ದೇವರಹಿಪ್ಪರಗಿ: ಕಲ್ಮೇಶ್ವರ ದೇವಸ್ಥಾನಕ್ಕೆ ಮಹಾಶಿವರಾತ್ರಿ ನಿಮಿತ್ಯವಾಗಿ ಶಿವಯೋಗದ ನಂತರ ಭಕ್ತರು ಆಗಮಿಸಿ ನೈವಿಧ್ಯ ಅರ್ಪಿಸಿ ಕಾಶೀಲಿಂಗನ ದರ್ಶನ ಪಡೆದರು.
ಪಟ್ಟಣದ ಆರಾಧ್ಯ ದೇವನೇನಿಸಿದ ಕಲ್ಮೇಶ್ವರನ ದೇವಸ್ಥಾನಕ್ಕೆ ಶಿವರಾತ್ರಿ ಅಂಗವಾಗಿ ಶುಕ್ರವಾರ ನೂರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿ, ನೈವಿಧ್ಯೆ ಅರ್ಪಿಸುವುದರ ಮೂಲಕ ಶಿವಯೋಗದ ಭಕ್ತಿಭಾವ ಮೆರೆದರು. ಬೆಳಿಗ್ಗೆಯಿಂದಲೇ ಉಪವಾಸ ವೃತ ಕೈಗೊಂಡಿದ್ದ ಭಕ್ತ ಸಮೂಹ ಸಾಯಂಕಾಲ ಸ್ನಾನ , ಪೂಜಾದಿ ಕರ್ಮಗಳನ್ನು ಮುಗಿಸಿ ದೇವಸ್ಥಾನಕ್ಕೆ ಆಗಮಿಸಿದರು. ನಂತರ ಪುಷ್ಪಗಳಿಂದ ಅಲಂಕೃತಗೊಂಡ ಶಿವಲಿಂಗ ದರ್ಶನ ಪಡೆದು ಪುನೀತರಾದರು. ಅದರಲ್ಲೂ ಮಹಿಳೆಯರು ಹಣ್ಣುಗಳಿಂದ ಕೂಡಿದ ನೈವಿಧ್ಯ ತಂದು ಅರ್ಪಿಸುವುದು ಸಾಮಾನ್ಯವಾಗಿತ್ತು.
ಶಿವರಾತ್ರಿ ಅಂಗವಾಗಿ ಅರ್ಚಕರು ಕಲ್ಮೇಶ್ವರ(ಕಾಶೀಲಿಂಗ)ನಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಬಿಲ್ವಪತ್ರೆ, ಪುಷ್ಪ, ಹಾರಗಳಿಂದ ಅಲಂಕಾರಗೊಳಿಸಿ ಭಕ್ತ ಸಮೂಹದ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದರು.
ಪಟ್ಟಣದಲ್ಲಿ ಮಲ್ಲಯ್ಯನ ದೇವಸ್ಥಾನ, ಶಿವನಕಳ್ಳಿಯ ಶಿವನ ದೇವಾಲಯ, ಹೊಸನಗರದ ಪ್ರಳಯರುದ್ರ ಈರಣ್ಣ ದೇವಸ್ಥಾನ, ಇಂಡಿ ರಸ್ತೆಯ ರೇಣುಕಾಚಾರ್ಯ ಮಂದಿರ ಸೇರಿದಂತೆ ಎಲ್ಲ ಶಿವಲಿಂಗಗಳಿಗೆ ಹಾಗೂ ಸದಯ್ಯನಮಠ, ಜಡಿಮಠ, ಕಲ್ಮೇಶ್ವರ ಹಿರೇಮಠ, ಪರದೇಶಿಮಠ, ಶಾಂತಮಠಗಳಲ್ಲಿ ಶಿವರಾತ್ರಿ ನಿಮಿತ್ಯ ವಿಶೇಷ ಪೂಜೆಗಳು ಜರುಗಿದವು. ಭಕ್ತರು ದರ್ಶನ ಪಡೆದು ಪುನೀತರಾದರು.
Subscribe to Updates
Get the latest creative news from FooBar about art, design and business.
Related Posts
Add A Comment

