ದೇವರಹಿಪ್ಪರಗಿ: ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯದ ವೀರಗಾಥೆಗಳು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿವೆ ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಸೋಮವಾರ ಜಯಂತಿ ಅಂಗವಾಗಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಶಿವಾಜಿ ಮಹಾರಾಜರು ಮರಾಠಾ ಸಾಮ್ರಾಜ್ಯದ ಸ್ಥಾಪಕರಾಗಿ ಜಾತ್ಯಾತೀತ ಆಡಳಿತ ನಡೆಸುವುದರ ಜೊತೆಗೆ ತಮ್ಮ ಅಪ್ರತಿಮ ಶೌರ್ಯ, ನೈಪುಣ್ಯತೆ, ಯುದ್ಧತಂತ್ರಗಳ ಮೂಲಕ ಭಾರತೀಯ ಇತಿಹಾಸದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದಾರೆ ಎಂದರು.
ಗ್ರೇಡ್ ೨ ತಹಶೀಲ್ದಾರ ಶ್ಯಾಮ ರಾಠೋಡ, ಉಪತಹಶೀಲ್ದಾರ್ ಆರ್.ಪಿ.ಜೋಷಿ, ಶಿರಸ್ತೇದಾರ ಸುರೇಶ ಮ್ಯಾಗೇರಿ, ಸಾಯಿಕುಮಾರ ಬಿಸನಾಳ(ಕಡ್ಲೇವಾಡ ಪಿಸಿಎಚ್), ಸಂತೋಷ ತಳವಾರ, ನಾಗೇಂದ್ರ ಸಾವಜಿ, ಮಲ್ಲಪ್ಪ ಭತಗುಣಕಿ(ಅಗಸರ), ಈಶ್ವರ ಮಾಳದಕರ, ಅಂಕುಶ ಕುಳಗೇರಿ ಸೇರಿದಂತೆ ಸಿಬ್ಬಂದಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

