Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಅಫಜಲಪುರ: ತಾಲೂಕಿನ ಭೀಮಾ ನದಿ ದಡದಲ್ಲಿರುವ ಕಲ್ಯಾಣ ಕರ್ನಾಟಕದ ಕಲ್ಪತರು, ಪವಾಡ ಪುರುಷ ಬೇಡಿದವರಿಗೆ ಬೇಡಿದ್ದಾನೆ ನೀಡುವ ಕಾಮದೇನು ಕಲ್ಪವೃಕ್ಷವಾಗಿರುವ ಶ್ರೀ ಹುಚ್ಚ ಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ಅಗ್ಗಿ ಪ್ರವೇಶ ಮಾ.15 ರಂದು ಜರುಗಲಿದೆ ಎಂದು ಶ್ರೀ ಹುಚ್ಚಲಿಂಗೇಶ್ವರ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿ ಅಧ್ಯಕ್ಷ ಸಿದ್ದಾರ್ಥ ಮೈಂದರಗಿ ತಿಳಿಸಿದ್ದಾರೆ. ಈ ಜಾತ್ರೆ ಬಹಳ ವೈಭವದಿಂದ ಜರುಗುತ್ತಿದ್ದು ಯಾವುದೇ ಜಾತಿ ಮತ ಪಂಥ ಭೇದವಿಲ್ಲದೆ ಸರ್ವಜನರ ಆರಾಧ್ಯ ದೈವ ಶ್ರೀ ಹುಚ್ಚ ಲಿಂಗೇಶ್ವರರ ಜಾತ್ರೆಯ ನಿಮಿತ್ತ ವಿವಿಧ ಕಾರ್ಯಕ್ರಮಗಳು ಜರುಗಲಿವೆ.ದಿನಾಂಕ 10 ರಂದು ರವಿವಾರ ಉಡಚಣ ಗ್ರಾಮದಲ್ಲಿ ಸಕಲ ವಾದ್ಯ ವೈಭವಗಳೊಂದಿಗೆ ಪಲ್ಲಕ್ಕಿ ಉತ್ಸವ ಗ್ರಾಮದಲ್ಲಿ ಜರುಗಲಿದೆ. ದಿನಾಂಕ 14 ರಂದು ರಾತ್ರಿ ಹನ್ನೆರಡು ಗಂಟೆಗೆಮ ಕೊರಡುಗಳಿಗೆ ಅಗ್ನಿಪರ್ಶ ಜರುಗಲಿದೆ, ದಿನಾಂಕ 15 ರಂದು ಬೆಳಿಗ್ಗೆ 10 ಗಂಟೆಗೆ ವಾದ್ಯ ವೈಭವ ಪಲ್ಲಕ್ಕಿಯೊಂದಿಗೆ ಭೀಮಾ ನದಿಗೆ ತೆರಳಿ ಮೂರ್ತಿಗೆ ಗಂಗೆ ಸಿತಾಳ ಮಾಡಿಕೊಂಡು ಬರಲಾಗುವುದು. ನಂತರ 12:30 ಗಂಟೆಗೆ ಚಂದ್ರಾಯದೊಂದಿಗೆ ಭಂಡಾರಿ…
ಆಲಮಟ್ಟಿ ಎಂ.ಎಚ್.ಎಂ.ಪಪೂ ಕಾಲೇಜು ಪ್ರೌಢಶಾಲಾ ವಿಭಾಗದ ಎಸ್ಸೆಸ್ಸೆಲ್ಸಿ ಮಕ್ಕಳ ಬೀಳ್ಕೊಡುಗೆ | ಪ್ರತಿಭಾ ಪುರಸ್ಕಾರ ಆಲಮಟ್ಟಿ: ಇಂದಿನ ಯುವಜನತೆ ಒಂದಿಷ್ಟು ಒಳ್ಳೆಯ ಮೌಲ್ಯಾಧಾರಿತ ಆದರ್ಶಗಳನ್ನು ಮೈಗೂಡಿಸಿಕೊಂಡು ಬದುಕಿನ ಹೆಜ್ಜೆ ಪಥದಲ್ಲಿ ಸಾಗಬೇಕು. ಆದರ್ಶಗಳಿಲ್ಲದಿದ್ದರೆ ಬದುಕಿಗೆ ಅರ್ಥವೇ ಇಲ್ಲ ಎಂದು ಶಿಕ್ಷಕ, ಸಾಹಿತಿ, ವಾಗ್ಮಿ ಅಶೋಕ ಹಂಚಲಿ ಹೇಳಿದರು. ಸ್ಥಳೀಯ ಎಸ್.ವ್ಹಿ. ವ್ಹಿ. ಸಂಸ್ಥೆಯ ಎಂ.ಎಚ್.ಎಂ.ಪಪೂ ಕಾಲೇಜು ಪ್ರೌಢಶಾಲಾ ವಿಭಾಗದ ಪ್ರಸಕ್ತ ೨೦೨೩-೨೪ ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಶುಭಕೋರುವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ವಿದ್ಯಾರ್ಥಿಗಳೆಂದರೆ ಪುಟಿಯುವ ಶಕ್ತಿ ಹೊಂದಿರುವಂಥ ಅದ್ಬುತ ಚೆಂಡುಗಳು ಇದ್ದಹಾಗೆ. ಹೇಗೆ ಪುಟಿಯಸುತ್ತೆವೆಯೋ ಹಾಗೆ ಪುಟಿದೇಳುತ್ತವೆ. ಇಂದು ಆ ಚೆಂಡುಗಳನ್ನು ನೈತಿಕತೆಯ ಆಧಾರದ ಮೇಲೆ ಸುಂದರವಾಗಿ ಪುಟಿಸಿ ಅರಳಿಸಬೇಕಾದ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ಮಕ್ಕಳು ಕೂಡಾ ಸರಿಯಾಗಿ ವಿದ್ಯಾಭ್ಯಾಸದ ವಿದ್ಯಾರ್ಜನೆ ಗೈದು ಒಂದಿಷ್ಟು ಸಾಧನೆಯ ದಾರಿಯಲ್ಲಿ ಸಾಗಬೇಕು. ಈ ನಡುವೆ ಜನ್ಮದಾತರ ಋಣಭಾರ ತೀರಿಸುವ ಛಲ…
Udayarashmi kannada daily newspaper
ವಿಜಯಪುರ: ವಿಜಯಪುರ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕಾ ಕಾರ್ಯದರ್ಶಿಯಾದ ಮಲ್ಲಿಕಾರ್ಜುನ ಗದಿಗೆಪ್ಪ ಗೋಡೆಕಾರ, ತಾಲೂಕಾ ಅಧ್ಯಕ್ಷರಾದ ಅರುಣಗೌಡ ತೇರದಾಳ, ಉಪಾಧ್ಯಕ್ಷರಾದ ಮಹಾದೇವ ತೇಲಿ ಅವರನ್ನು ಜುಮನಾಳ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಜುಮನಾಳ ಪಿ.ಕೆ ಪಿ.ಎಸ್ ಸೊಸಾಯಿಟಿ ಅಧ್ಯಕ್ಷರಾದ ರಮೇಶ ಭೀರಪ್ಪ ವಗ್ಗರ ಉಪಾಧ್ಯಕ್ಷರಾಗಿ ಆನಂದ ಹೊನ್ನುಟಗಿ, ಈರಣ್ಣ ಬಬಲೇಶ್ವರ, ಬಿಜೆಪಿ ನಾಗಠಾಣ ಮಂಡಲ ಅಧ್ಯಕ್ಷರಾದ ಸಿದ್ದಗೊಂಡ ಶಿವಪ್ಪ ಬಿರಾದಾರ, ಸುರೇಶ ಗೋಡೆಕಾರ, ಶ್ರೀಶೈಲ ತರಲಗಟ್ಟಿ, ಶ್ರೀಶೈಲ ಜಂಬಗಿ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಆಲಮೇಲದಲ್ಲಿ ಮಹಾ ಶಿವರಾತ್ರಿ ಸಂಭ್ರಮ | ವಿಶೇಷ ಸಂಗೀತ ಕಾರ್ಯಕ್ರಮ | ಪ್ರಸಾದ ಸೇವೆ ಆಲಮೇಲ: ಮಹಾ ಶಿವರಾತ್ರಿ ನಿಮಿತ್ಯ ಪಟ್ಟಣದ ಪುರಾತನ ವಿಶ್ವೇಶ್ವರ ದೇವಸ್ಥಾನ ಮತ್ತು ರಾಮಲಿಂಗ ದೇವಸ್ಥಾನದಲ್ಲಿ ವಿಶೇಷ ಪೋಜೆಗೈಯಲಾಯಿತು.ಶುಕ್ರವಾರ ಶಿವರಾತ್ರಿ ನಿಮಿತ್ಯ ಪಟ್ಟಣದ ವಿಶ್ಚೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಗೈದು ದೇವಸ್ಥಾನ ಕಮಿಟಿ ವಿಶೇಷ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತು ಮತ್ತು ಪ್ರಸಾದ ಸೇವೆ ಮಾಡಲಾಗಿತ್ತು. ಶಿವರಾತ್ರಿ ನಿಮಿತ್ಯ ಎಲ್ಲರೂ ಉಪವಾಸ ಇರುವುದರಿಂದ ಸಾಯಂಕಾಲ ೫ ಗಂಟೆಯಿಂದ ಗ್ರಾಮಸ್ಥರು ವಿಶೇಶ್ವರ ದೇವಸ್ಥಾನಕ್ಕೆ ಅಪಾರ ಸಂಖ್ಯೆಯಲ್ಲಿ ಆಗಮಿಸಿ ದರ್ಶನ ಪಡೆದರು. ದೇವಸ್ಥಾನಕ್ಕೆ ಸಾವಿರಾರು ಜನರು ಆಗಮಿಸಿದ್ದರಿಂದ ಸುಮಾರು ೧ ಗಂಟೆಗಳ ಕಾಲ ಸರದಿ ಸಾಲಿನಲ್ಲಿ ನಿಂತು ಶಿವನ ದರ್ಶನ ಪಡೆದರು.ದೇವಸ್ಥಾನದ ಪೂಜಾರಿ ಪ್ರವೀಣ ಗುಡಿಮಠಸ್ವಾಮಿ, ಸಂಯೋಜಕರಾದ ನೀಲಪ್ಪ ಗುಣಾರಿ, ಬಸವರಾಜ ತೆಲ್ಲೂರ, ಮಲ್ಲಿಕಾರ್ಜುನ ಅಚಲೇರಿ, ಪ್ರಭು ವಾಲಿಕಾರ, ಕಾಮಣ್ಣ ಕಲ್ಲೂರ, ಮಲಕು ಕಳಾರಿ, ಶಿವಾನಂದ ಬುರಡ ಮುಂತಾದವರು ಇದ್ದರು.
ದೇವರಹಿಪ್ಪರಗಿ: ಕಲ್ಮೇಶ್ವರ ದೇವಸ್ಥಾನಕ್ಕೆ ಮಹಾಶಿವರಾತ್ರಿ ನಿಮಿತ್ಯವಾಗಿ ಶಿವಯೋಗದ ನಂತರ ಭಕ್ತರು ಆಗಮಿಸಿ ನೈವಿಧ್ಯ ಅರ್ಪಿಸಿ ಕಾಶೀಲಿಂಗನ ದರ್ಶನ ಪಡೆದರು.ಪಟ್ಟಣದ ಆರಾಧ್ಯ ದೇವನೇನಿಸಿದ ಕಲ್ಮೇಶ್ವರನ ದೇವಸ್ಥಾನಕ್ಕೆ ಶಿವರಾತ್ರಿ ಅಂಗವಾಗಿ ಶುಕ್ರವಾರ ನೂರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿ, ನೈವಿಧ್ಯೆ ಅರ್ಪಿಸುವುದರ ಮೂಲಕ ಶಿವಯೋಗದ ಭಕ್ತಿಭಾವ ಮೆರೆದರು. ಬೆಳಿಗ್ಗೆಯಿಂದಲೇ ಉಪವಾಸ ವೃತ ಕೈಗೊಂಡಿದ್ದ ಭಕ್ತ ಸಮೂಹ ಸಾಯಂಕಾಲ ಸ್ನಾನ , ಪೂಜಾದಿ ಕರ್ಮಗಳನ್ನು ಮುಗಿಸಿ ದೇವಸ್ಥಾನಕ್ಕೆ ಆಗಮಿಸಿದರು. ನಂತರ ಪುಷ್ಪಗಳಿಂದ ಅಲಂಕೃತಗೊಂಡ ಶಿವಲಿಂಗ ದರ್ಶನ ಪಡೆದು ಪುನೀತರಾದರು. ಅದರಲ್ಲೂ ಮಹಿಳೆಯರು ಹಣ್ಣುಗಳಿಂದ ಕೂಡಿದ ನೈವಿಧ್ಯ ತಂದು ಅರ್ಪಿಸುವುದು ಸಾಮಾನ್ಯವಾಗಿತ್ತು.ಶಿವರಾತ್ರಿ ಅಂಗವಾಗಿ ಅರ್ಚಕರು ಕಲ್ಮೇಶ್ವರ(ಕಾಶೀಲಿಂಗ)ನಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಬಿಲ್ವಪತ್ರೆ, ಪುಷ್ಪ, ಹಾರಗಳಿಂದ ಅಲಂಕಾರಗೊಳಿಸಿ ಭಕ್ತ ಸಮೂಹದ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದರು.ಪಟ್ಟಣದಲ್ಲಿ ಮಲ್ಲಯ್ಯನ ದೇವಸ್ಥಾನ, ಶಿವನಕಳ್ಳಿಯ ಶಿವನ ದೇವಾಲಯ, ಹೊಸನಗರದ ಪ್ರಳಯರುದ್ರ ಈರಣ್ಣ ದೇವಸ್ಥಾನ, ಇಂಡಿ ರಸ್ತೆಯ ರೇಣುಕಾಚಾರ್ಯ ಮಂದಿರ ಸೇರಿದಂತೆ ಎಲ್ಲ ಶಿವಲಿಂಗಗಳಿಗೆ ಹಾಗೂ ಸದಯ್ಯನಮಠ, ಜಡಿಮಠ, ಕಲ್ಮೇಶ್ವರ ಹಿರೇಮಠ, ಪರದೇಶಿಮಠ, ಶಾಂತಮಠಗಳಲ್ಲಿ ಶಿವರಾತ್ರಿ…
ವಿಜಯಪುರ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ದೇಶದ ಎಲ್ಲಾ ಮಹಿಳೆಯರಿಗೆ ಭರ್ಜರಿ ಉಡುಗೊರೆ ನೀಡಿದ್ದು, ಉಜ್ವಲ ಯೋಜನೆಯಡಿ ಎಲ್‌ಪಿಜಿ ಸಿಲಿಂಡರ್‌ನ ದರದ ಮೇಲಿನ ರೂ. ೧೦೦ ಕಡಿಮೆ ಮಾಡಿದ್ದಾರೆ. ಇದನ್ನು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಸ್ವಪ್ನಾ ಕಣಮುಚನಾಳ ಸ್ವಾಗತಿಸಿದ್ದಾರೆ.ಈ ಕುರಿತು ಶುಕ್ರವಾರ ಪ್ರಕಟಣೆ ನೀಡಿದ ಅವರು, ಮೋದಿಜಿ ಅವರ ನೇತೃತ್ವದ ಬಿಜೆಪಿ ಸರ್ಕಾರವು ಉಜ್ವಲ ಯೋಜನೆಯಡಿಯ ಎಲ್‌ಪಿಜಿ ಸಿಲಿಂqರ್‌ನ ಸಬ್ಸಿಡಿ ದರವನ್ನು ೨೦೦ರೂ ರಿಂದ ೩೦೦ರೂ ಹೆಚ್ಚಿಸಿದೆ. ಇದು ದೇಶದಾದ್ಯಂತ ೧೦ ಕೋಟಿಗೂ ಹೆಚ್ಚು ಕುಟುಂಬಗಳ ಆರ್ಥಿಕ ಹೊರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಲಿದೆ. ವಿಶೇಷವಾಗಿ ನಮ್ಮ ನಾರಿ ಶಕ್ತಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದಾರೆ ಹಾಗೂ ಮೋದಿಜಿ ಕ್ರಮಕ್ಕಾಗಿ ರಾಜ್ಯದ ಜನತೆಯ ಪರವಾಗಿ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.ಅಡುಗೆ ಅನಿಲ ಸಿಲಿಂಡರ್ ಹೆಚ್ಚು ಕೈಗೆಟಕುವಂತೆ ಮಾಡುವ ಮೂಲಕ, ನಾವು ಕುಟುಂಬಗಳ ಯೋಗಕ್ಷೇಮವನ್ನು ಮತ್ತು ಆರೋಗ್ಯಕರ ವಾತಾವರಣವನ್ನು ಖಚಿತಪಡಿಸಿಕೊಳ್ಳುವ ಗುರಿ ಹೊಂದಿದ್ದೇವೆ.…
ವಿಜಯಪುರ: ಬಿಜೆಪಿ ಕರ್ನಾಟಕ ಎಸ್‌ಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷರನ್ನಾಗಿ ಗೋಪಾಲ ಘಟಕಾಂಬಳೆ ಅವರನ್ನು ನಿಯುಕ್ತಿಗೊಳಿಸಲಾಗಿದೆ ಎಂದು ಆದೇಶ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ಎಸ್. ಮಂಜುನಾಥ ಅವರು ಆದೇಶ ಹೊರಡಿಸಿದ್ದಾರೆ.ಗೋಪಾಲ ಘಟಕಾಂಬಳೆ ಅವರು ಈ ಹೊಣೆಗಾರಿಕೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾ, ಪಕ್ಷದ ಸಂಘಟನೆಯನ್ನು ತಳಮಟ್ಟದಲ್ಲಿ ಸದೃಢಗೊಳಿಸುತ್ತಾ, ಮುಂಬರುವ ಎಲ್ಲ ರೀತಿಯ ಸವಾಲುಗಳನ್ನು ಎದುರಿಸಲು ಶಕ್ತಿ ತುಂಬುತ್ತಾ ಪಕ್ಷದ ವರ್ಚಸ್ಸನ್ನು ಹೆಚ್ಚಿಸುವಲ್ಲಿ ಸತತ ಶ್ರಮಿಸಲು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.
ಚಂದ್ರಾಮ ಯಶವಂತ ಹೊನಕಟ್ಟಿ ( ಮಾಸ್ತರ) ಪೂಣ್ಯಾರಾಧನೆ | ಹೊನಕಟ್ಟಿ ಮಾಸ್ತರ್ ಪ್ರಶಸ್ತಿ ಪ್ರದಾನ ವಿಜಯಪುರ: ಮಾದರಿಯಾಗಿ ಶಿಕ್ಷಕರ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಏರ್ಪಡಿಸಿದ್ದು ಅತ್ಯಂತ ಸ್ತುತ್ಯಾಹ೯ವಾಗಿದೆ ಎಂದು ವಿಜಯಪುರ ವಿಭಾಗದ ಪೋಲೀಸ ಉಪ ಅಧೀಕ್ಷಕ ಬಸವರಾಜ ಯಲಗಾರ ಅಭಿಪ್ರಾಯ ವ್ಯಕ್ತಪಡಿಸಿದರು.ಗುರುವಾರ ತಾಂಬಾ ಹೋಬಳಿಯ ಹರಳಯ್ಯನ ಹಟ್ಟಿ ಗ್ರಾಮದ ಸಿಪಿಐ ಜ್ಯೋತಿಲಿಂಗ ಹೊನಕಟ್ಟಿ ತೋಟದಲ್ಲಿ ದಿ ಚಂದ್ರಾಮ ಯಶವಂತ ಹೊನಕಟ್ಟಿ ( ಮಾಸ್ತರ) ಪೂಣ್ಯಾರಾಧನೆ ಕಾರ್ಯಕ್ರಮದಲ್ಲಿ ಮಾಸ್ತರ ಪ್ರಶಸ್ತಿಯನ್ನು ಪ್ರದಾನ ಮಾಡಿ ಮಾತನಾಡಿದ ಡಿಎಸ್ಪಿ ,ಶಿಕ್ಷಕರು ಅತ್ಯಂತ ವಿದ್ವಾಂಸರಾಗಿದ್ದು ನಿತ್ಯ ಅಧ್ಯಯನ ಶೀಲರಾಗಬೇಕು. ಶಿಕ್ಷಣ ಜೊತೆಗೆ ಸಾಂಸ್ಕೃತಿಕ ಪರಿಕಲ್ಪನೆಯಿರಬೇಕು. ಕುಟುಂಬದ ಸಂಸ್ಕಾರ ಪಡೆದ ವ್ಯಕ್ತಿ ತನ್ನ ಜೀವನದ ಮೌಲ್ಯಗಳನ್ನು ಕಾಪಾಡುತ್ತಾನೆ ಅಂತಹ ವ್ಯಕ್ತಿತ್ವ ರೂಪಿಸಿಕೊಂಡಿರುವ ಜ್ಯೋತಿಲಿಂಗ ಹೊನಕಟ್ಟಿ ನಮಗೆ ಮಾದರಿಯ ಎಂದರು.ಕಸಾಪ ಜಿಲ್ಲಾ ಗೌರವ ಕೋಶಾಧ್ಯಕ್ಷ ಡಾ: ಸಂಗಮೇಶ ಮೇತ್ರಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಹೊನಕಟ್ಟಿ ಕುಟುಂಬ ಇಂದಿನ ಆಧುನಿಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಕುಟುಂಬದಲ್ಲಿ ಅಗಲಿದ ಎಲ್ಲ…
ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಶುಕ್ರವಾರ ಶಿವರಾತ್ರಿ ಹಬ್ಬವನ್ನು ಜನರು ಶಿವನ ನಾಮಸ್ಮರಣೆಯೊಂದಿಗೆ ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಪಟ್ಟಣದ ಐತಿಹಾಸಿಕ ಮೂಲನಂದೀಶ್ವರ (ಬಸವೇಶ್ವರ) ದೇವಸ್ಥಾನ, ಶಿವ ದೇಗುಲ, ಗೌರಿ-ಶಂಕರ ದೇವಸ್ಥಾನ, ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿತು.ಬೆಳಿಗ್ಗೆ ಕುಟುಂಬ ಸದಸ್ಯರೊಂದಿಗೆ ಜನರು ದೇವಸ್ಥಾನಕ್ಕೆ ತೆರಳಿ ದೇವರಿಗೆ ಪೂಜೆ ಸಲ್ಲಿಸಿ ಉಪವಾಸ ಆರಂಭಿಸಿದರು. ಇನ್ನು ಕೆಲವರು ಮನೆಯಲ್ಲಿಯೇ ದೇವರಿಗೆ ಪೂಜೆ ಸಲ್ಲಿಸಿ ಉಪವಾಸ ಆಚರಣೆ ಆರಂಭಿಸಿದರು. ಸಂಜೆ ವಿವಿಧ ದೇವಸ್ಥಾನಕ್ಕೆ ತೆರಳಿ ಕಾಯಿ, ಕರ್ಪೂರದೊಂದಿಗೆ ದೇವರಿಗೆ ಪೂಜೆ ಸಲ್ಲಿಸಿದರು. ನಂತರ ಫಲಹಾರ ಸೇವಿಸುವ ಮೂಲಕ ಶಿವರಾತ್ರಿ ಉಪವಾಸ ಬಿಟ್ಟರು. ಐತಿಹಾಸಿಕ ಮೂಲನಂದೀಶ್ವರ(ಬಸವೇಶ್ವರ) ದೇವಸ್ಥಾನದಲ್ಲಿ ಶಿವರಾತ್ರಿಯಂಗವಾಗಿ ಸಂಜೆ ವಿಶೇಷ ರುದ್ರಾಭಿಷೇಕ ದೇವಸ್ಥಾನದ ಅರ್ಚಕ ಗೌರಿಶಂಕರ ಚರಂತಿಮಠ ಇವರ ಸಮ್ಮುಖದಲ್ಲಿ ಭಕ್ತರು ನೆರವೇರಿಸಿದರು.ಇಡೀ ರಾತ್ರಿ ಮೂಲನಂದೀಶ್ವರ ದೇವರಿಗೆ ಶಿವರಾತ್ರಿಯಂಗವಾಗಿ ಬಿಲ್ವಾರ್ಚನೆ, ವಿಶೇಷ ಪೂಜೆ ನೆರವೇರಿಸಲಾಯಿತು.ಸಾಮೂಹಿಕ ಇಷ್ಟಲಿಂಗ ಪೂಜೆಃ ಪಟ್ಟಣದ ವಿರಕ್ತಮಠದಲ್ಲಿ ಸಂಜೆ ಸಾಮೂಹಿಕ ಇಷ್ಟಲಿಂಗ ಪೂಜಾ ಕಾರ್ಯಕ್ರಮ ಜರುಗಿತು. ಸಿದ್ಧಲಿಂಗ…
