ಬಸವನಬಾಗೇವಾಡಿ: ಮಹಾತ್ಮರ ಸತ್ಸಂಗದಲ್ಲಿ ನಡೆದರೆ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ. ಆಧ್ಯಾತ್ಮದಿಂದ ಜೀವನದಲ್ಲಿ ಶಾಂತಿ-ನೆಮ್ಮದಿ ಸಿಗುತ್ತದೆ ಎಂದು ಬುದ್ನಿ ಸಿದ್ದಾರೂಢಮಠದ ಸಿದ್ದಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ಸಮೀಪದ ಜೈನಾಪೂರ ಗ್ರಾಮದ ಪವಾರ ಬಸವೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿಯಂಗವಾಗಿ ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ ಶಿವಭಜನೆ ಜಾಗರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದರೆ ಗುರುಗಳ ಆಶೀರ್ವಾದ ಪಡೆದುಕೊಳ್ಳುವ ಭಾಗ್ಯ ಸಿಗುತ್ತದೆ. ಪಾಪ ನಶಿಸಿ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ. ಪ್ರತಿ ತಿಂಗಳು ಶಿವರಾತ್ರಿ ಇರುತ್ತದೆ. ವರ್ಷದಲ್ಲಿ ಒಂದು ಮಾತ್ರ ಮಹಾಶಿವರಾತ್ರಿ ಇರುತ್ತದೆ. ಈ ಮಹಾಶಿವರಾತ್ರಿಯಂದು ಇಡೀ ರಾತ್ರಿ ಶಿವನಾಮಸ್ಮರಣೆ ಮಾಡಿದರೆ ನಮ್ಮ ಭವ ಕಷ್ಟಗಳನ್ನು ಶಿವ ದೂರ ಮಾಡಿ ಜೀವನದಲ್ಲಿ ಸುಖ-ನೆಮ್ಮದಿ ನೀಡುತ್ತಾನೆ ಎಂದರು.
ಯಲಗೋಡ ಪುರದಾಳ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಶಿವಪಥವ ಅರಿಯಬೇಕಾದರೆ ಗುರು ಪಥವ ಅಗತ್ಯವಿದೆ. ಗುರು ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಾನೆ. ಅಂತರಂಗ ಸಾಧನೆಯಿಂದ ಜ್ಞಾನ ಪಡೆದುಕೊಳ್ಳಬಹುದು. ಮನುಷ್ಯ ದುರ್ಬಲನಾಗದೇ ಸಬಲನಾಗಿ ಮನುಷ್ಯ ಜೀವನವನ್ನು ಪಾವನ ಮಾಡಿಕೊಳ್ಳುವ ಕಡೆಗೆ ಗಮನ ಹರಿಸಬೇಕು. ಆಧ್ಯಾತ್ಮದಿಂದ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕೆಂದರು.
ಪುರಸಭೆ ಸದಸ್ಯ ಅಶೋಕ ಹಾರಿವಾಳ ಮಾತನಾಡಿದರು.
ಸಾನಿಧ್ಯ ವಹಿಸಿದ್ದ ಮನಗೂಳಿ ಎನ್ಎಚ್ ವಿರಕ್ತಮಠದ ವೀರತಿಶಾನಂದ ಸ್ವಾಮೀಜಿ, ಜೈನಾಪೂರ ಪವಾಡಬಸವೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿ, ಬಳೂತಿಯ ಸಿದ್ದಲಿಂಗ ಸ್ವಾಮೀಜಿ, ಬೈಲಹೊಂಗಲದ ಜಿ.ಎಸ್.ಗಣಾಚಾರಿ, ಅಮರೇಶಗೌಡ ಪಾಟೀಲ ಇತರರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಚನ್ನಬಸಪ್ಪ ಗೊಳಸಂಗಿ, ಡಾ.ಮಲ್ಲಿಕಾರ್ಜುನ ಹುಡೇದಮನಿ, ಶಂಕ್ರೆಪ್ಪ ಉಳ್ಳಾಗಡ್ಡಿ, ಬಂದೇನವಾಜ ವಾಲೀಕಾರ, ಅಬ್ದುಲ್ರಜಾಕ ನಾಗೂರ, ಬಸಯ್ಯ ಗುರುವಿನ, ಸುರೇಶ ಲಮಾಣಿ, ಬಸಪ್ಪ ಕಾರಜೋಳ, ಅರ್ಜುನ ಉಳ್ಳಾಗಡ್ಡಿ, ಹಣಮಂತ ಗೊಳಸಂಗಿ, ಸಿದ್ರಾಮಯ್ಯ ಹಿರೇಮಠ, ಬಸಪ್ಪ ಆಲಕೊಪ್ಪರ, ಸಾಯಬಣ್ಣ ಗೊಳಸಂಗಿ, ನಿಜಲಿಂಗಪ್ಪ ಅಂಬಲಿ, ರುದ್ರಪ್ಪ ಕಲ್ಲಶೆಟ್ಟರು ಇತರರು ಇದ್ದರು. ಮಲ್ಲೇಶಿ ಅಂಬಲಿ ಸ್ವಾಗತಿಸಿ, ನಿರೂಪಿಸಿದರು.
ಶಿವಯೋಗಗೈದ ಸದ್ಭಕ್ತರಿಗೆ ವಿವಿಧ ಹಣ್ಣು-ಹಂಪಲ, ಸಾಬುದಾನಿ ಒಗ್ಗರಣೆ ಸೇರಿದಂತೆ ವಿವಿಧ ಫಲಾಹಾರದ ವ್ಯವಸ್ಥೆ ಮಾಡಲಾಗಿತ್ತು. ನಾಗೂರ, ಉಪ್ಪಲದಿನ್ನಿ, ಮಣ್ಣೂರ, ಜೈನಾಪೂರ, ಗೊಳಸಂಗಿ, ಬಳೂತಿ, ಹುಲ್ಲೂರ ಸೇರಿದಂತೆ ಇತರೇ ಗ್ರಾಮಗಳಿದ ಸದ್ಭಕ್ತರು ಶಿವರಾತ್ರಿ ಜಾಗರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

