Author: editor.udayarashmi@gmail.com

ಬಸವನಬಾಗೇವಾಡಿ: ಮಹಾತ್ಮರ ಸತ್ಸಂಗದಲ್ಲಿ ನಡೆದರೆ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ. ಆಧ್ಯಾತ್ಮದಿಂದ ಜೀವನದಲ್ಲಿ ಶಾಂತಿ-ನೆಮ್ಮದಿ ಸಿಗುತ್ತದೆ ಎಂದು ಬುದ್ನಿ ಸಿದ್ದಾರೂಢಮಠದ ಸಿದ್ದಾನಂದ ಸ್ವಾಮೀಜಿ ಹೇಳಿದರು.ಪಟ್ಟಣದ ಸಮೀಪದ ಜೈನಾಪೂರ ಗ್ರಾಮದ ಪವಾರ ಬಸವೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿಯಂಗವಾಗಿ ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ ಶಿವಭಜನೆ ಜಾಗರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದರೆ ಗುರುಗಳ ಆಶೀರ್ವಾದ ಪಡೆದುಕೊಳ್ಳುವ ಭಾಗ್ಯ ಸಿಗುತ್ತದೆ. ಪಾಪ ನಶಿಸಿ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ. ಪ್ರತಿ ತಿಂಗಳು ಶಿವರಾತ್ರಿ ಇರುತ್ತದೆ. ವರ್ಷದಲ್ಲಿ ಒಂದು ಮಾತ್ರ ಮಹಾಶಿವರಾತ್ರಿ ಇರುತ್ತದೆ. ಈ ಮಹಾಶಿವರಾತ್ರಿಯಂದು ಇಡೀ ರಾತ್ರಿ ಶಿವನಾಮಸ್ಮರಣೆ ಮಾಡಿದರೆ ನಮ್ಮ ಭವ ಕಷ್ಟಗಳನ್ನು ಶಿವ ದೂರ ಮಾಡಿ ಜೀವನದಲ್ಲಿ ಸುಖ-ನೆಮ್ಮದಿ ನೀಡುತ್ತಾನೆ ಎಂದರು.ಯಲಗೋಡ ಪುರದಾಳ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಶಿವಪಥವ ಅರಿಯಬೇಕಾದರೆ ಗುರು ಪಥವ ಅಗತ್ಯವಿದೆ. ಗುರು ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಾನೆ. ಅಂತರಂಗ ಸಾಧನೆಯಿಂದ ಜ್ಞಾನ ಪಡೆದುಕೊಳ್ಳಬಹುದು. ಮನುಷ್ಯ ದುರ್ಬಲನಾಗದೇ ಸಬಲನಾಗಿ ಮನುಷ್ಯ ಜೀವನವನ್ನು ಪಾವನ ಮಾಡಿಕೊಳ್ಳುವ ಕಡೆಗೆ ಗಮನ…

Read More

ವಿಜಯಪುರ: ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಥಾವರಚಂದ ಗೆಹ್ಲೋಟ್ ಅವರು ಮಾ.೧೧ ರಂದು ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಘಟಿಕೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಮಾರ್ಚ್ ೧೧ ರಂದು ಬೆಳಿಗ್ಗೆ ೮-೪೫ಕ್ಕೆ ಬೆಳಗಾವಿಯಿಂದ ಹೊರಟು ಮಧ್ಯಾಹ್ನ ೧೧-೪೫ಕ್ಕೆ ವಿಜಯಪುರದ ತೊರವಿಯಲ್ಲಿರುವ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಜ್ಞಾನಶಕ್ತಿ ಕ್ಯಾಂಪಸ್‌ಗೆ ಆಗಮಿಸಿ ಮಧ್ಯಾಹ್ನ ೧೨-೧೫ಕ್ಕೆ ವಿವಿಯ ೧೫ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ ೩ ಗಂಟೆಗೆ ವಿಜಯಪುರದಿಂದ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Read More

ಬಬಲೇಶ್ವರ ತಾಲೂಕಾ ಆಡಳಿತ ನೂತನ ಕಟ್ಟಡ ಉದ್ಘಾಟನೆ | ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಭರವಸೆ ವಿಜಯಪುರ: ಬಬಲೇಶ್ವರ ಪಟ್ಟಣದ ಅಡವಿಸಂಗಾಪುರ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಅಂದಾಜು ರೂ.೧೦ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ತಾಲೂಕು ಆಡಳಿತ ಸೌಧ (ಮಿನಿ ವಿಧಾನಸೌಧ) ನೂತನ ಕಟ್ಟಡ, ಕಟ್ಟಡವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಅವರು ಉದ್ಘಾಟಿಸಿದರು.ಶನಿವಾರ ಬಬಲೇಶ್ವರದಲ್ಲಿ ಹಮ್ಮಿಕೊಂಡ ನೂತನ ತಾಲೂಕಾಡಳಿತ ಕಟ್ಟಡ ಉದ್ಘಾಟನೆ ಹಾಗೂ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, ಈ ಕಟ್ಟಡದ ನೆಲಮಹಡಿಯಲ್ಲಿ ತಹಸೀಲ್ದಾರ ಕಚೇರಿ, ಕೋರ್ಟ್ ಹಾಲ್, ತಹಸೀಲ್ದಾರ ಗ್ರೇಡ್-೧ ಮತ್ತು ಗ್ರೇಡ್-೨, ಸಬ್ ರಜಿಸ್ಟಾರ್ ಕಚೇರಿ, ಸಬ್ ಟ್ರೆಜರಿ ಕಚೇರಿ, ಸ್ಟ್ರಾಂಗ್ ರೂಂ, ರಜಿಸ್ಟಾರ್ ಕಚೇರಿಗಳನ್ನು ಹೊಂದಿವೆ. ಮೊದಲನೇ ಮಹಡಿಯಲ್ಲಿ ಭೂಮಾಪನಾ ಇಲಾಖೆ ಉಪನಿರ್ದೇಶಕ ಕಚೇರಿ, ಭೂ ದಾಖಲೆ ಕೊಠಡಿ, ವಿಡಿಯೋ ಸಂವಾದ ಸಭಾಂಗಣ, ಕೆಸ್ವಾನ್, ಎರಡನೇ…

Read More

ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಮಹಿಳಾ ದಿನಾಚರಣೆ | ಶೈಲಜಾ ಪಾಟೀಲ್ ಯತ್ನಾಳ ಅಭಿಮತ ವಿಜಯಪುರ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಜೆಎಸ್‌ಎಸ್ ವತಿಯಿಂದ ಜಾಗೃತಿ ಜಾಥಾ ನಡೆಯಿತು.ಒಂದು ಕಾಲದಲ್ಲಿ ನಾಲ್ಕು ಗೋಡೆಗಳ ಮಧ್ಯದಲ್ಲಿ ಬಂಧಿಯಾಗಿದ್ದ ಮಹಿಳೆ ಇಂದು ಸ್ವಚ್ಛಂದವಾಗಿ ಬದುಕು ಕಟ್ಟಿಕೊಳ್ಳುತ್ತಿದ್ದಾಳೆ. ತನಗೆ ಸರಿ ಎನಿಸಿದ ರೀತಿಯಲ್ಲಿ ತನ್ನ ಜೀವನವನ್ನು ರೂಪಿಸಿಕೊಳ್ಳುತ್ತಿದ್ದಾಳೆ. ಪುರುಷನಿಗೆ ಸರಿ ಸಮನಾಗಿ ನಿಂತು ತನ್ನ ಸ್ವಂತ ಬಲದ ಮೇಲೆ ಮುನ್ನುಗ್ಗುತ್ತಿದ್ದಾಳೆ. ಮಹಿಳೆಯ ಈ ಪ್ರಗತಿ ಲಿಂಗ ತಾರತಮ್ಯತೆಯನ್ನು ತೊಡೆದು ಹಾಕಿ ಸಮಾನತೆಯ ಸಮಾಜ ನಿರ್ಮಾಣಕ್ಕೆ ಮಾರ್ಗಸೂಚಿಯಾಗಿದೆ ಎಂದು ಶ್ರೀ ಸಿದ್ಧಸಿರಿ ಸೌಹಾರ್ಧ ಸಹಕಾರಿ ನಿಯಮಿತದ ವಿಜಯಪುರ ನಿರ್ದೇಶಕಿ ಶೈಲಜಾ ರಾ ಪಾಟೀಲ ಯತ್ನಾಳ ಹೇಳಿದರು.ನಗರದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾಗಿದ್ದ ಸ್ವಾಸ್ಥö್ಯ ಮಹಿಳಾ ಸಮಾಜ ನಿರ್ಮಾಣದೆಡೆಗೆ ನಮ್ಮ ನಡಿಗೆ ಎನ್ನುವ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು; ಪ್ರಾಚೀನ ಕಾಲದಿಂದಲೂ ಪುರುಷ ಪ್ರಧಾನ ಸಮಾಜ…

Read More

ಮುದ್ದೇಬಿಹಾಳ: ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ವತಿಯಿಂದ ಪಟ್ಟಣದ ತಂಗಡಗಿ ರಸ್ತೆಯಲ್ಲಿರುವ ತಾಲೂಕು ಪಂಚಾಯತ ವಸತಿ ಗೃಹಗಳ ಆವರಣದಲ್ಲಿ ಮಾ.೧೧ ರ ಬೆಳಿಗ್ಗೆ ೧೦:೩೦ ಕ್ಕೆ ೭೫ ವಸಂತಗಳನ್ನು ಪೂರೈಸಿದ ಸಂಘದ ಸದಸ್ಯರಿಗೆ ಗೌರವಾರ್ಪಣೆ ಹಾಗೂ ನೂತನ ಸದಸ್ಯರಿಗೆ ಸ್ವಾಗತ ಸಮಾರಂಭವನ್ನು ಹಮ್ಮಿಕೊಂಡಿದ್ದಾರೆ.ಕಾರ್ಯಕ್ರಮವನ್ನು ಶಾಸಕ ಸಿ.ಎಸ್.ನಾಡಗೌಡರು ಉದ್ಘಾಟಿಸಲಿದ್ದು, ಸಂಘದ ಅಧ್ಯಕ್ಷ ಎಂ.ವ್ಹಿ.ಮಾಟಲದಿನ್ನಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಸತೀಶ ತಿವಾರಿ, ಸ್ಟೇಟ್ ಬ್ಯಾಂಕ್ ನ ವ್ಯವಸ್ಥಾಪಕ ದೀಪಕ ವಟ್ಟ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಆರ್.ಕಟ್ಟಿಮನಿ ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Read More

ಮುದ್ದೇಬಿಹಾಳ: ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ವತಿಯಿಂದ ಪಟ್ಟಣದ ತಂಗಡಗಿ ರಸ್ತೆಯಲ್ಲಿರುವ ತಾಲೂಕು ಪಂಚಾಯತ ವಸತಿ ಗೃಹಗಳ ಆವರಣದಲ್ಲಿ ಮಾ.೧೧ ರ ಬೆಳಿಗ್ಗೆ ೧೦:೩೦ ಕ್ಕೆ ೭೫ ವಸಂತಗಳನ್ನು ಪೂರೈಸಿದ ಸಂಘದ ಸದಸ್ಯರಿಗೆ ಗೌರವಾರ್ಪಣೆ ಹಾಗೂ ನೂತನ ಸದಸ್ಯರಿಗೆ ಸ್ವಾಗತ ಸಮಾರಂಭವನ್ನು ಹಮ್ಮಿಕೊಂಡಿದ್ದಾರೆ.ಕಾರ್ಯಕ್ರಮವನ್ನು ಶಾಸಕ ಸಿ.ಎಸ್.ನಾಡಗೌಡರು ಉದ್ಘಾಟಿಸಲಿದ್ದು, ಸಂಘದ ಅಧ್ಯಕ್ಷ ಎಂ.ವ್ಹಿ.ಮಾಟಲದಿನ್ನಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಸತೀಶ ತಿವಾರಿ, ಸ್ಟೇಟ್ ಬ್ಯಾಂಕ್ ನ ವ್ಯವಸ್ಥಾಪಕ ದೀಪಕ ವಟ್ಟ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಆರ್.ಕಟ್ಟಿಮನಿ ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Read More

ವಿಜಯಪುರ: ನಗರದ ವಾರ್ಡ್ ನಂ.21ರ ಸದಾಶಿವ ನಗರದ ಆಂತರಿಕ ರಸ್ತೆಗಳನ್ನು ರೂ.1 ಕೋಟಿ ಅನುದಾನದಲ್ಲಿ ಸಿಸಿ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.ಭೂಮಿಪೂಜೆ ನೆರವೇರಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಬಳಿಕ, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಸದಾಶಿವ ನಗರ ಅಭಿವೃದ್ಧಿ ಸಂಘ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಸಿದ್ಧಪಡಿಸಲಾದ ಸಮುದಾಯ ಸಹಯೋದಲ್ಲಿ ಘನ ತ್ಯಾಜ್ಯದಿಂದ ಎರೆಹುಳು ಗೊಬ್ಬರ ತಯಾರಿಕಾ ಘಟಕದ ಪ್ರಾತ್ಯಕ್ಷಿಕ ವೀಕ್ಷಣೆ ಮಾಡಿದರು.ಮಹಾನಗರ ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನ (ಕುಮಾರ) ಗಡಗಿ, ಪ್ರೇಮಾನಂದ ಬಿರಾದಾರ, ಮುಖಂಡರಾದ ಜಿ.ಎಸ್.ಗದಗಿಮಠ, ಡಾ.ಬಾಬು ಸಜ್ಜನ, ಸಂತೋಷ ಜೋಳದ, ಪಾಪು ಖ್ಯಾತನ್, ಚನ್ನಬಸಯ್ಯ ಸ್ವಾಮಿ, ಪ್ರವೀಣ ಹಳ್ಳಿ, ರಾಚು ಬಿರಾದಾರ ಸೇರಿದಂತೆ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸ್ಥಳೀಯ ನಿವಾಸಿಗಳು ಇದ್ದರು.

Read More

ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಪ್ರೌಢ ಶಾಲೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ವಿಜಯಪುರ: ಮಹಿಳೆ, ಕುಟುಂಬದ ಕಣ್ಣಾಗಿ, ತಾಯಿ, ಪತ್ನಿ, ಮಗಳು, ಅಕ್ಕ-ತಂಗಿ ಹೀಗೆ ಅನೇಕ ಪಾತ್ರಗಳನ್ನು ಏಕಕಾಲಕ್ಕೆ ನಿಭಾಯಿಸಿಕೊಂಡು ಹೋಗಬಲ್ಲ ಚೈತನ್ಯ. ಕುಟುಂಬ ಜೊತೆಗೆ ಸಮಾಜ ಹಾಗೂ ರಾಷ್ಟ್ರ ನಿರ್ಮಾಣದಲ್ಲೂ ಮಹಿಳೆಯ ಪಾತ್ರ ವಿಶೇಷವಾದದ್ದು. ಅವರ ತ್ಯಾಗವನ್ನು ಗುರುತಿಸಲು ಮತ್ತು ಸಮಾಜದಲ್ಲಿ ಅವರಿಗೆ ಸಮಾನ ಹಕ್ಕುಗಳನ್ನು ಕಲ್ಪಿಸುವ ಸಲುವಾಗಿ ಪ್ರತಿ ವರ್ಷ ಮಾರ್ಚ್ ೦೮ ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ ಎಂದು ಲೇಖಕಿ ಇಂದುಮತಿ ಲಮಾಣಿಯವರು ಹೇಳಿದರು.ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಪ್ರೌಢ ಶಾಲೆಯಲ್ಲಿ ಶನಿವಾರದಂದು ಆಚರಿಸಲಾದ ‘ವಿಶ್ವ ಮಹಿಳಾ ದಿನಾಚರಣೆಯ’ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಚಾಲನೆ ನೀಡಿ ಮಾತನಾಡಿದ ಅವರು. ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಜವಾಬ್ದಾರಿ ನಿಭಾಯಿಸಿದ್ದಾರೆ. ಕೇವಲ ಕುಟುಂಬಕ್ಕೆ ಸೀಮಿತವಾಗದೆ, ರಾಜಕೀಯ, ಶಿಕ್ಷಣ, ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆ ಅಪಾರ. ಮಕ್ಕಳಲ್ಲಿ ಆರಂಭದಿಂದಲೇ ಹೆಣ್ಣು, ಗಂಡು, ಜಾತಿ ಮತವೆಂಬ ಭೇಧ ತರದಂತೆ…

Read More

ಸಿಂದಗಿ: ತಾಲೂಕಿನ ಬೋರಗಿ ಗ್ರಾಮದ ಯುವ ನಾಯಕ ಮಲ್ಲು ಸಾವಳಸಂಗ ಅವರನ್ನು ಸಿಂದಗಿ ತಾಲೂಕಿನ ಬಿಜೆಪಿ ಮಂಡಲ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಜಿಲ್ಲಾಧ್ಯಕ್ಷ ಆರ್ ಎಸ್ ಕುಚಬಾಳ ಆದೇಶ ಹೊರಡಿಸಿದ್ದಾರೆ.ಉಪಾಧ್ಯಕ್ಷ ಜವಾಬ್ದಾರಿ ವಹಿಸಿಕೊಂಡಿರುವ ಮಲ್ಲು ಸಾವಳಸಂಗ ಮಾತನಾಡಿ, ಪಕ್ಷದ ಹಿರಿಯರು, ಮಾಜಿ ಶಾಸಕರು ಜಿಲ್ಲಾಧ್ಯಕ್ಷರು ಮತ್ತು ತಾಲೂಕ ಮಂಡಲ ಅಧ್ಯಕ್ಷರು ನನ್ನ ಮೇಲೆ ವಿಶ್ವಾಸವಿಟ್ಟು ಉಪಾಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿದ್ದಾರೆ ಅವರು ನನ್ನ ಮೇಲೆ ಇಟ್ಟಿರುವ ಭರವಸೆ ಹುಸಿಯಾಗದಂತೆ ಪಕ್ಷದಲ್ಲಿ ಪ್ರಾಮಾಣಿಕ ಕಾರ್ಯ ನಿರ್ವಹಿತ್ತೇನೆ ಮುಂಬರುವ ಲೋಕಸಭಾ ಮತ್ತು ಜಿ. ಪಂ. ತಾ. ಪಂ. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಜಿಲ್ಲಾಧ್ಯಕ್ಷರ ಸೂಚನೆ ಮೇರೆಗೆ ಭಾರತೀಯ ಜನತಾ ಪಾರ್ಟಿ ವಿಜಯಪುರ ನಗರ ಮಂಡಲ ಹಾಗೂ ವಿವಿಧ ಮೋರ್ಚಾಗಳಿಗೆ, ಈ ಕೆಳಕಂಡ ಪ್ರಮುಖರನ್ನು ನೂತನ ಪದಾಧಿಕಾರಿಗಳನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ನಗರ ಮಂಡಲದ ಅಧ್ಯಕ್ಷರಾದ ಶಂಕರ ಹೂಗಾರ ತಿಳಿಸಿದ್ದಾರೆ.ನಗರ ಮಂಡಲ ಉಪಾಧ್ಯಕ್ಷರಾಗಿ ಸಂತೋಷ ಪಾಟೀಲ, ಲಕ್ಷ್ಮಣ ಜಾಧವ, ರಾಜಶೇಖರ ಭಜಂತ್ರಿ, ಪ್ರಭುದೇವ ಕೆಂಗಾರ, ಬಸವರಾಜ ಗೊಳಸಂಗಿ, ಸಂತೋಷ ನಿಂಬರಗಿ, ಪ್ರಧಾನ ಕಾರ್ಯದರ್ಶಿಗಳು ಪಾಪುಸಿಂಗ್ ರಜಪೂತ, ಪ್ರವೀಣ ಕೂಡಗಿ, ಕಾರ್ಯದರ್ಶಿಗಳು ಕಿರಣ ಅಣೆಪ್ಪನವರ, ಸಿದ್ದನಗೌಡ ಬಿರಾದಾರ (ದೇವಕಿನಗರ), ಸಂದೀಪ ಕಾಳೆ, ರೋಹನ ಆಪ್ಟೆ, ಉಮೇಶ ವೀರಕರ, ಸುಚಿತಾ ಬಾಳು ಜಾಧವ, ಬಿಎಲ್ಎ-1 ಗುರು ಹಜೇರಿ, ಸಿದ್ದು ಬೆಲ್ಲದ, ಕೋಶಾಧ್ಯಕ್ಷರು ವೇಣುಗೋಪಾಲ ಜೋಶಿ, ಕಾರ್ಯಾಲಯ ಕಾರ್ಯದರ್ಶಿ ಅಮೀತ ಗರುಡಕರ, ಮಾಧ್ಯಮ ಪ್ರಮುಖ ಬಾಬುಗೌಡ ರೋಡಗಿ, ಸಾಮಾಜಿಕ ಜಾಲತಾಣ ಸಂಚಾಲಕರು ಅಭಿಲಾಷ ಎಸ್.ಕನಮಡಿ, ಸಹ ಸಂಚಾಲಕರು ಸದಾಶಿವ ಅಳ್ಳಿಗಿಡದ, ನಾಗರಾಜ ಶಿರಸಂಗಿ, ಕಾನೂನು ಪ್ರಕೋಷ್ಠ ದೇವಪ್ಪ ಶಿವಗೊಂಡ ಅವರನ್ನು ನೇಮಕ ಮಾಡಲಾಗಿದೆ.ಮೋರ್ಚಾ ಅಧ್ಯಕ್ಷರು, ಪ್ರಧಾನ…

Read More