ಬಸವನಬಾಗೇವಾಡಿ: ಸಾಮಾಜಿಕ ನ್ಯಾಯ ಹಾಗೂ ಧಾರ್ಮಿಕತೆಯನ್ನು ಮೈಗೂಡಿಸಿಕೊಂಡು ಸ್ತ್ರೀ ಕುಲವನ್ನು ಗೌರವಿಸುವ ಜೋತೆಗೆ ಪರ ಸ್ತ್ರೀಯರನ್ನು ಕಣ್ಣೆತ್ತಿಯೂ ನೋಡದೆ ಏಕಪತ್ನಿ ವೃತಸ್ಥರಾಗಿರುವದರಿಂದ ಅಯೋಧ್ಯೆಯ ಶ್ರೀರಾಮನನ್ನು ಮರ್ಯಾದಾ ಪುರುಷೋತ್ತಮನೆಂದು ಗುರುತಿಸಲಾಗುತ್ತದೆ ಎಂದು ರಾಜನಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರು ಮಹರ್ಷಿ ವಾಲ್ಮೀಕಿ ಪ್ರಸನ್ನಾನಂದ ಪುರಿ ಸ್ವಾಮೀಜಿ ಹೇಳಿದರು.
ತಾಲೂಕಿನ ಅರಳಿಚಂಡಿ ಗ್ರಾಮದಲ್ಲಿ ಹಮ್ಮಿಕೊಂಡ ಶ್ರೀ ಮಹರ್ಷಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ತಾಲೂಕು ಮಟ್ಟದ ವಾಲ್ಮೀಕಿ ಸಮಾವೇಶ ಹಾಗೂ ಧರ್ಮಸಭೆಯಲ್ಲಿ ಮಾತನಾಡಿದ ಅವರು, ಭಾರತೀಯರ ಎರಡು ಕಣ್ಣುಗಳಂತಿರುವ ರಾಮಾಯಣ ಮತ್ತು ಮಹಾ ಭಾರತ ಎರಡು ಪವಿತ್ರ ಗ್ರಂಥಗಳು ಮಾನವನ ಬದುಕಿಗೆ ಮಾರ್ಗದರ್ಶಿ ಹಾಗೂ ಸ್ಪೂರ್ತಿಗಳಾಗಿವೆ. ರಾಮಾಯಣವು ಆಸ್ತಿ ಮತ್ತು ಅಧಿಕಾರಕ್ಕಾಗಿ ಅಣ್ಣ ತಮ್ಮಂದಿರ ತ್ಯಾಗದ ಕುರಿತಾದೆ. ಮಹಾಭಾರತ ತ್ಯಾಗ ಮತ್ತು ಅಧಿಕಾರಕ್ಕಾಗಿ ಅಣ್ಣ ತಮ್ಮಂದಿರಲ್ಲಿ ಕದನದ ಕುರಿತಾಗಿದೆ. ಎರಡು ಗ್ರಂಥಗಳನ್ನು ಪ್ರತಿಯೊಬ್ಬರು ಅರಿತುಕೊಂಡಾಗ ಸಾರ್ಥಕ ಬದುಕಾಗುತ್ತದೆ ಎನ್ನುವದನ್ನು ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ರಚನೆಯ ಮೂಲಕ ಜನತೆಗೆ ಸಂದೇಶ ನೀಡಿದ್ದಾರೆ. ಇವರ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಬದುಕು ಸುಂದರವಾಗಿಸಿಕೊಳ್ಳೋಣ ಎಂದರು.
ಮಾಜಿಸಚಿವ ಎಸ್.ಕೆ.ಬೆಳ್ಳುಬ್ಬಿಯವರು ಮಾತನಾಡಿದರು.
ಇಂಗಳೇಶ್ವರ ವಿರಕ್ತಮಠದ ಚನ್ನಬಸವ ಮಹಾಸ್ವಾಮಿಜಿ ಆಶೀರ್ವಚನ ನೀಡಿ, ಉಪನ್ಯಾಸಕ ಯಲ್ಲಪ್ಪ ನಾಯಕ, ನ್ಯಾಯವಾದಿ ಶಶಿಧರ ಯರನಾಳ ಮಾತನಾಡಿದರು.
ಈ ಸಂದರ್ಭದಲ್ಲಿ ಅರಳಿಚಂಡಿಯ ಪರಮಾನಂದ ಮಹಾರಾಜರು, ಅವ್ವಪ್ಪಮುತ್ಯಾ, ರಾಜನಾಳದ ಹುಚ್ಚಪ್ಪ ಮುತ್ಯಾ, ಸಹಕಾರ ಮಹಾ ಮಂಡಳದ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಡಿಸಿಸಿಬ್ಯಾಂಕ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ, ಸಸಂಗನಗೌಡ ಪಾಟೀಲ, ಪ್ರಕಾಶ ದೇಸಾಯಿ, ಶ್ರೀಮತಿ ಚೇತನಾ ಹುಡೇದ, ಶ್ರೀಮತಿ ಲಕ್ಷ್ಮೀ ಶಾಖಾಪುರ, ರವಿ ನಾಯ್ಕೋಡಿ, ಭೀಮಣ್ಣ ಸಾಹುಕಾರ ಹೊಸಮನಿ, ಶಿವಪ್ಪ ಶಾಖಾಪುರ, ಬಿ.ಎಸ್.ಅವಟಿ ಸೇರಿದಂತೆ ಇತರರು ಇದ್ದರು. ಹಣಮಂತ್ರಾಯ ಸೊನ್ನದ ನಿರೂಪಿಸಿದರು ವಂದಿಸಿದರು. ಬಿ.ಎಮ್.ಮುಕಾರ್ತಿಹಾಳ ಸ್ವಾಗತಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

