ಚಿಮ್ಮಡ: ವಿದ್ಯುತ್ ತಂತಿಯಿಂದ ಹೊತ್ತಿದ ಕಿಡಿಗೆ ರೈತರೊಬ್ಬರ ಜಮೀನಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಲಕ್ಷಾಂತರ ರೂ.ಗಳ ಸ್ವತ್ತು ಹಾನಿಯಾದ ಘಟಣೆ ಚಿಮ್ಮಡ ಗ್ರಾಮದಲ್ಲಿ ಶನಿವಾರ ಸಂಭವಿಸಿದೆ.
ಗ್ರಾಮದ ಬನಹಟ್ಟಿ ಕೆರೆಗೆ ಹೊಂದಿಕೊಂಡಿರುವ ಪಿಕೆಪಿಎಸ್ ಮಾಜಿ ಅಧ್ಯಕ್ಷ ಬೀರಪ್ಪ ಗಡದಿಯವರ ಹೊಲದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಸುಮಾರು ಎರಡು ಎಕರೆಯಷ್ಟು ಕಬ್ಬಿನಗದ್ದೆ ಸುಟ್ಟು ಕರಕಲಾಗಿದೆ. ಅಲ್ಲದೇ ಸುಮಾರು ಒಂದು ಲಕ್ಷ ಮೌಲ್ಯದ ಹನಿ ನೀರಾವರಿಗೆ ಬಳಸಲಾಗುವ ಸಾಮಗ್ರಿಗಳು ಸುಟ್ಟು ಹಾಳಾಗಿದ್ದು ಒಟ್ಟು ಸುಮಾರು ಎರಡುವರೆ ಲಕ್ಷ ಮೌಲ್ಯದ ಬೆಳೆ ಹಾಗೂ ಸಾಮಗ್ರಿಗಳು ಹಾಳಾಗಿವೆ ಎಂದು ಅಂದಾಜಿಸಲಾಗಿದೆ.
ಹೆಸ್ಕಾಂ, ಹಾಗೂ ಕಂದಾಯ ಇಲಾಖೆಗೆ ಈ ಕುರಿತು ಮಾಹಿತಿ ನೀಡಲಾಗಿದ್ದು ಗ್ರಾಮ ಆಡಳಿತ ಅಧಿಕಾರಿ ಮಂಜುನಾಥ ನೀಲನ್ನವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

