ಬಸವನಬಾಗೇವಾಡಿ: ಪಟ್ಟಣದ ನಾಗೂರ ರಸ್ತೆಯಲ್ಲಿರುವ ಅಶೋಕ ಕಲ್ಲೂರ ಅವರ 4 ಎಕರೆ ತೋಟದಲ್ಲಿನ ಕಬ್ಬು ಭಸ್ಮವಾಗಿರುವ ಘಟನೆ ಬುಧವಾರ ಸಂಜೆ ನಡೆದಿದೆ.
ಗಾಳಿ ಬೀಸಿದಾಗ ವಿದ್ಯುತ್ ತಂತಿ ಪರಸ್ಪರ ಘರ್ಷಣೆಯಿಂದ ಕಿಡಿ ಹಾರಿ ಕಬ್ಬಿಗೆ ಹತ್ತಿಕೊಂಡ ಪರಿಣಾಮ ಅಂದಾಜು ರೂ.5 ಲಕ್ಕಕ್ಕೂ ಹೆಚ್ಚು ಹಾನಿಯಾಗಿದೆ. 8 ಎಕರೆ ಕಬ್ಬಿನ ಬೆಳೆಯನ್ನು ಕಾರ್ಖಾನೆಗೆ ಕಳುಹಿಸಲು ಕಟಾವು ನಡೆದಿತ್ತು. ಇದೇ ಸಂದರ್ಭದಲ್ಲಿ ಇನ್ನೊಂದು ಬದಿಯಲ್ಲಿ ಬೆಂಕಿ ಕಬ್ಬಿನ ರವದಿಗೆ ಹೊತ್ತಿಕೊಂಡು ಬೆಂಕಿ ಕೆನ್ನಾಲಿಗೆ ಚಾಚಿದ್ದರಿಂದ ನಾಲ್ಕು ಎಕರೆ ಕಬ್ಬು ಸುಟ್ಟು ಭಸ್ಮವಾಗಿದೆ. ಬೆಂಕಿ ಹೊತ್ತಿಕೊಂಡ ತಕ್ಷಣ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದರಿಂದ ಅಗ್ನಿಶಾಮಕ ಸಿಬ್ಬಂದಿ ತೋಟಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದರಿಂದ ಹೆಚ್ಚಿನ ಹಾನಿ ತಡೆದಂತಾಗಿದೆ. ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಹೆಚ್ಚಿನ ರೈತರು ಕಬ್ಬು ಬೆಳೆಯುತಿದ್ದಾರೆ. ಬೆಂಕಿಯಂತಹ ಅವಘಡಗಳು ಸಂಭವಿಸಿದಾಗ ಠಾಣೆಯಲ್ಲಿರುವ ಒಂದೇ ವಾಹನದ ಸಹಾಯದಿಂದ ಬೆಂಕಿ ನಂದಿಸಲು ಸಾಧ್ಯವಾಗಲಾರದು. ಹೀಗಾಗಿ ಅಗ್ನಿಶಾಮಕ ಠಾಣೆಗೆ ಹೆಚ್ಚುವರಿ ವಾಹನ ಒದಗಿಸಬೇಕು ಎಂದು ತೋಟದ ಮಾಲೀಕ ಅಶೋಕ ಕಲ್ಲೂರ ಆಗ್ರಹಿಸಿದ್ದಾರೆ.
ತಾಲೂಕಿನಲ್ಲಿ ಕಬ್ಬು ಬೆಳೆ ಜಾಸ್ತಿ ಆಗುತ್ತಿರುವುದರಿಂದ ಅಗ್ನಿಶಾಮಕದ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸಿ ದುರಂತವಾದಾಗ ಹತೋಟಿಗೆ ತರಲು ಅನುಕೂಲವಾಗುತ್ತದೆ ಎಂದು ರೈತರ ಆಗ್ರಹವಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

