತಿ ನೀಡಲಾಗಿದ್ದು ಗ್ರಾಮ ಆಡಳಿತ ಅಧಿಕಾರಿ ಮಂಜುನಾಥ ನೀಲನ್ನವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Read More

ವಿಜಯಪುರ: ರಾಯಚೂರಿನ ಬೆಳಕು ಸಾಹಿತ್ಯ, ಶೈಕ್ಷಣಿಕ, ಸಾಂಸ್ಕೃತಿಕ ಟ್ರಸ್ಟ್ (ರಿ) ವತಿಯಿಂದ ಕೊಡುವ ಪ್ರಸಕ್ತ ಸಾಲಿನ “ರಾಷ್ಟ್ರಮಟ್ಟದ ಶಿಕ್ಷಣ ರತ್ನ” ಪ್ರಶಸ್ತಿಯನ್ನು ವಿಜಯಪುರದ ಪ್ರೊ. ಸಿದ್ದು ಸಾವಳಸಂಗ ಉಪನ್ಯಾಸಕರಿಗೆ ರವಿವಾರ ಫೆಬ್ರುವರಿ 18 ರಂದು ರಾಯಚೂರಿನ ಪಂ. ಸಿದ್ದರಾಮ ಜಂಬಲದಿನ್ನಿ ರಂಗಮಂದಿರದ “ಅಂತರ್ ರಾಜ್ಯ ಸಮ್ಮೇಳನ” ದಲ್ಲಿ ಸಂಸ್ಥಾಪಕ ಅಧ್ಯಕ್ಷ ಅಣ್ಣಪ್ಪ ಮೇಟಿಗೌಡರ ಹಾಗೂ ಸಮ್ಮೇಳನದ ಅಧ್ಯಕ್ಷ ಡಾ. ದೇವೇಂದ್ರಮ್ಮ ಇವರು ಪ್ರದಾನ ಮಾಡಿದರು. ಬಾಲಿಕೆಯರಸರಕಾರಿ ಪದವಿ ಪೂರ್ವ ಕಾಲೇಜು, ವಿಜಯಪುರದಲ್ಲಿ ಹಿರಿಯ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಸದರಿಯವರು ಶಿಕ್ಷಣಕ್ಕಾಗಿ ಸಲ್ಲಿಸಿದ ಅಮೋಘ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು.

Read More

ವಿಜಯಪುರ: ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ನಮ್ಮ ಕಾಂಗ್ರೆಸ್ ಸರಕಾರ ಘೋಷಿಸಿದ್ದು, ಅದರಂತೆ ವಿಜಯಪುರ ಜಿ. ಪಂ. ದಲ್ಲಿ ಸಚಿವ ಎಂ. ಬಿ. ಪಾಟೀಲ ಅವರು ಬಸವಣ್ಣನವರ ಭಾವಚಿತ್ರವನ್ನು ಶನಿವಾರ ಅನಾವರಣ ಮಾಡಿದರು.ಈ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸಚಿವ ಎಂ. ಬಿ. ಪಾಟೀಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಹಿರಿಯರಾದ ಅಬ್ದುಲ್ ಹಮೀದ್ ಮುಶ್ರಿಫ್, ಸಂಗಮೇಶ ಬಬಲೇಶ್ವರ, ಸಿದ್ದು ಗೌಡನವರ, ವಸಂತ ಹೊನಮೋಡೆ, ಸುರೇಶ ಘೋಣಸಗಿ, ಚಾಂದಸಾಬ ಗಡಗಲಾವ, ಸಂತೋಷ ಬಾಲಗಾಂವಿ, ನಿಂಗಪ್ಪ ಸಂಗಾಪುರ, ಜಮಖಂಡಿ, ವರ್ಷಾ ಭೋವಿ ಮುಂತಾದವರು ಉಪಸ್ಥಿತರಿದ್ದರು.

Read More

ನಿಡಗುಂದಿ: ಯಾವ ಬೆಳೆಗೆ ಎಷ್ಟು ನೀರು ಬೇಕೋ ಅಷ್ಟನ್ನು ಮಾತ್ರ ಉಪಯೋಗಿಸಿ, ನೀರು ಪೋಲಾಗದಂತೆ ಹಾಗೂ ಅತಿ ನೀರಿನ ಬಳಕೆಯಿಂದ ಮಣ್ಣು ಸವಳು-ಜವಳಾಗಿ ಬಂಜರಾಗುವುದನ್ನು ತಡೆಗಟ್ಟುವುದು ಅಗತ್ಯ ಎಂದು ಧಾರವಾಡದ ವಾಲ್ಮಿ ನಿರ್ದೇಶಕ ಪ್ರೊ ಬಿ.ವೈ. ಬಂಡಿವಡ್ಡರ ಹೇಳಿದರು.ತಾಲ್ಲೂಕಿನ ಯಲಗೂರ ಗ್ರಾಮದಲ್ಲಿ ಈಚೆಗೆ ನಡೆದ ಆಲಮಟ್ಟಿ ಎಡದಂಡೆ ಕಾಲುವೆಯ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಬರುವ ನೀರು ಬಳಕೆದಾರರ ಸಹಕಾರ ಸಂಘಗಳ ಪದಾಧಿಕಾರಿಗಳಿಗೆ ಹಾಗೂ ರೈತರಿಗೆ ಏರ್ಪಡಿಸಿದ್ದ ಒಂದು ದಿನದ ಪುನಶ್ಚೇತನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಆಲಮಟ್ಟಿ ಎಡದಂಡೆ ಕಾಲುವೆಯಡಿ ಬರುವ 40 ವಿತರಣಾ ಕಾಲುವೆಯ ರೈತರಿಗೆ ಧಾರವಾಡದ ವಾಲ್ಮಿ ವತಿಯಿಂದ ಇನ್ನು ಮುಂದೆ ನಿರಂತರವಾಗಿ ತರಬೇತಿ ಶಿಬಿರಗಳನ್ನು ಆಯೋಜಿಸಲು ನಿರ್ಧರಿಸಲಾಗಿದ್ದು, ರೈತರು ಈ ಶಿಬಿರಗಳ ಲಾಭ ಪಡೆಯಬೇಕು, ತಮ್ಮ ಜಮೀನು ಸವುಳು-ಜವಳಾಗದಂತೆ ತಡೆಗಟ್ಟಬೇಕು ಎಂದರು. ಧಾರವಾಡ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ ವಿ.ಐ. ಬೆಣಗಿ ಅಚ್ಚುಕಟ್ಟು ಪ್ರದೇಶದಲ್ಲಿ ಮುಖ್ಯ ಬೆಳೆಗಳ ಸಂರಕ್ಷಣೆ ಹಾಗೂ ಉತ್ಪಾದಕತೆ ಹೆಚ್ಚಿಸುವ ವಿಧಾನಗಳ ಕುರಿತು ಮಾತನಾಡಿದರು.ವಾಲ್ಮಿಯ…

Read More

ಮುದ್ದೇಬಿಹಾಳ: ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸ ಬೇಕಾದರೆ ನಿರಂತರ ಅಧ್ಯಯನದ ಜೊತೆಗೆ ಆಸಕ್ತಿ ಇದ್ದಲ್ಲಿ ಅದು ಸಾಧನೆಯ ಗುರಿಮುಟ್ಟುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಎಸ್.ಆರ್.ವಿಭೂತಿ ಹೇಳಿದರು.ಪಟ್ಟಣದ ಇಂದಿರಾ ನಗರದಲ್ಲಿರುವ ಎಸ್‌ಎಸ್‌ಎಂ ಪ್ರೌಢ ಶಾಲೆಯಲ್ಲಿ ನಡೆದ ತಾಲೂಕಾ ಮಟ್ಟದ ಸಮಾಜ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಮಾಜವನ್ನು ಕಟ್ಟುವ ಜವಾಬ್ದಾರಿ ಸಮಾಜ ವಿಜ್ಞಾನ ಶಿಕ್ಷಕರ ಮೇಲೆ ಹೆಚ್ಚಿಗೆ ಇರುತ್ತದೆ. ಸಮಾಜದ ಒಳಿತಿಗಾಗಿಯೆ ಶಿಕ್ಷಕರ ಚಿಂತನೆ ಇರಬೇಕು ಎಂದರು.ನಿವೃತ್ತ ಪ್ರೌಢ ಶಾಲಾ ಮುಖ್ಯಗುರು ಎಸ್.ಎಸ್.ಗೌಡರ್ ಮಾತನಾಡಿದರು.ಸಂಪನ್ಮೂಲ ವ್ಯಕ್ತಿಗಳಾದ ಆರ್.ಜಿ.ಗುಣಕಿ ಮಾದರಿ ಪಾಠ ನೀಡಿ, ನೀಲನಕ್ಷೆಯ ಪ್ರಶ್ನೋತ್ತರದ ಮೇಲೆ ಚರ್ಚೆ ನಡೆಸಿದರು.ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರು ಎಸ್.ಜಿ.ಗೌಡರ್ ಸೇರಿದಂತೆ ತಾಲೂಕಿನ ವಿವಿಧ ಪ್ರೌಢ ಶಾಲೆಗಳ ಸಮಾಜ ವಿಜ್ಞಾನ ವಿಷಯ ಬೋಧಕ ಶಿಕ್ಷಕರು ಹಾಜರಿದ್ದರು. ಜ್ಞಾನ ಭಾರತಿ ಪ್ರೌಢ ಶಾಲೆಯ ಮುಖ್ಯ ಗುರು ರಾಮಚಂದ್ರ ಹೆಗಡೆ ಸ್ವಾಗತಿಸಿದರು. ಶಿಕ್ಷಕರುಗಳಾದ ಜೆ.ಡಿ.ಮುಲ್ಲಾ ಪ್ರಾಸ್ತವಿಕ ಮಾತುಗಳನ್ನಾಡಿದರು. ರವಿ ಚವ್ಹಾಣ್ ನಿರೂಪಿಸಿದರು. ಬಿ.ಎಸ್.ಶಾಂತಪ್ಪನವರ ವಂದಿಸಿದರು.

Read More

ಆಯ-ವ್ಯಯದಲ್ಲಿ ಬಸವನಬಾಗೇವಾಡಿಗೆ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ಘೋಷಣೆ – ಬಸವರಾಜ ನಂದಿಹಾಳ ಬಸವನಬಾಗೇವಾಡಿ: ೧೨ ನೇ ಶಮಾತನದಲ್ಲಿ ಕಾಯಕ, ದಾಸೋಹ, ಸಮಾನತೆ ಸಂದೇಶ ಸಾರಿದ ವಿಶ್ವಗುರು ಬಸವೇಶ್ವರ ಜನ್ಮಸ್ಥಳ ಬಸವನಬಾಗೇವಾಡಿಯ ಸಮಗ್ರ ಅಭಿವೃದ್ಧಿಗೆ ಸಿಎಂ ಸಿದ್ದರಾಮಯ್ಯನವರು ಶುಕ್ರವಾರ ಮಂಡಿಸಿದ ಬಜೆಟ್ನಲ್ಲಿ ಪ್ರತ್ಯೇಕ ಪ್ರಾಧಿಕಾರ ಘೋಷಣೆ ಮಾಡಿದ್ದು ಸಮಸ್ತ ಬಸವಾಭಿಮಾನಿಗಳಿಗೆ, ಪ್ರತ್ಯೇಕ ಪ್ರಾಧಿಕಾರಕ್ಕೆ ಹೋರಾಟ ನಡೆಸಿದ ವಿವಿಧ ಸಂಘಟನೆಗಳ ಪದಾಧಿಕಾರಿಗಳಿಗೆ ತುಂಬಾ ಹರ್ಷ ಉಂಟು ಮಾಡಿದೆ.ಈಗಾಗಲೇ ಸರ್ಕಾರ ಬಸವೇಶ್ವರರ ಕಾರ್ಯಕ್ಷೇತ್ರ ಬಸವ ಕಲ್ಯಾಣ, ಐಕ್ಯಕ್ಷೇತ್ರ ಕೂಡಲಸಂಗಮ ಸ್ಥಳಗಳ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಾಧಿಕಾರಗಳನ್ನು ರಚನೆ ಮಾಡುವ ಮೂಲಕ ಈಗಾಗಲೇ ಅಲ್ಲಿ ಅನೇಕ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಸರ್ಕಾರ ಮಾಡುತ್ತಿದೆ. ಅವರೆಡು ಕ್ಷೇತ್ರಗಳು ಈಗಾಗಲೇ ಅಭಿವೃದ್ಧಿ ಹೊಂದಿ ಜಗತ್ತಿನ ವಿವಿಧೆಡೆಗಳಿಂದ ಪ್ರವಾಸಿಗರು ಬಂದು ಹೋಗುವಂತಾಗಿದೆ. ಸರ್ಕಾರ ಬಸವೇಶ್ವರರ ಜನ್ಮಸ್ಥಳ ಬಸವನಬಾಗೇವಾಡಿಯನ್ನು ಬಹಳ ವರ್ಷಗಳ ಹಿಂದೆ ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡಿ ಈಗಾಗಲೇ ಅಭಿವೃದ್ಧಿ ಪಡಿಸಬೇಕಿತ್ತು. ಸಿಎಂ ಸಿದ್ದರಾಮಯ್ಯನವರು ಬಸವನಬಾಗೇವಾಡಿಗೆ ಒಂದು ಕಾರ್ಯಕ್ರಮಕ್ಕೆ ಬಂದ ಸಂದರ್ಭದಲ್ಲಿ ನಮ್ಮ…

Read More