ನಿಡಗುಂದಿ: ಯಾವ ಬೆಳೆಗೆ ಎಷ್ಟು ನೀರು ಬೇಕೋ ಅಷ್ಟನ್ನು ಮಾತ್ರ ಉಪಯೋಗಿಸಿ, ನೀರು ಪೋಲಾಗದಂತೆ ಹಾಗೂ ಅತಿ ನೀರಿನ ಬಳಕೆಯಿಂದ ಮಣ್ಣು ಸವಳು-ಜವಳಾಗಿ ಬಂಜರಾಗುವುದನ್ನು ತಡೆಗಟ್ಟುವುದು ಅಗತ್ಯ ಎಂದು ಧಾರವಾಡದ ವಾಲ್ಮಿ ನಿರ್ದೇಶಕ ಪ್ರೊ ಬಿ.ವೈ. ಬಂಡಿವಡ್ಡರ ಹೇಳಿದರು.
ತಾಲ್ಲೂಕಿನ ಯಲಗೂರ ಗ್ರಾಮದಲ್ಲಿ ಈಚೆಗೆ ನಡೆದ ಆಲಮಟ್ಟಿ ಎಡದಂಡೆ ಕಾಲುವೆಯ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಬರುವ ನೀರು ಬಳಕೆದಾರರ ಸಹಕಾರ ಸಂಘಗಳ ಪದಾಧಿಕಾರಿಗಳಿಗೆ ಹಾಗೂ ರೈತರಿಗೆ ಏರ್ಪಡಿಸಿದ್ದ ಒಂದು ದಿನದ ಪುನಶ್ಚೇತನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಲಮಟ್ಟಿ ಎಡದಂಡೆ ಕಾಲುವೆಯಡಿ ಬರುವ 40 ವಿತರಣಾ ಕಾಲುವೆಯ ರೈತರಿಗೆ ಧಾರವಾಡದ ವಾಲ್ಮಿ ವತಿಯಿಂದ ಇನ್ನು ಮುಂದೆ ನಿರಂತರವಾಗಿ ತರಬೇತಿ ಶಿಬಿರಗಳನ್ನು ಆಯೋಜಿಸಲು ನಿರ್ಧರಿಸಲಾಗಿದ್ದು, ರೈತರು ಈ ಶಿಬಿರಗಳ ಲಾಭ ಪಡೆಯಬೇಕು, ತಮ್ಮ ಜಮೀನು ಸವುಳು-ಜವಳಾಗದಂತೆ ತಡೆಗಟ್ಟಬೇಕು ಎಂದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ ವಿ.ಐ. ಬೆಣಗಿ ಅಚ್ಚುಕಟ್ಟು ಪ್ರದೇಶದಲ್ಲಿ ಮುಖ್ಯ ಬೆಳೆಗಳ ಸಂರಕ್ಷಣೆ ಹಾಗೂ ಉತ್ಪಾದಕತೆ ಹೆಚ್ಚಿಸುವ ವಿಧಾನಗಳ ಕುರಿತು ಮಾತನಾಡಿದರು.
ವಾಲ್ಮಿಯ ಸಹಪ್ರಾಧ್ಯಾಪಕ ಪ್ರೊ ಬಿ.ಎಚ್. ಪೂಜಾರ, ನೀರು ಬಳಕೆದಾರರ ಸಂಘದ ಅಧ್ಯಕ್ಷ ಶ್ಯಾಮ ಪಾತರದ, ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಬಸವರಾಜ ಕುಂಬಾರ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರೇಣುಕಾ ಚಲವಾದಿ, ಭೀಮಣ್ಣ ಅವಟಗೇರ, ಫಕ್ಕಿರೇಶ ಅಂಗಡಿ, ಎಚ್.ಬಿ. ಸಂಗಮ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

