ಅಫಜಲಪುರ: ತಾಲೂಕಿನ ಭೀಮಾ ನದಿ ದಡದಲ್ಲಿರುವ ಕಲ್ಯಾಣ ಕರ್ನಾಟಕದ ಕಲ್ಪತರು, ಪವಾಡ ಪುರುಷ ಬೇಡಿದವರಿಗೆ ಬೇಡಿದ್ದಾನೆ ನೀಡುವ ಕಾಮದೇನು ಕಲ್ಪವೃಕ್ಷವಾಗಿರುವ ಶ್ರೀ ಹುಚ್ಚ ಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ಅಗ್ಗಿ ಪ್ರವೇಶ ಮಾ.15 ರಂದು ಜರುಗಲಿದೆ ಎಂದು ಶ್ರೀ ಹುಚ್ಚಲಿಂಗೇಶ್ವರ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿ ಅಧ್ಯಕ್ಷ ಸಿದ್ದಾರ್ಥ ಮೈಂದರಗಿ ತಿಳಿಸಿದ್ದಾರೆ. ಈ ಜಾತ್ರೆ ಬಹಳ ವೈಭವದಿಂದ ಜರುಗುತ್ತಿದ್ದು ಯಾವುದೇ ಜಾತಿ ಮತ ಪಂಥ ಭೇದವಿಲ್ಲದೆ ಸರ್ವಜನರ ಆರಾಧ್ಯ ದೈವ ಶ್ರೀ ಹುಚ್ಚ ಲಿಂಗೇಶ್ವರರ ಜಾತ್ರೆಯ ನಿಮಿತ್ತ ವಿವಿಧ ಕಾರ್ಯಕ್ರಮಗಳು ಜರುಗಲಿವೆ.
ದಿನಾಂಕ 10 ರಂದು ರವಿವಾರ ಉಡಚಣ ಗ್ರಾಮದಲ್ಲಿ ಸಕಲ ವಾದ್ಯ ವೈಭವಗಳೊಂದಿಗೆ ಪಲ್ಲಕ್ಕಿ ಉತ್ಸವ ಗ್ರಾಮದಲ್ಲಿ ಜರುಗಲಿದೆ. ದಿನಾಂಕ 14 ರಂದು ರಾತ್ರಿ ಹನ್ನೆರಡು ಗಂಟೆಗೆಮ ಕೊರಡುಗಳಿಗೆ ಅಗ್ನಿಪರ್ಶ ಜರುಗಲಿದೆ, ದಿನಾಂಕ 15 ರಂದು ಬೆಳಿಗ್ಗೆ 10 ಗಂಟೆಗೆ ವಾದ್ಯ ವೈಭವ ಪಲ್ಲಕ್ಕಿಯೊಂದಿಗೆ ಭೀಮಾ ನದಿಗೆ ತೆರಳಿ ಮೂರ್ತಿಗೆ ಗಂಗೆ ಸಿತಾಳ ಮಾಡಿಕೊಂಡು ಬರಲಾಗುವುದು. ನಂತರ 12:30 ಗಂಟೆಗೆ ಚಂದ್ರಾಯದೊಂದಿಗೆ ಭಂಡಾರಿ ದಂಪತಿಗಳು ಪಲ್ಲಕ್ಕಿಯೊಂದಿಗೆ ಅಪಾರ ಸಂಖ್ಯೆಯ ಭಕ್ತ ಸಮೂಹದ ಮಧ್ಯೆ ಅಗ್ನಿ ಪ್ರವೇಶ ಮಾಡುವರು. ನಂತರ ಭಕ್ತಾರಿಂದ ದೇವರಿಗೆ ನೈವೇದ್ಯ ಜರಗುವುದು.
ಪ್ರತಿ ವರ್ಷದಂತೆ ಶ್ರೀ ಹುಚ್ಚ ಲಿಂಗೇಶ್ವರ ಜೀವನೋದ್ಧಾರ ಟ್ರಸ್ಟ್ ಕಮಿಟಿ ವತಿಯಿಂದ ಜಾತ್ರೆ ಅಂಗವಾಗಿ ಜಾನುವಾರಗಳ ಭವ್ಯ ಜಾತ್ರೆ ನಡೆಯುತ್ತದೆ ಇದರಿಂದ ಈ ಭಾಗದ ರೈತರಿಗೆ ಸಾಕಷ್ಟು ಅನುಕೂಲವಾಗಿದೆ, ಈ ದನಗಳ ಜಾತ್ರೆಗೆ ಬರುವ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆಂ ಮಾಡಲಾಗಿದೆ ಹಾಗೂ ದನಗಳ ಆರೋಗ್ಯ ತಪಾಸಣೆ ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ ಜರುಗಲಿದೆ. ರಾತ್ರಿ 10.30 ಗಂಟೆಗೆ ಶ್ರೀ ಹುಚ್ಚ ಲಿಂಗೇಶ್ವರ ಹವ್ಯಾಸಿ ಕಲಾ ಬಳಗದಿಂದ ದುಡ್ಡಿನ ದರ್ಪ ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಹುಚ್ಚಲಿಂಗೇಶ್ವರ ಜೀರ್ಣೋದ್ಧಾರ ಟ್ರಸ್ಟ್ ಅಧ್ಯಕ್ಷ ಸಿದ್ಧಾರ್ಥ ಮೈಂದರಗಿ, ಉಪಾಧ್ಯಕ್ಷ ಗಡ್ಡದೆಪ್ಪ ಕಡ್ಲಾಜಿ, ಕಾರ್ಯದರ್ಶಿ ಕಾಜಪ್ಪ ಬಿ ನಾಲ್ಕು ಮನ್, ಖಜಾಂಚಿ ವಿಠ್ಠಲ್ ಕಡ್ಲಾಜಿ , ಸಹ ಕಾರ್ಯದರ್ಶಿ ಚಂದ್ರಶೇಖರ ಇಬ್ರಾಹಿಂಪುರ್, ಸದಸ್ಯರಾದ ಶರಣು ಎನ್ ದೊಡ್ಮನಿ ಮುಂತಾದವರು ಉಪಸ್ಥಿತರಿದ್ದರು
Subscribe to Updates
Get the latest creative news from FooBar about art, design and business.
Related Posts
Add A Comment

