ವಿಜಯಪುರ: ನಗರದ ವಾರ್ಡ್ ನಂ.21ರ ಸದಾಶಿವ ನಗರದ ಆಂತರಿಕ ರಸ್ತೆಗಳನ್ನು ರೂ.1 ಕೋಟಿ ಅನುದಾನದಲ್ಲಿ ಸಿಸಿ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.
ಭೂಮಿಪೂಜೆ ನೆರವೇರಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಬಳಿಕ, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಸದಾಶಿವ ನಗರ ಅಭಿವೃದ್ಧಿ ಸಂಘ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಸಿದ್ಧಪಡಿಸಲಾದ ಸಮುದಾಯ ಸಹಯೋದಲ್ಲಿ ಘನ ತ್ಯಾಜ್ಯದಿಂದ ಎರೆಹುಳು ಗೊಬ್ಬರ ತಯಾರಿಕಾ ಘಟಕದ ಪ್ರಾತ್ಯಕ್ಷಿಕ ವೀಕ್ಷಣೆ ಮಾಡಿದರು.
ಮಹಾನಗರ ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನ (ಕುಮಾರ) ಗಡಗಿ, ಪ್ರೇಮಾನಂದ ಬಿರಾದಾರ, ಮುಖಂಡರಾದ ಜಿ.ಎಸ್.ಗದಗಿಮಠ, ಡಾ.ಬಾಬು ಸಜ್ಜನ, ಸಂತೋಷ ಜೋಳದ, ಪಾಪು ಖ್ಯಾತನ್, ಚನ್ನಬಸಯ್ಯ ಸ್ವಾಮಿ, ಪ್ರವೀಣ ಹಳ್ಳಿ, ರಾಚು ಬಿರಾದಾರ ಸೇರಿದಂತೆ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸ್ಥಳೀಯ ನಿವಾಸಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

