Author: editor.udayarashmi@gmail.com

ಇಂದು ಮಹಾಶಿವರಾತ್ರಿ ನಿಮಿತ್ತ ವಿಶೇಷ ಲೇಖನ ಡಾ. ಸಂತೋಷ ಬಿ. ನವಲಗುಂದ, ಪತ್ರಕರ್ತರು, ಬರಹಗಾರರು, ಮಳ್ಳಿ ಬ್ರಹ್ಮ ಮತ್ತು ವಿಷ್ಣುವಿನ ನಡುವೆ ಶ್ರೇಷ್ಠತೆಯ ಭಾವ ತಾ ಹೆಚ್ಚು ನಾ ಹೆಚ್ಚೆಂಬ ವಾದ ತಾರಕಕ್ಕೇರಿ ಇನ್ನೇನು ರಣರಂಗಕ್ಕೆ ಕಾರಣವಾಗುವ ಹೊತ್ತಿಗೆ ಇವರಿಬ್ಬರ ಮಧ್ಯೆ ಶಿವನು ಮಧ್ಯ ಪ್ರವೇಶಿಸಿ ಇಬ್ಬರಿಗೂ ತಿಳುವಳಿಕೆ ನೀಡಿ ಕೊನೆಗೆ ಸಂಧಾನ ಮಾಡಿಸಿ, ಕೈಲಾಸ ಪರ್ವತಕ್ಕೆ ಬಂದು ವಿರಾಜಮಾನನಾಗುತ್ತಾನೆ. ಆ ಸಂದರ್ಭದಲ್ಲಿ ಶ್ರೀ ವಿಷ್ಣು ಬ್ರಹ್ಮರು ಶಿವನ ಎಡ ಬಲದಲ್ಲಿ ಕುಳಿತು ಹಾರು, ತುರಾಯಿ, ಶಿವನಾಮದೊಂದಿಗೆ ಮುಂತಾದ ದಿವ್ಯ ವಸ್ತುಗಳಿಂದ ಮತ್ತು ಉಪಹಾರಗಳಿಂದ ಅನನ್ಯ ಭಕ್ತಿಯಿಂದ ಶಿವಪೂಜೆಯನ್ನು ಮಾಡಿದರು. ಇವರಿಬ್ಬರ ಭಕ್ತಿ ನಿಷ್ಠೆಗೆ ಸಂತುಷ್ಟನಾದ ಶಿವನು ವಿಷ್ಣು ಬ್ರಹ್ಮರನ್ನು ಕುರಿತು “ ಎಲೈ ವತ್ಸರೇ, ಇಂದಿನ ದಿವಸವು ಮಹತ್ತರವಾದುದು, ಈ ದಿನವು ಶಿವರಾತ್ರಿ ಎಂಬ ಹೆಸರಿನಿಂದ ಪ್ರಸಿದ್ಧವಾಗಿ ಪವಿತ್ರ ದಿನವೆನಿಸುವುದು. ಈ ತಿಥಿ ನನಗೆ ಅತ್ಯಂತ ಪ್ರಿಯ ತಿಥಿಯಾಗಿರುವುದು” ಎಂದು ಶಿವನು ನುಡಿದನು. ವಿಷ್ಣು ಬ್ರಹ್ಮರಿಗೆ ಶಿವ ಬೋಧೆ ನೀಡಿದ…

Read More

ಡಾ. ಸಂತೋಷ ಬಿ. ನವಲಗುಂದ, ಪತ್ರಕರ್ತರು, ಬರಹಗಾರರು, ಮಳ್ಳಿ ಶಿವನ ಭಜಿಸೋ, ಹರನ ಪೂಜಿಸೋ, ಲಿಂಗವೇ ತಾನಾಗಿ ಲಿಂಗವ, ಶಿವನೇ ತಾನಾಗಿ ಶಿವನ ಭಜಿಸುವುದೇ ಮಹಾಶಿವರಾತ್ರಿ ಬ್ರಹ್ಮ ಮತ್ತು ವಿಷ್ಣುವಿನ ನಡುವೆ ಶ್ರೇಷ್ಠತೆಯ ಭಾವ ತಾ ಹೆಚ್ಚು ನಾ ಹೆಚ್ಚೆಂಬ ವಾದ ತಾರಕಕ್ಕೇರಿ ಇನ್ನೇನು ರಣರಂಗಕ್ಕೆ ಕಾರಣವಾಗುವ ಹೊತ್ತಿಗೆ ಇವರಿಬ್ಬರ ಮಧ್ಯೆ ಶಿವನು ಮಧ್ಯ ಪ್ರವೇಶಿಸಿ ಇಬ್ಬರಿಗೂ ತಿಳುವಳಿಕೆ ನೀಡಿ ಕೊನೆಗೆ ಸಂಧಾನ ಮಾಡಿಸಿ, ಕೈಲಾಸ ಪರ್ವತಕ್ಕೆ ಬಂದು ವಿರಾಜಮಾನನಾಗುತ್ತಾನೆ. ಆ ಸಂದರ್ಭದಲ್ಲಿ ಶ್ರೀ ವಿಷ್ಣು ಬ್ರಹ್ಮರು ಶಿವನ ಎಡ ಬಲದಲ್ಲಿ ಕುಳಿತು ಹಾರು, ತುರಾಯಿ, ಶಿವನಾಮದೊಂದಿಗೆ ಮುಂತಾದ ದಿವ್ಯ ವಸ್ತುಗಳಿಂದ ಮತ್ತು ಉಪಹಾರಗಳಿಂದ ಅನನ್ಯ ಭಕ್ತಿಯಿಂದ ಶಿವಪೂಜೆಯನ್ನು ಮಾಡಿದರು. ಇವರಿಬ್ಬರ ಭಕ್ತಿ ನಿಷ್ಠೆಗೆ ಸಂತುಷ್ಟನಾದ ಶಿವನು ವಿಷ್ಣು ಬ್ರಹ್ಮರನ್ನು ಕುರಿತು “ ಎಲೈ ವತ್ಸರೇ, ಇಂದಿನ ದಿವಸವು ಮಹತ್ತರವಾದುದು, ಈ ದಿನವು ಶಿವರಾತ್ರಿ ಎಂಬ ಹೆಸರಿನಿಂದ ಪ್ರಸಿದ್ಧವಾಗಿ ಪವಿತ್ರ ದಿನವೆನಿಸುವುದು. ಈ ತಿಥಿ ನನಗೆ ಅತ್ಯಂತ ಪ್ರಿಯ ತಿಥಿಯಾಗಿರುವುದು” ಎಂದು…

Read More

ವಿಜಯಪುರ: ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಮಾರ್ಚ್ 9 ಶನಿವಾರ ಬಬಲೇಶ್ವರ ಪಟ್ಟಣಕ್ಕೆ ಭೇಟಿ ನೀಡಲಿದ್ದು, ತಾಲೂಕು ಆಡಳಿತ ಸೌಧ(ಮಿನಿ ವಿಧಾನಸೌಧ) ನೂತನ ಕಟ್ಟಡ ಉದ್ಘಾಟಿಸಲಿದ್ದಾರೆ. ಅಲ್ಲದೇ, ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.ಬೆಳಿಗ್ಗೆ 11ಗಂ. ಬಬಲೇಶ್ವರ ಪಟ್ಟಣದ ಅಡವಿಸಂಗಾಪುರ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಅಂದಾಜು ರೂ.10 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಆಡಳಿತ ಸೌಧ (ಮಿನಿ ವಿಧಾನಸೌಧ) ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.ಈ ಕಟ್ಟಡದ ನೆಲಮಹಡಿಯಲ್ಲಿ ತಹಸೀಲ್ದಾರ ಕಚೇರಿ, ಕೋರ್ಟ್ ಹಾಲ್, ತಹಸೀಲ್ದಾರ ಗ್ರೇಡ್-1 ಮತ್ತು ಗ್ರೇಡ್-2, ಸಬ್‍ರಜಿಸ್ಟಾರ್ ಕಚೇರಿ, ಸಬ್ ಟ್ರೆಜರಿ ಕಚೇರಿ, ಸ್ಟ್ರಾಂಗ್ ರೂಂ, ರಜಿಸ್ಟಾರ್ ಕಚೇರಿಗಳನ್ನು ಹೊಂದಿವೆ. ಮೊದಲನೇ ಮಹಡಿಯಲ್ಲಿ ಭೂಮಾಪನಾ ಇಲಾಖೆ ಉಪನಿರ್ದೇಶಕ ಕಚೇರಿ, ಭೂ ದಾಖಲೆ ಕೋಣೆ, ವಿಡಿಯೋ ಸಂವಾದ ಸಭಾಂಗಣ, ಕೆಸ್ವಾನ್, ಚುನಾವಣೆ ಕೊಠಡಿ ಹೊಂದಿದ್ದರೆ, ಎರಡನೇ ಮಹಡಿಯಲ್ಲಿ ಸ್ಟೇರ್‍ಕೇಸ್ ಮುಖ್ಯ ಕೋಣೆ ಮತ್ತು ಲಿಫ್ಟ್ ಕೋಣೆ ಇರಲಿದೆ.ಇದೇ ವೇಳೆ ತಾಲೂಕು ಮತ್ತು ಪಟ್ಟಣ…

Read More

ವಿಜಯಪುರ: ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ನಗರದ 770 ಅಮರ ಗಣಾಧೀಶ್ವರರ (ಅಮರಗಣಂಗಳ) ದೇವಾಲಯದ ನವೀಕರಣ ಮತ್ತು ಲಿಂಗಗಳ ಪುನರುಜ್ಜೀವನ ಕಾರ್ಯ ಪೂರ್ಣಗೊಂಡಿದ್ದು, ಉದ್ಘಾಟನೆ ಕಾರ್ಯಕ್ರಮ ಮಾ.8 ರಂದು ಶುಕ್ರವಾರ ಮಹಾಶಿವರಾತ್ರಿ ದಿನ ನಡೆಯಲಿದೆ.ಅಂದು ಬೆಳಿಗ್ಗೆ 10.30 ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಬಿ.ಎಲ್.ಡಿ.ಇ ಸಂಸ್ಥೆ ಅಧ್ಯಕ್ಷ, ಕೈಗಾರಿಕೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಉದ್ಘಾಟನೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷ ಮತ್ತು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉಪಸ್ಥಿತರಿರಲಿದ್ದಾರೆ.ಬಂಥನಾಳ ಶ್ರೀ ಸಂಗನಬಸವ ಮಹಾಶಿವಯೋಗಿಗಳ ದಿವ್ಯ ಸಂಕಲ್ಪದಂತೆ 1954 ರಲ್ಲಿ ನಗರದ 770 ಅಮರ ಗಣಾಧೀಶ್ವರರ(ಅಮರಗಣಂಗಳ) ಸ್ಮಾರಕ ಲಿಂಗಗಳ ದೇವಾಲಯದ ಪ್ರತಿಷ್ಠಾಪನೆ ನಡೆದಿತ್ತು. ಈ ದೇವಾಲಯ ಪೂರ್ಣಗೊಂಡ ಬಳಿಕ 15.01.1960ರಲ್ಲಿ ವಿಜ್ರಂಬಣೆಯಿಂದ ಲೋಕಾರ್ಪಣೆಯಾಯಿತು. 12 ನೇ ಶತಮಾನದಲ್ಲಿ 770 ಅಮರಗಣಂಗಳ(ಶರಣರ)ರು ಬಸವೇಶ್ವರ ಜೊತೆಗೂಡಿ ಸಾಮಾಜಿಕ ಮೌಢ್ಯಗಳನ್ನು ಹೋಗಲಾಡಿಸಿ, ಸಮಾನತೆಗಾಗಿ ಶ್ರಮಿಸಿದ್ದರು. ಸಮಾಜಕ್ಕೆ ಅವರು ನೀಡಿದ ಕೊಡುಗೆಯ ಸ್ಮರಣಾರ್ಥ ಅವರ ಹೆಸರಿನಲ್ಲಿಯೇ 770 ದಂಪತಿ ತಲಾ ರೂ.151…

Read More

ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರ ವಿವಿಯ ಕುಲಾಧಿಪತಿಗಳಾದ ಡಾ. ಎಂ. ಬಿ. ಪಾಟೀಲ ಅವರ ಮಾರ್ಗದರ್ಶನದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಪೂರಕವಾಗಿ ಹೊಸ ಹೊಸ ಪ್ರಯತ್ನಗಳಿಗೆ ಮುನ್ನುಡಿ ಬರೆಯುತ್ತಿದ್ದು, ಜನಪರ ಸೇವೆಗಳ ಮೂಲಕ ದೇಶಾದ್ಯಂತ ಗಮನ ಸೆಳೆಯುತ್ತಿದೆ.ಇಂಥ ಚಟುವಟಿಕೆಗಳಿಗೆ ಈಗ ಮತ್ತೋಂದು ಸೇರ್ಪಡೆ ಇದೇ ತಿಂಗಳು 10.04.2024ರಂದು ರವಿವಾರ ಬೆಳಿಗ್ಗೆ 7 ಗಂಟೆಗೆ ಆಯೋಜಿಸಿರುವ ಸ್ವಾಸ್ಥ್ಯ ಸಂತುಲನ ರಂಗೋಲಿ ಮಹೋತ್ಸವ ಕಾರ್ಯಕ್ರಮ. ವೈದ್ಯಕೀಯ ಶಿಕ್ಷಣದ ವಿಷಯದ ಮೇಲೆ ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದ ಕಾರ್ಯಕ್ರಮ ಇದಾಗಿದ್ದು, ಇದು ಗಿನ್ನೀಸ್ ಬುಕ್ ಆಫ್ ರೆಕಾರ್ಡ್ಸ್, ಲಂಡನ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಎಲೈಟ್ ವರ್ಲ್ಡ್ ರೆಕಾರ್ಡ್ಸ್, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗುವ ನಿಟ್ಟಿನಲ್ಲಿ ಮಹತ್ವ ಹೆಜ್ಜೆಯಾಗಿದೆ.ಈ ಕಾರ್ಯಕ್ರಮದಲ್ಲಿ 1500ಕ್ಕೂ ಹೆಚ್ಚು ಜನ ವೈದ್ಯಕೀಯ ವಿದ್ಯಾರ್ಥಿಗಳು…

Read More

’ವೀಣಾಂತರಂಗ’ – ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ-ಗದಗ ಅದೊಂದು ಬೃಹತ್ತಾದ ವೇದಿಕೆ. ದೊಡ್ಡ ಮಠದ ಸ್ವಾಮೀಜಿಗಳು, ಆ ಭಾಗದ ಶಾಸಕರು, ಜಿಲ್ಲಾ ಪಂಚಾಯತ್ ಸದಸ್ಯರು, ಪುರಸಭೆ ಅಧ್ಯಕ್ಷರು ಮತ್ತಿತರ ಘಟಾನುಘಟಿ ರಾಜಕಾರಣಿಗಳು ತಮಗೆ ಮೀಸಲಾಗಿದ್ದ ಕುರ್ಚಿಗಳಲ್ಲಿ ಆಸೀನರಾಗಿದ್ದರು. ಅದು ಸರ್ಕಾರವು ಪ್ರತಿ ವರ್ಷ ನಡೆಸುವ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮವಾಗಿತ್ತು. ಎಂದಿನಂತೆ ಕಾರ್ಯಕ್ರಮ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಸ್ವಾಮೀಜಿಯವರ ಅಮೃತ ಹಸ್ತದಿಂದ ಕಾರ್ಯಕ್ರಮದ ಉದ್ಘಾಟನೆಯ ನಂತರ ಉದ್ಘಾಟನಾ ಭಾಷಣವನ್ನು ಮಾಡಿದ ಅವರು ಹೆಣ್ಣು ಮಕ್ಕಳ ವ್ಯಕ್ತಿತ್ವವನ್ನು ಘನತೆಯನ್ನು ನಮ್ಮ ಹಲವಾರು ಪುಣ್ಯ ಸ್ತ್ರೀಯರ ಕುರಿತಾಗಿ ವಿವರಗಳ ಸಮೇತ ಹೇಳಿದರು. ನಂತರ ಮುಖ್ಯ ಅತಿಥಿಗಳ ಭಾಷಣ. ಮಹಿಳಾ ಸಮಾನತೆ ಕುರಿತಾಗಿ ಉಪನ್ಯಾಸ ನೀಡಿದ ಮುಖ್ಯ ಅತಿಥಿಗಳು ಅವರ ಉಪನ್ಯಾಸವನ್ನು ಮುಗಿಸುವ ಹೊತ್ತಿಗೆ ಸುಮಾರು ಒಂದು ಗಂಟೆ ಕಳೆದು ಹೋಗಿತ್ತು. ಅದಾದ ನಂತರ ಆ ಭವ್ಯವೇದಿಕೆಯಲ್ಲಿ ಆ ವರ್ಷದ ಮಹಿಳಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮ. ಅಂತೆಯೇ ಆ ವರ್ಷ ಸನ್ಮಾನಿಸಿಕೊಳ್ಳಲಿರುವ ಮಹಿಳೆಯರನ್ನು…

Read More

ವಿಜಯಪುರ: ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ ಮತ್ತು ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘ (ರಿ), ಬೆಂಗಳೂರು ಇವರ ಸಹಯೋಗದಲ್ಲಿ ಮಾ.೦೮ ರಂದು ವಿಜಯಪುರದ ಸರಕಾರಿ ಆರ್ಟ ಗ್ಯಾಲರಿಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಛಾಯಾಗ್ರಹಣ ಕ್ಷೇತ್ರದಲ್ಲಿರುವ ಮಹಿಳೆಯರಿಗೆ ಜಿಲ್ಲಾ ಛಾಯಾಸಾಧಕಿ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ಚಿತ್ರಕಲಾ ಪ್ರದರ್ಶನ, ಹಾಗೂ ಡಾ. ಎಸ್.ಟಿ. ಮೇರವಾಡೆ ರಚಿಸಿದ “ಆಭರಣ” ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಈ ಕಾರ್ಯಕ್ರಮವನ್ನು ವಿಜಯಪುರದ ಉಪವಿಭಾಗಾಧಿಕಾರಿಗಳು ಹಾಗೂ ಉಪವಿಭಾಗೀಯ ದಂಡಾಧಿಕಾರಿ ಶ್ವೇತಾ ಮೋಹನ ಬೀಡಿಕರರವರು ಉದ್ಘಾಟಿಸಿ ಪುಸ್ತಕ ಬಿಡುಗಡೆಮಾಡುವರು. ಮುಖ್ಯ ಅತಿಥಿಗಳಾಗಿ ವಿಜಯಪುರದ ಪ್ರವಾಸೋಧ್ಯಮ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಹಾಗೂ ಹಿರಿಯ ಕಲಾವಿದ ವಿದ್ಯಾಧರ ಸೋ. ಸಾಲಿಯವರು ಆಗಮಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಾಣಕ್ಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್. ಟಿ. ಮೇರವಾಡೆಯವರು ವಹಿಸಿಕೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ರಮೇಶ ಚವ್ಹಾಣ ಉಪಸ್ಥಿತರಿರುವರು.ಛಾಯಾಗ್ರಹಣ ಕ್ಷೇತ್ರದಲ್ಲಿರುವ ಮಹಿಳೆಯರಿಗೆ ಜಿಲ್ಲಾ ಛಾಯಾಸಾಧಕಿ ಪ್ರಶಸ್ತಿಯನ್ನುಶಶಿಕಲಾ ರಮೇಶ…

Read More

ಯೋಜನೆ ಕೈಬಿಡದಿದ್ದರೆ ತೀವ್ರಗೊಳ್ಳಲಿರುವ ಮೀನುಗಾರರ ಪ್ರತಿಭಟನೆ | ಡಾ.ಡಾ.ಗೌತಮ್ ಚೌಧರಿ ಎಚ್ಚರಿಕೆ ವಿಜಯಪುರ: ಹೊನ್ನಾವರದ ಬಂದರು ಯೋಜನೆ ಕಡಲಮಕ್ಕಳ ಬದುಕನ್ನೇ ಮುಳುಗಿಸುತ್ತಿದ್ದರೂ ರಾಜ್ಯ ಸರಕಾರ ಮಾತ್ರ ಬಡ ಮೀನುಗಾರರ ಕುಟುಂಬಗಳ ಅಸ್ತಿತ್ವಕ್ಕೇ ಧಕ್ಕೆ ತರುತ್ತಿರುವ ಈ ಯೋಜನೆ ಕೈಬಿಡದಿರುವುದು ಖಂಡನೀಯವೆಂದು ರಾಷ್ಟ್ರೀಯ ಮೀನುಗಾರರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಗೌತಮ್ ಆರ್ ಚೌಧರಿ ಹೇಳಿದ್ದಾರೆ.ನಗರದಲ್ಲಿ ಬುಧವಾರ ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಹೊನ್ನಾವರ ಬಂದರು ಯೋಜನೆಯಿಂದ ಸುಮಾರು 6,000 ಮೀನುಗಾರರ ಕುಟುಂಬಗಳು ಮತ್ತು ಒಟ್ಟು ಸುಮಾರು 23,500 ಮೀನುಗಾರರ ಬದುಕು ಕೊಚ್ಚಿ ಹೋಗುವ ಆತಂಕ ಎದುರಾಗಿದೆ. ಬಂದರು ಬೇಡ ಅಂತ ಅದೆಷ್ಟೋ ಪ್ರತಿಭಟನೆಗಳು ನಡೆದರೂ ಸರ್ಕಾರ ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಈ ಬಾರಿ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಮೀನುಗಾರರಿಗೋಸ್ಕರ ಸಾಕಷ್ಟು ಯೋಜನೆಗಳನ್ನು ಮಾಡಿದ್ದೇವೆ ಅಂದರು. ಅದು ಇದೇನಾ? ಅನ್ನೋ ಪ್ರಶ್ನೆ ಎದ್ದಿದೆ. ಹೊಸ ಬಂದರು ನಿರ್ಮಾಣ ಮತ್ತು ಅದಕ್ಕೆ ಸಂಪರ್ಕ ಕಲ್ಪಿಸಲು ರಸ್ತೆಗಾಗಿ ಸಾವಿರಾರು ಮೀನುಗಾರರ ಬದುಕಿನ ಮೇಲೆಯೇ ಚಪ್ಪಡಿ ಎಳೆಯುವ ಕಾರ್ಯ ಭರದಿಂದ…

Read More