Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕಲಕೇರಿ: ಪೋಕ್ಸೋ ಕಾಯ್ದೆ, ಹೆಣ್ಣು ಭ್ರೂಣ ಹತ್ಯೆ ನಿಷೇಧ, ಬಾಲ್ಯ ವಿವಾಹ ನಿಷೇಧ, ಕೌಂಟಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ, ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ ಕಾಯ್ದೆಗಳ ಬಗ್ಗೆ ಮತ್ತು ಹೆಣ್ಣುಮಕ್ಕಳ ಯೋಜನೆಗಳ ಬಗ್ಗೆ ಉಪನ್ಯಾಸ ನೀಡಿ ಬಾಲ್ಯ ವಿವಾಹ ಮತ್ತು ಹೆಣ್ಣು ಬ್ರೂಣ ಹತೈ ಸಮಾಜಕ್ಕೆ ಅಪಾಯಕಾರಿ ಸಂಪೂರ್ಣ ಹೋಗಲಾಡಿಸಲು ಎಲ್ಲರೂ ಪಣ ತೊಡಲು ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಸ್.ಎನ್.ಕೋರವಾರ ಕರೆ ನೀಡಿದ್ದಾರೆ.ಶಿಶು ಅಭಿವೃದ್ಧಿ ಯೋಜನೆ ಸಿಂದಗಿ ವ್ಯಾಪ್ತಿಯಲ್ಲಿ ಬರುವ ಕಲಕೇರಿಯಲ್ಲಿ ಹೆಣ್ಣುಮಕ್ಕಳ ರಕ್ಷಣೆ ಕುರಿತಾದ ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ ಕಾರ್ಯಕ್ರಮದ ಅಂಗವಾಗಿ ವಿಶೇಷವಾಗಿ ಹೆಣ್ಣುಮಕ್ಕಳಿಗಾಗಿ ಇರುವ ಕಾಯ್ದೆಗಳ ಬಗ್ಗೆ ಸಾಮರ್ಥ್ಯ ವರ್ಧನೆ ಮತ್ತು ಲಿಂಗ ಸಂವೇದನೆ ಕುರಿತು ಪೋಲಿಸ ಅಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮಹಿಳೆಯರು ಯಾರಿಗೂ ಕಮ್ಮಿ ಇಲ್ಲ, ಎಲ್ಲಾ ಕ್ಷೇತ್ರದಲ್ಲಿ ಮುಂದು ಬರಬೇಕು, ಅವಳಿಗೆ ಸಮಾಜದಲ್ಲಿನ ಕೆಲವು ಕೆಟ್ಟ ಶಕ್ತಿಗಳು ತುಳಿಯಲು ಪ್ರಯತ್ನಿಸುತ್ತಾರೆ, ಅಂತಹವರ ವಿರುದ್ಧ…
ಚಿಮ್ಮಡ: ಕನ್ನಡ ಸಾಹಿತ್ಯ ಜಗತ್ತಿಗೆ ವಚನಗಳ ಮೂಲಕ ಶ್ರೇಷ್ಠ ಸಾಹಿತ್ಯದ ಕೊಡುಗೆ ನೀಡಿದ ಸರ್ವಜ್ಞರು ಸರ್ವಕಾಲಕ್ಕೂ ಸಲ್ಲುವ ಶ್ರೇಷ್ಠ ವಚನಕಾರರಾಗಿದ್ದಾರೆಂದು ಪ್ರಾದ್ಯಾಪಕ ಡಾ. ಎಚ್.ಎಂ. ಕುಂಬಾರ ಹೇಳಿದರು.ಗ್ರಾಮದ ಗದ್ದಿಗೆ ಗುಡಿಯಲ್ಲಿ ಬುಧವಾರ ರಾತ್ರಿ ಹಮ್ಮಿಕೊಳ್ಳಲಾಗಿದ್ದ ತ್ರಿಪದಿ ಕವಿ ಸರ್ವಜ್ಞರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ವಜ್ಞ ಎಂದರೆ ಎಲ್ಲವನ್ನು ತಿಳಿದವರು,, ಸಮಾಜದ ಜ್ಞಾನವನ್ನು ಅರಿತವರು, ಸರ್ವರಿಗೂ ತಿಳಿಯುವಂತೆ ಆಡುಭಾಷೆಯಲ್ಲಿ ರಚಿಸಿದ ತ್ರಿಪದಿಗಳು ಇಂದಿಗೂ ಪ್ರಸ್ತುತವಾಗಿದ್ದು ಸಮಾಜವನ್ನು ತಿದ್ದುವ ಮೂಲಕ ಅವರು ಸಮಾಜ ಸುಧಾರಕರಾಗಿದ್ದಾರೆ. ಅವರ ಸಾಹಿತ್ಯದ ಮೂಲಕ ಇಂದಿನ ಯುವಕರಲ್ಲಿ ಅರಿವು ಮೂಡಿಸುವ ಕಾರ್ಯ ಸರಕಾರ ಮಾಡಬೇಕಾಗಿದೆ ಎಂದರು.ಕಾರ್ಯಕ್ರಮದಲ್ಲಿ ಶಿಕ್ಷಕ ಎಸ್.ಟಿ. ಕುಂಬಾರ, ಮಹಾಲಿಂಗ ಬರಗಲ್, ಕೃಷ್ಣಾ ಕುಂಬಾರ, ಪಾರಿಜಾತ ಕಲಾವಿದ ಯಮನಪ್ಪಾ ಕುಂಬಾರ, ಶ್ರೀಶೈಲ ಕುಂಬಾರ, ಸುಧಾಕರ ಕುಂಬಾರ, ಹಣಮಂತ ಕುಂಬಾರ ಸೇರಿದಂತೆ ಹಲವಾರು ಜನ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಪೋಟೋದ ಮಧ್ಯದಲ್ಲಿ ಇರುವುದು ನಾನೇ.ಆಸರೆಯಾಗಿದ್ದ ಅಪ್ಪ ತೀರಿ ಹೋಗಿದ್ದ ಕಾರಣ ಕೇಶಮಂಡನ ಮಾಡಿಸಿಕೊಂಡ ಸಮಯವದು. ದಿಢೀರನೆ ನಾನು ದಿಕ್ಕು ತಿಳಿಯದೆ ಕಂಗಾಲಾಗಿದ್ದೆ. ಅನಿವಾರ್ಯವಾಗಿ ಬದುಕಿನ ಭಾರ ನನ್ನ ಎಳೆ ಹೆಗಲೇರಿತ್ತು. ಹೀಗಾಗಿ ಬೇರೆ ದಾರಿ ಕಾಣದೆ ವಿದ್ಯಾಭ್ಯಾಸ ಮೊಟುಕುಗೊಳಿಸಿ ಬೋರ್ಡ್ ಬರೆಯುವುದನ್ನು ಕಲಿಯಲು ಮುಂದಾಗಿದ್ದೆ. ಚಿತ್ರಕಲೆ ನನಗೆ ಅತೀವ ಆಸಕ್ತಿ ಮೂಡಿಸಿತ್ತು. ಕಲಿಕೆ ಆದ್ದರಿಂದ ಹಣ ಹೆಚ್ಚಾಗಿ ಸಿಗುತ್ತಿರಲಿಲ್ಲ. ಅದೆಷ್ಟೋ ಹಸಿದ ಹೊಟ್ಟೆ ಭಾದಿಸಿದ ಸಂದರ್ಭಗಳುಂಟು. ಒಟ್ಟಾರೆ ಸ್ವಾಭಿಮಾನದ ಸ್ವಭಾವದವನಾಗಿ ಇಂತಹ ಸಂಕಷ್ಟಗಳಿಂದ ಹೊರಬೇಕಿತ್ತು. ಹೀಗಾಗಿ ಬೋರ್ಡ್ ಒರೆಸುವುದು, ಉಜ್ಜುವುದು, ತೊಳೆಯುವುದು, ಬಣ್ಣ ಬಳಿಯುವುದು. ಬರೆದಿಟ್ಟ ಬ್ರಷ್ ಗಳನ್ನು ಸ್ವಚ್ಚಗೊಳಿಸುವುದು. ಎತ್ತರ ಗೋಡೆಗಳ ಮೇಲೆ ಬೋರ್ಡ್ ಬರೆಯಲು ತೂಕದ ಸರ್ವೆ ಪೋಲ್ಸ್ ಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೆಗಲ ಮೇಲೆ ಹೊತೈದು ಬೋರ್ಡ್ ಬರೆಯಲು ಅನುಕೂಲವಾಗುವಂತೆ ಕಟ್ಟಿಕೊಂಡು ಬಣ್ಣ ಬಳಿಯಬೇಕಾಗಿತ್ತು. ಅನೇಕ ಸಂದರ್ಭಗಳಲ್ಲಿ ಉರಿ ಉರಿ ಬಿಸಿಲಿನಲ್ಲಿ ಈ ಕೆಲಸ ಮಾಡಬೇಕಾಗಿತ್ತು. ದೈಹಿಕ ಶ್ರಮ ಹೆಚ್ಚಾದರೂ ಬೋರ್ಡ್ ಬರೆಯುದನ್ನು…
ಬಸವನಬಾಗೇವಾಡಿ: ಸಾಮಾಜಿಕ ನ್ಯಾಯ ಹಾಗೂ ಧಾರ್ಮಿಕತೆಯನ್ನು ಮೈಗೂಡಿಸಿಕೊಂಡು ಸ್ತ್ರೀ ಕುಲವನ್ನು ಗೌರವಿಸುವ ಜೋತೆಗೆ ಪರ ಸ್ತ್ರೀಯರನ್ನು ಕಣ್ಣೆತ್ತಿಯೂ ನೋಡದೆ ಏಕಪತ್ನಿ ವೃತಸ್ಥರಾಗಿರುವದರಿಂದ ಅಯೋಧ್ಯೆಯ ಶ್ರೀರಾಮನನ್ನು ಮರ್ಯಾದಾ ಪುರುಷೋತ್ತಮನೆಂದು ಗುರುತಿಸಲಾಗುತ್ತದೆ ಎಂದು ರಾಜನಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರು ಮಹರ್ಷಿ ವಾಲ್ಮೀಕಿ ಪ್ರಸನ್ನಾನಂದ ಪುರಿ ಸ್ವಾಮೀಜಿ ಹೇಳಿದರು.ತಾಲೂಕಿನ ಅರಳಿಚಂಡಿ ಗ್ರಾಮದಲ್ಲಿ ಹಮ್ಮಿಕೊಂಡ ಶ್ರೀ ಮಹರ್ಷಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ತಾಲೂಕು ಮಟ್ಟದ ವಾಲ್ಮೀಕಿ ಸಮಾವೇಶ ಹಾಗೂ ಧರ್ಮಸಭೆಯಲ್ಲಿ ಮಾತನಾಡಿದ ಅವರು, ಭಾರತೀಯರ ಎರಡು ಕಣ್ಣುಗಳಂತಿರುವ ರಾಮಾಯಣ ಮತ್ತು ಮಹಾ ಭಾರತ ಎರಡು ಪವಿತ್ರ ಗ್ರಂಥಗಳು ಮಾನವನ ಬದುಕಿಗೆ ಮಾರ್ಗದರ್ಶಿ ಹಾಗೂ ಸ್ಪೂರ್ತಿಗಳಾಗಿವೆ. ರಾಮಾಯಣವು ಆಸ್ತಿ ಮತ್ತು ಅಧಿಕಾರಕ್ಕಾಗಿ ಅಣ್ಣ ತಮ್ಮಂದಿರ ತ್ಯಾಗದ ಕುರಿತಾದೆ. ಮಹಾಭಾರತ ತ್ಯಾಗ ಮತ್ತು ಅಧಿಕಾರಕ್ಕಾಗಿ ಅಣ್ಣ ತಮ್ಮಂದಿರಲ್ಲಿ ಕದನದ ಕುರಿತಾಗಿದೆ. ಎರಡು ಗ್ರಂಥಗಳನ್ನು ಪ್ರತಿಯೊಬ್ಬರು ಅರಿತುಕೊಂಡಾಗ ಸಾರ್ಥಕ ಬದುಕಾಗುತ್ತದೆ ಎನ್ನುವದನ್ನು ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ರಚನೆಯ ಮೂಲಕ ಜನತೆಗೆ ಸಂದೇಶ ನೀಡಿದ್ದಾರೆ. ಇವರ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರು…
ವಿಜಯಪುರ: ವಿಜಯ ಜೋಶಿ ಅವರನ್ನು ವಿಜಯಪುರ ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖರನ್ನಾಗಿ ಮತ್ತೊಮ್ಮೆ ನೇಮಕ ಮಾಡಲಾಗಿದೆ.ಕಳೆದ ಅವಧಿಯಲ್ಲಿ ಇದೇ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ್ದ ವಿಜಯ ಜೋಶಿ ಅವರ ಕಾರ್ಯ ವೈಖರಿಗೆ ಮಾನ್ಯತೆ ನೀಡಿರುವ ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ, ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೇಮಕಾತಿ ಆದೇಶ ಪತ್ರವನ್ನು ನೀಡಿದ್ದಾರೆ.ತಮಗೆ ವಹಿಸಿರುವ ಜವಾಬ್ದಾರಿಯನ್ನು ನಿರೀಕ್ಷೆ ಮೀರಿ ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸುವ ಮೂಲಕ, ಪಕ್ಷದ ಸಂಘಟನೆಗೆ ಕ್ರಿಯಾತ್ಮಕ ಕೊಡುಗೆ ನೀಡುವಿರೆಂದು ಆಶಿಸುತ್ತಾ, ಪಕ್ಷದ ಎಲ್ಲ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ಭಾಗವಹಿಸುವಿರೆಂದು ಆಶಿಸುತ್ತೇನೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ನೇಮಕ ಪತ್ರದಲ್ಲಿ ತಿಳಿಸಿದ್ದಾರೆ.
ವಿಜಯಪುರ: ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ಬಿಜೆಪಿ ನಗರ ಮಂಡಲ ಅಧ್ಯಕ್ಷರನ್ನಾಗಿ ಶಂಕರ ಹೂಗಾರ ಅವರನ್ನು ಜಿಲ್ಲಾಧ್ಯಕ್ಷ ಆರ್ ಎಸ್ ಪಾಟೀಲ ಕೂಚಬಾಳ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ದೇವರಹಿಪ್ಪರಗಿ: ಪಟ್ಟಣ ಪಂಚಾಯತಿಯಲ್ಲಿ ಜರುಗಿದ ಸಭೆಯಲ್ಲಿ ೨೦೨೪-೨೫ ನೇ ಸಾಲಿನ ಆಯವ್ಯಯ ಮಂಡಿಸಲಾಯಿತು.ಪಂಚಾಯಿತಿ ಕಾರ್ಯಾಲಯದಲ್ಲಿ ಬುಧವಾರ ಸುಮಾರು ೨.೩೫ ಲಕ್ಷರೂ. ಉಳಿತಾಯ ಬಜೆಟ್ ಮಂಡಿಸಲಾಯಿತು. ಆಡಳಿತಾಧಿಕಾರಿ ಸಿಂದಗಿ ೨೦೨೪-೨೫ ನೇ ಸಾಲಿನ ಆಯವ್ಯಯದ ಕುರಿತು ಮಾಹಿತಿ ನೀಡಿ, ಈ ವರ್ಷ ಒಟ್ಟು ಸ್ವೀಕೃತಿ ೮೦೫.೦೮ ಲಕ್ಷ ರೂ. ಆಗುವ ಭರವಸೆಯಿದ್ದು, ಒಟ್ಟು ವೆಚ್ಚಗಳು ೮೦೨.೭೩ ಲಕ್ಷ ರೂ ಆಗಲಿದೆ. ಹೀಗಾಗಿ ಒಟ್ಟು ಉಳಿತಾಯ ೨.೩೫ ಲಕ್ಷರೂ ಆಗಿದ್ದು, ಉಳಿತಾಯ ಬಜೆಟ್ ಮಂಡಿಸಲಾಗಿದೆ.ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ ಮಾತನಾಡಿ, ಈ ಬಜೆಟ್‌ನಲ್ಲಿ ಕುಡಿಯುವ ನೀರು, ಚರಂಡಿ, ಸಿ.ಸಿ.ರಸ್ತೆಗಳ ನಿರ್ಮಾಣ ಸೇರಿದಂತೆ ಪಟ್ಟಣದ ಜನತೆಯ ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆಡಳಿತಾಧಿಕಾರಿಗಳಾದ ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರು ಬಜೆಟ್ ಮಂಡಿಸಿದ್ದಾರೆ ಎಂದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸಿಬ್ಬಂದಿ ಫಿರೋಜ್ ಮುಲ್ಲಾ, ಸೋಮು ಭೋವಿ, ಶ್ರೀಮತಿ ಹಿರೇಮಠ ಸೇರಿದಂತೆ ಇತರರು ಇದ್ದರು.
ಬಸವನಬಾಗೇವಾಡಿ: ಪಟ್ಟಣದ ನಾಗೂರ ರಸ್ತೆಯಲ್ಲಿರುವ ಅಶೋಕ ಕಲ್ಲೂರ ಅವರ 4 ಎಕರೆ ತೋಟದಲ್ಲಿನ ಕಬ್ಬು ಭಸ್ಮವಾಗಿರುವ ಘಟನೆ ಬುಧವಾರ ಸಂಜೆ ನಡೆದಿದೆ.ಗಾಳಿ ಬೀಸಿದಾಗ ವಿದ್ಯುತ್ ತಂತಿ ಪರಸ್ಪರ ಘರ್ಷಣೆಯಿಂದ ಕಿಡಿ ಹಾರಿ ಕಬ್ಬಿಗೆ ಹತ್ತಿಕೊಂಡ ಪರಿಣಾಮ ಅಂದಾಜು ರೂ.5 ಲಕ್ಕಕ್ಕೂ ಹೆಚ್ಚು ಹಾನಿಯಾಗಿದೆ. 8 ಎಕರೆ ಕಬ್ಬಿನ ಬೆಳೆಯನ್ನು ಕಾರ್ಖಾನೆಗೆ ಕಳುಹಿಸಲು ಕಟಾವು ನಡೆದಿತ್ತು. ಇದೇ ಸಂದರ್ಭದಲ್ಲಿ ಇನ್ನೊಂದು ಬದಿಯಲ್ಲಿ ಬೆಂಕಿ ಕಬ್ಬಿನ ರವದಿಗೆ ಹೊತ್ತಿಕೊಂಡು ಬೆಂಕಿ ಕೆನ್ನಾಲಿಗೆ ಚಾಚಿದ್ದರಿಂದ ನಾಲ್ಕು ಎಕರೆ ಕಬ್ಬು ಸುಟ್ಟು ಭಸ್ಮವಾಗಿದೆ. ಬೆಂಕಿ ಹೊತ್ತಿಕೊಂಡ ತಕ್ಷಣ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದರಿಂದ ಅಗ್ನಿಶಾಮಕ ಸಿಬ್ಬಂದಿ ತೋಟಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದರಿಂದ ಹೆಚ್ಚಿನ ಹಾನಿ ತಡೆದಂತಾಗಿದೆ. ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಹೆಚ್ಚಿನ ರೈತರು ಕಬ್ಬು ಬೆಳೆಯುತಿದ್ದಾರೆ. ಬೆಂಕಿಯಂತಹ ಅವಘಡಗಳು ಸಂಭವಿಸಿದಾಗ ಠಾಣೆಯಲ್ಲಿರುವ ಒಂದೇ ವಾಹನದ ಸಹಾಯದಿಂದ ಬೆಂಕಿ ನಂದಿಸಲು ಸಾಧ್ಯವಾಗಲಾರದು. ಹೀಗಾಗಿ ಅಗ್ನಿಶಾಮಕ ಠಾಣೆಗೆ ಹೆಚ್ಚುವರಿ ವಾಹನ ಒದಗಿಸಬೇಕು ಎಂದು ತೋಟದ ಮಾಲೀಕ ಅಶೋಕ ಕಲ್ಲೂರ ಆಗ್ರಹಿಸಿದ್ದಾರೆ.ತಾಲೂಕಿನಲ್ಲಿ…
ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರ.ಕಾರ್ಯದರ್ಶಿ ಅರವಿಂದ ಕುಲಕರ್ಣಿ ವಾಗ್ದಾಳಿ ಬಸವನಬಾಗೇವಾಡಿ: ಜಿಲ್ಲೆಯ ಎಲ್ಲ ಕೆರೆಗಳನ್ನು ಭರ್ತಿ ಮಾಡಿ ಬೇಸಿಗೆ ಸಂದರ್ಭದಲ್ಲಿ ಜನ ಹಾಗೂ ಜಾನುವಾರಗಳಿಗೆ ಕುಡಿಯುವ ನೀರಿನ ಅನುಕೂಲತೆ ಕಲ್ಪಿಸಲು ನಾನೇ ಹೇಳಿ ನೀರು ಬಿಡಿಸಿದ್ದೇನೆ ಎಂದು ಪತ್ರಿಕಾ ಹೇಳಿಕೆ ನೀಡಿರುವ ದೇವರ ಹಿಪ್ಪರಗಿ ಶಾಸಕರ ಹೇಳಿಕೆ ಹಾಸ್ಯಾಸ್ಪದದಿಂದ ಕೂಡಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.ತಾಲೂಕಿನ ಹೂವಿನ ಹಿಪ್ಪರಗಿಯ ಪತ್ರಿವನ ಮಠದಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಳವಾಡ ಹಾಗೂ ಚಿಮ್ಮಲಗಿ ಏತ ನೀರಾವರಿಯ ಎಲ್ಲ ಕಾಲುವೆಗಳಿಗೆ ನೀರು ಹರಿಸಿ ಕೆರೆಗಳ ಭರ್ತಿ ಮಾಡಬೇಕೆಂದು ಆಲಮಟ್ಟಿಯಲ್ಲಿ ಅಖಂಡ ಕರ್ನಾಟಕದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ನಂತರ ಬೆಳಗಾವಿಯ ಪ್ರಾದೇಶಿಕ ಆಯುಕ್ತರ ಬಳಿ ಹೋಗಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಗತ್ಯತೆ ಮತ್ತು ಕೆರೆಗಳಲ್ಲಿರುವ ನೀರಿನ ಪ್ರಮಾಣದ ಕುರಿತು ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟನ್ನವರ ಇವರಿಗೆ ಮನವರಿಕೆ…
ಬಸವನಬಾಗೇವಾಡಿ: ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಅಂಗವಿಕಲರ ಒಕ್ಕೂಟದಿಂದ ವಿಕಲಚೇತನರ ವಿವಿದ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗುರುವಾರ ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದ ವಿಕಲಚೇತನರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಅವರ ಮೂಲಕ ಮನವಿ ಸಲ್ಲಿಸಿದರು.ಪಟ್ಟಣದ ಬಸವೇಶ್ವರ ದೇವಸ್ಥಾನ ಮುಂಭಾಗ ವಿವಿಧೆಡೆಗಳಿಂದ ಆಗಮಿಸಿದ್ದ ವಿಕಲಚೇತನರು ಜಮಾಯಿಸಿ ಮೆರವಣಿಗೆ ಮೂಲಕ ಮುದ್ದೇಬಿಹಾಳ ರಸ್ತೆಯಲ್ಲಿರುವ ಮಿನಿವಿಧಾನಸೌಧದಲ್ಲಿರುವ ತಹಸೀಲ್ದಾರ ಕಚೇರಿಗೆ ತೆರಳಿ ಕೆಲ ಹೊತ್ತು ಪ್ರತಿಭಟನೆ ಮಾಡಿದರು.ಈ ಸಂದರ್ಭದಲ್ಲಿ ಅಂಗವಿಕಲರ ಒಕ್ಕೂಟದ ಮಲ್ಲಿಕಾರ್ಜುನ ಬಿರಾದಾರ ಮಾತನಾಡಿ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ನಮ್ಮ ವಿಕಲಚೇತನ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ. ನಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಆಗ್ರಹಿಸುತ್ತೇವೆ ಎಂದರು.ಪ್ರತಿ ತಿಂಗಳು ವಿಕಲಚೇತನರಿಗೆ ರೂ.೪ ಸಾವಿರದಿಂದ ೫ ಸಾವಿರ ಮಾಶಾಸನ ಏಕರೂಪದಲ್ಲಿ ಹೆಚ್ಚಳ ಮಾಡಬೇಕು. ವಿಕಲಚೇತನರಿಗೆ ರಾಜ್ಯಾದಂತ ಉಚಿತ ಬಸ್ ಪಾಸ್ ನೀಡಬೇಕು. ಅಂಗವಿಕಲರ ಬ್ಯಾಕ್ಲಾಗ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಬೇಕು. ಅಂಗವಿಕಲರಿಗೆ ವಿಕಲಚೇತನ…
