ದೇವರಹಿಪ್ಪರಗಿ: ಪಟ್ಟಣ ಪಂಚಾಯತಿಯಲ್ಲಿ ಜರುಗಿದ ಸಭೆಯಲ್ಲಿ ೨೦೨೪-೨೫ ನೇ ಸಾಲಿನ ಆಯವ್ಯಯ ಮಂಡಿಸಲಾಯಿತು.
ಪಂಚಾಯಿತಿ ಕಾರ್ಯಾಲಯದಲ್ಲಿ ಬುಧವಾರ ಸುಮಾರು ೨.೩೫ ಲಕ್ಷರೂ. ಉಳಿತಾಯ ಬಜೆಟ್ ಮಂಡಿಸಲಾಯಿತು. ಆಡಳಿತಾಧಿಕಾರಿ ಸಿಂದಗಿ ೨೦೨೪-೨೫ ನೇ ಸಾಲಿನ ಆಯವ್ಯಯದ ಕುರಿತು ಮಾಹಿತಿ ನೀಡಿ, ಈ ವರ್ಷ ಒಟ್ಟು ಸ್ವೀಕೃತಿ ೮೦೫.೦೮ ಲಕ್ಷ ರೂ. ಆಗುವ ಭರವಸೆಯಿದ್ದು, ಒಟ್ಟು ವೆಚ್ಚಗಳು ೮೦೨.೭೩ ಲಕ್ಷ ರೂ ಆಗಲಿದೆ. ಹೀಗಾಗಿ ಒಟ್ಟು ಉಳಿತಾಯ ೨.೩೫ ಲಕ್ಷರೂ ಆಗಿದ್ದು, ಉಳಿತಾಯ ಬಜೆಟ್ ಮಂಡಿಸಲಾಗಿದೆ.
ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ ಮಾತನಾಡಿ, ಈ ಬಜೆಟ್‌ನಲ್ಲಿ ಕುಡಿಯುವ ನೀರು, ಚರಂಡಿ, ಸಿ.ಸಿ.ರಸ್ತೆಗಳ ನಿರ್ಮಾಣ ಸೇರಿದಂತೆ ಪಟ್ಟಣದ ಜನತೆಯ ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆಡಳಿತಾಧಿಕಾರಿಗಳಾದ ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರು ಬಜೆಟ್ ಮಂಡಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸಿಬ್ಬಂದಿ ಫಿರೋಜ್ ಮುಲ್ಲಾ, ಸೋಮು ಭೋವಿ, ಶ್ರೀಮತಿ ಹಿರೇಮಠ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

