ಕಲಕೇರಿ: ಪೋಕ್ಸೋ ಕಾಯ್ದೆ, ಹೆಣ್ಣು ಭ್ರೂಣ ಹತ್ಯೆ ನಿಷೇಧ, ಬಾಲ್ಯ ವಿವಾಹ ನಿಷೇಧ, ಕೌಂಟಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ, ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ ಕಾಯ್ದೆಗಳ ಬಗ್ಗೆ ಮತ್ತು ಹೆಣ್ಣುಮಕ್ಕಳ ಯೋಜನೆಗಳ ಬಗ್ಗೆ ಉಪನ್ಯಾಸ ನೀಡಿ ಬಾಲ್ಯ ವಿವಾಹ ಮತ್ತು ಹೆಣ್ಣು ಬ್ರೂಣ ಹತೈ ಸಮಾಜಕ್ಕೆ ಅಪಾಯಕಾರಿ ಸಂಪೂರ್ಣ ಹೋಗಲಾಡಿಸಲು ಎಲ್ಲರೂ ಪಣ ತೊಡಲು ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಸ್.ಎನ್.ಕೋರವಾರ ಕರೆ ನೀಡಿದ್ದಾರೆ.
ಶಿಶು ಅಭಿವೃದ್ಧಿ ಯೋಜನೆ ಸಿಂದಗಿ ವ್ಯಾಪ್ತಿಯಲ್ಲಿ ಬರುವ ಕಲಕೇರಿಯಲ್ಲಿ ಹೆಣ್ಣುಮಕ್ಕಳ ರಕ್ಷಣೆ ಕುರಿತಾದ ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ ಕಾರ್ಯಕ್ರಮದ ಅಂಗವಾಗಿ ವಿಶೇಷವಾಗಿ ಹೆಣ್ಣುಮಕ್ಕಳಿಗಾಗಿ ಇರುವ ಕಾಯ್ದೆಗಳ ಬಗ್ಗೆ ಸಾಮರ್ಥ್ಯ ವರ್ಧನೆ ಮತ್ತು ಲಿಂಗ ಸಂವೇದನೆ ಕುರಿತು ಪೋಲಿಸ ಅಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರು ಯಾರಿಗೂ ಕಮ್ಮಿ ಇಲ್ಲ, ಎಲ್ಲಾ ಕ್ಷೇತ್ರದಲ್ಲಿ ಮುಂದು ಬರಬೇಕು, ಅವಳಿಗೆ ಸಮಾಜದಲ್ಲಿನ ಕೆಲವು ಕೆಟ್ಟ ಶಕ್ತಿಗಳು ತುಳಿಯಲು ಪ್ರಯತ್ನಿಸುತ್ತಾರೆ, ಅಂತಹವರ ವಿರುದ್ಧ ಹೇಗೆ ಕಾನೂನಾತ್ಮಕವಾಗಿ ರಕ್ಷಣೆ ಪಡೆಯಬಹುದು ಎಂದು ಮಹಿಳೆಯರ ಸಂರಕ್ಷಣೆ ಮತ್ತು ಲಿಂಗ ಸಂವೆಧನೆ ಬಗ್ಗೆ ಕಲಕೇರಿ ಪೋಲಿಸ್ ಠಾಣೆಯ ಪಿ.ಎಸ್.ಐ ರೋಹಿಣಿ ಪಾಟೀಲ ಅವರು ಬಾಲಕಿಯರೊಂದಿಗೆ ಸಂವಾದ ನಡೆಸಿ ವಿವರವಾಗಿ ಹೇಳಿದರು.
ಈ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಹಿರೇಮಠದ ಅಯ್ಯಪ್ಪ ಅಜ್ಜನವರು, ಅಧ್ಯಕ್ಷತೆಯನ್ನು ವಿ.ಎಂ. ಸಿಂದಗಿ, ಮುಖಂಡರಾದ ಪರಶುರಾಮ ಬೇಡರ ಅವರು ಉದ್ಘಾಟಿಸಿದರು. ಪ್ರಾಚಾರ್ಯ ಸಿ.ಎಸ್.ಹಿರೇಮಠ ಮಾತನಾಡಿದರು.
ಗ್ರಾ.ಪಂ ಸದಸ್ಯರಾದ ನಬಿಲಾಲ ನಾಯ್ಕೋಡಿ, ಹಾಗೂ ಚಾಂದಪಾಶಾ ಹವಾಲ್ದಾರ, ಎಂ.ಎ.ದರ್ಗಾ, ಎಸ್.ಎಸ್.ಲಮಾಣಿ, ವಾಯ್.ಎಲ್. ಚೌಧರಿ ವೇದಿಕೆ ಮೇಲಿದ್ದರು.
ಸ್ವಾಗತವನ್ನು ಎ.ಎಮ್.ಸಜ್ಜನ, ನಿರೂಪಣೆಯನ್ನು ವಿ.ಟಿ.ಜಾನಮಟ್ಟಿ, ವಂದನಾರ್ಪಣೆಯನ್ನು ಅಪ್ಪಾಸಾಹೇಬ ಜಂಬಗಿ ಮಾಡಿದರು
ಶಿಕ್ಷಕರು, ವಿದ್ಯಾರ್ಥಿಗಳು, ಸ್ತ್ರೀ ಶಕ್ತಿ ಸಂಘದ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಹಾಗೂ ಗ್ರಾ.ಪಂ ಸಿಬ್ಬಂದಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

