ಚಂದ್ರಾಮ ಯಶವಂತ ಹೊನಕಟ್ಟಿ ( ಮಾಸ್ತರ) ಪೂಣ್ಯಾರಾಧನೆ | ಹೊನಕಟ್ಟಿ ಮಾಸ್ತರ್ ಪ್ರಶಸ್ತಿ ಪ್ರದಾನ
ವಿಜಯಪುರ: ಮಾದರಿಯಾಗಿ ಶಿಕ್ಷಕರ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಏರ್ಪಡಿಸಿದ್ದು ಅತ್ಯಂತ ಸ್ತುತ್ಯಾಹ೯ವಾಗಿದೆ ಎಂದು ವಿಜಯಪುರ ವಿಭಾಗದ ಪೋಲೀಸ ಉಪ ಅಧೀಕ್ಷಕ ಬಸವರಾಜ ಯಲಗಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಗುರುವಾರ ತಾಂಬಾ ಹೋಬಳಿಯ ಹರಳಯ್ಯನ ಹಟ್ಟಿ ಗ್ರಾಮದ ಸಿಪಿಐ ಜ್ಯೋತಿಲಿಂಗ ಹೊನಕಟ್ಟಿ ತೋಟದಲ್ಲಿ ದಿ ಚಂದ್ರಾಮ ಯಶವಂತ ಹೊನಕಟ್ಟಿ ( ಮಾಸ್ತರ) ಪೂಣ್ಯಾರಾಧನೆ ಕಾರ್ಯಕ್ರಮದಲ್ಲಿ ಮಾಸ್ತರ ಪ್ರಶಸ್ತಿಯನ್ನು ಪ್ರದಾನ ಮಾಡಿ ಮಾತನಾಡಿದ ಡಿಎಸ್ಪಿ ,
ಶಿಕ್ಷಕರು ಅತ್ಯಂತ ವಿದ್ವಾಂಸರಾಗಿದ್ದು ನಿತ್ಯ ಅಧ್ಯಯನ ಶೀಲರಾಗಬೇಕು. ಶಿಕ್ಷಣ ಜೊತೆಗೆ ಸಾಂಸ್ಕೃತಿಕ ಪರಿಕಲ್ಪನೆಯಿರಬೇಕು. ಕುಟುಂಬದ ಸಂಸ್ಕಾರ ಪಡೆದ ವ್ಯಕ್ತಿ ತನ್ನ ಜೀವನದ ಮೌಲ್ಯಗಳನ್ನು ಕಾಪಾಡುತ್ತಾನೆ ಅಂತಹ ವ್ಯಕ್ತಿತ್ವ ರೂಪಿಸಿಕೊಂಡಿರುವ ಜ್ಯೋತಿಲಿಂಗ ಹೊನಕಟ್ಟಿ ನಮಗೆ ಮಾದರಿಯ ಎಂದರು.
ಕಸಾಪ ಜಿಲ್ಲಾ ಗೌರವ ಕೋಶಾಧ್ಯಕ್ಷ ಡಾ: ಸಂಗಮೇಶ ಮೇತ್ರಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಹೊನಕಟ್ಟಿ ಕುಟುಂಬ ಇಂದಿನ ಆಧುನಿಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಕುಟುಂಬದಲ್ಲಿ ಅಗಲಿದ ಎಲ್ಲ ಹಿರಿಯರನ್ನು ನೆನೆಯುವ ಈ ಪುಣ್ಯ ಸ್ಮರಣೋತ್ಸವದಲ್ಲಿ ಮಾಸ್ತರ ಪ್ರಶಸ್ತಿ ಪ್ರದಾನ ಮಾಡಿದ್ದು ಶ್ಲಾಘನೀಯ ಎಂದರು.
ನ್ಯಾಯವಾದಿ ಮಹಮ್ಮದ ಗೌಸ ಹವಾಲ್ದಾರ ಮಾತನಾಡಿ, ನಮ್ಮನ್ನು ಹೆತ್ತವರನ್ನು ಇದ್ದಾಗ ಹಾಗು ಅಗಲಿದಾಗ ಸ್ಮರಿಸುವುದೆ ಪುಣ್ಯ. ತಂದೆ ತಾಯಿಯೆ ದೇವರೆಂದು ಪೂಜಿಸುವವರು ಅತ್ಯಂತ ಶ್ರೇಷ್ಠರು ಎಂದರು.
ಸಾಹಿತಿ ಶಿವಾನಂದ ಮಂಗಾನವರ. ಚಿಂತಕ ಮಹೆತಾಬ ಕಾಗವಾಡ. ಮಾತನಾಡಿದರು.
ಸಿದ್ದಯ್ಯ ಹಿರೇಮಠ ರಾಮಲಿಂಗಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಧ್ಯಕ್ಷತೆ ವಹಿಸಿದ್ದರು.
ಕಸಾಪ ದತ್ತಿ ಸಂಚಾಲಕ ರಾಜೇಸಾಬ ಶಿವನಗುತ್ತಿ ನ್ಯಾಯವಾದಿ ಕಿರಣ ಚಲುವಾದಿ. ಯುವ ಪರಿಷತ್ತು ಅಧ್ಯಕ್ಷ ಶರಣು ಶಬರದ, ಸಿಪಿಐ ಜ್ಯೋತಿಲಿಂಗ ಹೊನಕಟ್ಟಿ ವೇದಿಕೆಯಲ್ಲಿದ್ದರು.
ಮಾಸ್ತರ ಪ್ರಶಸ್ತಿ ಪುರಸ್ಕೃತರು
ಡಾ:ಅಶೋಕ ನರೋಡ, ಮಹಾಲಂಗಪೂರ, ಅಶೋಕ ಹಂಚಲಿ, ಬಾಗೆವಾಡಿ
ಸಂಗಪ್ಪ ಹರಳಯ್ಯಾ ಅಹಿರಸಂಗ.
ಶಿಲ್ಪಾ ಭಸ್ಮೆ ಕವಲಗಿ.
ಚೌಡಪ್ಪ್ ಮೇತ್ರಿ ಹರಳಯ್ಯನ ಹಟ್ಟಿ.
ಮಲ್ಲೇಶಿ ಚಮ್ಮಾಗೋಳ, ಗೊರನಾಳ ಮಾಸ್ತರ ಪ್ರಶಸ್ತಿಯನ್ನು ಪಡೆದುಕೊಂಡರು.

