ಆಲಮೇಲದಲ್ಲಿ ಮಹಾ ಶಿವರಾತ್ರಿ ಸಂಭ್ರಮ | ವಿಶೇಷ ಸಂಗೀತ ಕಾರ್ಯಕ್ರಮ | ಪ್ರಸಾದ ಸೇವೆ
ಆಲಮೇಲ: ಮಹಾ ಶಿವರಾತ್ರಿ ನಿಮಿತ್ಯ ಪಟ್ಟಣದ ಪುರಾತನ ವಿಶ್ವೇಶ್ವರ ದೇವಸ್ಥಾನ ಮತ್ತು ರಾಮಲಿಂಗ ದೇವಸ್ಥಾನದಲ್ಲಿ ವಿಶೇಷ ಪೋಜೆಗೈಯಲಾಯಿತು.
ಶುಕ್ರವಾರ ಶಿವರಾತ್ರಿ ನಿಮಿತ್ಯ ಪಟ್ಟಣದ ವಿಶ್ಚೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಗೈದು ದೇವಸ್ಥಾನ ಕಮಿಟಿ ವಿಶೇಷ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತು ಮತ್ತು ಪ್ರಸಾದ ಸೇವೆ ಮಾಡಲಾಗಿತ್ತು. ಶಿವರಾತ್ರಿ ನಿಮಿತ್ಯ ಎಲ್ಲರೂ ಉಪವಾಸ ಇರುವುದರಿಂದ ಸಾಯಂಕಾಲ ೫ ಗಂಟೆಯಿಂದ ಗ್ರಾಮಸ್ಥರು ವಿಶೇಶ್ವರ ದೇವಸ್ಥಾನಕ್ಕೆ ಅಪಾರ ಸಂಖ್ಯೆಯಲ್ಲಿ ಆಗಮಿಸಿ ದರ್ಶನ ಪಡೆದರು. ದೇವಸ್ಥಾನಕ್ಕೆ ಸಾವಿರಾರು ಜನರು ಆಗಮಿಸಿದ್ದರಿಂದ ಸುಮಾರು ೧ ಗಂಟೆಗಳ ಕಾಲ ಸರದಿ ಸಾಲಿನಲ್ಲಿ ನಿಂತು ಶಿವನ ದರ್ಶನ ಪಡೆದರು.
ದೇವಸ್ಥಾನದ ಪೂಜಾರಿ ಪ್ರವೀಣ ಗುಡಿಮಠಸ್ವಾಮಿ, ಸಂಯೋಜಕರಾದ ನೀಲಪ್ಪ ಗುಣಾರಿ, ಬಸವರಾಜ ತೆಲ್ಲೂರ, ಮಲ್ಲಿಕಾರ್ಜುನ ಅಚಲೇರಿ, ಪ್ರಭು ವಾಲಿಕಾರ, ಕಾಮಣ್ಣ ಕಲ್ಲೂರ, ಮಲಕು ಕಳಾರಿ, ಶಿವಾನಂದ ಬುರಡ ಮುಂತಾದವರು ಇದ್ದರು.

