ನಾದ ಬಿಕೆ: ಲಕ್ಷ್ಮೀದೇವಿ ದೇಗುಲ ಮಹಾದ್ವಾರ ಉದ್ಘಾಟಿಸಿದ ಶಾಸಕ ಯಶವಂತ್ರಾಯಗೌಡ ಅಭಿಮತ
ಇಂಡಿ: ಯುವಕರು ಸಂಸ್ಕಾರ,ಸಂಸ್ಕೃತಿ ಅಳವಡಿಸಿಕೊಂಡರೆ ಜೀವನ ಸ್ವಾರ್ಥಕವಾಗುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.
ತಾಲೂಕಿನ ನಾದ ಬಿಕೆ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ದೇವಿ ದೇವಸ್ಥಾನದ ಮಹಾದ್ವಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
ಯುವಕನಿಗೆ ತನ್ನತನದಿಂದ ಬಿಡುಗಡೆ ಮಾಡುವುದು ಅವನಲ್ಲಿರುವ ಕಲೆ. ಜೀವನವನ್ನು ಯಜ್ಞದಂತೆ ನಡೆಸಬೇಕು. ನಾವು ಎಲ್ಲಿ ಎಲ್ಲಿರುತ್ತೇವೆ ಎನ್ನುವದು ಮುಖ್ಯವಲ್ಲ. ಯುವಕರು ನಮ್ಮ ಸಂಸ್ಕೃತಿಯನ್ನು ಹೇಗೆ ಆಚರಿಸುತ್ತೇವೆ ಎನ್ನುವದು ಮುಖ್ಯ.
ಯುವಕರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಗ್ಗಟ್ಟಾಗಿ ಪಾಲ್ಗೊಳ್ಳಲು ಕೇಳಿಕೊಂಡರು. ಮತ್ತು ಗ್ರಾಮದಲ್ಲಿ ಇರುವ ಪಿಕೆಪಿಎಸ್ ಉತ್ತಮವಾಗಿ ನಡೆಸಿಕೊಂಡು ಹೋಗಲು ಸಲಹೆ ನೀಡಿದರು.
ಗೋಳಸಾರದ ಅಭಿನವ ಪುಂಡಲಿಂಗ ಶ್ರೀಗಳು ಮಹಾಧ್ವಾರ ಉದ್ಘಾಟಿಸಿದರು.
ಸಾಲೋಟಗಿಯ ಶಿವಯೋಗಪ್ಪ ಜೋತಗೊಂಡ, ಮಲ್ಲನಗೌಡ ಬಿರಾದಾರ, ಆಲಮೇಲದ ಉಪನ್ಯಾಸಕ ಶಿವಾನಂದ ಉಪ್ಪಾರ, ಬಸವರಾಜ ಅವಧಿ, ಮಾತನಾಡಿದರು.
ವೇದಮೂರ್ತಿ ಚನ್ನಬಸವ ಶ್ರೀಗಳು, ಲಕ್ಷ್ಮೀ ದೇವಸ್ಥಾನ ಸಮಿತಿ ಅಧ್ಯಕ್ಷ ಶ್ರೀಶೈಲ ಅಳ್ಳಗಿ, ಉಪಾದ್ಯಕ್ಷ ಗಂಗಪ್ಪ ದ್ಯಾಮಗೊಂಡ, ಶಿವಗೊಂಡಪ್ಪ ಪಾಟೀಲ, ಶರಣಪ್ಪ ಮೂಲಿ, ಭೀಮರಾಯ ಪೂಜಾರಿ, ವಿಜಯಕುಮಾರ ಮಠಪತಿ, ಬಾಪುರಾಯ ಕಿವಟೆ, ಸೋಮು ಮ್ಯಾಕೇರಿ, ಮಹಾಂತೇಶ ಕೋಳಿ, ಶರಬಯ್ಯ ಮಠಪತಿ, ಚಿಚ್ಚೊಲ ಮೂಲಿ, ಮತ್ತಿತರಿದ್ದರು.
ಶ್ರೀ ಲಕ್ಷ್ಮೀ ದೇವರ ಪಲ್ಲಕ್ಕಿ ಹಾಗೂ ನಾದ ಕೆಡಿ ಕನ್ನಲಿಂಗೇಶ್ವರ ಪಲ್ಲಕ್ಕೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣೆಗೆ ನಡೆಯಿತು. ಕುಂಭ ಹೊತ್ತ ಮಹಿಳೆಯರು ಪಾಲ್ಗೊಂಡಿದ್ದರು.

