ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಪ್ರೌಢ ಶಾಲೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ
ವಿಜಯಪುರ: ಮಹಿಳೆ, ಕುಟುಂಬದ ಕಣ್ಣಾಗಿ, ತಾಯಿ, ಪತ್ನಿ, ಮಗಳು, ಅಕ್ಕ-ತಂಗಿ ಹೀಗೆ ಅನೇಕ ಪಾತ್ರಗಳನ್ನು ಏಕಕಾಲಕ್ಕೆ ನಿಭಾಯಿಸಿಕೊಂಡು ಹೋಗಬಲ್ಲ ಚೈತನ್ಯ. ಕುಟುಂಬ ಜೊತೆಗೆ ಸಮಾಜ ಹಾಗೂ ರಾಷ್ಟ್ರ ನಿರ್ಮಾಣದಲ್ಲೂ ಮಹಿಳೆಯ ಪಾತ್ರ ವಿಶೇಷವಾದದ್ದು. ಅವರ ತ್ಯಾಗವನ್ನು ಗುರುತಿಸಲು ಮತ್ತು ಸಮಾಜದಲ್ಲಿ ಅವರಿಗೆ ಸಮಾನ ಹಕ್ಕುಗಳನ್ನು ಕಲ್ಪಿಸುವ ಸಲುವಾಗಿ ಪ್ರತಿ ವರ್ಷ ಮಾರ್ಚ್ ೦೮ ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ ಎಂದು ಲೇಖಕಿ ಇಂದುಮತಿ ಲಮಾಣಿಯವರು ಹೇಳಿದರು.
ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಪ್ರೌಢ ಶಾಲೆಯಲ್ಲಿ ಶನಿವಾರದಂದು ಆಚರಿಸಲಾದ ‘ವಿಶ್ವ ಮಹಿಳಾ ದಿನಾಚರಣೆಯ’ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಚಾಲನೆ ನೀಡಿ ಮಾತನಾಡಿದ ಅವರು. ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಜವಾಬ್ದಾರಿ ನಿಭಾಯಿಸಿದ್ದಾರೆ. ಕೇವಲ ಕುಟುಂಬಕ್ಕೆ ಸೀಮಿತವಾಗದೆ, ರಾಜಕೀಯ, ಶಿಕ್ಷಣ, ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆ ಅಪಾರ. ಮಕ್ಕಳಲ್ಲಿ ಆರಂಭದಿಂದಲೇ ಹೆಣ್ಣು, ಗಂಡು, ಜಾತಿ ಮತವೆಂಬ ಭೇಧ ತರದಂತೆ ಬೆಳೆಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕಿ ಜಯಶ್ರೀ ರಾಠೋಡರವರು ಮಾತನಾಡಿದರು.
ಈ ವೇಳೆಯಲ್ಲಿ ವಿದ್ಯಾರ್ಥಿಗಳಿಂದ ಭಾಷಣ ಹಾಗೂ ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕಿತ್ತೂರು ಚನ್ನಮ್ಮ, ಓನಕೆ ಒಬ್ಬವ್ವ, ಝಾನ್ಸಿರಾಣಿ ಲಕ್ಷೀಂಬಾಯಿ, ಸಾವಿತ್ರಿಬಾಯಿ ಫುಲೆ, ಕಿರಣ ಬೇಡಿಯವರುಗಳ ವೇಷ ಭೂ಼ಷಣಗಳನ್ನು ವಿದ್ಯಾರ್ಥಿಗಳು ಛೇದ್ಮವೇಷ ತೊಟ್ಟು ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರು ಇ.ಡಿ.ಲಮಾಣಿ, ಎಸ್.ಆರ್.ದೇಶಪಾಂಡೆ, ಸಮಿತಾ ಚವ್ಹಾಣ್, ರೇಖಾ ರಜಪೂತ, ಪವಿತ್ರಾ ಕೌಲಗಿ, ಎ.ಎಂ.ನಾಗೊಂಡ, ಆರ್.ಎನ್.ಬಕಾಟೆ, ಆರ್.ವ್ಹಿ.ಭುಜಂಗನವರ, ಬಿ.ಎಸ್.ದ್ಯಾಬೇರಿ, ಎಸ್.ಎಂ.ಮಾಳಿ ಸೇರಿದಂತೆ ಶಾಲೆಯ ಎಲ್ಲ ಶಿಕ್ಷಕ ಸಿಬ್ಬಂದಿ ವರ್ಗ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸ್ವಾಗತ ಹಾಗೂ ನಿರೂಪಣೆ ಎಸ್.ಕೆ.ಶಿಂಧೆ, ವಂದನಾರ್ಪಣೆ ಎಸ್.ಬಿ.ಒಡೆಯರ ಮಾಡಿದರು.

