ವಿಜಯಪುರ: ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ ಮತ್ತು ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘ (ರಿ), ಬೆಂಗಳೂರು ಇವರ ಸಹಯೋಗದಲ್ಲಿ ಮಾ.೦೮ ರಂದು ವಿಜಯಪುರದ ಸರಕಾರಿ ಆರ್ಟ ಗ್ಯಾಲರಿಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಛಾಯಾಗ್ರಹಣ ಕ್ಷೇತ್ರದಲ್ಲಿರುವ ಮಹಿಳೆಯರಿಗೆ ಜಿಲ್ಲಾ ಛಾಯಾಸಾಧಕಿ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ಚಿತ್ರಕಲಾ ಪ್ರದರ್ಶನ, ಹಾಗೂ ಡಾ. ಎಸ್.ಟಿ. ಮೇರವಾಡೆ ರಚಿಸಿದ “ಆಭರಣ” ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ವಿಜಯಪುರದ ಉಪವಿಭಾಗಾಧಿಕಾರಿಗಳು ಹಾಗೂ ಉಪವಿಭಾಗೀಯ ದಂಡಾಧಿಕಾರಿ ಶ್ವೇತಾ ಮೋಹನ ಬೀಡಿಕರರವರು ಉದ್ಘಾಟಿಸಿ ಪುಸ್ತಕ ಬಿಡುಗಡೆಮಾಡುವರು. ಮುಖ್ಯ ಅತಿಥಿಗಳಾಗಿ ವಿಜಯಪುರದ ಪ್ರವಾಸೋಧ್ಯಮ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಹಾಗೂ ಹಿರಿಯ ಕಲಾವಿದ ವಿದ್ಯಾಧರ ಸೋ. ಸಾಲಿಯವರು ಆಗಮಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಾಣಕ್ಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್. ಟಿ. ಮೇರವಾಡೆಯವರು ವಹಿಸಿಕೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ರಮೇಶ ಚವ್ಹಾಣ ಉಪಸ್ಥಿತರಿರುವರು.
ಛಾಯಾಗ್ರಹಣ ಕ್ಷೇತ್ರದಲ್ಲಿರುವ ಮಹಿಳೆಯರಿಗೆ ಜಿಲ್ಲಾ ಛಾಯಾಸಾಧಕಿ ಪ್ರಶಸ್ತಿಯನ್ನು
ಶಶಿಕಲಾ ರಮೇಶ ಮೈದರಗಿ, ಶಾರದಾ ಹಣಮಂತ ನಂದವಾಡಗಿ, ಅಶ್ವಿನಿ ಮೋಹನ ಉಪಾಧ್ಯೆ, ಗೀತಾ ಕೃಷ್ಣಾ ರಾಠೋಡ, ಚಂದ್ರಕಲಾ ಮಂಜುನಾಥ ತುಕೋಳ, ಶ್ವೇತಾ ಪರಶುರಾಮ ಅರಕೇರಿ, ಶೋಭಾ ಅನಿಲ್ ಹಿರೋಳ್ಳಿ ಇವರಿಗೆ ವಿತರಿಸಲಾಗುವುದು.
ಚಿತ್ರಕಲಾ ಪ್ರದರ್ಶನದಲ್ಲಿ
ಡಾ. ಶಶಿಕಲಾ ಹೂಗಾರ, ದಾಕ್ಷಾಯಣಿ ಇಮನಾದ, ಗಿರಿಜಾ ಬಿರಾದಾರ ಇವರ ಕಲಾಕೃತಿಗಳನ್ನು ಪ್ರದರ್ಶಿಸಲಿದ್ದಾರೆ ಎಂದು ಸಂಘದ ಕಾರ್ಯದರ್ಶಿ ಸತೀಶ ಕಲಾಲ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಮಾ.೦೮ ರಂದು ಪ್ರಶಸ್ತಿ ಪ್ರಧಾನ, ಚಿತ್ರಕಲಾ ಪ್ರದರ್ಶನ, ಕೃತಿ ಬಿಡುಗಡೆ
Related Posts
Add A Comment
